ಸಪ್ತಸಾಗರದಾಚೆ ಎಲ್ಲೋ ❤️

ProfileImg
12 Jun '24
1 min read


image

ನೆನೆದಾಗಲೆಲ್ಲ ನೆನಪಾಗುವ ಮಾಯೇ ನೀನು,
ನಿನ್ನ ಮರೆಯಲು ಸಾಧ್ಯವಿಲ್ಲ, ನನ್ನ ಜೊತೆಗೆ ಸಾಗುವ ಛಾಯೆ ನೀನು,

ಕಾಣದ ಒಲವೊಂದು ಹಠಮಾಡಿದೆ ನಿನ್ನ ಸೇರಲು,
ಕಲ್ಪನೆಗೂ ಮೀರಿದ ಜಾದು ನೀನು, ನಲಿದಾಡುವ ಹೆಣ್ಣವಿಲು,

ನೀ ನನ್ನೊಳಗೊ, ನಾ ನಿನ್ನೊಳಗೊ, ತಿಳಿಯದು ಪ್ರೀತಿಯ ಅಚ್ಚರಿ,
ಕಲ್ಪನೆಯ ಕಲ್ಪಿಸುವ ಹುಚ್ಚು ಹಠದೊಂದಿಗೆ ಸಾಗಿದೆ ನನ್ನಯ ದಾರಿ,

ನಾ ನೆನೆದ ನೀನು ನಿಜವೋ ಸುಳ್ಳೋ,
ನಿನ್ನ ಜೊತೆಗೆ ನನ್ನ ಪಯಣ, ಸಪ್ತಸಾಗರದಾಚೆ ಎಲ್ಲೋ...❤️

                                            ~CSP

Category:Poetry



ProfileImg

Written by Chandan SP

ಹೆಮ್ಮೆಯ ಕನ್ನಡಿಗ ❤️