ಬೆಳಿಗ್ಗೆ ಎದ್ದರೆ ನಾವಗಿಯೇ ಎದ್ದೇಳುವುದಿಲ. ಎಲ್ಲಾ ಮಿಡಲ್
ಕ್ಲಾಸ್ ಹುಡುಗರು ಜವಾಬ್ದಾರಿಗಳು ಬೇಕಾದಗ ನಿದ್ದೆಯಿಂದ ಬೇಡವಾದ ಅಲಾರಂ ಒಂದು ಎದ್ದೇಳಿಸುತ್ತದೆ. ಎದ್ದು ಕೈಗೆ ಟೀ ಇಲ್ಲದೇ ಸ್ನಾನ ಮಾಡಿ ಬಟ್ಟೆ ಬದಲಿಸೂ ಹೂತ್ತಿಗೆ ತಲೆಗೆ ಬರೋ ಯೋಚನೆ, ಗಾಡಿಯನ್ನು ಅಲ್ಲಾಡಿಸಿ ಪೆಟ್ರೋಲ್ ಸೌಂಡ್ ಲಳಲಳ ಅಂದರೆ ದಿನದ ಮೊದಲನೇ ಸಮಾಧಾನ, ಬೈಕ್ ಸ್ಟಾರ್ಟ್ ಮಾಡಿ ಒಂದು ಸಿಗ್ನಲ್ ನಲ್ಲಿ ನಿಂತಾಗ ನೆನಪಾದ ನನ್ನ ಹಳ್ಳಿಯ ಒಂದು ಸುಂದರ ನೋಟ.
ಅದೇನೆಂದರೆ........…
ಹಳ್ಳಿಗಳು ಎಂದರೆ ಎಲ್ಲರಿಗೂ ನೆನಪಾಗುವುದು ಹೂಲ, ಗದ್ದೇ, ಸಣ್ಣ ಮನೆ, ಮುಗ್ಧ ಜೀವಗಳು. ಆದರೆ ಅದಕ್ಕೊಂದು ಮೀರಿದ ವಿಷಯಗಳು ಇದೆ ಅವುಗಳು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ.
ಬೆಳಿಗ್ಗೆ 4 ಗಂಟೆಗೆ ಕೋಳಿಯ ಸದ್ದಿಗೆ ಎದ್ದ ನನ್ನ ತಂದೆಯು ಹಸುಗಳನ್ನು ಕೊಟ್ಟಿಗೆಯಿಂದ ಹಿತ್ತಲಿಗೆ ಹಿಡಿದುಕೊಂಡು ಹೋಗಿ ಕಟ್ಟಿ ಬಂದು ಸಗಣಿಯನ್ನು ತೆಂಗಿನ ಕಾಯಿ ಸಿಪ್ಪಯಿಂದ ಬಾಚಿ ಚೀಲ ಕಟ್ಟಿದ ಮಂಕರಿಯಲ್ಲಿ ತುಂಬಿ ಅದನ್ನು ತಿಪ್ಪೆಗೆ ಹೊಯ್ದು ಬಿಸಾಕಿ ಅಷ್ಟರಲ್ಲಿ ಹಿತ್ತಲಿನ ಆಗತಾನೆ ಹಾಕಿದ ಸಗಣಿಯನ್ನು , ಬರಿಗೈಲಿ ಬಾಚಿ ತಿಪ್ಪೆಗೆ ಹಾಕಿ .ನಂತರ ಕೊಟ್ಟಿಗೆಗೆ ಬಂದು ಒಂದು ಬಕೆಟ್ ನಲ್ಲಿ ಗಂಜಲವನ್ನು ತೆಂಗಿನ ಕಂಟದಿಂದ ತುಂಬಿ ಅದನ್ನು ತಿಪ್ಪೆಯ ಮೇಲೆ ಎರೆಚಿದ ನಂತರ ಜಗುಲಿಯ ಮೇಲಿರುವ ಬಿಂದಿಗೆಯ ನೀರಿನಿಂದ ಕೈ ಕಾಲು ಮುಖ ತೊಳೆಯುವಸ್ಟರಲಿ ಸಮಯ 5 ಗಂಟೆಯಾಗಿ ಹಾಲು ಕೈ ಕರೆಯಲು ಬಿಂದಿಯನ್ನು ಮತ್ತು ಚೆಂಬನ್ನು ತೆಗೆದುಕೊಂಡು ಹೋಗಿ ಹಸುವಿಗೆ ಕರುವನ್ನು ಹಾಲು ಕುಡಿಯಲು ಬಿಟ್ಟು ಹಸು ಸೂರೆ ಕೊಟ್ಟ, ನಂತರ ಕರುವನ್ನು ಹಿಡಿದು ಹಸುವಿನ ಗುಂಟಕ್ಕೆ ಕಟ್ಟಿ ಹಾಲು ಕರೆಯುತ್ತಾರೆ.
…….. ಮುಂದುವರಿಯುತ್ತದೆ.
Simple news about everything
0 Followers
0 Following