ಸ್ವತಂತ್ರ ಹೋರಾಟ

ProfileImg
22 Jul '24
1 min read


image

                                                  ಸ್ವತಂತ್ರ ಹೋರಾಟ

ಆಂಗ್ಲರ ಮೇಲೆ ಕದನಗಳ ಮೂಲಕ ಪ್ರಾರಂಭ ಸ್ವಾತಂತ್ರ್ಯ ಹೋರಾಟ

ಭಾರತಾಂಬೆಯನ್ನು ಸ್ವತಂತ್ರ ಮಾಡಲು ಹೋರಾಟ

ಸಾವಿರಾರು ದೇಶಭಕ್ತರ ಬಲಿದಾನದ ಹೋರಾಟ

 ನೂರಾರು ವರ್ಷ ನಿರಂತರ ನಡೆದ ಸ್ವಾತಂತ್ರ್ಯ ಹೋರಾಟ.!!

 

ದೇಶದ್ರೋಹಿಗಳ ಕುಣಿತದಲೂ ಭ್ರಷ್ಟರ ಸಂತೆಯಲೂ

ಜಾತಿ ಮುಖವಾಡಗಳ ಸೀಳಿ ಹಾರುವ ತಿರಂಗದಡಿಗೆ 

ಹಸಿದವರ ಉಸಿರಾಗಿ ದಮನಿತರ ದನಿಯಾಗಿ

ಭರವಸೆಯ ಬೆಳಕಿನೆಡೆಗೆ ನುಗ್ಗಿ ಹಾರಲೇಬೇಕು.!!

 

ಕೆಂಪು ಪರಂಗಿಯವರ ಬಂದೂಕಿಗೆ ರಕ್ತ ಮಾಂಸ 

ಚೆಲ್ಲಿದ ಕೆಚ್ಚಿದೆ ಕಲಿಗಳ ಕನಸು ನನಸಾಗಿಸಲೂ

ನಿತ್ಯವು ಹೊರೆದವಳ ನೆನೆಯುತ್ತ ಉಗ್ರಗಾಮಿಗಳ ಹೆಡೆಮುರಿ ಕಟ್ಟಿ 

ಹಿಂಡಾಗಿ ಹಾರಲೇಬೇಕು ನೆಮ್ಮದಿಯ ನಾಳೆಗಾಗಿ ಪಣವತೊಟ್ಟವರು.!!

 

ರಾಜವಂಶದ ಮೌರ್ಯ ಇತಿಹಾಸದ ಭವ್ಯ ಕೀರ್ತಿ ಸುಂದರ

ರಾಷ್ಟ್ರಗೀತೆ ರಾಷ್ಟ್ರ ಧ್ವಜ ಲಾಂಛನ ಗಾಂಧೀಜಿಗೆ ನಮಸ್ಕಾರ

ಪ್ರಜಾಪ್ರಭುತ್ವ ನಿರ್ಣಯ ಅಂಬೇಡ್ಕರ್ ಸಂವಿಧಾನ ಸಾಗರ

ಹಿಮಗಿರಿ ನೀಲಸಮುದ್ರ ಶಿವಶಂಕರ ರಕ್ಷಾ ಭೂಶಿರ.!!

 

ಕಾಳಿದಾಸ ಅಷ್ಟ ಜ್ಞಾನಿಗಳ ಕಾವ್ಯ ಸಂಪದದ ಪುರಸ್ಕಾರ

ವೇದ ಸಂವೇದ ಯೋಧ ಭಗತ್ತರ ರೈತರ ಜೀವನ ಸಾರ

ಪಶು ಪಕ್ಷಿ ವನ್ಯಜೀವಿ ಹುಲಿ ಸಿಂಹಗಳ ರಕ್ಷಣಾ ಮಂದಿರ

ಭಾರತ ಸ್ವಾತಂತ್ರ್ಯ ಹೋರಾಟದ ಭವ್ಯ ಪರಂಪರೆ ತೀರ

ಸರ್ವ ಧರ್ಮ ಜಾತ್ಯಾತೀತ ಭಾಷ್ಯತೀತ ಆನಂದ ಸಾಗರ.!!

 

ರಚನೆ : ರಹಿಮಾನ್ ನದಾಫ್ 

ಇಲಕಲ್ 6360523334

Category:Poem



ProfileImg

Written by Rahiman Poetry

Writer