ಆಗುತ್ತಿದೆಯೇ ಭಾವನಾ ಯುಗಾಂತ್ಯ....?

ProfileImg
26 Apr '24
3 min read


image

ಸ್ನೇಹಿತರೆ ನಮಸ್ತೇ..

ನನಗೆ ಅನಿಸ್ತಾ ಇದೆ ಪ್ರೆಶ್ನೆಯನ್ನ ಹೀಗೆ ಕೇಳಬಹುದಿತ್ತು. ಮನುಷ್ಯನ ಭಾವನೆಗಳು ಮೊದಲಿನಂತೆ ಉಳಿದ್ದಿದರೆ ಹೇಗಿರುತ್ತಿತು? ಎಂದು.

ಮನುಷ್ಯ ಬುದ್ದಿ ಜೀವಿ, ತನ್ನ ವಿಚಾರವನ್ನು ಮಾತು ಮನಸ್ಸಿನ ಮೂಲಕ ಮಾಡೋ ಅಂತ ಜೀವಿ. ಭಾವನೆ ಗಳನ್ನೂ ಕೇವಲ ಮನಸ್ಸಿಂದಲೇ ಅರ್ಥೈಸಿಕೊಳ್ಳುವಷ್ಟು ಶಕ್ತಿಶಾಲಿ ಎಲ್ಲವೂ ಸತ್ಯವೇ ಆದರೆ ಅದೇ ಮುಳ್ಳಾಗುತ್ತಿದೆಯೇ?

ಹೇಗೆ ವಿಕಸನ ಹೊಂದುತ್ತಾ ನಮ್ಮ ಬಾಲ ಮರೆಯಾಯಿತೋ! ನಮ್ಮ ಬಾಲವೇ ನಾವು ನೆಡೆಯಲು ಮೂಲ ಆದಾರ ವಾಗಿತ್ತೊ, ವಿಕಸನ ಹೊಂದುತ್ತಾ ಅದು ಮರೆಯಾಯಿತು. ಈಗಲೂ ನಾವು ಬಾಲಾದರ ಇಲ್ಲದ ಕೋತಿಗಳೇ!. 

ನಾಲ್ಕು ಕಾಲುಗಳ ಬದಲಾಗಿ ಎರಡು ಕಾಲ್ಗಲ್ಲಿ ನಿಂತು, ಇನ್ನೆರಡು ಕೈಗಳಿಗೆ ಕೆಲಸ ಕೊಟ್ಟು, ಬೆರಳುಗಳ ಅಂತರ ಹೆಚ್ಚಾಗಿ , ಮೆದುಳು ಮತ್ತು ಕೈಗಳ ಒಂದಾಣಿಕೆ ಬಂದು ಕಣ್ಗಳೇ ಇಲ್ಲದೆ ವಸ್ತುಗಳ ನೋಡುವ ಕರಣ ಸಾಮರ್ಥ್ಯ ( hands and brain coordination) ಪಡೆದುಕೊಂಡ ಇವನಿಗೆ ವಿಕಸನದ ಅರಿವೆ ಇಲ್ಲ ಎಂಬುದು ವಿಪರ್ಯಾಸ.

ಹಾಗೆಯೇ ಮಾತು ಮನ್ನಸ್ಸನ್ನ ನಿಗ್ರಹಿಸಿ ಭಾವನೆ ತುಂಬಿ ಗುಂಪು ಗುಂಪಾಗಿ ಇದ್ದ ನಾವು, ವಿಕಸನ ಹೊಂದುತ್ತಾ ಅದನ್ನೆಲ್ಲಾ ಕಳೆದು ಕೊಳ್ಳಲಿದೆವೋ ಅನ್ನೋ ಭಯ ಇದೆ. ನಾವು ಭಾವನೆಗಳೆ ಇಲ್ಲದ ಯಂತ್ರಮಾನವರಾಗುತ್ತಿದ್ದೇವೋ! ಉತ್ತರವಿಲ್ಲದ ಪ್ರಶ್ನೆ?

ಸ್ನೇಹಿತರೆ ನನ್ನ ಅರಿವಿಗೆ ಬಂದಂತೆ ಈ ವಿದ್ಯಮಾನ ತುಂಬಾ ವರ್ಷಗಳಿಂದ ಏನು ನೆಡಿಯುತ್ತಿಲ್ಲ, ನಾವೆಲ್ಲ ಒಟ್ಟಿನ ಸಂಸಾರ ಮಾಡಿದವರೇ, ಜೊತೆಗೆ ಹುಟ್ಟಿ ಬಿತ್ತಿ ಬಾಳಿದವರೇ, ಆದರೆ ನಮ್ಮ ಮದ್ಯ ಸ್ವಾರ್ಥ ಮತ್ತು ಸ್ವಾಧಿಪತ್ಯ ಎಂಬ ಕಿಚ್ಚು ಹತ್ತಿ ನಾವೇ ಬಸ್ಮ ವಾಗುತ್ತಿರುವುದು ವಿಪರ್ಯಾಸವೆ ಸರಿ.

ಆದರೆ ಹೀಗ ಗುಂಪಾಗಿ ಬದುಕುತ್ತಿರುವುದು ಮುಖಪುಟ ಮತ್ತು ವಾಟ್ಸಾಪ್ ಗುಂಪುಗಳಲ್ಲಿ, ಆತ್ಮೀಯತೆ ಇಂದ ಮಾತಾಡುತ್ತಿರುವುದು ಅಲೆಕ್ಸಾ ಸಿರಿ ಅಂಥಹ ಕೃತಕ ಬುದ್ಧಮತ್ತೆಯ ಯಂತ್ರಗಳೊಂದಿಗೆ , we become a part of what we around 

ಈ ಸಾಲುಗಳಂತೆಯೇ ಕೃತಕ ಬುದ್ಧಮತ್ತೆಯ AI ಜೊತೆಗೂಡಿ ನಮ್ಮ ಸೂಕ್ಷ್ಮ ಸಂವೇದನೆ , ನಮ್ಮ ಭಾವನೆ ಅವುಗಳಂತೆಯೇ ಬದಲಾಗುತ್ತಿದೆಯೇ? ಉತ್ತರಿಸಲ್ಸಾದ್ಯ …

ಸ್ವಾರ್ಥ ಉಪಯೋಗಕ್ಕೆ ಇಲ್ಲದ ಆಸ್ತಿ ಅಂತಸ್ತು, ಅಧಿಕಾರ ಕೇಂದ್ರೀಕೃತವಾಗಿದ್ದೇ ಇದಕೆಲ್ಲ ಕಾರಣ. ಕೇವಲ ೨೫ ವರ್ಷದ ಹಿಂದೆಯೂ ಇಷ್ಟಾಗಿ ಇರದ ಈ ಒಂಟಿತನ ಸ್ವಾರ್ಥತೆ ೨೦೦೦ ರ ನಂತರ ನಮ್ಮ ಬದುಕುವ ಶೈಲಿ ಅಥವಾ ಬದುಕಿನ ಒಂದು ಭಾಗವಾಗುತ್ತಿರುವುದು ಭಾವನ ಯುಗಾಂತ್ಯಕೆ ಮತ್ತು ಹೊಸ ಜೈವಿಕ ಯಂತ್ರಮಾನವನ ಯುಗದ ಆರಂಭಕ್ಕೆ ಮುನ್ನುಡಿ ಯಾಗುತ್ತಿದೆ ಅನಿಸುತ್ತಿದೆ.

ನಮ್ಮ ಬದುಕು ಭಾವನೆಗಳಿಗಿಂತ ಪ್ರಾಪಂಚಿಕವಾಗಿ (materialistic) ಬದಲಾಗುತ್ತಿದೆ. ವಸ್ತುಗಳನ್ನ ಪ್ರೀತಿಸ್ತಾ ಇದ್ದೇವೆ ಭಾವನೆಗಳನ್ನ ಉಪಯೋಗಿಸ್ತಾ ಇದ್ದೇವೆ, ಎಲ್ಲಿಗೆ  ತಲುಪುತ್ತೇವೇಯೋ ,ಅದು ಉಳಿದವರು ಕಾಣಬೇಕಿದೆ ಅಂದರೆ ನಾವೇ ಬಿಟ್ಟು ಹೋಗುವ ನಮ್ಮ ಜೈವಿಕ ಸಂತಾನ.

ಸತ್ಯ ಎಂದರೆ ಬದುಕಿಗೆ ಜೀವನದ ಮೌಲ್ಯಗಳು ಮುಖ್ಯ. ಆ ಮೌಲ್ಯಗಳನ್ನು ಅಳೆಯುವ ಅಳತೆಗೋಲು ಭಾವನೆಪೂರಿತ ಮನಸ್ಸಾಗಿರ ಬೇಕು, ಮನಸ್ಸಿದ್ದರೆ ಮಾರ್ಗ ಎಂಬಂತೆ ನಮ್ಮೆಲ್ಲ ಆಗುಹೋಗುಗಳಿಗೆ ಮನಸಿನ ಸ್ಥಿತಪ್ರಜ್ಞತೆಯ ಏರಿಳಿತವೆ ಕಾರಣ.

 

ಸಂತೋಷ… ನಿಮ್ಮನ್ನು ಸಿಹಿಯಾಗಿಸುತ್ತದೆ.

ಪ್ರಯೋಗಗಳು… ನಿಮ್ಮನ್ನು ಬಲವಾಗಿಸುತ್ತದೆ !

ದುಃಖಗಳು… ನಿಮ್ಮನ್ನು ಮನುಷ್ಯರಾಗಿಸುತ್ತದೆ!

ವೈಫಲ್ಯ… ನಿಮ್ಮನ್ನು ವಿನಮ್ರವಾಗಿಸುತ್ತದೆ!

ಯಶಸ್ಸು… ನಿಮ್ಮನ್ನು ಪ್ರಜ್ವಲಿಸುತ್ತದೆ!

ಆದರೆ ನಂಬಿಕೆ ಮಾತ್ರ… ನಿಮ್ಮನ್ನು ಮುನ್ನುಗಿಸುತ್ತದೆ..!

ಕೆಲವೊಮ್ಮೆ ನಮ್ಮ ಜೀವನದಲ್ಲಿ ನಾವು ತೃಪ್ತರಾಗುವುದಿಲ್ಲ, ಆದರೆ ಈ ಜಗತ್ತಿನಲ್ಲಿ ಅನೇಕ ಜನರು ನಮ್ಮ ಜೀವನವನ್ನು ನಡೆಸುವ ಕನಸು ಕಾಣುತ್ತಿದ್ದಾರೆ.

ಜಮೀನಿನಲ್ಲಿರುವ ಮಗು ವಿಮಾನವು ಮೇಲೆ ಹಾರುವುದನ್ನು ನೋಡಿದರೆ, ಪೈಲಟ್ ವಿಮಾನದಿಂದ ತೋಟದ ಮನೆಯನ್ನು ನೋಡುತ್ತಾನೆ ಮತ್ತು ಕನಸುಗಳ ಮನೆಗೆ ಹಿಂದಿರುಗುತ್ತಾನೆ. 

ಉತ್ತಮ ಜೀವನ!

ನಿಮ್ಮದನ್ನು ಆನಂದಿಸಿ… ಸಂಪತ್ತು ಸಂತೋಷದ ರಹಸ್ಯವಾಗಿದ್ದರೆ, ಶ್ರೀಮಂತರು ಬೀದಿಗಳಲ್ಲಿ ನೃತ್ಯ ಮಾಡುತ್ತಿರಬೇಕು.

ಆದರೆ ಬಡ ಮಕ್ಕಳು ಮಾತ್ರ ಅದನ್ನು ಮಾಡುತ್ತಾರೆ!

ಶಕ್ತಿಯು ಭದ್ರತೆಯನ್ನು ಖಚಿತಪಡಿಸಿದರೆ, ವಿಐಪಿಗಳು ಸುರಕ್ಷಿತವಾಗಿ ನಡೆಯಬೇಕು.

ಆದರೆ ಸರಳವಾಗಿ ಬದುಕುವವರು, ಚೆನ್ನಾಗಿ ನಿದ್ರೆ ಮಾಡುತ್ತಾರೆ.

ಸೌಂದರ್ಯ ಮತ್ತು ಖ್ಯಾತಿಯು ಆದರ್ಶ ಸಂಬಂಧಗಳನ್ನು ತಂದರೆ, ಸೆಲೆಬ್ರಿಟಿಗಳು ಅತ್ಯುತ್ತಮ ವಿವಾಹಗಳನ್ನು ಹೊಂದಿರಬೇಕು!

ಸರಳವಾಗಿ ಬದುಕಿ, ಸಂತೋಷವಾಗಿರಿ! ನಮ್ರತೆಯಿಂದ ನಡೆದು ಪ್ರಾಮಾಣಿಕವಾಗಿ ಪ್ರೀತಿಸಿ!.🙏

 

ಹೀಗೆ ಭಾವನೆಗಳು ಅಥವಾ ಮಾನಸಿಕ ವಿಕಸನ ಕೇವಲ ಮನುಷ್ಯನಿಗೆ ಸೀಮಿತವಾದದ್ದಲ್ಲ, ಬದಲಾಗಿ ಅದು ಪ್ರತಿ ಭೂ ಜೀವಿಗಳಲ್ಲೂ ಯಾವುದೆ ಬೇಧಭಾವ ಗಳಿಲ್ಲದೆ ಸಮನಾಗಿ ಹಂಚಲ್ಪಟಿದೆ , ಆದರೆ ಮನುಷ್ಯನ ಅತಿ ಬುದ್ಧಿವಂತಿಕೆಯ ಪ್ರದರ್ಶನ ನಮ್ಮನ್ನ ಭಾವನಾ ರಹಿತವಾಗಿ ಮಾಡುವುದರಲ್ಲಿ ಯಶಸ್ವಿಯಾಗುತ್ತದೆ !

 

ಒಂದಂತು ಸತ್ಯ ಸಂತೋಷ ಹೊರಗೆಲ್ಲೂ ಇಲ್ಲ ನಮ್ಮೊಳಗೇ ಇದೆ.

ಯಾವ ಆಸ್ತಿ ಅಂತಸ್ತು ಇಲ್ಲದೆ ಭಾವದಲ್ಲೇ ಶ್ರೀಮಂತರಾಗೋದು ನೈಜ ಶ್ರೀಮಂತಿಕೆ, ಹೀಗೆ ಯೋಚಿಸುತ್ತಿರುವಾಗ ನಮ್ಮ ಒಳಮನದಲ್ಲಿ ಕಂಡದ್ದು ....ವಿಕಸನಗೊಳ್ಳುವುದನ್ನು ನಿಲ್ಲಿಸಿ, ಸಹಜ ಸ್ಮೃತಿಯಿಂದ ತಾಯಿ ಭೂಮಿಯ ಸಂವೇದನೆಯನ್ನು ಅನುಭವಿಸುತ್ತಿದ್ದ ಆ ಕ್ಷಣಕ್ಕೆ ಹಿಂತಿರುಗಬೇಕೆನಿಸಿದೆ....!

ಧನ್ಯವಾದಗಳೊಂದಿಗೆ

ಮಂಜುನಾಥ್ ಕೆ ಆರ್

Category:Personal Experience



ProfileImg

Written by Manjunath KR