ಜೀವ್ನ ನಾಯಿ ಪಾಡು
ಉರ್ ಉರ್ ತಿರುಗಾಡು
ಹಸ್ದಿರೋ ಹೊಟ್ಟೆ 3 ಅಡಿ
ಹಾಕೋಂಡಿರೋ ಬಟ್ಟೆ 6 ಅಡಿ
ಕಟ್ಗೊಂಡಿರೋ ಕನ್ಸು 100 ಅಡಿ
ಆದ್ರು ಜೀವ್ನ ನಾಯಿ ಪಾಡು
ಉರ್ ಉರ್ ತಿರುಗಾಡು
ಹುಟ್ಟಿದ್ ಉರನ್ ಬಿಟ್ ಬಿಟಿ
ಯಾವ್ದೂ ಉರಗ್ ಬಂದ್ ಬಿಟಿ
ಇರೋದ್ 6 ದಿನ ಬದ್ಕೂದ್ 3 ದಿನ
ಆದ್ರು ಜೀವ್ನ ನಾಯಿ ಪಾಡು
ಉರ್ ಉರ್ ತಿರುಗಾಡು
ಕಟ್ಗೊಂಡ ಕನ್ಸು ಹಂಗೇ ಐತೆ
ಬದ್ಕು ಹೆಂಗೋ ನಡ್ದೆ ಐತೆ
ಹೊಟ್ಟೆಗ್ ಹಿಟ್ಟು ಸಿಗ್ತಾ ಐತೆ
ಆದ್ರು ಜೀವ್ನ ನಾಯಿ ಪಾಡು
ಉರ್ ಉರ್ ತಿರುಗಾಡು
ನಿಯತ್ತಾಗಿರೋ ಜನಾ ಇಲ್ಲಾ
ನಿಯತ್ತಾಗಿರೋಕು ಬಿಡ್ತಾ ಇಲ್ಲಾ
ನಾಯಗಿರೋ ನಿಯತ್ ನಮ್ಗ ಇಲ್ಲಾ
ಆದ್ರು ಜೀವ್ನ ನಾಯಿ ಪಾಡು
ಉರ್ ಉರ್ ತಿರುಗಾಡು
. . . .. . . . . . . . . . . . . . . . .ಕಿರಣ್ . . . . . . . . . . . . . . . . . . . . . . . . . . . . . . .  
I am Kiran
0 Followers
0 Following