ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವರಾಜ ಹೂಗಾರ ಅವರ ಮಕ್ಕಳಾದ ಜೀವನ್ ಕುಮಾರ ಮತ್ತು ಶ್ರೀ ರಕ್ಷಾ ಹುಟ್ಟು ಹಬ್ಬದ ಅಂಗವಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಿ ಮಧ್ಯಾಹ್ನದ ಬಿಸಿಯೂಟ ಸೇವನೆಗಾಗಿ 50 ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಸರಕಾರಿ ಶಾಲಾ ಅಭಿವೃದ್ಧಿಗೆ ಸಮುದಾಯದ ಸಹಕಾರ ಅತ್ಯಗತ್ಯ:
ಸರಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಹಿತದೃಷ್ಟಿಯಿಂದ ಮಧ್ಯಾಹ್ನ ಬಿಸಿಯೂಟ ಯೋಜನೆ ಸರ್ಕಾರ ತಂದಿದ್ದು ನಮ್ಮೆಲ್ಲರ ಗಮನಕ್ಕಿದೆ. ಬಿಸಿಯೂಟ ಸೇವನೆಗೆ ಮಕ್ಕಳಿಗೆ ಊಟದ ತಟ್ಟೆಗಳ ಅವಶ್ಯಕತೆ ಮುಖ್ಯವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ಶಾಲಾ ಹಳೆಯ ವಿದ್ಯಾರ್ಥಿಯೊಬ್ಬರು ತಮ್ಮ ಮಕ್ಕಳ ಹುಟ್ಟು ಹಬ್ಬದ ಅಂಗವಾಗಿ ಸರಕಾರಿ ಶಾಲೆಗೆ ಊಟದ ತಟ್ಟೆಗಳ ದೇಣಿಗೆ ನೀಡಿದ್ದು ಅಭಿನಂದನೀಯ.
ಇದೇ ರೀತಿ ಹಳೆ ವಿದ್ಯಾರ್ಥಿಗಳು ತಾವು ಕಲಿತ ಸರ್ಕಾರಿ ಶಾಲೆಯಲ್ಲಿ ಬೇಕಾದ ಕಲಿಕೋಪಕರಣ ಸೇರಿದಂತೆ ಮೂಲಸೌಕರ್ಯಗಳ ಬಗೆ ಗಮನಹರಿಸಿ ಸಹಾಯ ಸಹಕಾರ ನೀಡಿದರೆ ಸರಕಾರಿ ಶಾಲೆಗಳ ಉಳಿಸಿ-ಬೆಳಸಿ ಎನ್ನುವ ಘೋಷವಾಕ್ಯಕ್ಕೆ ಅರ್ಥ ನೀಡಿದಂತಾಗುತ್ತದೆ. ಆದ್ದರಿಂದ ನಮ್ಮ ಸುತ್ತಲಿನ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ನೀಡುವ ಸಹಾಯ ಸಹಕಾರದ ಜೊತೆ ಶಿಕ್ಷಕರು,ಸಮುದಾಯದವರು ಕೈಜೊಡಿಸುವುದಕ್ಕೆ ಮುಂದಾದರೆ ಸರಕಾರ ಶಾಲೆಗಳ ಮಕ್ಕಳ ಶಿಕ್ಷಣದಲ್ಲಿ ಇನ್ನಷ್ಟು ಬದಲಾವಣೆ ಬಯಸಬಹುದು.
ಈ ಕಾರ್ಯಕ್ರಮದಲ್ಲಿ ಶಿವರಾಜ ಹೂಗಾರ,SDMCಅದ್ಯಕ್ಷ ವೆಂಕಟೇಶ ಮಡಿವಾಳ, ಶಿಕ್ಷಕರಾದ ಹುಸೇನ್ ಸಾಬ್, ದೊಡ್ಡಪ್ಪ,ಕಲ್ಲನಗೌಡ, ಪರ್ವೀನ್,ಬಸವರಾಜ ಹೂಗಾರ,ಚಿರಂಜೀವಿ ಹೂಗಾರ,ಪ್ರದೀಪ್ ಹೂಗಾರ,ಅಂಬು ಸಾಸಲಮರಿ,ಸೋಮು ವಿರುಪಾಪೂರು,ಸೀತಾರಾಮ ಗಾಂಧಿನಗರ,ಅತಿಥಿ ಶಿಕ್ಷಕರಾದ ಶರಣಬಸವ,ಪಾರ್ವತಿ,ಲಕ್ಷೀ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.
Article Writer, Self Employee