ಮಳೆ ಸುರಿದ ಬೆನ್ನಲ್ಲೆ ಕೃಷಿ ಚಟುವಟಿಕೆ ಚುರುಕು ತಿಪ್ಪೆ ಗೊಬ್ಬರ, ಕುರಿ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

ದೇಶಿ ಗೊಬ್ಬರ ಪೂರೈಸುತ್ತಿರುವುದು

ProfileImg
30 May '24
2 min read


image

 

ಮಂಜುನಾಥ ಎನ್‌ ಬಳ್ಳಾರಿ

ಮುಂಗಾರು ಪೂರ್ವ ಮಳೆ ಸುರಿದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು  ಭೂಮಿ ಹದಗೊಳಿಸಿರುವ ರೈತರು ಜಮೀನಿನ ಫಲವತ್ತತೆ ಕಾಪಾಡಲು ಸೆಗಣಿ ಮತ್ತು ಕುರಿ ಗೊಬ್ಬರ ಹಾಕಿಸುತ್ತಿದ್ದಾರೆ. ಹೀಗಾಗಿ ತಿಪ್ಪೆ ಗೊಬ್ಬರ ಮತ್ತು ಕುರಿ ಗೊಬ್ಬರಕ್ಕೆ ಸದ್ಯ ಬೇಡಿಕೆ ಹೆಚ್ಚಿದೆ. 

ಜಾನುವಾರು ಸಾಕಾಣಿಕೆ ಕಡಿಮೆಯಾಗಿರುವುದು ಮತ್ತು ಕಳೆದ ವರ್ಷ ಮಳೆ ಕೊರತೆಯಿಂದ ಮೇವಿನ ಕೊರತೆ ಉಂಟಾಗಿ ದನಕರುಗಳನ್ನು ಮಾರಾಟ ಮಾಡಿದ ಪರಿಣಾಮ ಸೆಗಣಿ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ ಹೀಗಾಗಿ ರೈತರ ಬೇಡಿಕೆಗೆ ಅನುಸಾರವಾಗಿ ಸೆಗಣಿ ಗೊಬ್ಬರ ಸಿಗದೆ ಬೇಡಿಕೆ ಹೆಚ್ಚಿದೆ.   

ಪಟ್ಟಣ ಸೇರಿದಂತೆ ಸಮೀಪದ ಕ್ಯಾಂಪ್‌ ಗಳು, ಮಲ್ಲದಗುಡ್ಡ, ಬಾಗಲವಾಡ, ಬ್ಯಾಗವಾಟ್‌ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಒಂದು ಟ್ರ್ಯಾಕ್ಟರ್‌ ಸೆಗಣಿ ಗೊಬ್ಬರ ₹4500 ಮತ್ತು ಒಂದು ಟ್ರ್ಯಾಕ್ಟರ್‌ ಕುರಿ ಗೊಬ್ಬರ ₹5500 ನೀಡಿ ರೈತರು ತರಿಸುತ್ತಿದ್ದಾರೆ.

ಹಳ್ಳಿಗಳಲ್ಲಿ ಸೆಗಣಿ ಮತ್ತು ಕುರಿ ಗೊಬ್ಬರವನ್ನು ಗುರುತಿಸಿದ ಕೆಲವು ಟ್ರ್ಯಾಕ್ಟರ್‌ ಮಾಲೀಕರು ಮುಂಚಿತವಾಗಿ ಖರೀದಿಸಿ ಅದನ್ನು ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಹೀಗಾಗಿ ರೈತರು ಗೊಬ್ಬರಕ್ಕಾಗಿ ಅಲೆಯುವುದು ತಪ್ಪಿದೆ ರೈತರ ಬೇಡಿಕೆಗೆ ಅನುಗುಣವಾಗಿ ಜಮೀನುಗಳಿಗೆ ಅವರು ಗೊಬ್ಬರ ಪೂರೈಕೆ ಮಾಡುತ್ತಿದ್ದಾರೆ, 

ಮಳೆಯಾಶ್ರಿತ ತೊಗರಿ, ಜೋಳ, ಸಜ್ಜೆ, ಬೆಳೆ ಬೆಳೆಯುವ ರೈತರು ಸೀಮಿತ ಪ್ರಮಾಣದ ಗೊಬ್ಬರ ಖರೀದಿಸಿದರೆ ದಾಳಿಂಬೆ, ಪಪ್ಪಾಯಿ ಮತ್ತಿತರ ತೋಟಗಾರಿಕೆ ಬೆಳೆ ಬೆಳೆಯುವ ರೈತರು ನೂರಾರು ಟ್ರಿಪ್‌ ಗೊಬ್ಬರ ಖರೀದಿಸುತ್ತಿರುವುದು ಕಂಡು ಬರುತ್ತಿದೆ.

ʼಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ತಿಪ್ಪೆ ಗೊಬ್ಬರ ಹಾಕಿದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಅಧಿಕ ಪ್ರಮಾಣದ ರಾಸಾಯನಿಕ ಗೊಬ್ಬರ ಬಳಕೆಯಿಂದ ಬರಡು ಉಂಟಾಗುವ ಸಾಧ್ಯತೆಯನ್ನು ಅದು ಕಡಿಮೆ ಮಾಡುತ್ತದೆ ಫಸಲು ಚೆನ್ನಾಗಿ ಬರುತ್ತದೆ ಹೀಗಾಗಿ ದರ ಹೆಚ್ಚಿದರೂ ತಿಪ್ಪೆ ಗೊಬ್ಬರ ಹಾಕಿಸುತ್ತಿದ್ದೇವೆʼ ಎಂದು ರೈತ ಅಯ್ಯಪ್ಪ ನಿಲೊಗಲ್‌ ಹೇಳಿದರು.

ʼಹಳ್ಳಿಗಳಲ್ಲಿನ ತಿಪ್ಪೆ ಗೊಬ್ಬರ ಮತ್ತು ಕುರಿ ಗೊಬ್ಬರ ಗುರುತಿಸಿ ಅದನ್ನು ರೈತರಿಗೆ ಪೂರೈಸುತ್ತಿದ್ದೇನೆ, ಈ ವರ್ಷ ಬೇಡಿಕೆ ಹೆಚ್ಚಿದ್ದು ಈಗಾಗಲೇ 250 ಟ್ರ್ಯಾಕ್ಟರ್‌ ಗೊಬ್ಬರ ಪೂರೈಕೆ ಮಾಡಿದ್ದೇನೆ ಎಂದು ಗೊಬ್ಬರ ಪೂರೈಕೆದಾರ ಯು.ಮಂಜುನಾಥ ಹೇಳಿದರು.

ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ತಿಪ್ಪೆ ಗೊಬ್ಬರ ಹಾಕಿದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಅಧಿಕ ಪ್ರಮಾಣದ ರಾಸಾಯನಿಕ ಗೊಬ್ಬರ ಬಳಕೆಯಿಂದ ಬರಡು ಉಂಟಾಗುವ ಸಾಧ್ಯತೆಯನ್ನು ಅದು ಕಡಿಮೆ ಮಾಡುತ್ತದೆ ಫಸಲು ಚೆನ್ನಾಗಿ ಬರುತ್ತದೆ ಹೀಗಾಗಿ ದರ ಹೆಚ್ಚಿದರೂ ತಿಪ್ಪೆ ಗೊಬ್ಬರ ಹಾಕಿಸುತ್ತಿದ್ದೇವೆʼ ಎಂದು ರೈತ ಅಯ್ಯಪ್ಪ ನಿಲೊಗಲ್‌ ಹೇಳಿದರು.

ʼಹಳ್ಳಿಗಳಲ್ಲಿನ ತಿಪ್ಪೆ ಗೊಬ್ಬರ ಮತ್ತು ಕುರಿ ಗೊಬ್ಬರ ಗುರುತಿಸಿ ಅದನ್ನು ರೈತರಿಗೆ ಪೂರೈಸುತ್ತಿದ್ದೇನೆ, ಈ ವರ್ಷ ಬೇಡಿಕೆ ಹೆಚ್ಚಿದ್ದು ಈಗಾಗಲೇ 250 ಟ್ರ್ಯಾಕ್ಟರ್‌ ಗೊಬ್ಬರ ಪೂರೈಕೆ ಮಾಡಿದ್ದೇನೆ ಎಂದು ಗೊಬ್ಬರ ಪೂರೈಕೆದಾರ ಯು.ಮಂಜುನಾಥ ಹೇಳಿದರು.

 

Category:News



ProfileImg

Written by Manjunath Bellary

0 Followers

0 Following