ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಾಲಿಡಾರಿಟಿ ಯೂಥ್ ಮೂಮೆಂಟ್ ವತಿಯಿಂದ ಉಚಿತ ಊಟದ ವ್ಯವಸ್ಥೆ

ಜೈಹಿಂದ್ ಉಚಿತ ಆಹಾರ ಕೇಂದ್ರದಿಂದ ನಿರಂತರ 200ಕ್ಕೂ ಹೆಚ್ಚು ದಿನಗಳಿಂದ ರಾತ್ರಿ ಉಚಿತ ಊಟ ವ್ಯವಸ್ಥೆ

ProfileImg
12 May '24
1 min read


image

ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಾಲಿಡಾರಿಟಿ ಯೂಥ್ ಮೂಮೆಂಟ್, ಜೈಹಿಂದ್ ಉಚಿತ ಆಹಾರ ಕೇಂದ್ರ ಸಿಂಧನೂರು ವತಿಯಿಂದ ಕಳೆದ 200ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಆಸ್ಪತ್ರೆಗೆ ಆಗಮಿಸಿದ ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ಪ್ರತಿದಿನ ರಾತ್ರಿ ಅನ್ನ, ಸಾಂಬಾರ್,  ಪಲಾವ್,   ಚಿತ್ರಾನ್ನ ಒಳಗೊಂಡ ಶುಚಿ-ರುಚಿಯಾದ ಊಟವನ್ನು ಸ್ವಯಂ ಸೇವಕರು ಸಿದ್ದಪಡಿಸಿ  ತಂದು ನೀಡುತ್ತಿದ್ದಾರೆ. 

ಈ ಕಾರ್ಯದ ಬಗ್ಗೆ ಅಲ್ಲಿನ ಜನ ಮೆಚ್ಚುಗೆ ವ್ತಕ್ತಪಡಿಸಿ, ದೂರದೂರಿನಿಂದ ತಾಲೂಕು ಕೇಂದ್ರ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರೋಗಿಗಳ  ಜೊತೆ ಆಗಮಿಸಿರುವವರಿಗೆ ರಾತ್ರಿ ಊಟ ಉಚಿತವಾಗಿ ನೀಡುತ್ತಿರುವುದು ತುಂಬಾ ಅನುಕೂಲವಾಗಿದೆ ಎಂದರು.

ಬಡ ರೋಗಿಗಳಿಗೆ ಆಸ್ಪತ್ರೆ ಊಟ ನೀಡಿದರೆ, ಅವರ ಸಂಬಂಧಿಕರು ದುಡ್ಡು ಕೊಟ್ಟು ಊಟ ಮಾಡುವ ಸ್ಥಿತಿ ಇತ್ತು ಈ ಪರಿಸ್ಥಿತಿ ಗಮನಿಸಿ, ರೋಗಿಗಳ ಸಂಬಂಧಿಕರಿಗಾಗಿ ಉಚಿತವಾಗಿ ಸಾಲಿಡಾರಿಟಿ ಯೂಥ್ ಮೂಮೆಂಟ್  ಜೈ  ಹಿಂದ್ ಉಚಿತ ಆಹಾರ ಕೇಂದ್ರದಿಂದ  ದಿನಾಲೂ ರಾತ್ರಿ ಊಟ ನೀಡಲಾಗುತ್ತಿದೆ.

ಸಾಲಿಡಾರಿಟಿ ಯೂಥ್ ಮೂಮೆಂಟ್ ಅಧ್ಯಕ್ಷರಾದ ಡಾ.ವಾಸೀಮ್ ಅಹ್ಮದ್ ನೇತೃತ್ವದಲ್ಲಿ ನಡೆಯುವ ಉಚಿತ ಆಹಾರ ಕೇಂದ್ರದಲ್ಲಿ ದಿನಾಲೂ ರಾತ್ರಿ 100ಕ್ಕೂ ಹೆಚ್ಚು ಜನ ಉಚಿತ ಊಟ ಮಾಡುತ್ತಿದ್ದಾರೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಸೇವೆಗೆ ಕೈಜೊಡಿಸುವವರು ಸಾಲಿಡಾರಿಟ  ಯೂಥ್ ಮೂಮೆಂಟ್ ಸಿಂಧನೂರಿನ ಅಧ್ಯಕ್ಷರನ್ನು ಸಂಪರ್ಕಿಸಬಹುದು.

ಅನ್ನದಾತೋ ಸುಖಿಭವ ಎನ್ನುವಂತೆ ಹೀಗೆ ಅನ್ನದಾನ ಮಾಡುತ್ತಿರುವ ಸಾಲಿಡಾರಿಟಿ ಯೂಥ್ ಮೂಮೆಂಟ್ ಸಿಂಧನೂರಿನ ತಂಡದ ನಿಸ್ವಾರ್ಥ ಸೇವೆ, ಅನಾರೋಗ್ಯದಿಂದ, ಬೇರೆ ಬೇರೆ ಕಾರಣದಿಂದ ಆಸ್ಪತ್ರೆಗೆ ಬರುವ ಅದೆಷ್ಟೊ ಜನ ಹಸಿದವರ ಹಸಿವು ನೀಗಿಸುತ್ತಿದೆ. ಭಗವಂತ ಈ ಸೇವೆಗೆ ಮತ್ತಷ್ಟು ಶಕ್ತಿಕೊಟ್ಟು ಈ ಸೇವೆ ಮತ್ತಷ್ಟು ಜನರಿಗೆ ಸಿಗಲಿ ಅನ್ನೋದು ನಮ್ಮ ಆಶಯ.

 

Category:News



ProfileImg

Written by Avinash deshpande

Article Writer, Self Employee