ಇಂಡಿಯಾ, ಭಾರತ್ ಮತ್ತು ಪಾಕಿಸ್ತಾನ್: ಒಂದು ಸಂದ್ವಿಚೆಡ್ ನಾಗರಿಕತೆಯ ಸಂವಿಧಾನಿಕ ಪಯಣ

ಪುಸ್ತಕ ವಿಮರ್ಶೆ: ಜೇ. ಸಾಹಿ ದೀಪಕ್ ಅವರಿಂದ ಬರೆಯಲ್ಪಟ್ಟ ಪುಸ್ತಕ

ProfileImg
29 Jul '25
4 min read


image

             ಇಂದಿನ ’ಭಾರತ’ ಬಗೆ ಹೆಚ್ಚು ತಿಳಿಯಬೇಕೆಂಬ ಬಯಕೆಯನ್ನು ನನ್ನಲ್ಲಿ ಹುಟ್ಟು ಹಾಕಿದ ಪುಸ್ತಕ ಎಂದರೇ ’ಸಾವರ್ಕರ್’ ಎಂಬ ಮೊದಲನೇ ಭಾಗವಾದ ಡಾ. ವಿಕ್ರಮ್ ಸಂಪತ್ ರವರು ಬರೆದಿರುವ ಒಂದು ಇತಿಹಾಸದ ಪುಸ್ತಕದಿಂದ ಆರಂಭವಾದ ಈ ಇತಿಹಾಸದ ಪಯಣ ನನ್ನನ್ನು ಈಗ ಜೇ. ಸಾಯಿ ದೀಪಕ್ ಒಬ್ಬ ಅಡ್ವೊಕೇಟ್ ಬರೆದಿರುವ 'ಭಾರತ್ ಟ್ರೈಲಾಜಿ (Bharat Trilogy)’ ಯ ಮೂರು ಭಾಗದಲ್ಲಿ ಎರಡನೇ ಭಾಗವಾದ ’ಇಂಡಿಯಾ, ಭಾರತ್ ಮತ್ತು ಪಾಕಿಸ್ತಾನ್ ನಲ್ಲಿ ತಂದು ನಿಲ್ಲಿಸಿದೆ. ಈ ಪಯಣದಲ್ಲಿ ಹಲವು ನನ್ನ ಬ್ರಹ್ಮತೆಗಳನ್ನು ತೊಳೆದು ಹಾಕಿದೆ ಮತ್ತು ಭಾರತವನ್ನು ’ಭಾರತ’ ವಾಗಿಯೇ ಕಾಣಲು ಸಹಾಯ ಮಾಡಿದ್ದೆ. ಓದುಗರಿಗೆ ಇಲ್ಲಿ ಇಂಡಿಯಾ, ಭಾರತ್ ಮತ್ತು ಪಾಕಿಸ್ತಾನ್’ ಪುಸ್ತಕವನ್ನು ನಾನು ಕಂಡ ಹಾಗೆ ಈ ಪುಸ್ತಕದ ಸಮೀಕ್ಷೆಯನ್ನು ಇಲ್ಲಿ ಕಾಣಬಹುದು. ಈ ಪುಸ್ತಕ ೨೦೨೨ ರಲ್ಲಿ ಪ್ರಕಟವಾಗಿದು ’ಬ್ಲೂಮ್ಬರಿ ಇಂಡಿಯಾ (Bloomsbury India)’ ಪ್ರಕಾಶಕರಾಗಿರುತ್ತಾರೆ. 

            ಈ ಪುಸ್ತಕವನ್ನು ದೀಪಕ್ ರವರು ಮೊದಲನೇ ಭಾಗ ಎಲ್ಲಿ ಅಂತ್ಯ ಕಂಡಿತೋ, ಅಲ್ಲಿಂದಲೇ ಪುನಾರಂಭ ಮಾಡಿದ್ದಾರೆ. ಮೊದಲನೇ ಭಾಗದಲ್ಲಿ ಲೇಖಕರದ್ದು ಪಾಶ್ಚಿಮಾತ್ಯ ಸಂಸ್ಕೃತಿ ಯ (Western Culture)’  ಭಾರತ ಮೇಲಿನ ಪ್ರಭಾವ ಅದ್ದರಿಂದ ನಮ್ಮ ಈಗಿನ ಸಂವಿಧಾನ ಮೇಲೆ ಉಳಿದಿರುವ ಚಾಪನು ತಿಳಿಸುವ ಪ್ರಯತ್ನ ಮಾಡಿದ್ದರು. ಈಗ ’ಪೂರ್ವ ನಾಗರಿಕತೆಯ (Eastern Civilization)’ ಭಾರತ ಮೇಲಿನ ಪ್ರಭಾವ ಅದ್ದರಿಂದ ಹುಟ್ಟಿಕೊಂಡ ’ಪಾಕಿಸ್ತಾನ’ ಎಂಬ ಮುಸಲ್ಮಾನ ರಾಷ್ಟ್ರದ ಅರಿವು ತಿರುವುಗಳನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ಲೇಖಕರು ಅದರ ಹಿಂದಿನ ನೈಜ್ಯತೇಯನ್ನು ಪಠ್ಯ ಪುಸ್ತಕಗಳಲ್ಲಿ ಹುಡುಕಿದರೂ ಸಿಗಲಾರದೆ ಮಾಯವಾಗಿರುವ ಇತಿಹಾಸವನ್ನು ಓದುಗರಿಗೆ ಉಣಬಡಿಸಿದ್ದಾರೆ. ಲೇಖಕರದ್ದು ಭಾರತವನ್ನು ’ಭಾರತ’ ವಾಗಿ ಅಷ್ಟೇ ಕಾಣಬೇಕು ಎಂಬುವ ಕಾಣದ ಕೂಗು ಕೇಳಿಬರುತ್ತದೆ. ಒಂದರಾಗಿ ಇನ್ನೊಂದು ಪುಟಗಳನ್ನು ತಿರುಗಿಸಿದ ಹಾಗೆ, ಭಾರತವನ್ನು ಕಾಣುವ ನಮ್ಮ ದೃಷ್ಟಿ ಕೋನದ ಮೇಲೆ ಪ್ರಶ್ನೆಯನ್ನು ಹುಟ್ಟಿ ಹಾಕುತ್ತದೆ. ಅಷ್ಟೇ ಅಲ್ಲದೆ ಭಾರತ ಏಕೆ ಹಿಂದೂ’ ಆಡಳಿತ ರಾಷ್ಟ್ರವನಾಗಿ ಉಳಿಸಿ ಕೊಳ್ಳಬೇಕು ಮತ್ತು ಅದರ ಮಹತ್ವದ ಬಗೆ ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಓದುಗರ ತಲೆಯಲ್ಲಿ ಹುಳುವನ್ನು ಬಿಡುವ ಕೆಲಸ ಲೇಖಕರು ಮಾಡಿದ್ದಾರೆ.  ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನನ್ನ ಪ್ರಕಾರ ಪೂರ್ವ ನಾಗರಿಕತೆ ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಇಸ್ಲಾಂ ಧರ್ಮದ ನೇರವಾಗಿ ಮತ್ತು ಪರೋಕ್ಷವಾಗಿ ಹೇಗೆ ಬ್ರಿಟಿಷ್ ಆಡಳಿತ ಭಾರತೀಯ ನಾಗರಿಕತೆಯ ಮೇಲೆ ಬೀರಿದೇ ಎಂಬುದನ್ನು ಲೇಖಕರು ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ನಾಗರಿಕತೆಯನ್ನು ಹೊರತು ಪಡಿಸಿ ಹೆಚ್ಚಾಗಿ ಭಾರತೀಯ ರಾಜಕೀಯ ನಿಲುವುಗಳ ಮೇಲೆ ಹೇಗೆ ಈ ಬಾಹ್ಯ ಅಂಶಗಳಿಂದ ಪ್ರಭಾವ ಬೀರಿದೆ ಎಂಬುದನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು.

            ಲೇಖಕರು ಈ ಪುಸ್ತಕದಲ್ಲಿ ಪ್ರತಿ ಅವರ ವಾದಕು ದಿನಾಂಕ ಸಹಿತ ಅದರ ಪುರಾವೆಯನ್ನು ಪ್ರಸ್ತುತ ಪಡಿಸಿದ್ದಾರೆ. ಅಷ್ಟೇ ಅಲದೇ ಕೆಲವೊಂದು ವಿಷಯಗಳು ಸಂಪೂರ್ಣ ಮಾಹಿತಿಯನ್ನು ಕೇಳುತ್ತದೆ ಅದಕು ಲೇಖಕರು ಓದುಗರಿಗೆ ಸುಲಭವಾಗುವ ಹಾಗೆ ಆ-ಆ ವಿಷಯಗಳಿಗೆ ಪ್ರತ್ಯೇಕ ಪುಸ್ತಕಗಳನ್ನು ಕೂಡ ಅಲಲ್ಲಿ ಉಲ್ಲೇಖಿಸಿದ್ದಾರೆ. ಇತಿಹಾಸದ ಬಗ್ಗೆ ಆಸಕ್ತಿ ಇಲ್ಲದವರಿಗೆ ಈ ಪುಸ್ತಕ ಬಹುಶಃ ನಿದ್ದೆ ಬರಿಸ ಬಹುದು ಆದರೆ ಒಮ್ಮೆ ಗಮನ ವಿಟ್ಟು ಈ ರೀತಿಯ ಪುಸ್ತಕಗಳನ್ನು ಸಂಪೂರ್ಣ ಮಾಡಿದರೆ ಗಳಿಸಿಕೊಳುವ ಅಂಶಗಳೆ ಹೆಚ್ಚಿರುತದೆ. ಈ ರೀತಿಯ ಇತಿಹಾಸ ನಮ್ಮಗೆ ಯಾವುದೇ ಪಠ್ಯ ಪುಸ್ತಕದಲ್ಲಿ ಸಿಗಲಾರದು. ಈ ಪುಸ್ತಕದಲ್ಲಿ ಹಲವು ನಮ್ಮ ರಾಷ್ಟ್ರದ ಪ್ರಸಿದ್ದ ಆಗಿನ ರಾಜಕೀಯ ಗಣ್ಯರ ಸಿದಾಂತ ಮತ್ತು ಅವರು ನಮ್ಮ ರಾಷ್ಟ್ರದ ರಾಜಕೀಯ ಸಿದಾಂತಗಳ ಮೇಲೆ ಬೀರಿದ್ದ ಪ್ರಭಾವವನ್ನು ಈ ಪುಸ್ತಕದಲ್ಲಿ ನಾವು ಕಾಣಬಹುದು. ಓದುಗರಿಗೆ ಓಟಾರೆಯಾಗಿ ಹೇಳಬೇಕೆಂದರೆ ಈ ಪುಸ್ತಕ ಒಂದು ಭಾರತ ರಾಜಕೀಯದ ಇತಿಹಾಸವನ್ನು ಮೀಲುಕು ಹಾಕಿಸುವ ಕೆಲಸವನ್ನು ಮಾಡುತ್ತದೆ ಎನ್ನಬಹುದು. ಮೊದಲ ಭಾಗದಲ್ಲುಕೂಡ ಲೇಖಕರ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ. ಅದುವೇ ಭಾರತ ಮತ್ತು ಅದರ ಮೂಲ ಸಿದಾಂತಗಳ ನಡುವೆ ಈ ಎರಡೂ ಪಂಗಡಗಳು ಅಂದರೆ ಬ್ರಿಟೀಷರು ತಂದು ಬಿತ್ತ 'ಕ್ರಿಶ್ಚಿಯಾನಿಟಿ' ಮತ್ತು ಪೂರ್ವ ನಾಗರಿಕತೆ ತಂದು ಬಿತ್ತ 'ಇಸ್ಲಾಂ' ಎಂಬ ಬೀಜ ಹೇಗೆಲ್ಲಾ ಭಾರತದ ಮೂಲಗಳನ್ನು ತೆಗೆದೂ ತನ್ನದೇ ಆದ ಸಿದಾಂತಗಳನ್ನು ಅದರ ಹೊಳಗೆ ಮಿಶ್ರಿತಗೊಳಿಸಿವೆ ಎಂಬುದನ್ನು ತಿಳಿಸಿಕೊಡುವುದೇ ಈ 'ಭಾರತ್ ಟ್ರೈಲಾಜಿ' ಯ ಮುಖ್ಯ ಗುರಿ ಎಂಬಂಥೆ ಈ ಎರಡೂ ಬಾಗಗಳಲ್ಲಿ ಕಂಡುಬಂದಿದ್ದೆ. ಇನ್ನು ಮೂರನೇ ಭಾಗದಲ್ಲಿ 1924 ರಿಂದ ಭಾರತ ವಿಭಜನೆಯಾಗುವರೆಗೆ ಈ ಪುಸ್ತಕದ ಸರಣಿ ಅಂತ್ಯ ಕಾಣಬಹುದು ಎಂದು ಓದುಗರು ನಿರೀಕ್ಷಿಸಬಹುದು.

 

ನನ್ನ ನಿಲುವು:—

              ನಾನು ನನ್ನನ್ನು ಬಲ ಪಂಥಿಯಲ್ಲಿ ಕಂಡರೂ ನಾನು ಹೆಚ್ಚು ಕಲಿಕೆಯ ಹಾದಿಯಲ್ಲಿ ಇತಿಹಾಸದ ಈ ನನ್ನ ಪಯಣದಲ್ಲಿ ಮುಂದೆ ಸಾಗಲು ಬಯಸುತ್ತೇನೆ. ಇಲ್ಲಿಯ ವರೆಗೆ ಅಂದರೆ ’ಸಾವರ್ಕರ್’ ನಿಂದ ’ಇಂಡಿಯಾ, ಭಾರತ್ ಮತ್ತು ಪಾಕಿಸ್ತಾನ್’ ವರೆಗೂ ನಾವು ಭಾರತವನ್ನು ’ಭಾರತೀಯ’ ದೃಷ್ಟಿಯಲ್ಲಿ ಕಂಡಾಗ ಮಾತ್ರ ನಮ್ಮಗೆ ಭಾರತ ಕಾಣುತ್ತದೆ ಎಂಬುದು ಸ್ಪಷ್ಟವಾಗಿ ಕಾಣತೊಡಗಿದೆ. ನನ್ನ ದೃಷ್ಟಿಯಲ್ಲಿ ಭಾರತೀಯ ಯಾರು? ಯಾರೆಲ್ಲಾ ಅವರ ಮತವನ್ನು ಬದಕಿಟ್ಟು ಭಾರತದ ನಿಲುವು, ಆಚರಣೆ, ಸಂಸ್ಕೃತಿ, ಮತ್ತು ಅದರ ಒಪ್ಪು —ತಪ್ಪುಗಳನ್ನು ತಿಳಿದೂ ಭಾರತ ಮಾತೆಗೆ ಯಾರೆಲ್ಲಾ ಮಹತ್ವ ನೀಡುವರೋ ಅವರೆಲ್ಲ ಭಾರತೀಯರೇ. ನಮ್ಮಗೆ ತಿಳಿದಿರಬೇಕು ಭಾರತ ಒಂದೇ ಎರಡೆರಡೂ ಪ್ರತ್ಯೇಕ ಆಡಳಿತವನ್ನು ಮೀರಿ ಅದರ ಬೇರು ಅಂದರೆ ’ಹಿಂದುತ್ವ’ ವನ್ನು ಉಳಿಸಿಕೊಂಡಿರುವ ರಾಷ್ಟ್ರ. ಉಳಿಸಿ ಕೊಳ್ಳಲು ಹಲವು ಕಂಡ ಕಾಣದೇ ಮತ್ತು ಹಾಗೆ ಉಳಿದಿರುವ ಕಥೆಗಳು ಯಾವುದೋ ಒಂದು ಮೂಲೆಯಲ್ಲಿ ಧೂಳ್ ಹಿಡಿದು ಕುಳಿತ್ತಿರೋ ಆಳೆಗಳಲ್ಲಿವೆ. ಅಂತಃ ಕಥೆಗಳನ್ನು ನಮ್ಮ ಮುಂದೆ ತಂದು ಇಡುವ ಪ್ರಯತ್ನದಲ್ಲಿ ಹಲವು ಲೇಖಕರು ಹಿಂದೆ ಪ್ರಯತ್ನ ಪಟ್ಟು ಹೆಚ್ಚು ಓದುಗರಿಗೆ ತಲುಪಲಾಗದೆ ಹಾಗೆ ಧೂಳ್ ಇಡಿದ್ದ ಆಳೆಗಳಲ್ಲಿ ಹಾಗೆ ಕುಳಿತುಕೊಂಡಿವೆ ಆದರೆ ಇತ್ತೀಚೆಗೆ ಕಾಣುತ್ತಿರುವ ಬದಲಾವಣೆ ಸಂತಸ ಮೂಡಿಸುತ್ತದೆ. ಆ ಧೂಳ್ ಹಿಡಿದ ಕಥೆಗಳಿಗೆ ಜೀವ ತುಂಬುವ ಪ್ರಯತ್ನ ಇಂದಿನ ಭಾರತೀಯ ಲೇಖಕರು ನಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದಾರೆ. ಅದನ್ನು ನಾವು ಎರಡೂ ಕೈಗಳಿಂದ ಬಾಚಿ ಅಪ್ಪಿ ಕೊಳ್ಳಬೇಕು ಅಷ್ಟೇ. ನಾನು ಕಾಣುತ್ತಿರುವ ಭಾರತದ ಯುವ ಜನತೆ ಹೆಚ್ಚಾಗಿ ಪಾಶ್ಚಿಮಾತ್ಯ ಸಂಸ್ಕೃತಿಯ ಮೇಲೆ ವಾಲುತ್ತಿರುವುದು ನನ್ನ ವೀಕ್ಷಣೆ. ಅಷ್ಟೇ ಅಲ್ಲದೆ ಎಲ್ಲೋ ನಮ್ಮ ಯುವ ಜನತೆ ನಮ್ಮ ರಾಷ್ಟ್ರ ಮೊದಲು ಹಿಂದೂ ಧರ್ಮದ ರಾಷ್ಟ್ರ ಅದ ನಂತರ ಬೇರೆಲ್ಲ ಎಂಬುದನ್ನು ನೆನಪಿಡಲು ಇಂತಹ ಇತಿಹಾಸದ ಪುಸ್ತಕಗಳು ಅತ್ಯಗತ್ಯವಾಗುತ್ತದೆ.

 

Category:History



ProfileImg

Written by Prajwal Gowda

just spit it out man!

0 Followers

0 Following