ದೈವಗಳಲ್ಲಿ ಮೇಲು ಕೀಳಿನ ಭಾವ ಸರಿಯಲ್ಲ

ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ

ProfileImg
23 May '24
3 min read


image

 

ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ  ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರೆ 

 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ  ದೇಶ ,ಜಾತಿ ಧರ್ಮದ ಮಿತಿ ಇಲ್ಲ.

 ಕೆಲವು ಹೊರದೇಶದ ಜನರೂ ಇಲ್ಲಿ ಬಂದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಅರಬ್ಬಿ ಭೂತ ಮತ್ತು ಚೀನೀ ಭೂತಗಳು ಅನ್ಯದೇಶೀಯ ಮೂಲದ ದೈವಗಳಾಗಿವೆ. . ಹೀಗೆ ನಾನಾ ಕಾರಣಗಳಿಂದ ಜೈನರು, ಮುಸ್ಲೀಮರು, ಕ್ರಿಶ್ಚಿಯನ್ನರು, ಅರಬಿಗಳು, ಚೀನಿ ವ್ಯಕ್ತಿಗಳು ಕೂಡ ದೈವತ್ವವನ್ನು ಪಡೆದಿದ್ದಾರೆ . ತಳವರ್ಗದ ಕೊರಗತನಿಯ ಕೋಟೆದ ಬಬ್ಬು ಕಾನದ ಕಟದ  ಎಣ್ಮೂರ ದೈಯ್ಯು ಕೇಲತ್ತ ಪೆರ್ನೆ ಮುದ್ದ ಕಳಲ .  ಸೇರಿದಂತೆ ಅನೇಕ ವೀರರು ಕಾರಣಾಂತರಗಳಿಂದ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ 

ಹಾಗೆಯೇ ಕಚ್ಚೆ ಭಟ್ಟ ನಾರಳತ್ತಾಯ ಬ್ರಾಣ ಭೂತ,ಅಡ್ಕತ್ತಾಯ ,ಕಾರಿಂಜೆತ್ತಾಯ ಮುಕಾಂಬಿ ಗುಳಿಗ, ಚಾಮುಂಡಿ ಸೇರಿದಂತೆ ಅನೇಕ ಬ್ರಾಹ್ಮಣ ಮೂಲದ ದೈವಗಳಿಗೂ ಆರಾಧನೆ ಇದೆ .

 

 ಭೂತಗಳಾದ ನಂತರ ಇವರು ಮೂಲತಃ ಯಾರಾಗಿದ್ದರು ಹೇಳುವ ವಿಚಾರ ಇಲ್ಲಿ ಬರುವುದೇ ಇಲ್ಲ! ಭೂತವಾದ ನಂತರ ಅವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ಭೂತಗಳು ಸಮಾನರು !.ಎಲ್ಲ ಭೂತಗಳಿಗೂ ಒಂದೇ ರೀತಿಯ ಭಕ್ತಿಯ ನೆಲೆಯಲ್ಲಿ ಆರಾಧನೆ ಇದೆ. ಇದು ನಮ್ಮ ತುಳು ಸಂಸ್ಕೃತಿಯ ವೈಶಿಷ್ಟ್ಯ ,

 

 

ದೈವಗಳಲ್ಲಿ ಮೇಲು ಕೀಳಿಲ್ಲ.ಎಲ್ಲರೂ ಸಮಾನ ಆರಾಧ್ಯ ಶಕ್ತಿಗಳು‌‌‌‌  ಹಾಗಾಗಿ 
ದೈವಗಳ ಕಥಾನಕಗಳನ್ನು ಆಧರಿಸಿದ ವಿವಾದ ಸರಿಯಲ್ಲ

ದೈವ ಕಥಾನಕಗಳಲ್ಲಿ ನಾನಾ ಪಾಠಾಂತರಗಳಿರುತ್ತದೆ‌.ಇದೇ ಸತ್ಯ..ಅದೇ ಸತ್ಯ ಎಂದು ಹೇಳಲಾಗದು

.ತಮ್ಮ‌ದೈವ ಶಕ್ತಿ ಶಾಲಿ‌ ಎಂದು ಸಾಧಿಸಲು ಅವರವರ ಆರಾಧ್ಯ ದೈವಗಳು ಇನ್ನೊಂದು ದೈವವನ್ನು ಸೋಲಿಸಿದ ಕಥಾನಕಗಳನ್ನು ಸೃಷ್ಟಿಸಿಯೂ ಇರಬಹುದು.ಅಥವಾ ಈ ದೈವಗಳು ಮಾನವರಾಗಿದ್ದಾಗ ನಡೆದ ವಿಚಾರಗಳಿರುವ ಆಶಯವೇ ತುಸು ಭಿನ್ನ ರೂಪದಲ್ಲಿ ಹೇಳಲ್ಪಟ್ಟಿರಬಹುದು

.ಹಾಗಾಗಿ ಒಂದು ದೈವ ಇನ್ಮೊಂದರೆ ಕಾಲು ಕಡಿದಿದೆ ಎಂಬುದು ಹೆಗ್ಗಳಿಕೆಯ ವಿಚಾರವಲ್ಲ..ಇನ್ನು ಯಾರು ಕಡಿದದ್ದು ಎಂಬ ಚರ್ಚೆ ಯಾಕೆ ?

ಇನ್ನು ತನ್ನಿಮಾಣಿಗಳ ವಿಚಾರಲ್ಲಿ ಕೂಡ ಭಿನ್ನ  ಕಥಾನಕಗಳಿವೆ.ಹಿರಿಯ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರಿಗೆ ತನ್ನಿ ಮಾಣಿಗ ಬ್ರಾಹ್ಮಣಹುಡುಗಿ ಎಂವ ಕಥಾನಕ ಸಿಕ್ಕ ಬಗ್ಗೆ ಅವರೊಂದು ಲೇಖನದಲ್ಲಿ ಬರೆದಿದ್ದಾರೆ

ಬಾಯ್ದೆರೆಯಾಗಿ ಬಂದ ಯಾವ ಕಥಾನಕವನ್ನು ಇದೇ ಸರಿ ತಪ್ಪು ಎನ್ನಲಾಗದು.ಆದರೆ ಲೌಕಿಕ ನೆಲೆಯನ್ನು ಬಿಟ್ಡು ಮೂಲ ಆಶಯವನ್ನು ಗುರುತಿಸಬಹುದು.

ಕೋಟೆದ ಬಬ್ಬು ಓರ್ವ ವೀರ ಆತನ ಬಲ ಆತನನ್ನು ಸಾಕಿದ ಗುತ್ತಿನ ಒಡೆಯನಿಗೆ  ಇದ್ದರೆ ಆ  ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ.ತಮಗೆ ಪ್ರತಿಸ್ಪರ್ಧಿಯಾಗಬಹುದೆಂದು ಕುಟಿಲ ತಂತ್ರ ಮಾಡಿ ಬಾವಿಗಿಳಿಸಿದರು.ಆಗ ಯಾರೋ ಓರ್ವಹೆಣ್ಣುಮಗಳು ( ಹೆಚ್ಚಿನ ಪಾಡ್ದನಗಳಲ್ಲಿ ಮುಗೇರರ ತಂಗಿ ಎಂದಿದೆ.ಒಂದರಲ್ಲಿ ದೇರೆ ಎಂಬವನ ತಂಗಿ ಎಂದಿದೆ ಒಂದರಲ್ಲಿ‌ಬ್ರಾಹ್ಮಣ ಹುಡುಗಿ ಎಂದಿರುವ ಬಗ್ಗೆ ಬಿಳಿಮಲೆಯವರು ಬರೆದಿದ್ದಾರೆ ) ಕೋಟೆದ ಬಬ್ಬುವನ್ನು ರಕ್ಷಣೆ ಮಾಡುತ್ತಾರೆ

ಅದರೂ ಅವರನ್ನು ಜನ ಬದುಕಲು ಬಿಡದೆ ಕಾಡಿದಾಗ ತಾರಿಗುಂಡಿಗೆ ಹಾರಿ ಆತ್ಮಾರ್ಪಣೆ ಮಾಡಿಕೊಳ್ತಾರೆ.

ಇದರ ನಡುವೆ ಬಬ್ಬರ್ಯನ ಕಾಲು ಕಡಿದ ಕಥೆ ಇದೆ.ಇದು ಈ ವೃತ್ತಾಂತದ ಮೊದಲಿನದೋ ನಂತರದ್ದಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ‌

.ಮೂಲ ಆಶಯವನ್ನು ಗಮನಿಸಿದರೆ ಮೊದಲೇ ನಡೆದ ಘಟನೆ ಇದು.ಬಬ್ಬರ್ಯ ಮತ್ತು ಕೋಟೆದ ಬಬ್ಬುವಿಗೆ ಯುದ್ದವಾಗಿದೆ.

ಆಗ ಕೋಟೆದ ಬಬ್ಬುವಿಗೆ ಸಹಾಯಕವಾಗಿರುವ ನೀಚ ತನಿಯ ಎಂಬ ವೀರ ಹಂದಿಯನ್ನು ಕಡಿದು ಗಮನ ತಪ್ಪಿಸಿ ಕೋಟೆದ ಬಬ್ಬುವಿನ ಆಣತಿಯಂತೆ ಬಬ್ಬರ್ಯ ಕಾಲನ್ನು ಕಡಿಯುತ್ತಾನೆ

ಇಲ್ಲಿ ಯುದ್್ದ ಆದದ್ದು ಸಮೀಪದ ಯಾರೋ ಅರಸ ಗುತ್ತಿನ‌ಒಡೆಯ ಅಥವಾ ಪಾಳೇಗಾರ  ನ ಜೊತೆ ಇರಬಹುದು.

ನಂತರ ಅದು ಯಾರೆಂದು ಗೊತ್ತಿಲ್ಲದೇ ಇದ್ದಾಗ ಅಥವಾ ಬಬ್ಬರ್ಯನಿಗಿಂತ ತಮ್ಮ ದೈವ ಬಲಶಾಲಿ ಎನ್ನಲು ಬಬ್ಬರ್ಯನ ಕಾಲು ಕಡಿದದ್ದು ಎಂ ಬ ಕಥೆ ಹರಡಿರಬಹುದು.

ತಮ್ಮ‌ದೈವ ಶಕ್ತಿ ಶಾಲಿ ಎಂದು ಸಾಧಿಸಲು ತನ್ನಿಮಾಣಿಗ ಕಡಿದದ್ದು ಎಂಬ ಕಥಾನಕ ಬಂದಿರಬಹುದು

ತನ್ನಿ ಮಾಣಿಗ ಕಾಲು ಕಡಿದ ಬಗ್ಗೆ ನಾನು ಓದಿದ ಕೇಳಿದ ಕಥೆಗಳಲ್ಲಿ ಇಲ್ಲ‌.

ಹಾಗೆಂದು ಆ ರೀತಿಯ ಕಥೆ ಇಲ್ಲವೆಂದಲ್ಲ.ಇರಲೂ ಬಹುದು.

ಆದರೆ ಒಂದು ದೈವ ಇನ್ನೊಂದು ದೈವದ ಕಾಲು ಕಡಿದಿದೆ ಎಂಬುದೇ ಅವಾಸ್ತವಿಕ ವಿಚಾರಗಳು..

ಅವರೇನು ನಮ್ಮ ಹಾಗಿರುವ ಹುಲು ಮಾನವರೇ..ಕೈಕಾಲು ಕಡಿದು ಕೊಳ್ಳಲು.?

ಯಾರೇ ಕಡಿದಿರಲಿ ಅದು ಆ ಸಮುದಾಯಕ್ಕೆ  ಹೆಮ್ಮೆಯ ವಿಚಾರವೇನೂ ಅಲ್ಲ.

ರಕ್ಷಣೆ ಮಾಡುವ ವಿಚಾರ ಹೆಮ್ಮೆಯದು ,

ಬಬ್ಬರ್ಯನೂ ಓರ್ವ ಗುತ್ತಿನ / ರಾಜ್ಯದ ಒಡೆಯನಾಗಿದ್ದ.ತನ್ನ ರಾಜ್ಯ ವಿಸ್ತರಿಸಿಕೊಂಡು ಬರುವಾಗ ಕೋಟೆದ ಬಬ್ಬುವಿನ ಒಡೆಯನಿಗೂ ಬಬ್ಬರ್ಯನಿಗೂ ಯುದ್ದವಾಗಿ ಆತನನ್ನು ಕೋಟೆದ ಬಬ್ಬುಹಾಗೂ ನೀಚ ತನಿಯ ಹೋರಾಡಿ ಹಿಮ್ಮೆಟ್ಟಿಸಿರಬಹುದು

ಅಥವಾ ಎಲ್ಲೋ ಯಾರೋ ಇಬ್ಬರು ಅರಸರ ನಡುವೆ ನಡೆದ ಘಟನೆಯನ್ನು ಈ ಇಬ್ಬರು ಕೊಟೆದ ಬಬ್ಬು ಬಬ್ಬರ್ಯ ದೈವಗಳ ಕಥೆಗೆ ಯಾರೋ ಜೋಡಿಸಿರಬಹುದು..

ಆ ಮೂಲ ಆಶಯ ಕಾಲು ಕಡಿದದದ್ದು ಇತ್ಯಾದಿಯಾಗಿ ಕತಾನಕವಾಗಿ ಹರಡಿರಬಹುದು.

ಅದಕ್ಕೆ ಯಾರು ಕಡಿದದ್ದು ಎಂಬ ಚರ್ಚೆ ಯಾಕೆ ?

ಅವರು ಮನುಷ್ಯರಾಗಿದ್ದಾಗ ಏನೇ ಆಗಿರಲಿ‌.ದೈವತ್ವ ಪಡೆದ ನಂತರ ನಮ್ಮನ್ನು ಕಾಯುವ ಶಕ್ತಿಗಳು..

ನನಗೆ ಸಿಕ್ಕ ಕೋಟೆದ ಬಬ್ಬು ,ಬಬ್ಬರ್ಯನ ,ಮತ್ತು ಮುಗೇರರ ಪಾಡ್ದನದಲ್ಲಿ ಕಾಲು ಕಡಿದ ಕಥೆ ಇಲ್ಲ.ಆದರೆ ನೀಚ ದೈವದ ಕಥಾನಕದಲ್ಲಿ ಕೋಟೆಯ ಬಬ್ಬುವಿನ ಸಹಾಯಕನಾದ ನೀಚ ತನಿಯ ಬಬ್ಬರ್ಯನ ಕಾಲು ಕಡಿದ ವೃತ್ತಾಂತವಿದೆ.ಇವು ಎರಡು ಪಾಳೇಗಾರರ ನಡುವಿನ ಯುದ್ದದ ಪ್ರತೀಕ ಅಷ್ಟೇ ಹೊರತು ಒಂದು ದೈವ ಇಮ್ನೊಂದರ ಕಾಲು ಕಡಿಯಿತೆಂಬುದು ಅವಾಸ್ತವಿಕ ವಿಚಾರ

ಹೇಗೆ ವಿಷ್ಣು ಶಿವರಲ್ಲಿ ಬೇಧ ಇಲ್ಲವೋ ನಮ್ಮ‌ತುಳುನಾಡಿನ ದೈವಗಳ ನಡುವೆಯೂ ಬೇಧ ಮಾಡಬಾರದು

.ಕೊರಗ ತನಿಯ ಕೋಟೆದ ಬಬ್ಬು ಬಬ್ಬರ್ಯ ,ಆಲಿ ಭೂತ ,ಚಾಮುಂಡಿ‌ ಮುಗೇರ್ಲು,ಬೈದೆರ್ಲು ಕಂಬೆರ್ಲು  ಮೊದಲಾದ ಎಲ್ಲ ದೈವಗಳೂ ಸಮಾನ ಶಕ್ತಿ ಇರುವವರು.ಹಾಗಾಗಿ ಎಲ್ಲರಿಗೂ ಸಮಾನ ಭಕ್ತಿ ಗೌರವ ತೋರಬೇಕಾದ್ದು ನಮ್ಮ‌ಕರ್ತವ್ಯ

ಚಿತ್ರ: ಕೋಟೆದ ಬಬ್ಬು ಸ್ವಾಮಿ ದೈವ 


ಡಾ.ಲಕ್ಷ್ಮೀ ಜಿ ಪ್ರಸಾದ್

Category:Stories



ProfileImg

Written by Dr Lakshmi G Prasad

Verified

0 Followers

0 Following