ಗೊಡವರ್ತಿ ನಾಗೇಶ್ವರನಾಥ್ ಮೆಮೊರಿಯಲ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ, ಅನ್ನಸಂತರ್ಪಣೆ

ವಿಜಯ ಕಲರ್ ಲ್ಯಾಬ್ ಮಾಲೀಕ ಜಿ.ಕೆ.ವಿಶ್ವನಾಥ ಚೌಧರಿ ಅವರಿಗೆ ಶುಭಕೋರಿದ ಗಣ್ಯರು

ProfileImg
08 Jul '24
2 min read


image

ಸಿಂಧನೂರು ನಗರದ ವಿಜಯ ಕಲರ್ ಲ್ಯಾಬ್ ಹತ್ತಿರದ ಬನ್ನಿಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಗುರುವಾರ ನೂತನವಾಗಿ ಗೊಡವರ್ತಿ ನಾಗೇಶ್ವರನಾಥ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಸಿಂಧನೂರಿನ ಹೆಸರಾಂತ ವಿಜಯ ಕಲರ್ ಲ್ಯಾಬ್ ಮಾಲೀಕರು (Vijay photo studio)ಹಾಗೂ ಗೊಡವರ್ತಿ ನಾಗೇಶ್ವರನಾಥ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಜಿ.ಕೆ.ವಿಶ್ವನಾಥ ಚೌಧರಿ ಅವರು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ನು ಗಳ ವಿತರಣೆ ಮಾಡಿ, ಸಿಂಧನೂರಿನ ಪತ್ರಿಕ ಭವನದಲ್ಲಿ UPS ಹಾಕಿಸಲು ಚೆಕ್ ಮೂಲಕ ದೇಣಿಗೆ ನೀಡಿದರು. ಸ್ಥಳೀಯ ಕಮ್ಮಾವಾರಿ ಸಂಘಕ್ಕೆ 2ಲಕ್ಷರೂಗಳನ್ನು ಚೆಕ್ ಮೂಲಕ ದೇಣಿಗೆ ನೀಡಿದರು.

ವಿಜಯ ಕಲರ್ ಲ್ಯಾಬ್ ಮೂಲಕ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯಲ್ಲಿರುವ ಇವರು ಸಮಾಜಮುಖಿ ಸೇವೆಯಲ್ಲಿಯೂ ಕ್ರಿಯಾಶೀಲರು ಎಂದರೆ ತಪ್ಪಾಗಲಾರದು.ಜಿ.ಕೆ ವಿಶ್ವನಾಥ ಚೌದರಿ ಅವರು ತಮ್ಮ ವಯಸ್ಸು ಆರೋಗ್ಯ ಲೆಕ್ಕಿಸದೇ ಯುವಕರೊಂದಿಗೆ ಸಮಾಜಸೇವೆಯಲ್ಲಿದ್ದಾರೆ.

ಕೋರೋನಾ ಮಹಾಮಾರಿಯ ಸಂಕಷ್ಟದ ದಿನಗಳಲ್ಲಿ ಸಿಂಧನೂರಿನ ಬಾಬಾ ದೇವಸ್ಥಾನದಲ್ಲಿ ಅನ್ನದಾತರ ಬಳಗದಿಂದ ಸುಮಾರು 1ತಿಂಗಳು ಕೊರೋನಾ ಸಂತ್ರಸ್ತರಿಗೆ ಆಹಾರದ ಪೊಟ್ಟಣ ಕಟ್ಟಿಕೊಡುವ ಕಾರ್ಯವನ್ನು ಮಾಡುವ ಸಮಯದಲ್ಲಿ ಪಾದರಸದಂತೆ ಹಲವು ಸಮಾನಮನಸ್ಕರೊಂದಿಗೆ ಸೇವೆಯಲ್ಲಿದ್ದವರು.

 

ಸಿಂಧನೂರಿನ ಪರಿಸರ ಪ್ರೇಮಿಗಳು ತಂಡದಿಂದ ವಿವಿಧ ಗ್ರಾಮಗಳ ರಸ್ತೆ ಬದಿಯಲ್ಲಿ ಹಾಗೂ ವಿವಿಧ ವಾರ್ಡುಗಳಲ್ಲಿ ಸಸಿಗಳ ನೆಡುವ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಬೆಳಂಬೆಳಗ್ಗೆ ಉತ್ಸಾಹಭರಿತರಾಗಿ ಸೇವೆ ಸಲ್ಲಿಸಿರುತ್ತಾರೆ. ಅದೇ ರೀತಿ ಇನ್ನೂ ಹೆಚ್ಚಿನ ಸಮಾಜಮುಖಿ ಸೇವೆಯಲ್ಲಿ ಕಾಣದ ಕೈಯಂತೆ ಸೇವೆಗೈದ ಹಿರೀಮೆಯುಳ್ಳ ವ್ಯಕ್ತಿತ್ವವುಳ್ಳ ಇವರು ತಮ್ಮ ಮಗನ ಅಕಾಲಿಕ ಮರಣದ ನೆನಪಿಗಾಗಿ ಗೊಡವರ್ತಿ ನಾಗೇಶ್ವರನಾಥ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿರುವುದಕ್ಕೆ ನಿರ್ಧರಿಸಿರುವುದು ಅಭಿನಂದನೀಯವಾಗಿದೆ.

ಇಂದಿನ ದಿನಗಳಲ್ಲಿ ಸ್ವಹಿತಾಸಕ್ತಿಗೆ ಹೆಚ್ಚು ಗಮನಕೊಡುವ ಜನರ ನಡುವೆ ಸರಳವಾಗಿ ಎಲ್ಲರಿಗೂ ತಮ್ಮ ಹಿರಿತನದ ಈ ವಯಸ್ಸಿನಲ್ಲಿ ಬೆರೆಯುವ ಮೂಲಕ ಆತ್ಮೀಯ ಸಹಾಯ ಸಹಕಾರ ನೀಡುತ್ತಾ ಸೇವೆಯಲ್ಲಿರುವ ಇವರ ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಶುಭಕೋರಿದರು.

ಗೊಡವರ್ತಿ ನಾಗೇಶ್ವರನಾಥ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯ ನಿರಂತರವಾಗಿ ಸಮಾಜಕ್ಕೆ ಮಾದರಿಯಾಗುವಂತೆ ಬಹಳಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲಿ ಎನ್ನುವುದೇ ನಮ್ಮ ಈ ಲೇಖನದ ಆಶಯವಾಗಿದೆ.

Category:News



ProfileImg

Written by Avinash deshpande

Article Writer, Self Employee