ಶೃಂಗೇರಿಯ ಶಾರದಾ ದೇವಿಯ ಬಗ್ಗೆ ಅನೇಕ ರಿಗೆ ಗೊತ್ತು, ಅನೇಕರು ದರ್ಶನ ಮಾಡಿರ್ತಾರೆ.
ಆದರೆ ಅಲ್ಲಿಯೇ ಶಾರದಾದೇವಿ ದೇವಾಲಯದ ಪ್ರವೇಶ ದ್ವಾರದ ಎಡ ಬದಿಯಲ್ಲಿ ವಿರಾಜಮಾನನಾಗಿ ತನ್ನಲ್ಲಿ ಅರಿಕೆ ಮಾಡಿದವರ ಮನೋಭಿಲಾಷೆಯನ್ನು ಈಡೇರಿಸುವ ಕಾರಣಿಕದ ಶಕ್ತಿ ಮಲೆಯಾಳ ಬ್ರಹ್ಮನ/ ಕ್ಷೇತ್ರ ಪಾರಳಲ ಬ್ರಹ್ಮ ನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ
ಶೃಂಗೇರಿಯ ಮಲೆಯಾಳ ಬ್ರಹ್ಮನಿಗೆ ತುಂಬಾ ಶಕ್ತಿ ಇದೆ ಕಾರಣಿಕ ಇದೆ ಎಂದು ಜನರು ನಂಬುತಾರೆ
ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ದೇವಾಲಯದ ದ್ವಾರದ ಬಲಭಾಗದಲ್ಲಿ ಸುಮಾರು ಐದಡಿ ಎತ್ತರದ ಕಲ್ಲಿನ ಮೂರ್ತಿಯೊಂದಕ್ಕೆ ಆರಾಧನೆ ಇದೆ. (ಚಿತ್ರ 20)
.ಮೊದಲಿಗೆ ಶೃಂಗೇರಿ ದೇವಾಲಯದ ಪ್ರಾಂಗಣದ ಪ್ರವೇಶದ ಜಾಗದಲ್ಲ್ಲಿಯೇ ಮಲೆಯಾಳ ಬ್ರಹ್ಮನ ಮೂರ್ತಿ ಇತ್ತಂತೆ
.ನಂತರ ಆ ಮೂರ್ತಿಯನ್ನು ಶಾರದಾಂಬೆಯ ಗುಡಿಯ ಪ್ರವೇಶ ದ್ವಾರದ ಎಡ ಬದಿಯಲ್ಲ್ಲಿ ಪ್ರತಿಷ್ಠಾಪಿಸಲಾಯಿತು
ಈತನನ್ನು ಕ್ಷೇತ್ರಪಾಲ ಬ್ರಹ್ಮನೆಂದೂ, ಮಲೆಯಾಳ ಬ್ರಹ್ಮನೆಂದೂ ಕರೆಯುತ್ತಾರೆ. ಇಲ್ಲಿ ಜಾತ್ರೆ ಸೇರಿದಂತೆ ವಿಶೇಷ ಉತ್ಸವಗಳ ಆರಂಭದಲ್ಲಿ ಈ ಮಲೆಯಾಳ ಬ್ರಹ್ಮನಿಗೆ ‘ಬ್ರಹ್ಮ ಸಮಾರಾಧನೆ’ ಎಂಬ ಹೆಸರಿನ ಸೇವೆಯನ್ನು ಮಾಡುತ್ತಾರೆ. ಮಲೆಯಾಳ ಬ್ರಹ್ಮನಿಗೆ ಪೂಜೆ ಸಲ್ಲಿಸಿದ ನಂತರವೇ ಉತ್ಸವ ಆರಂಭವಾಗುತ್ತದೆ.
“ಮಲೆಯಾಳ ಬ್ರಹ್ಮನ ಮೂರ್ತಿಯನ್ನು ಸ್ವತಃ ಶಂಕರಾಚಾರ್ಯರೇ ಪ್ರತಿಷ್ಠಾಪಿಸಿದ್ದಾರೆ” ಎಂದು ಭಾವಿಸಲಾಗಿದೆ. ಬ್ರಹ್ಮ ಸಮಾರಾಧನೆ ಎಂಬುದು ಒಂದು ವಿಧವಾದ ಬೆರ್ಮೆರ ಸೇವೆಯಾಗಿದ್ದು ಕವತ್ತಾರಿನ ಬ್ರಹ್ಮಸ್ಥಾನದಲ್ಲಿ ಪ್ರತಿ ವರ್ಷ ಬ್ರಹ್ಮ ಸಮಾರಾಧನೆ ಸೇವೆಯನ್ನು ನಡೆಸುತ್ತಾರೆ. ಇದರಿಂದ ಶೃಂಗೇರಿಯಲ್ಲಿ ‘ಬೆರ್ಮೆರ್’ಗೆ ‘ಮಲೆಯಾಳ ಬ್ರಹ್ಮ’ ಅಥವಾ ‘ಕ್ಷೇತ್ರಪಾಲಬ್ರಹ್ಮ’ ಎಂಬ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ ಎಂದು ತಿಳಿದುಬರುತ್ತದೆ.
ಮಲೆಯಾಳ ಬ್ರಹ್ಮನ ಕುರಿತು ಒಂದು ಐತಿಹ್ಯ ಪ್ರಚಲಿತವಿದೆ. ಕೇರಳದ ರಾಜನೊಬ್ಬನಿಗೆ ಬ್ರಹ್ಮರಾಕ್ಷಸನ ಕಾಟ ಕಾಣಿಸಿಕೊಂಡಾಗ, ಅದರ ಪರಿಹಾರಕ್ಕಾಗಿ ಆ ರಾಜನಷ್ಟು ದೊಡ್ಡದಾದ ಚಿನ್ನದ ಮೂರ್ತಿಯನ್ನು ದಾನ ಕೊಡುತ್ತಾರೆ. ಈ ದಾನವನ್ನು ಸ್ವೀಕರಿಸಿದ ನಂಬೂದಿರಿಯೊಬ್ಬರು ಈ ಚಿನ್ನದ ಮೂರ್ತಿಯನ್ನು ಮುಟ್ಟಿದ ತಕ್ಷಣ ಕಪ್ಪಾದ ಕಲ್ಲಾಗಿ ಮಾರ್ಪಡುತ್ತಾರೆ. ಆ ಕಲ್ಲಿನ ಮೂರ್ತಿಯಲ್ಲಿಬ್ರಹ್ಮರಾಕ್ಷಸನ ಶಕ್ತಿ ಆವಾಹನೆಗೊಳ್ಳುತ್ತದೆ. ಈ ಶಕ್ತಿಗೆ ಮೋಕ್ಷವನ್ನು ಕರುಣಿಸಿದ ಶಂಕರಾಚಾರ್ಯರು ಈತನನ್ನು ತಮ್ಮೊಂದಿಗೆ ಕರೆತಂದು ಶಾರದಾಪೀಠದ ರಕ್ಷಣೆಯ ಭಾರವನ್ನು ವಹಿಸಿ ಕ್ಷೇತ್ರಪಾಲನನ್ನಾಗಿ ಪ್ರತಿಷ್ಠಾಪಿಸಿದ್ದಾರೆ ಎಂದು ಐತಿಹ್ಯ ಪ್ರಚಲಿತ ಇದೆ .
ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ದೇವಾಲಯದ ದ್ವಾರದ ಬಲಭಾಗದಲ್ಲಿ ಸುಮಾರು ಐದಡಿ ಎತ್ತರದ ಕಲ್ಲಿನ ಮೂರ್ತಿಯೊಂದಕ್ಕೆ ಆರಾಧನೆ ಇದೆ. (ಚಿತ್ರ 20) ಈತನನ್ನು ಕ್ಷೇತ್ರಪಾಲ ಬ್ರಹ್ಮನೆಂದೂ, ಮಲೆಯಾಳ ಬ್ರಹ್ಮನೆಂದೂ ಕರೆಯುತ್ತಾರೆ. ಇಲ್ಲಿ ಜಾತ್ರೆ ಸೇರಿದಂತೆ ವಿಶೇಷ ಉತ್ಸವಗಳ ಆರಂಭದಲ್ಲಿ ಈ ಮಲೆಯಾಳ ಬ್ರಹ್ಮನಿಗೆ ‘ಬ್ರಹ್ಮ ಸಮಾರಾಧನೆ’ ಎಂಬ ಹೆಸರಿನ ಸೇವೆಯನ್ನು ಮಾಡುತ್ತಾರೆ. ಮಲೆಯಾಳ ಬ್ರಹ್ಮನಿಗೆ ಪೂಜೆ ಸಲ್ಲಿಸಿದ ನಂತರವೇ ಉತ್ಸವ ಆರಂಭವಾಗುತ್ತದೆ.
“ಮಲೆಯಾಳ ಬ್ರಹ್ಮನ ಮೂರ್ತಿಯನ್ನು ಸ್ವತಃ ಶಂಕರಾಚಾರ್ಯರೇ ಪ್ರತಿಷ್ಠಾಪಿಸಿದ್ದಾರೆ” ಎಂದು ಭಾವಿಸಲಾಗಿದೆ. ಬ್ರಹ್ಮ ಸಮಾರಾಧನೆ ಎಂಬುದು ಒಂದು ವಿಧವಾದ ಬೆರ್ಮೆರ ಸೇವೆಯಾಗಿದ್ದು ಕವತ್ತಾರಿನ ಬ್ರಹ್ಮಸ್ಥಾನದಲ್ಲಿ ಪ್ರತಿ ವರ್ಷ ಬ್ರಹ್ಮ ಸಮಾರಾಧನೆ ಸೇವೆಯನ್ನು ನಡೆಸುತ್ತಾರೆ. ಇದರಿಂದ ಶೃಂಗೇರಿಯಲ್ಲಿ ‘ಬೆರ್ಮೆರ್’ಗೆ ‘ಮಲೆಯಾಳ ಬ್ರಹ್ಮ’ ಅಥವಾ ‘ಕ್ಷೇತ್ರಪಾಲಬ್ರಹ್ಮ’ ಎಂಬ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ ಎಂದು ತಿಳಿದುಬರುತ್ತದೆ.
ಮಲೆಯಾಳ ಬ್ರಹ್ಮನ ಕುರಿತು ಒಂದು ಐತಿಹ್ಯ ಪ್ರಚಲಿತವಿದೆ. ಕೇರಳದ ರಾಜನೊಬ್ಬನಿಗೆ ಬ್ರಹ್ಮರಾಕ್ಷಸನ ಕಾಟ ಕಾಣಿಸಿಕೊಂಡಾಗ, ಅದರ ಪರಿಹಾರಕ್ಕಾಗಿ ಆ ರಾಜನಷ್ಟು ದೊಡ್ಡದಾದ ಚಿನ್ನದ ಮೂರ್ತಿಯನ್ನು ದಾನ ಕೊಡುತ್ತಾರೆ. ಈ ದಾನವನ್ನು ಸ್ವೀಕರಿಸಿದ ನಂಬೂದಿರಿಯೊಬ್ಬರು ಈ ಚಿನ್ನದ ಮೂರ್ತಿಯನ್ನು ಮುಟ್ಟಿದ ತಕ್ಷಣ ಕಪ್ಪಾದ ಕಲ್ಲಾಗಿ ಮಾರ್ಪಡುತ್ತಾರೆ. ಆ ಕಲ್ಲಿನ ಮೂರ್ತಿಯಲ್ಲಿಬ್ರಹ್ಮರಾಕ್ಷಸನ ಶಕ್ತಿ ಆವಾಹನೆಗೊಳ್ಳುತ್ತದೆ. ಈ ಶಕ್ತಿಗೆ ಮೋಕ್ಷವನ್ನು ಕರುಣಿಸಿದ ಶಂಕರಾಚಾರ್ಯರು ಈತನನ್ನು ತಮ್ಮೊಂದಿಗೆ ಕರೆತಂದು ಶಾರದಾಪೀಠದ ರಕ್ಷಣೆಯ ಭಾರವನ್ನು ವಹಿಸಿ ಕ್ಷೇತ್ರಪಾಲನನ್ನಾಗಿ ಪ್ರತಿಷ್ಠಾಪಿಸಿದ್ದಾರೆ ಎಂದು ಸ್ಥಳ ಐತಿಹ್ಯದಲ್ಲಿ ಹೇಳಲಾಗಿದೆ.
ಮಲಯಾಳ ಬ್ರಹ್ಮ ದೇವಾಲಯವು ಶ್ರೀ ಶಾರದಾಂಬಾ ದೇವಾಲಯದ ಬಲಭಾಗದಲ್ಲಿದೆ.
“ ಒಬ್ಬ ಬ್ರಾಹ್ಮಣ ವಿದ್ವಾಂಸನು ತನ್ನ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಬದಲು ವೇದಗಳು ಮತ್ತು ಶಾಸ್ತ್ರಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತ ನಂತರ ಮತ್ತು ಇತರರಿಗೆ ಕಲಿಸಲು ನಿರಾಕರಿಸಿದನು ಅದು ಅವನ ಧರ್ಮಕ್ಕೆ ವಿರುದ್ಧವಾಗಿದೆ. ಅವರು ಬ್ರಹ್ಮ ರಾಕ್ಷಸರಾಗಲು ಶಾಪ ಪಡೆದರು. ಋಷಿ ವಿದ್ಯಾರಣ್ಯರ ಕಾಲದಲ್ಲಿ, ಋಷಿಗಳ ಒಂದು ತೀರ್ಥಯಾತ್ರೆಯಲ್ಲಿ, ಬ್ರಹ್ಮ ರಾಕ್ಷಸರು ಅವನ ದಾರಿಯನ್ನು ನಿಲ್ಲಿಸಿದರು ಮತ್ತು ಶಾಪದಿಂದ ಮುಕ್ತಿ ನೀಡುವಂತೆ ಬೇಡಿಕೊಂಡರು. ಋಷಿಯು ಏನಾಯಿತು ಎಂದು ಭವಿಷ್ಯ ನುಡಿದನು ಮತ್ತು ನಂತರ ಶೃಂಗೇರಿಯಲ್ಲಿ ಕ್ಷೇತ್ರ ಪಾಲಕನಾಗಿ (ಮಠದ ಪಾಲಕನಾಗಿ) ಇರಲು ನಿರ್ದೇಶಿಸಿದನು. ಕ್ಷೇತ್ರ ಪಾಲಕವನ್ನು ಸ್ಥಳೀಯವಾಗಿ ಮಲಯಾಳ ಬ್ರಹ್ಮ ಎಂದು ಕರೆಯಲಾಗುತ್ತದೆ. ಈ ದೇವತೆಯ ಮೂರ್ತಿಯು ಗದೆಯನ್ನು ಹೊತ್ತುಕೊಂಡು ಪಾದ ರಕ್ಷೆಯನ್ನು ಧರಿಸಿ ಶಾರದಾಂಬಾ ದೇವಸ್ಥಾನದ ಬಾಗಿಲಿನ ಎಡಭಾಗದಲ್ಲಿ ಸ್ಥಾಪಿಸಲಾಗಿದೆ”ಎಂಬ ಐತಿಹ್ಯವೂ ಇದೆ
ನಾಗ ಬ್ರಹ್ಮ ಆರಾಧನೆ ಕುರಿತಾದ ನನ್ನ ಪಿಎಚ್.ಡಿ ಅಧ್ಯಯನದ ಒಂದು ಅಪರೂಪದ ಮಾಹಿತಿ ಇದು ಮತ್ತು ಅಲ್ಲಿ ನನಗಾದ ಅನುಭವ ಕೂಡಾ ರೋಮಾಂಚಕ !
ಎಸ್ ಡಿ ಎಂ ಮಂಗಳ ಜ್ಯೋತಿ ಸಮನ್ವಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಗಿರುವ ನನ್ನ ಸಹೋದರ ಗಣೇಶ ಭಟ್ ಅವರು ಅವರ ಸಹೋದ್ಯೋಗಿಗಳೊಂದಿಗೆ ಶ ಂಗೇರಿಗೆ ಹೋಗಿದ್ದರು.ಅಲ್ಲಿ ಶಾರದಾಂಬೆಯ ದೇವಾಲಯದ ದ್ವಾರದ ಎಡ ಭಾಗದಲ್ಲಿ ಮಲೆಯಾಳ ಬ್ರಹ್ಮ ಎಂಬ ಆಳೆತ್ತರದ ಮೂರ್ತಿಗೆ ಆರಾಧನೆ ಇರುವುದನ್ನು ನೋಡಿ ಮೊಬೈಲ್ ನಲ್ಲಿ ಫೋಟೋ ಹಿಡಿದರು .ಬೆರ್ಮೆರ್ /ಬ್ರಹ್ಮ ಇತ್ಯಾದಿಯಾಗಿ ನಾನು ನನ್ನ ಸಂಶೋಧನಾ ವಿಷಯದ ಬಗ್ಗೆ ಅವರಲ್ಲಿಯೂ ಅನೇಕ ಬಾರಿ ಮಾತಾಡಿದ್ದೆ .ಅಲ್ಲಿ ಮಲೆಯಾಳ ಬ್ರಹ್ಮ ಎಂಬ ಹೆಸರು ನೋಡಿ ನನ್ನ ಸಂಶೋಧನೆ ಏನಾರು ಸಹಾಯ ಆದೀತೆಂದು ಅವರು ಅದನ್ನು ಫೋಟೋ ತೆಗೆದರು.
.ಶೃಂಗೇರಿ ಯಲ್ಲಿ ಶಾರದಾಂಬೆಯ ದೇವಾಲಯದ ಒಳಗೆ ಫೋಟೋ ತೆಗೆಯಬಾರದೆಂಬ ನಿಯಮ ಇದೆ .
ಈ ಮೂರ್ತಿ ಹೊರಭಾಗದಲ್ಲಿದೆ.ಇದರ ಫೋಟೋ ತೆಗೆಯಬಹುದೋ ಬಾರದೋ ಎಂದು ಆಗ ತಿಳಿದಿರಲಿಲ್ಲ.
ಅಲ್ಲಿದ್ದವರೆಲ್ಲ ಗಣೇಶ ಭಟ್ ಅವರು ಮಲೆಯಾಳ ಬ್ರಹ್ಮನ ಫೋಟೋ ಹಿಡಿದ ಬಗ ಗೆ ಆಕ್ಷೇಪ ಮಾಡಿ ಸೆರೆ ಹಿಡಿಯ ಫೋಟೋ ಅಳಿಸುವಂತೆ ಹೇಳಿದ ಕಾರಣ ಅವರು ಅದನ್ನು ಅಳಿಸಿ ಹಾಕಿದರು
ಇಲ್ಲಿ ಮಲೆಯಾಳ ಬ್ರಹ್ಮ ಬಹಳ ಕಾರಣಿಕ ಇಲ್ಲ್ಲಿ ಫೋಟೋ ಹಿಡಿದವರು ಮನೆ ತಲಪುವುದಿಲ್ಲ ಎಷ್ಟೋ ಬಾರಿ ಇಲ್ಲಿ ಹಾಗೆ ಆಗಿದೆ ಎಂದು ತಿಳಿಸಿದರಂತೆ ಕೂಡಾ!.
ಮನೆಗೆ ಬಂದು ಈ ವಿಚಾರ ತಿಳಿಸಿದರು.ಆಗ ನಾನು ಅಳಿಸಿದರೂ ರಿಕಾಲ್ ಮಾಡಿ ಆ ಫೋಟೋ ಸಿಗುತ್ತದಾ ಅಂತ ನೋಡ್ಲಿಕೆ ಹೇಳಿದೆ .ರಿಕಾಲ್ ಮಾಡಿದಾಗ ಬೇರೆಲ್ಲ ಆ ಮೊದಲು ಅಳಿಸಿದ ಫೋಟೋ ಗಳು ಸಿಕ್ಕಿದವು ಆದರೆ ಮಲೆಯಾಳ ಬ್ರಹ್ಮನ ಫೋಟೋ ಸಿಗಲಿಲ್ಲ .
ಹಾಗಾಗಿ ಒಂದು ದಿನ ನಾನೇ ಶೃಂಗೇರಿಗೆ ಹೋಗಿ ಫೋಟೋ ತೆಗೆಯಲು ಬಿಟ್ಟರೆ ಫೋಟೋ ತೆಗೆಯಲು ಜೊತೆಗೆ ಮಾಹಿತಿ ಸಂಗ್ರಹಿಸಲು ನಿರ್ಧರಿಸಿದೆ
23ಮಾರ್ಚ 2005 ರಂದು ಮಂಗಳೂರಿಗೆ ಹೋದೆ ಅಲ್ಲಿ ಶೃಂಗೇರಿ ಗೆ ಹೋಗುವ ಬಸ್ ಹೋಗಿ ಆಗಿತ್ತು.ಆಗ ಕಾರ್ಕಳ ಕ್ಕೆ ಹೋಗುವ ಬಸ್ ನ ಕಂಡಕ್ಟರ್ ಈ ಬಸ್ಸಿನಲ್ಲಿ ಬನ್ನಿ , ಕಾರ್ಕಳದಲ್ಲಿ ಶೃಂಗೇರಿ ಗೆ ಹೋಗುವ ಬಸ್ ಸಿಗುತ್ತದೆ ಎಂದರು
ಮಂಗಳೂರಿನಿಂದ ಕಾರ್ಕಳ ಹೋಗಿ ಇನ್ನೊಂದು ಬಸ್ ಹಿಡಿದು ಶೃಂಗೇರಿಗೆ ಹೋದೆ.ಕಾರ್ಕಳದಲ್ಲಿ ಬಸ್ ಹತ್ತಿ ಕೂತಾಗ ಯಾವನೋ ಒಬ್ಬಾತ ನನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂಬ ಸಂಶಯ ನನಗೆ ಉಂಟಾಯಿತು.ಆತ ಮಂಗಳೂರಿನಲ್ಲಿ ಬಸ್ ಹತ್ತಿದ್ದನೋ ಅಥವಾ ಹೊಸಂಗಡಿ ಯಿಂದಲೇ ಫಾಲೋ ಮಾಡ್ತಿದ್ದನೋ ಏನೋ ತಿಳಿಯಲಿಲ್ಲ
ಹಿಂದಿನ ದಿನ ಯಾವುದೊ ಸಮಾರಂಭಕ್ಕೆ ಹೋಗಿದ್ದ ನನಗೆ ಕತ್ತಿನಲ್ಲಿದ್ದ ಎರಡೆಳೆ ಚಿನ್ನದ ಸರ ಕೈಯಲ್ಲಿ ನಾಲ್ಕು ಬಳೆಗಳನ್ನು ತೆಗೆದಿಡಲು ಬೇರೆ ಮರೆತು ಹೋಗಿತ್ತು .ನಾನೊಬ್ಬಳೇ ಬೇರೆ ಬಂದಿದ್ದು ನನ್ನ ಜೊತೆಯಲ್ಲಿ ಯಾರೂ ಇರಲಿಲ್ಲ
ಅಲ್ಲ ೆ ನಾನು ಶೃಂಗೇರಿ ಗೆ ಮೊದಲ ಬಾರಿಗೆ ಹೋಗುತ್ತಿರುವುದು.ಆತಂಕ ಆಯಿತು ನನಗೆ
. .ಅಂತೂ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶೃಂಗೇರಿಗೆ ತಲುಪಿದೆ .ಆ ವ್ಯಕ್ತಿ ಕೂಡ ಶೃಂಗೇರಿಗೆ ಬಂದ .ಶೃಂಗೇರಿಗೆ ಬಂದ ವ್ಯಕ್ತಿ ಇರಬಹುದೆಂದು ಕೊಂಡು ದೇವಾಲಯಕ್ಕೆ ಹೋಗುವ ಜನರ ಮಧ್ಯದಲ್ಲಿ ಹೋದೆ.
ಅಲ್ಲಿನ ಕಲ್ಲಿನ ನೆಲ ಬಿಸಿಲಿಗೆ ಬಿಸಿಯಾಗಿ ಕಾಲು ಇಡಲು ಕಷ್ಟ ಆಗಿತ್ತು .ಅಲ್ಲಿನ ಮ್ಯಾನೇಜೆರ್ ಅನ್ನು ಕಂಡು (ಹೆಸರು ಮರೆತು ಹೋಗಿದೆ )ಮಲೆಯಾಳ ಬ್ರಹ್ಮನ ಬಗ್ಗೆ ಮಾಹಿತಿ ಕೇಳಿದೆ.ಅವರು ಇಲ್ಲ್ಲಿ ಹತ್ತಿರದಲ್ಲ್ಲಿ ..(ಹೆಸರನ್ನು ಗುಪ್ತವಾಗಿರಿಸಿದೆ )ಅಂತ ವಿಶ್ರಾಂತ ಶಿಕ್ಷಕರು ಇದ್ದಾರೆ .ಅವರಿಗೆ ಮಾಹಿತಿ ತಿಳಿದಿರ ಬಹುದು ಎಂದು ಅವರಲ್ಲ್ಲಿಗೆ ಹೋಗುವ ದಾರಿ ತಿಳಿಸಿದರು.ಶೃಂಗೇರಿ ದೇವಾಲಯದ ಎದುರಿನ ಮುಖ್ಯ ರಸ್ತೆಗೆ ಅಡ್ಡ ಹೋದ ರಸ್ತೆ ಯಲ್ಲಿ ಒಂದು ಪರ್ಲಾಂಗು ದೂರದಲ್ಲಿ ಅವರ ಮನೆ ಇತ್ತು .
ಸ್ವಲ್ಪ ಮುಂದೆ ಹೋಗಿ ಯಾಕೋ ಏನೋ ಹಿಂತಿರುಗಿ ನೋಡಿದೆ ! ಅಯ್ಯೋ ದೇವರೇ !
ಎದೆ ದಸಕ್ ಎಂದಿತು !
ನಾನು ಅಲ್ಲಿಗೆ ಹೋಗುವಾಗಲೂ ಬಸ್ ನಲ್ಲಿ ನೋಡಿದ ವ್ಯಕ್ತಿ ಹಿಂದಿನಿಂದಲೇ ಬರ್ತಾ ಇದ್ದಾನೆ .ಏನೇ ಇರಲಿ ಅಂತ ಅಲ್ಲೇ ಸಮೀಪದ ಮನೆಯ ಬಾಗಿಲು ಹತ್ರ ಹೋಗಿ ಅಲ್ಲಿದ್ದ ಕೆಲವು ಹೆಂಗಸರಲ್ಲಿ ...ಅವರ ಮನೆ ಯಾವುದೆಂದು ವಿಚಾರಿಸಿದೆ !ನನ್ನ ಅದೃಷ್ಟ ಒಳ್ಳೇದಿತ್ತು !
ಅವರಲ್ಲೊಬ್ಬರು ಆ ಶಿಕ್ಷಕರ ಶ್ರೀಮತಿ ಆಗಿದ್ದರು.ನಾನು ಬಂದ ಕಾರಣ ತಿಳಿಸಿದೆ.ಸರಿ ನಮ್ಮ ಮನೆಗೆ ಹೋಗುವ ಬನ್ನಿ ಎಂದು ಕರೆದೊಯ್ದರು .
ಅಲ್ಲಿ ಸರಳ ಸಜ್ಜನಿಕೆಯ ಸಾಕಾರ ವ್ಯಕ್ತಿತ್ವದ ಜ್ಞಾನಿಗಳೂ ಆಗಿದ್ದ ಆ ಶಿಕ್ಷಕರು ಅವರು ಇದ್ದರು .ಅವರ ಮನೆ ಜಗಲಿಯಲ್ಲಿ ಕುಳಿತು ಮಾತನಾಡುವಾಗಲೂ ನಾನು ಆಗಾಗ ರಸ್ತೆ ನೋಡುತ್ತಿದ್ದೆ !ನೋಡಿದರೆ ಆ ವ್ಯಕ್ತಿ ಅಲ್ಲೇ ಸುತ್ತ ಮುತ್ತ ನೋಡುತ್ತಾ ಇದ್ದಾನೆ.!ನನ್ನ ಗೊಂದಲವನ್ನು ಗಮನಿಸಿದ ಅವರು ವಿಚಾರಿಸಿದಾಗ ಆತ ನನ್ನನ್ನು ಹಿಮ್ಬಾಲಿಸುತ್ತಿದ್ದಾನೋ ಏನೋ ಅಂತ ಸಂಶಯ ಅಂತ ತಿಳಿಸಿದೆ .
ಅವರಿಗೂ ಹೌದು!ಎನಿಸಿತು .ನಂತರ ಅವರಲ್ಲಿ ಮಲೆಯಾಳ ಬ್ರಹ್ಮನ ಕುರಿತಾಗಿ ಮಾಹಿತಿ ಸಂಗ್ರಹಿಸಿದೆ.ಒಂದಿನಿತು ಅಹಂಭಾವ ತೋರದೆ ಅವರಿಗೆ ತಿಳಿದಿರುವ ಮಾಹಿತಿ ನೀಡಿದರು.ನಂತರ ಶಾರದಾಂಬೆಯ ದೇವಾಲದ ಒಳಗೆ ಮಾತ್ರ ಫೋಟೋ ತೆಗೆಯಬಾರದು.ಹೊರಗೆ ಇರುವ ಮಲೆಯಾಳ ಬ್ರಹ್ಮನ ಫೋಟೋ ತೆಗೆಯ ಬಹುದು.ಅಲ್ಲಿನ ಅರ್ಚಕರಾದ ..(ಹೆಸರನ್ನು ಗುಪ್ತವಾಗಿರಿಸಲಾಗಿದೆ )ಅವರನ್ನು ಭೇಟಿ ಮಾಡಿ ನಾನು (.. ಅವರು )ಕಳುಹಿಸಿದ್ದು ಅಂತ ಹೇಳಲು ತಿಳಿಸಿದರು.ಜೊತೆಗೆ ನಾನು ಹೋಗುವಾಗ ನನ್ನ ಜೊತೆ ಅವರ ಮಡದಿಯನ್ನು ಕಳುಹಿಸಿದರು.ಮತ್ತೆ ನಾವು ಶೃಂಗೇರಿ ದೇವಾಲಯಕ್ಕೆ ಬಂದು ಶ್ರೀ ...
ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿ ನನಗೆ ಫೋಟೋ ತೆಗೆಯಲು ಬಿಟ್ಟರೆ ತುಂಬಾ ಸಹಾಯ ಆಗುತ್ತದೆ ಎಂದು ತಿಳಿಸಿದೆ .
ಅವರಿಗೂ ಇಕ್ಕಟ್ಟು ಆಯಿತು.ಯಾರಿಗೂ ಬಿಡದ್ದನ್ನು ನನಗೆ ಬಿಟ್ಟರೆ ಆಡಳಿತ ಮಂದಿ ಅಕ್ಷೇಪಿಸಿದರೆ ಎಂದು.ಹಾಗಂತ ಹೊರ ಭಾಗದ ಮೂರ್ತಿಯ ಫೋಟೋ ತೆಗೆಯುದಕ್ಕೆ ಅಡ್ಡಿ ಇಲ್ಲ ಎಂದೂ ಅವರಿಗೆ ಮನವರಿಕೆ ಆಗಿತ್ತು.ಅವರು ನಮ್ಮತ್ತಾ್ರೆ ಮಾತಾಡುತ್ತಾ ಮಲೆಯಾಳ ಬ್ರಹ್ಮನ ಗುಡಿಯ ಬಾಗಿಲು ತೆರೆದಿಟ್ಟು ಏನೋ ಅಗತ್ಯದ ಕಾರಣದಿಂದ ಅಲ್ಲಿಂದ ಹೋದರು.ನಾನು ಕೂಡಲೇ ಕೆಲವು ಫೋಟೋ ಸೆರೆ ಹಿಡಿದೆ.ಅಷ್ಟರಲ್ಲಿ ಯಾರೋ ಅಲ್ಲಿನ ಅರ್ಚಕರ ಹೆಸರು ಹೇಳಿ ಅವರೆಲ್ಲಿ ಹೋಗಿದ್ದಾರೆ ಎನ್ನುತ್ತಾ ನನ್ನೆಡೆಗೆ ಬರುವುದನ್ನು ನೋಡಿ ನಾನು ಕ್ಯಾಮೆರಾ ಬ್ಯಾಗಿಗೆ ತುಂಬಿ ಬೇರೆಡೆ ಹೋದೆ.ನಾನು ದೂರ ಸರಿಯುತ್ತಲೇ ಆ ಸಹೃದಯಿ ಅರ್ಚಕರು ಅಲ್ಲಿಗೆ ಬಂದು ಹೋಗಿ ಬನ್ನಿ ಎಂದು ಸನ್ನೆ ಮಾಡಿ ಶುಭ ಹಾರೈಸಿದರು.ನಾವು ಈ ಕಡೆ ಬಂದಾಗ ಆ ಶಿಕ್ಷಕರ ಶ್ರೀಮತಿ ಅವರು ನನಗೆ ಫೋಟೋ ತೆಗೆಯಲು ಅನುಕೂಲ ಮಾಡಿಕೊಡುವ ಕಾರಣದಿಂದಲೇ ಅವರು ಗುಡಿಯ ಬಾಗಿಲು ತೆರೆದು ಹೊರ ಹೋಗಿರಬಹುದು ಎಂದು ತಿಳಿಸಿದರು .
ಮುಂದೆ ದೇವಾಲಯ ಸುತ್ತ ಮುತ್ತ ಸ್ವಲ್ಪ ಸುತ್ತಾಡಿ ಆಗುವಷ್ಟರಲ್ಲಿ ರಾತ್ರಿ 7 ಗಂಟೆ ಆಯಿತು.ಅದರೆಡೆಯಲ್ಲಿ ಅಲ್ಲಿಂದ ಬೆಂಗಳೂರಿನ ಬಸ್ ಗೆ ಸೀಟ್ ರಿಸರ್ವ್ ಮಾಡಿದೆವು .ನಾನು ಬೆಂಗಳೂರಿಗೆ ಟಿಕೆಟ್ ತಗೊಂಡಾಗ ಆ ಹಿಮ್ಬಾಲಿಸುತ್ತಿದ್ದಾನೋ ಏನೋ ಎಂದು ನಾನು ಸಂಶಯಿಸಿದ ವ್ಯಕ್ತಿ ಕೂಡ ಬೆಂಗಳೂರಿಗೆ ಟಿಕೆಟ್ ತೆಗೆದದ್ದನ್ನು ನಾವು ಗಮನಿಸಿದೆವು .ಆಗ ನನಗೆ ಶಿಕ್ಷಕರ ಶ್ರೀಮತಿ ಅವರು ನನಗೆ ಎಚ್ಚರಿಕೆ ಹೇಳಿದರು.ನೀವು ಬಸ್ ಇಳಿಯುವ ಮುಂಚೆಯೇ ನಿಮ್ಮ ಗಂಡನನ್ನು ಬಸ್ ಸ್ಟಾಂಡ್ ಗೆ ಬರ ಹೇಳಿ.ಹೇಗಾದ್ರು ಇವನ ಕಣ್ಣು ತಪ್ಪಿಸಿ ಪಾರಾಗಿ ಅಂತ ಸೂಚಿಸಿದರು.ನಂತರ ನಾನು ಬಸ್ ಹತ್ತಿ ಕೂತು ಬಸ್ ಹೊರಟ ಮೇಲೆ ಅವರು ಅವರ ಮನೆಗೆ ಹೋದರು (ನನಗೆ ರಕ್ಷಣೆ ಕೊಟ್ಟ ಅವರಿಗೆ ನಾನು ಆಜೀವ ಋಣಿ )
ನಾನು ಬಸ್ ನಲ್ಲಿ ಕುಳಿತು ಹಿಂದೆ ನೋಡಿದರೆ ಹಿಂದಿನ ಸೀಟ್ ನಲ್ಲಿಯೇ ಆ ಅಸಾಮಿ ಇದ್ದಾನೆ!!!!!!
ನಾನು ಪ್ರಸಾದ್ ಗೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ ನಾನು ತಲಪುವ ಸಮಯಕ್ಕೆ ಬಂದಿರಲು ತಿಳಿಸಿದೆ!
ಇಡೀ ರಾತ್ರಿ ಒಂದು ಕ್ಷಣ ಕೂಡ ಕಣ್ಣು ಮುಚ್ಚಲಿಲ್ಲ !ಅಂತು ಬೆಳಗ್ಗಿನ ಜಾವ 6 ಗಂಟೆ ಹೊತ್ತಿಗೆ ಬೆಂಗಳೂರು ವಲಯ ಪ್ರವೇಶಿಸಿತು ಬಸ್ಸು .ಯಶವಂತ ಪುರ ಬಂದಾಗ ನಾನು ಮೆಲ್ಲಗೆ ತಿರುಗಿ ನೋಡಿದೆ !ಅವನು ತೂಕಡಿಸುತ್ತಾ ಇದ್ದಾನೆ !ಯಶವಂತ ಪುರದಲ್ಲ್ಲಿ ಇಳಿಯುವರು ಇಳಿದು ಇನ್ನೇನು ಬಸ್ ಹೊರಟಾಗ ತಕ್ಷಣ ನಾನು ಅಲ್ಲಿ ಇಳಿದು ಸೀದಾ ಆಟೋ ಹಿಡಿದು ಮೆಜೆಸ್ಟಿಕ್ ಅಂತ ಹೇಳಿದೆ .ಹಿಂದೆ ತಿರುಗಿ ನೋಡಿದ್ರೆ ಆತ ಕೂಡ ಇಳಿದು ಆಟೋ ಹತ್ತುತ್ತಿದ್ದಾನೆ !ಕೂಡಲೇ ನಾನು ಗೊರಗುಂಟೆ ಕಡೆ ಆಟೋ ಬಿಡ್ಲಿಕೆ ಹೇಳಿದೆ ಆಟೋ ಚಾಲಕನಿಗೂ ಏನೋ ಸೂಕ್ಷ್ಮ ತಿಳಿಯಿತು ಅವರು ತುಂಬಾ ಬೇಗ ವಾಹನ ನಡುವೆ ಸುತ್ತಿ ಗೊರ ಗುಂಟೆ ಪಾಳ್ಯ ಕಡೆ ಬಂದರು.ಮತ್ತು ನೀವು ಇಲ್ಲಿಂದ ಇನ್ನೊಂದು ಅಟೋ ಹಿಡುದು ಹೋಗಿ ಅಂತ ಹೇಳಿದರು.ನಾನು ಕೂಡಲೇ ಕೈಗೆ ಸಿಕ್ಕ ಹತ್ತು ರೂಪಾಯಿ ನೋಟ್ ಆತನಿಗೆ ನೀಡಿ ಇನ್ನೊಂದು ಅಟೋ ಹಿಡಿದು ಗೊರಗುಟೆ ಪಾಳ್ಯ ಬಂದು ಬಸ್ ಹತ್ತಿ ಕಿಟಕಿಯಲ್ಲಿ ನೋಡದರೆ ಆತ ಅಟೋ ದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ . ನಡುವೆ ಸಿಗ್ನಲ್ ಬಿದ್ದಾಗ ಇಳಿದು ಮತ್ತೊಂದು ಆಟೋ ಹಿಡಿದು ಮನೆಗೆ ಬಂದೆ !!!!!!!!! ಆ ವ್ಯಕ್ತಿಗೆ ನಾನು ಇಳಿದು ಎಲ್ಲಿ ಹೋದೆ ಎಂದು ಗೊತ್ತಾಗಲಿಲ್ಲ ಸಧ್ಯ !
ಅಬ್ಬ !ನಾನು ಹೇಗೋ ಪಾರಾಗಿ ಬಂದಿದ್ದೆ !ಒಳ್ಳೆಯ ಕಾರ್ಯಕ್ಕಾಗಿ ಬಂದ ನನ್ನನ್ನು ಆ ಶೃಂಗೇರಿಯ ಮಲಯಾಳ ಬ್ರಹ್ಮನೇ ಕಾಪಾಡಿರ ಬೇಕು
ಶೃಂಗೇರಿಯ ಮಲೆಯಾಳ ಬ್ರಹ್ಮನಿಗೆ
ಅಂತೂ ಮಲೆಯಾಳ ಬ್ರಹ್ಮನ ಕೃಪೆಯಿಂದ ಪಾರಾಗಿ ಬಂದಿದ್ದೆ
-ಡಾ.ಲಕ್ಷ್ಮೀ ಜಿ ಪ್ರಸಾದ