ಸಾವಿನಲ್ಲೂ ಪ್ರೀತಿಯದ್ದೆ ಗೆಲುವು ❤️

ProfileImg
08 Jul '24
6 min read


image

ರಾಮಚಂದ್ರ ಮತ್ತು ಕುಸುಮ ಅವರ ಏಕೈಕ ಪುತ್ರ ರಾಮ್ .... ಎಂಟು ವರ್ಷ ಆದರೂ ಮಕ್ಕಳೇ ಇಲ್ಲದೆ ದಂಪತಿಗಳಿಗೆ ಇಷ್ಟಪಟ್ಟಿದ್ದು ಅವನ ಮುಂದೆ ತಂದು ಕೊಡುತ್ತಿದ್ದರು ಅವನಿಗೆ ಒಂದು  ಚೂರು ಏನಾದರೂ ನೋವಾದರೆ ತಮಗೆ ಆಯಿತು ಅನ್ನುವಷ್ಟು ದುಃಖ ಪಡುತ್ತಿದ್ದರು ರಾಮ್ ಗೆ ತನ್ನ ತಂದೆ ತಾಯಿಯೇ ಪ್ರಪಂಚ ರಾಮ್ ತಮ್ಮದೇ ಆದ ಕಂಪನಿಯಲ್ಲಿ ಸಿಇಓ ಆಗಿ ಕೆಲಸ ಮಾಡ್ತಾ ಇರ್ತಾನೆ  ಹೀಗ್ ಇರ್ಬೇಕಾದ್ರೆ ಇವ್ನ್ ಕಂಪನಿಗೆ ಕೆಲಸ ಹುಡುಕಿ ಅಂಜಲಿ ಅನ್ನುವ ಹುಡಗಿ ಬರ್ತಾಳೆ ಅವಳನ್ನ ನೋಡಿದಾಗಿಂದ ಇವನ್ ಹೃದಯ ತಾಳ ತಪ್ಪಿರುತ್ತೆ ಈ ಪ್ರೀತಿ ಶುರುವಾಗಿ ಇಂದಿಗೆ ಐದು ವರ್ಷಗಳು ಪೂರೈಸುವ ದಿನ......…

ಚೇತನ್ ಹಾಗೂ ಲಕ್ಷ್ಮಿ ಅವರ ಮುದ್ದಿನ ಮಗಳು ನಮ್ ಅಂಜು...... ಚೇತನ್ ಅವ್ರು ಕೂಡ ಒಂದು ದೊಡ್ಡ ಕಂಪನಿಯ  ಆಧಾರಸ್ತಂಭ ಅಂಜುಗೆ ತನ್ನ ಕಂಪನಿನಾ ನೋಡಿಕೊಳ್ಳೋದಕ್ಕೆ ಇನ್ನೊಂದು ಕಂಪೆನಿಲಿ ಅದರಬಗ್ಗೆ ತಿಳಿದುಕೊಂಡು ಆಮೇಲೆ ತನ್ನ ಕಂಪನಿ ಜವಾಬ್ದಾರಿ ತೊಗೋಬೇಕು ಅಂತಾ ರಾಮ್ ಅವರ ಕಂಪನಿಗೆ ಸೇರಿಕೊಂಡಿರ್ತಾಳೆ......…

ಅಂಜು ಕಂಪನಿಗೆ ಸೇರಿದ ಮೂರುದಿನದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ಹಾಗೆ ರಾಮ್ ಗು ಕೂಡ 🫣......…

ಅಂಜು ರಾಮ್ ಗೆ ಸರ್ಪ್ರೈಸ್ ಕೊಡ್ಬೇಕು ಅಂತಾ ಮಧ್ಯರಾತ್ರಿ ಹನ್ನೊಂದು ಗಂಟೆಗೆ ಅವನ್ ರೂಮ್ ಬಾಗಿಲನ ಬಡಿತಾಳೆ ನಿದ್ದೆ ಮಾಡ್ತಿದ್ದ ರಾಮ್ ಇಷ್ಟೋತ್ತಲ್ಲಿ ಯಾರು ಅಂತಾ ಡೋರ್ ಓಪನ್ ಮಾಡಿ ಹೇ ಮುದ್ದು ನೀನೇನ್ ಇಷ್ಟೋತ್ತಲಿ ಹೇಳಿದ್ರೆ ನಾನೆ ಬರ್ತಿದ್ನಲ ಹೇ ಅದೆಲ್ಲಾ ಬಿಡು ಹೋಗು ಬೇಗ ರೆಡಿ ಆಗಿ ಬಾ ನನ್ನ ಇಷ್ಟದ ಶರ್ಟ್ ಹಾಕೋಂಡು ಬಾ ಬೇಗಾ ಅಲ್ವೇ ಇಷ್ಟೋತ್ತಲ್ಲಿ ಏನಕ್ಕೆ ಇದೆಲ್ಲಾ ಎ ಜಾಸ್ತಿ ಮಾತಾಡ್ಬೇಡ ಹೋಗೋಲೋ ಬೇಗ ಟೈಮ್ ಆಗುತ್ತೆ ಸರಿ ಇರಮ್ಮಾ........ ಅವಳಿಷ್ಟದ ಶರ್ಟ್ ಹಾಕಿ ಬಂದ ರಾಮ್ ಅವನನ್ನು ತಬ್ಬಿಕೊಂಡು ಒಂದು ಸಿಹಿಯಾದ ಮುತ್ತು ಕೊಟ್ಟು ಸೊ ಸ್ವೀಟ್ ನನ್ ಬಂಗಾರ ಬಾ ಬೇಗ ಹೋಗುವ.... ನಿನ್ ಇತರ ಗಿಫ್ಟ್ ಕೊಡ್ತೀಯಾ ಅಂದ್ರೆ ದಿನ ನಿನ್ನ ಇಷ್ಟದ ಬಟ್ಟೆನೆ ಹಾಕೊಳ್ತೀನಿ ಅಂತಾ ಕಣ್ಣು ಹೊಡೆದ........ ಎ ನಡಿಯೋ ಪೋಲಿ ಅಂತಾ ಹೊರಗೆ ಕರೆದುಕೊಂಡು ಹೊರಟಳು...... ತೊಗೊ ಬೈಕ್ ಕಿ ಸ್ಟಾರ್ಟ್ ಮಾಡು ಹೇ ಸ್ವಲ್ಪ ಮುಂದೆ ತಳ್ಳಕೊಂಡುಹೋಗಿ ಸ್ಟಾರ್ಟ್ ಮಾಡು ಯಾರಿಗೂ ಗೊತ್ತಾಗದರಿತಿ ಬಂದಿದೀನಿ ಅದೇ ರೀತಿ ನಾವು ಹೋಗ್ಬೇಕು......ಆಯ್ತು ಇರೆ ಯಾಕೆ ಇಷ್ಟು ಅರ್ಜೆಂಟ್ ಮಾಡ್ತಿದೀಯ.... ಟೈಮ್ ಆಗ್ಬಿಡುತ್ತೋ ಲೂಸ್ ಅದ್ಕಕೆ ಟೈಮ್ ಆಗುತ್ತೆ ಅನ್ನೋಕೆ ಇವತ್ತು ನಿನ್ನ ಬರ್ತ್ಡೇ ನು ಇಲ್ಲಾ ನಂದು ಇಲ್ಲಾ ಏನ್ ಇವತ್ತು ಸ್ಪೆಷಲ್..... ಹೇಳ್ತಿನಿ ನಡಿಯಪ್ಪ ಮೊದ್ಲು ನಾನ್ ಹೇಳಿದ್ ಜಾಗಕ್ಕೆ ಸರಿ ಸರಿ ಆಯ್ತು ಬೈಬೇಡ 😒

ಇಬ್ಬರ ಸವಾರಿ ಬಂದಿಳಿದ್ದು ವಿಶಾಲವಾದ ಸಮುದ್ರದ ದಡಕ್ಕೆ  ಇಬ್ಬರು ಕೈ ಕೈ ಹಿಡಿದು ಜೊತೆಯಾಗಿ ಹೆಜ್ಜೆ ಇಡುತ್ತಾ  ಮುಂದೆ ಬಂದಾಗ ದಾರಿಯುದ್ದಕ್ಕೂ ಗುಲಾಬಿ ಹೂಗಳ ರಾಶಿಯ ಮೇಲೆ ಇಬ್ಬರ ಚಂದದ ನಡಿಗೆ ಒಂದು ಟೇಬಲ್ ಮೇಲೆ ಹಾರ್ಟ್ ಶೇಪ್ನ ಕೇಕ್  ಅದರ ಸುತ್ತಲೂ ಲೈಟಿಂಗ್ಗಳು ಎಲ್ಲೆಲ್ಲೂ ಹೂವಿನ ಅಲಂಕಾರ ಮಂಡಿಯೂರಿ ಕುಳಿತ ಅಂಜು ಇವತ್ತು ನನ್ನ ಬರ್ತ್ಡೇ ನು ಅಲ್ಲ ನಿನ್ನ ಬರ್ತ್ಡೇ ನು ಅಲ್ಲ ನಮ್ಮ್ ಪ್ರೀತಿ ಶುರುವಾದ ದಿನ ಕಣೋ ಐ ಲವ್ ಯು ಕಣೋ ಐ ಲವ್ ಯು ಸೊ ಮಚ್ ಅಂತಾ ಅವನನ್ನ ತಬ್ಬಿಕೊಂಡು ನೀನಂದ್ರೆ ನನಗೆ ಪ್ರಾಣ ಕಣೋ...ಲವ್ ಯು ಟು ಕಣೆ ಮುದ್ದು  ಥ್ಯಾಂಕ್ ಯು ಸೊ ಮಚ್ ಮುದ್ದಮ್ಮ ನನ್ನ ಇಷ್ಟೊಂದು ಪ್ರೀತಿ ಮಾಡ್ತಿರೋದಕ್ಕೆ ❤️😘......... ಇಬ್ಬರು ಐದು ವರ್ಷದ ಕೆಳಗೆ ಕಳೆದ ಸುಂದರ ಕ್ಷಗಳನ್ನ ಮೆಲುಕು ಹಾಕ್ತಿರ್ತಾರೆ....…

ರಾಮ್ ನೀನು ನಾನ್ ಆಫೀಸ್ ಗೆ ಬಂದಾಗ ನನ್ನನ್ನೇ ಕಣ್ಣ ರೆಪ್ಪೆ ಬಡಿದೇ ನೋಡ್ತಿದೆ ಅಲ್ವಾ ಅದಿನ್ನು ಹಾಗೆ ನನ್ನ ಮನಸಲ್ಲಿ ಅಚ್ಚಾಗಿದೆ ಕಣೋ.... ಹೂ ಅವತ್ತು ನೀನು ತುಂಬಾ ಸುಂದರವಾಗಿ ಕಾಣ್ತಿದ್ದೆ ಅಪ್ಸರೆ ತರಾ ಗೊತ್ತಾ..... ಹೋ ಹೌದ... ಹೂ.... ನಮ್ಮಿಬ್ಬರ ಮನೇಲಿ ನಮ್ಮ ಪ್ರೀತಿನಾ ಒಪ್ಪಿಕೊಂಡಗ ಅಂತೂ ತುಂಬಾನೇ ಖುಷಿ ಪಟ್ಟಿದ್ವಿ ಅಲ್ವಾ..... ಹೂ ಆದ್ರೆ ನನಗೆ ನಿನ್ ಒಪ್ಪಿದೆ ತುಂಬಾ ಖುಷಿ ಕಣೆ ಹಾಗಾಗೇ ಅಲ್ವಾ ನಮ್ಮ ಪ್ರೀತಿ ಇಷ್ಟೊಂದು ಗಟ್ಟಿಯಾಗಿರೋದು ನೀನು ನನ್ನಾ ಒಪ್ಪೋದಿಲ್ಲಾ ಅನ್ಕೊಂಡಿದ್ದೆ  ಗೊತ್ತಾ..... ಹೂ ಅನ್ನಿಸಿರ್ಲೆ ಬೇಕು ಅಲ್ವಾ ನಾನು ಅದೇ ರೀತಿ ನಡ್ಕೋತಾಯಿದ್ದೆ ನೀನನ್ನ ಅವಾಯ್ಡ್ ಮಾಡ್ತಿದ್ದೆ ನೋಡ್ತಿರ್ಲಿಲ್ಲ ಆದ್ರೆ ಇವಾಗ  ನಿನ್ ಬಿಟ್ಟು ನಿನ್ ಬಿಟ್ಟು ಬೇರೆ ಪ್ರಪಂಚನೇ ಬೇಕಿಲ್ಲ ಅನ್ನೋಷ್ಟು ಹಚ್ಕೊಂಡಿದೀನಿ...... ಎಲ್ಲೋ ಇದ್ದೋದ್ರು ಹೇಗೆ ಓಣೆದಗಿದೀವಿ ನೋಡು ಇನ್ನು ಒಂದು ವಾರದಲ್ಲಿ ನಮ್ಮ ಮದುವೆ ನಮ್ಮ ಕನಸು ನನಸಾಗುವ ಸಮಯ ಸಮೀಪದಲ್ಲಿನೆ ಇದೆ ಅಲ್ವಾ...... ಹೂ ಕಣೋ ನಾನು ಕಾಯ್ತಾ ಇದೀನಿ ನೀನ್ಯಾವಾಗ್ ನಾನ್ ಕುತ್ತಿಗೆಗೆ ತಾಳಿ ಕಟ್ಟುತ್ತಿಯಾ ಅಂತ...... ಹಾ ಹಾ ಅವಸರ ಬೇಡ ಕಣೆ ಒಂದು ವಾರ ತಡೆದುಕೊ ಆಮೇಲೆ ನೀನೇ ಬೇಡಾ ಅಂದ್ರು ನಾನ್ ಬಿಡಲ್ಲಾ...... ಓ ಹೌದ ಅಕಸ್ಮಾತ್ ನಾನವತ್ತು ಸತ್ತೋದ್ರೆ ಏನ್ ಮಾಡ್ತಿಯಾ..... ಎ ಅಂಜು ಏನೇ ಮಾತಾಡ್ತಾಇದಿಯಾ ನಿನ್ ಯಾಕ್ ನನ್ ಬಿಟ್ಟೋಗೋ ಮಾತಾಡ್ತಿದೀಯ ನಿನ್ ಇಲ್ಲದೆ ನನ್ ಇರ್ತಿನಾ ಹೇಳು ಪ್ಲೀಸ್ ಇನ್ನೊಂದ ಸಲಾ ಆತರ ಮಾತಾಡ್ಬೇಡ್ವೇ ಉಸಿರೇ ನಿಂತು ಹೋಗೋ ಹಾಗೆ ಆಗುತ್ತೆ..... ಸಾರೀ ಕಣೋ ಏನೋ ತಮಾಷೆಗೆ ಹೇಳ್ದೆ ನಿಂಗೆ ತುಂಬಾನೇ ನೋವು ಕೊಟ್ಟೆ ಸಾರೀ ಬಂಗಾರ..... ಹೂ ಸರಿ ಮನೆಗೆ ಹೋಗೋಣ ನಡಿ ಬೆಳಗಿನ ಜಾವಾ ಮೂರು ಗಂಟೆ ಸಮಯ ಅಮ್ಮೋರಿಗೆ ನನ್ನ ಬಿಟ್ಟೋಗೋ ಮನಸ್ಸಗ್ತಿಲ್ವೇನೋ ಅಂತಾ ತಮಾಷೆ ಮಾಡ್ತಾನೆ....…

ಆದರೆ ಅಂಜು ಹೇಳಿದ ವಿಷಯ ವಿಧಿ ತಮಾಷೆಗೆ ಹೇಳಿದ್ದನ್ನೇ ನಿಜ ಮಾಡೋಕೆ ಹೊರಟಿದೆ ಅನ್ನೋದು ಇಬ್ಬರಿಗೂ ಗೊತ್ತಿಲ್ಲಾ.....…

ಒಂದು ವಾರದ ನಂತರ ಮದುವೆ ದಿನ ಬಿಳಿ ಪಂಚೆ ಬಿಳಿ ಶರ್ಟ್ ಬಿಳಿ ಶೇಲ್ಲೆ ಕೈಯಲ್ಲಿ ಕಾಸ್ಟ್ಲಿ ವಾಚ್ ಕಟ್ಟಿ ಮದುಮಗನಾಗಿ ತಯಾರಾಗಿ ನಿಂತಿದ್ದ ರಾಮ್..... ರಾಮ್ ನಾ ಗೆಳೆಯರೆಲ್ಲರೂ ಅವನನ್ನು ಕಡಿಸುತ್ತ ಹರಟೆ ಹೊಡೀತಿದ್ದರು ರಾಮ್ ಗೆ ತನ್ನವಳನ್ನು ಮದುಮಗಳ ಅಲಂಕಾರದಲ್ಲಿ ನೋಡುವಾಸೆ ಕಾತರದಿಂದ ಕುಳಿತಿರುತ್ತಾನೆ....…

ಅತ್ತ ಕಡೆಯಿಂದ ಚೇತನ್ ಅವರು ರಾಮಚಂದ್ರ ರವರಿಗೆ ಫೋನ್ ಮಾಡಿ ಅಳುತ್ತಾ ನಮ್ಮ ಮಗಳು ನಮ್ಮನಾ ಒಂಟಿ ಮಾಡಿ ಚಿರನಿದ್ರೆಗೆಜಾರಿದ್ದಾಳೆ ಅನ್ನೋ ಮಾತು ಕೇಳಿ ರಾಮಚಂದ್ರರಿಗೆ ನೆಲವೇ ಕುಸಿದಂತಾಗಿ ಮೂರ್ಛೆ ಬಿದ್ದರು ಇದನ್ನು ನೋಡಿದ ಕುಸುಮ ಅವರು ರೀ ಏನ್ ಆಯ್ತು ಯಾಕ್ ಹೀಗಬಿದ್ರಿ ಎದ್ದೇಳ್ರಿ.... ರಾಮ್ ರಾಮ್  ಬಾರೋ ಇಲ್ಲಿ ನಿಮ್ಮ ಅಪ್ಪ ಬಿದ್ದಿದರೆ ಅಂತಾ ಅಳ್ತಾ ಕುಗ್ಬೇಕಾದ್ರೆ ರಾಮ್ ಕೋಣೆಲಿ ಇರುವ ಕಾರಣ ಇದ್ಯಾವದರ ಪರಿವೆ ಇಲ್ಲದೆ ತನ್ನ ಮದುರ ಕ್ಷಣಗಾಳಿಗೋಸ್ಕರ ಕಾಯ್ತಾ ಇರ್ತಾನೆ ಕುಸುಮ ಅವರು ಕೂಗಿಕೊಳ್ಳೋದು ರಾಮ್ ನಾ ಗೆಳೆಯನಿಗೆ ಕೇಳಿಸಿ ಅಲ್ಲಿಗೆ ಓಡಿ ಬರ್ತಾನೆ ಅಂಕಲ್.... ಆಂಟಿ ಏನ್ ಆಯ್ತು ಅಂಕಲ್ ಗೆ ಗೊತ್ತಿಲ್ಲಾ ಕಣೋ ಫೋನ್ ಅಲ್ಲಿ ಮಾತಾಡ್ತಾ ಬಿದ್ಬಿಟ್ರು..... ಏನಾಗಲ್ಲ ನೀವ್ ಸಮಾಧಾನ ಮಾಡ್ಕೊಳಿ.... ಪಕ್ಕದಲ್ಲಿ ಬಿದ್ದಿದ್ದ ಫೋನ್ ತೆಗೆದು ನೋಡಿದಾಗ ಲೈನ್ ಹಾಗೆ ಇತ್ತು ಆಕಡೆ ಇಂದ ಹೇಲೋ ಹೆಲೋ ಅಂತಾನೆ ಇದ್ರೂ ಹೆಲೋ ಹೇಳಿ ಅಂಕಲ್ ಎನ್ ವಿಷಯ ನನ್ ಮುದ್ದಮ್ಮ ನಮ್ಮೂನೆಲ್ಲ ಬಿಟ್ಟು ಹೋಗಿದ್ದಾಳೆ ಅವಾಗಿಂದ ಮಾತಾಡ್ತಾ ಇದೀನಿ ಯಾರು ಮಾತಾಡ್ತಿಲ್ವಲಾ ಬೇಗಾ ಬನ್ನಿ ನಂಗೇನು ಮಾಡ್ಬೇಕೊ ತಿಳಿತಿಲ್ಲಾ ರಾಮ್ ಎಲ್ಲಿ ಅವನನ್ನ ಆದಷ್ಟು ಬೇಗಾ ಕರೆತನ್ನಿ ಅವನು ಬಂದ್ರೆ ಖಂಡಿತ ನನ್ ಮಗಳು ಬದ್ಕತಾಳೆ ಪ್ಲೀಸ್ ಬೇಗಾ ಬನ್ನಿ.....  ಅಂಕಲ್ ಸಮಾಧಾನ ಮಾಡ್ಕೊಳಿ ಏನ್ ಆಯ್ತು ಅಂಜುಗೆ?  ಅದೇನೋ ರಾಮ್ ಗೆ ಸರ್ಪ್ರೈಸ್ ಗಿಫ್ಟ್ ಕೊಡ್ಬೇಕು ನಾನ್ ಹೋಗಿ ತೊಗೊಂಡ್ ಬೇಗಾ ಬರ್ತೀನಿ ಅಂದೋಳು ದಾರಿಮದ್ಯ ಆಕ್ಸಿಡೆಂಟ್ ಆಗಿ ಹೆಣವಾಗಿ ಬಂದಿದಾಳೆ ಅಂತಾ ತಮ್ಮ ದುಃಖನಾ ವ್ಯಕ್ತ ಪಡಿಸ್ತಾರೆ..... ಇವನಿಗೆ ಏನ್ ಮಾಡಬೇಕು ರಾಮ್ ಗೆ ಈ ವಿಚಾರ ಗೊತ್ತಾದ್ರೆ ಹೇಗ್ ರಿಯಾಕ್ಟ್ ಮಾಡ್ತಾನೋ ಏನೋ ಆದ್ರೆ ಏನಾದ್ರೂ ಆಗ್ಲಿ ಇವ್ನ್ ಹೋದ್ರೆ ಖಂಡಿತ ಅಂಜು ಬದುಕೇ ಬದ್ಕತಾಳೆ ಎಸ್ ಇವ್ನನ್ನ ಕರ್ಕೊಂಡು ಹೋಗ್ಬೇಕು....... ರಾಮಚಂದ್ರ ಅವರಿಗೆ ನೀರು ಹಾಕಿದ ಮೇಲೆ ಎಚ್ಚರವಾಗಿ ಯಾರಹತ್ರನು ಏನು ಮಾತಾಡದೆ ಮೌನವಾಗ್ತಾರೆ ಅಂಜು ವಿಚಾರ ಕುಸುಮ ಅವರಿಗೂ ತಿಳಿದು ಅವರು ಕುಗ್ಗಿ ಹೋಗ್ತಾರೆ ಅವರಿಗೆ ಮಗನ ಬಗ್ಗೆ ಚಿಂತೆ ಈ ವಿಚಾರ ಗೊತ್ತಾಗಿ ಕೆಟ್ಟ ನಿರ್ಧಾರಕ್ಕೆ ಬಂದರೆ ಅನ್ನುವ ನೋವು ಅವರಿಬ್ಬರನ್ನು ಮೌನಕ್ಕೆ ದುಡಿರುತ್ತೆ.....…

ರಾಮ್ ನಾ ಗೆಳೆಯ ಸುಹಾಸ್ ರಾಮ್ ಹತ್ರ ಬಂದು ಮಗ ನಾನ್ ಹೆಳೋ ವಿಷಯನ ತಾಳ್ಮೆಯಿಂದ ಕೇಳು ಯಾವುದೇ ಕೆಟ್ಟನಿರ್ಧಾರಕ್ಕೆ ಹೋಗ್ಬಾರ್ದು ನೀನು ತಾಳ್ಮೆ ಇಂದ ಇದ್ದರೆ ನೀನು ಅಂದುಕೊಂಡತೆ ಎಲ್ಲ ಆಗುವುದು.... ಹೇ ಏನೋ ಆಯ್ತು ನಿಂಗೆ ಏನೇನೋ ಮಾತಾಡ್ತಿದೀಯಾ ಹೊಟ್ಟೆ ಹಸೀತಿದಿಯೇನೋ ಹೋಗೋ ಅಮ್ಮನ ಕೇಳು ಏನಾದ್ರೂ ತಿನ್ನಕ್ಕೆ ಕೊಡ್ತಾರೆ..... ಇಲ್ಲಾ ಕಣೋ ನಾನ್ ಹೇಳೋದನ್ನ ಮೊದ್ಲು ಕೇಳು.... ಸರಿನಪ್ಪ ಆಯ್ತು ಹೇಳು.... ಅದು ಅದು ರಾಮ್... ಅದು... ಹೇಳೋ ಬೇಗಾ ಏನ್ ಅದು.... ಅಂಜು ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಕಣೋ...... ನೋ....... ಏನೋ ಹೇಳ್ತಿದಿಯ ರಾಸ್ಕಲ್ ಇನ್ನೊಂದಸಲ ಇತರ ಹೇಳೋಕ್ ಬಂದ್ರೆ ಸಾಯಿಸಿ ಬಿಡ್ತೀನಿ ಮಗನೆ ಅವಳು ನನ್ನ ಅಷ್ಟು ಸುಲಭವಾಗಿ ಹೇಗ್ ಬಿಟ್ಟೋಗ್ತಾಳೆ ಹೋಗು ನಿನ್ ಕೆಲಸ ನೋಡು ಅವರೆಲ್ಲ ಬರುವ ಟೈಮ್ ಆಯ್ತು..... ಇಲ್ಲಾ ಕಣೋ ನಾನ್ ಹೇಳ್ತಿರೋದು ನಿಜ ಆದ್ರೆ ನೀನು ಹೋಗಿ ಅವರನ್ನ  ಬದುಕಿಸಬೇಕು ಆ ಶಕ್ತಿ ನಿನ್ನ ಪ್ರೀತಿಗಿದೆ ಧೈರ್ಯ ತಗೋ  ಮಗ ಬಾ ಹೋಗೋಣ.... ಹೇ ಹೋಗೋ ಏನೇನೋ ಹೇಳಿ ನನ್ನ ತಲೆ ಕೆಡ್ಸಬೇಡ.... ರಾಮ್ ನಿಂಗೆ  ಒಂದ್ ಸಲ ಹೇಳಿದ್ರೆ ಅರ್ಥ ಆಗಲ್ವಾ ಅಂಜು ಇಲ್ಲ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾಳೆ ನೀನು ಅವರನ್ನು ಬದುಕಿಸಬೇಕು...... ಇಷ್ಟೋತ್ತು ಸುಳ್ಳು ಅನ್ಕೊಂಡು ಇವ್ನಿಗೆ ಬೈತಿದ್ದೋವ್ನು ಈಗ ಅವ್ನೆ ಮೌನಕ್ಕೆ ಶರಣಾದ..... ಮೌನದಲ್ಲೇ ದುಃಖ್ಖ ಪಡ್ತಾ ಅಂಜು ಇದ್ದ ಹಾಸ್ಪಿಟಲ್ ಗೆ ಬಂದು ಇಳಿದರು ನಾಲ್ಕು ಜನ......ಎಲ್ಲರು ತಮ್ಮ್ ತಮ್ಮ್ ಮನದಲ್ಲೇ ದುಃಖಿಸುತ್ತಿದ್ದರು.... ರಾಮ್ ಮಾತ್ರ ಅಂಜು ಇರುವ  ಐಸಿಯು ಒಳ್ಗೆ ನೇರವಾಗಿ ಹೋಗ್ತಾನೆ ನರ್ಸ್ ತಡೆದರೂ ಲೆಕ್ಕಿಸದೆ ಮುಂದೆ ಹೋಗ್ತಾನೆ....... ರಾಮ್ ಅಂಜುನಾ ನೋಡ್ತಾ ಅವಳ ಹತ್ರ ಹೋಗಿ ಅವಳ್ ಕೈ ಮುಟ್ಟಿ ಮುದ್ದಮ್ಮ ಸಾಕು ಮಲಗಿದ್ದು ಎದ್ದೇಳೇ ಇವತ್ತು ನಮ್ಮ್ ಮದುವೆ ಕಣೆ ನೀನೇ ಹಿಂಗ್ ಮಲಗ್ಬಿಟ್ರೆ ಹೆಗಮ್ಮ ಪ್ಲೀಸ್ ಎದ್ದೇಳೇ ಹೊರಗಡೆ ಏನೇನೋ ಹೇಳ್ತಿದಾರೆ ಗೊತ್ತಾನಿಂಗೆ ನೀನು ನನ್ನ ಬಿಟ್ಟುಹೋಗಿದೀಯ ಅಂತೇ ಆದ್ರೆ ಅವರಿಗೆ ಏನ್ ಗೊತ್ತು ನಿನ್ ಬಿಟ್ಟು ನಾನ್ ಇರಲ್ಲ ನನ್ನ ಬಿಟ್ಟು ನಿನ್ ಇರಲ್ಲ ಅಂತಾ ಅಲ್ವಾ ಎದ್ದೇಳು ಬೇಗಾ ಅಲಂಕಾರ ಮಾಡ್ಕೋಬೇಕು ಈ ಬಿಳಿ ಬಟ್ಟೆ ಚೆನ್ನಾಗಿ ಇಲ್ಲಾ ಕಣೆ ಪ್ಲೀಸ್ ಕಣೆ ಅಂತಾ ನಿನ್ ಏಳಲಿಲ್ಲ ಅಂದರೇ ನಾನು ನಿಂತರನೇ ಮಾಳ್ಕೋತೀನಿ ಪ್ಲೀಸ್ ಎದ್ದೇಳೇ ಅಂತಾ ಇಡೀ ಹಾಸ್ಪಿಟಲ್ ಗೆ ಕೇಳುವ ಹಾಗೆ ರೋಧಿಸುತ್ತಾನೆ ಆದರೂ ಅಂಜು ಏಳುವುದಿಲ್ಲಾ ಅವಳ್ ಕೈ ಮೇಲೆ ಅಳ್ತಾ ಅಳ್ತಾ ನಾನು ನಿನ್ ಹತ್ರ ಬರ್ತೀನಿ ನನ್ನು ಕರ್ಕೊಂಡು ಹೋಗು ಅಂತಾ ಅಲ್ಲೇ ಪ್ರಜ್ಞೆ ತಪ್ಪನೇ  ಅವನ್ ಕಣ್ಣಿಂದ ಬಿದ್ದ ಕಣ್ಣೀರಿನ ಹನಿಗಳು ಹಾಗೆ ಅವನ ಹೃದಯ ಬಡೆದು ಕೊಳ್ಳುವ ಪರಿಗೆ ಆ ದೇವರಿಗೆ ಕರುಣೆ ಬಂದು ಅಂಜಲಿಗೆ ಪ್ರಜ್ಞೆ ಬರುತ್ತೆ  ಮೆಲ್ಲಗೆ ಕಣ್ ತೆರೆದವಳು ತನ್ನ ಕೈ ಭಾರ ಆಗಿರೋದನ್ನ ನೋಡಿ ಕಣ್ಣಲಿ ನೀರ್ ತುಂಬಿಕೊಳ್ಳುತ್ತದೆ...... ರಾಮ್ ರಾಮ್ ಅಂತಾ ಮೆಲ್ಲಗೆ ಕರೆಯುತ್ತಾಳೆ ಆದರೆ ಅವನಿಗೆ ಎಚ್ಚರ ಆಗೋದಿಲ್ಲಾ.... ಯಾರನ್ನಾದರೂ ಕರೆಯಬೇಕು ಎಂದರೆ ದ್ವನಿ ಅವಳಿಗೆ ಸಹಾಯ ಮಾಡ್ಲಿಲ್ಲ ಸುಮ್ಮನೆ ಅಳುತಿರುತ್ತಾಳೆ ಆಗ ಇಷ್ಟೋತ್ತಾದರೂ ಒಲ್ಗಡೆ ಹೋದೋರು ಬರ್ಲಿಲ್ವಲಾ ಅಂತಾ ನರ್ಸ್ ಒಳಗೆ ಬಂದು ನೋಡಿ ಶಾಕ್ ಆಗಿ ನಿಲ್ಲುತ್ತಾಳೆ ಓಡಿ ಹೋಗಿ ಡಾಕ್ಟರ್ ಗೆ ವಿಷಯ ತಿಳಿಸುತ್ತಾಳೆ ಆಗ ಡಾಕ್ಟರ್ ನೋಡಿ ಅಂಜುಗೆ ಎಲ್ಲ ವಿಷಯ ಹೇಳ್ತಾರೆ ಹಾಗೆ ರಾಮ್ ಗು ಚಿಕಿತ್ಸೆ ಮಾಡಿದ ನಂತರ ಪ್ರಜ್ಞೆ ಬಂದು ಅಂಜು ಅಂತಾ ಮೆಲ್ಲನೆ ಕೇಳ್ತಾನೆ ಕಂಗ್ರಾಟ್ಸ್ ಮೈ ಬಾಯ್ ನಿನ್ ಪ್ರೀತಿ ಸೋಲಲಿಲ್ಲ ಸಾವನ್ನೇ ಗೆದ್ದು ನಿನ್ನ ಪ್ರೀತಿ ಉಳಿದಿದೆ... ಅಂದ್ರೆ ಡಾಕ್ಟರ್... ಹೌದು ಅಂಜು ಬದುಕಿದ್ದಾಳೆ 😊....... ರಾಮ್ ಗೆ ಅದ ಸಂತೋಷ್ ಅಷ್ಟಿಷ್ಟಲ್ಲ ಓಡಿ ಹೋಗಿ ಅಂಜಲಿನ ತಬ್ಬಿಕೊಂಡು ಹೇಗೆ ನನ್ನ ಬಿಟ್ಟೋಗೋ ಮನಸ್ಸಯಿತು ನಿಂಗೆ ಅಂತಾ ಬೈಯುತ್ತ ಇಬ್ಬರು ಒಬ್ಬರಿಗೊಬ್ಬರು ಅಪ್ಪಿಮುದ್ದಾಡಿ ಖುಷಿಪಟ್ಟರು ತಂದೆ ತಾಯಿಗಳಿಗೆ ಹಾಗೆ ಸ್ನೇಹಿತರಿಗೂ ಇವರಿಬ್ಬರನ್ನು ನೋಡಿ ಖುಷಿಪಟ್ಟರು..... ಹೀಗೆ ಸಾವಲ್ಲೂ ಪ್ರೀತಿನೇ ಗೆದ್ದಿದ್ದು ಮುಕ್ತಾಯ ವಾಯಿತು...…

 

ಹೇಗಿದೆ ಕಥೆ ಅಂತಾ ಅಭಿಪ್ರಾಯ ತಿಳಿಸಿ ನನ್ ಕಲ್ಪನೆಗೆ ಬಂದಿದ್ದನ್ನು ಇಲ್ಲಿ ಬರೆದಿರುವೆ ತಪ್ಪಿದ್ದರೆ ಕ್ಷಮಿಸಿ

ಧನ್ಯವಾದಗಳು.…

 

Category:Fiction



ProfileImg

Written by Sahana gadagkar