image

ಜನನಿ…

ನಿನ್ನ ಮಡಿಲ ಕೂಸಿನ ಧ್ವನಿ,

"ಮಾತೃದೇವೋ ಭವ"ಎಂದು ಅಮ್ಮನನ್ನು  ನಿತ್ಯ ಪೂಜಿಸುವ ಪರಿಪಾಠ, 

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ”

ನುಡಿಗಳೇ ಶ್ರೇಷ್ಠ, 

ಜನನಿ-ಜನ್ಮಭೂಮಿ-ನಾನು ನಿಮ್ಮ ಪ್ರೇಮಿ  ನನ್ನ ಪ್ರೀತಿಯ ನುಡಿಯೇ ನನಗಿಷ್ಟ,

ತಾಯಿಯು ತನ್ನ ಗರ್ಭದಿ ತನ್ನ ಕೂಸನು  ಪೋಷಿಸುವ ಪರಿಯ ವಿವರಕೆ ಸಾಲದವು ಪದಗಳ ಮಿತಿ, 

ತಾಯಿಯ ಪ್ರೀತಿಗಿಂತ ಮಿಗಿಲಾದ ವಸ್ತು ಈ ಜಗದೊಳಗ್ಯಾವುದೈತಿ…

ಹೆತ್ತ ತಾಯಿಗೆ ಹೆಗ್ಗಣವೇ ಮುದ್ದು, 

ಚಂದಮಾಮನ ತೋರುತ ಕೂಸಿಗೆ ಕೂಳು ತಿನಿಸುವುದು, 

ಸೆರಗಿಂದ ತುಟಿಯೆಂಜಲು ಒರೆಸುವುದು, 

ಇಂತಹ ಆಸರೆ ತಾಯಿಯ ಬಳಿ ಬಿಟ್ಟರೆ ಮತ್ತೆಲ್ಲಿಯೂ ಸಿಗದು- ಕಾಣಸಿಗದು…

ಮನೆಯೆ ಮೊದಲ ಪಾಠಶಾಲೆ-ತಾಯಿತಾನೆ ಮೊದಲ ಗುರುವು, 

ಉಪ್ಪಿಗಿಂತ ರುಚಿಯಿಲ್ಲ- ತಾಯಿಗಿಂತ ಬಂಧುವಿಲ್ಲ ಎಂಬಂತೆ ತೋರಿಸಳು ತನ್ನೊಳಗಿನ  ನೋವು..

ಅಮ್ಮ  ಬಡಿಸುವ ಊಟ ಬಲು ರುಚಿಕರ, 

ಪುಟ್ಟ ಒಲೆಗೆ ಸಲ್ಲಿಸಿರುವಳು ಅವೆಷ್ಟೋ ಬಾರಿಯ ನಮಸ್ಕಾರ, 

ಅಮ್ಮನ ಕಾಯಕ ಊಹಿಸಿಕೊಳ್ಳುವುದೂ ಬಲು ಕಷ್ಟಕರ,

ಅಮ್ಮನ ಆರೈಕೆಯಲ್ಲಿ ಬೆಳೆಯುವ ಈ ಜೀವ,

ಯಾವ ಕಾಲದಲ್ಲಿಯೂ ಅಮ್ಮನ ಋಣ ತೀರಿಸಲಾಗದವ,

ಅಮ್ಮನನ್ನು ಚೆನ್ನಾಗಿ ನೋಡಿಕೊಂಡು ಅವಳ ಮೊಗದಲ್ಲಿ ತುಂಬಿಸಿ ನಗುವ…

ಶಾಂತಾರಾಮ ಹೊಸ್ಕೆರೆ, ಶಿರಸಿ,

ಉತ್ತರ ಕನ್ನಡ..7676106237

 

Category:Poem



ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...

0 Followers

0 Following