ಕದ್ದು ತರುವುದರಲ್ಲಿ ಸುಖವಿರದು
ಕೊಂದು ಪಡೆಯುವುದು ಸ್ವಂತವಾಗದು
ಪರರ ಹಿತ ಕಸಿಯಬೇಡ
ಬೇರೊಂದ ನೀ ಬೇಕೆನ್ನಬೇಡ
ಸಿಲುಕಬೇಡ ಆಸೆಯ ಸುಳಿಗೆ
ಹಿಂಡುವುದು ನಿನ್ನನೇ
ಮೆರೆಯಬೇಡ ಒಂದೂ ಘಳಿಗೆ
ಬೆಂಡಾಗದು ನಿನ್ನ ಮುಂದೆ
ಬದುಕಲು ಬೇಕಿಲ್ಲ ವೈಭೋಗ
ವೈಭೋಗದ ಬದುಕಿಗೆ ಆಸ್ತಿ ಬೇಕಿಲ್ಲ
ವೈರಾಗ್ಯ ವೇತಕೆ ಸಹಮನುಜರೊಡನೆ
ಪ್ರೀತಿ ಹಂಚುತಾ ಸಾಗತಿರು ಎಲ್ಲೆಡೆ
ನಿಲ್ದಾಣವಲ್ಲವಿದು ಕಾಯಬೇಡ
ಸಾಗುತಲಿರು ನಿಲ್ಲಬೇಡ
ಬದುಕೊಂದು ನೆಲೆ, ಬದುಕುವುದೊಂದು ಕಲೆ
ಇರುವುದರೊಳಗೆ ಸಾಗುವುದು ಭಲೇ
ಇರುವಾಗಲೂ ಏನಿಲ್ಲ
ಕೊಂಡಯ್ಯಲೂ ಆಗಲ್ಲ
ವಿರಮಿಸುವ ಜಾಗವಿದು
ಠಿಕಾಣಿ ಇಲ್ಯಾರಿಗೂ ಇಲ್ಲ
ಸಿಗದ ನೆನೆದು ಕೊರಗಬೇಡ
ಬದುಕು ಬರಡಾಗದಿರಲಿ
ಏನಾದರೂ ಮಾಡುತ ಸಾಗುತಿರು
ನೀ ಮಾಡುವುದ ಅನ್ಯರು ನೆನೆಯುವಂತಿರಲಿ
ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ
0 Followers
0 Following