Do you have a passion for writing?Join Ayra as a Writertoday and start earning.

ಮಾಯೆ

ನಿಲುಕದ ಪ್ರೀತಿಯ ಬೆನ್ನೇರಿ

ProfileImg
12 Jan '24
5 min read


image

ಅಧ್ಯಾಯ -೧

You Can Read Also Read This Story In English Also Kindly Scroll Down To Read

ಮಾಯೆ ಒಂದು ಸಿಗದ ಪ್ರೀತಿಯ ಹಿಂದೆ ಅಲೆದು , ನರಳುವ ಯುವಪೀಳಿಗೆಯ ಕಥೆ ಇದು 

ಈ ಕಥೆ ಕೇವಲ ಕಾಲ್ಪನಿಕ , ಎಲ್ಲಿ ಬರುವ ಹೆಸರುಗಳು ಮತ್ತು ಪಾತ್ರಗಳು ಯಾರಿಗಾದರೂ ಸಂಬಂಧಿಸಿದಲ್ಲಿ ಅದು ಕೇವಲ ಕಾಲ್ಪನಿಕ 

ಸಂಜಯ್ ಒಬ್ಬ ಅಂತರ್ಮುಖಿ ಹುಡುಗ ಹೈ ಸ್ಕೂಲಿನಿಂದ ಪದವಿ ಪೂರ್ವದ ವರೆಗೆ ವಸತಿ ಶಾಲೆಯಲ್ಲೇ ಬೆಳೆದ ಅವನಿಗೆ , ಒಂದಿಬ್ಬರ ಹೊರತು ಹೆಚ್ಚು ಗೆಳೆಯರಿಲ್ಲ ಅವ್ನಿಗೆ 

ಪದವಿ ಪೂರ್ವ ಮುಗಿಸಿ ಇಂಜಿನಿಯರಿಂಗ್ ಜಾಯಿನ್ ಆದ ಸಂಜು , ಅದು ಅವನಿಗೆ ಹೊಸ ಅನುಭವ , ಏಕೆಂದರೆ ವಸತಿ ಶಾಲೆಯಲ್ಲಿ ಬೆಳೆದ ಅವನಿಗೆ ಇದು ಒಂದು ಸಮುದ್ರದ ರೀತಿ ಭಾಸವಾಗಿದೆ 
 

ಆ ಕಾಲೇಜಿಗೆ ಅವನಿದ್ದ ಜಾಗದಿಂದ ಕೆಲವೇ ಬಸ್ಸುಗಳ ಲಭ್ಯತೆ ಇತ್ತು ಅದಕ್ಕಾಗಿ ಪ್ರತಿ ದಿನ ಸಂಜು , ಕಾಲೇಜು ಶುರುವಾಗುವ ಮುನ್ನವೇ ಬಂದು ಕ್ಯಾಂಟೀನ್ ಅಲ್ಲಿ ಕೂರುತ್ತಿದ್ದ 

ಅವನ ಪಾಡಿಗೆ ಅವನ ಇಬ್ಬರು ಸ್ನೇಹಿತರೊಡನೆ ಕೂತು ಮಾತಾಡುತ್ತ ತರಗತಿ ಶುರುವಾಗುವ ವರೆಗೆ ಕಾಲ ಕೆಳೆಯುತಿದ್ದ ಸಂಜು 

ಸಂಜು ಸಾಮಾನ್ಯ ಮಾಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗ , ಓದುವುದರಲ್ಲಿ ರಾಂಕ್ ಇಲ್ಲದೆ ಇದ್ದರು ಮೋಸವಿಲ್ಲದ್ದ ಹಾಗೆ ತಕ್ಕ ಮಟ್ಟಿಗೆ ಓದುತಿದ್ದ 

ಸಂಜುವಿನ ಅಪ್ಪನಿಗೆ ತನ್ನ ಮಗ ಚೆನ್ನಾಗಿ ಓದ್ಲಿ ಎಷ್ಟು ಖರ್ಚಾದರೂ ಪರವಾಗಿಲ್ಲ ಎಂಬ ಯೋಚನೆ ಪ್ರತಿ ಪೋಷಕರಿಗಿರುವ ಹಾಗ್ ಇವರಿಗೂ ಇತ್ತು , ಹಾಗೆಯೇ ಅಂತ ಅತ್ತ್ಯುನ್ನತ್ತ ಕಾಲೇಜಿಗೆ ಇವನನ್ನು ಸೇರಿಸಿದ್ದರು 

ಅಂದು ಆ ದಿನ ಎಲ್ಲ ದಿನದಂತೆ ಇರಲಿಲ್ಲ ಅವನಿಗೆ , ಹೆಚ್ಚು ಜನ ಇಲ್ಲದ ಕ್ಯಾಂಟೀನ್ ಗೆ ಅವ್ಳು ಬಂದಿದ್ದಳು 

ಆಕೆಯನ್ನ ಅವನು ಮೊದಲ ಸಲ ನೋಡ್ದಿದ್ದು ಆದರೂ ಆ ನೋಟ ಮರೆಯುವಂತೆ ಇರಲಿಲ್ಲ , ಆಕೆಯ ಸಹಜ ಉಡುಪು ಆಡಂಬರವಿಲ್ಲದ್ದ ಸೌಂಧರ್ಯ ಕಂಡು ಅವನ ಮನಸು ಮಾರುಹೋಗಿತ್ತು ಆಕೆ ಅವಳ ಸ್ನೇಹಿತರ ಬಳಿ ಯಾವುದೇ ಅಲಂಕಾರ , ಅಹಂಕಾರ ವಿಲ್ಲದೆ ಎಲ್ಲರೊಳಗೊಂದಾಗಿ ಹೊಂದಿಕೊಂಡಿರುವ ಆ ಹೊಂದಾಣಿಕೆ ಅವನಿಗೆ ಬಹಳವೇ ಹಿಡಿಸಿತ್ತು , ಪ್ರತಿದಿನ ಇದೆ ಅಭ್ಯಾಸವಾಗಿತ್ತು ಅವನಿಗೆ ನೋಡುತ್ತಾ ಕಿವಿಯಲ್ಲಿ ಇಷ್ಟದ ಹಾಡುಕೇಳುತ್ತ ಆ ಸಹಜ ಸುಂದರಿಯ ನೆನೆಯುತ್ತ ಕಳೆದ 

ಆಕೆಯ ಹೆಸರು ಗೊತ್ತಿಲ್ಲ , ಏನು ಗೊತಿಲ್ಲದ್ದೆ ಆಕೆಗೆ ಮಾರುಹೋಗಿದ್ದ ಸಂಜು , ಕಾಲೇಜು ಮುಗಿಸಿ ಮನೆಗೆ ಹೋದ ಸಂಜು ಮನೆಯಲ್ಲಿ excuse me ಸಿನಿಮಾ ಟಿವಿಯಲ್ಲಿ ಪ್ರಸಾರ ಆಗತಿತ್ತು , ಈ ಸಿನಿಮಾವನ್ನ ಅವನು ಮೊದಲೇ ಹಲವು ಬಾರಿ ನೋಡಿದ್ದನಾದ್ರು , ಈ ಭಾರಿ ಅದು ಬೇರೆಯ ಅನುಭವ ನೀಡುತ್ತಿದೆ , ಅವನಲ್ಲಿ ಭಯವು ಕೂಡ ಆಗ್ತಿದೆ , ಆ ಸಹಜ ಸುಂದರಿಯನ್ನ ಎಲ್ಲಿ ಕಳೆದುಕೊಂಡ್ಬಿಡ್ತಿನೋ ನಾನು ಎಂದುಕೊಂಡು ಆಕೆಯನ್ನ ಮಾತಾಡಿಸ್ಬೇಕು , ಸ್ನೇಹಿತರಾಗಿ ನಂತರ ಎಲ್ಲ ಹೇಳಿಬಿಡಬೇಕು ಎಂಬುದು ಅವ್ನಲ್ಲಿತವಕಿಸುತ್ತಿದ್ದ 

ಆಕೆಯನ್ನ ಫೇಸ್ಬುಕ್ ಮೂಲಕ ಮಾತಾಡಿಸೋಣ ಅನ್ಕೊಂಡರೆ ಇವ್ನಿಗೆ ಆಕೆಯ ಹೆಸರೇ ಗೊತ್ತಿಲ್ಲ , ನೇರವಾಗಿ ಮಾತಾಡಿ ಹೆಸರು ತಿಳಿದುಕೊಳ್ಳುಲು ಇವನಿಗೆ ಭಯ ಏನು ಮಾಡೋದು ಎಂದು ಚಿಟಿಸುತ್ತಿದವನಿಗೆ ಆ ದೇವರೇ ದಾರಿ ತೋರಿದ ಅನ್ಸುತ್ತೆ ಆಕೆಯ ಹೆಸರು ತಿಳಿದುಕೊಳ್ಳುವ ಆ ದಿನವೂ ಕಡೆಗೂ ಬಂದಿತ್ತು 

ಅದು ಇಂಜಿನಿಯರಿಂಗ್ ಮೊದಲನೇ ಸೆಮಿಸ್ಟರ್ನ ಮೊದಲನೇ ಇಂಟರ್ನಲ್ಸ್ ಸಮಯ , ಮೊದಲ್ನೇ ವರ್ಷವಾ ದರಿಂದ ಇಂಜಿನಿಯರಿಂಗ್ ನ ಎಲ್ಲ ಬೇಸಿಕ್ ವಿಷಯಗಳು ಪಠ್ಯದಲ್ಲಿ ಕೊಡಿರುತ್ತೆ , ಈತ ಸಿವಿಲ್ ಇಂಜಿನಿಯರಿಂಗ್ ಆಯ್ಕೆ ಮಾಡಿದ್ದ ಅವಳು ಕಂಪ್ಯೂಟರ್ ಸೈನ್ಸ್ ನ ವಿದ್ಯಾರ್ಥಿನಿ

ಆ ಇಂಟರ್ನಲ್ಸ್ ನಲ್ಲಿ ಅದೃಷ್ಟವೆಂಬಂತೆ ಆಕೆಯು ಕೂಡ ಇವನ ತರಗತಿಯಲ್ಲೇ ಅಲೋಟ್ ಆಗಿತ್ತು ಸಂಜುವಿಗೆ ಎಲ್ಲಿಲ್ಲದ ಖುಷಿ , ವಿಪರ್ಯಾಸ ನೋಡಿ ಆಕೆಗೆ ಈತ ಯಾರು ಅಂತಲೇ ಗೊತ್ತಿಲ್ಲ , ಈತನಿಗೆ ಅವಳ ಹೆಸರು ಗೊತ್ತಿಲ್ಲ , ಆದರು ಆಕೆಯನ್ನ ಮನಸಿನಿಂದ ಬಲ್ಲವನನಾಗಿದ್ದ

ಇಂಟರ್ನಲ್ಸ್ ಅಲ್ಲಿ ಯಾರ್ಯಾರು ಎಲ್ಲಿ ಕೂರ್ಬೇಕು ಎಂದು ತರಗತಿ ಹೊರಗಡೆ ಹೆಸರಿನ ಜಜೊತೆಗೇ ಬೆಂಚಿನ  ನಂಬರ್ ಹಾಕಿದ್ದರು 
 

ಇಂಟರ್ನಲ್ಸ್ ಮುಗಿದ ಕೂಡಲೇ , ಎಲ್ಲ ಹೊರಟ ನಂತರ ಸಂಜು ಅಲ್ಲಿದ್ದ ಆ ಪಟ್ಟಿಯನ್ನ ನೋಡಿದ್ದ ಅಲ್ಲಿ ಕಂಪ್ಯೂಟರ್ ಸೈನ್ಸ್ ನ ಪಟ್ಟಿ ಮಾತ್ರ ಗಮನಿಸುತ್ತಾ ಅಲ್ಲಿದ್ದ ಹುಡ್ಗರ ಹೆಸರು ಬಿಟ್ಟುಹುಡ್ಗಿಯರ ಹೆಸರುಗಳನ್ನೂ ನೋಡಿದ ಸಹನಾ , ಋಷಿತ , ಸುಹಾನಾ ,ಶ್ರುತಿ , ಸ್ಮ್ರಿತಿ , ಪ್ರಣೀತ , ತನಿಷಾ , ತನುಜಾ ಎಂಬೆಲ್ಲ ಇತ್ತು ಅವನಲ್ಲಿದ್ದ ಫೋನ್ ತೆಗೆದುಕೊಂಡು ಆ ಪಟ್ಟಿಯ ಯಾ ಫೋಟೋ ಕ್ಲಿಕ್ಕಿಸಿಕೊಂಡು , ಖುಷಿಯಲ್ಲೇ ಮನೆಗೆ ಮರಳಿದ ಸಂಜು 

 

ಮುಂದೆ ಸಂಜು ಆಕೆಯ ಹೆಸರನ್ನು ಸಂಜು ಹೀಗೆ ಕಂಡು ಹಿಡಿದ ??

 

ಆಕೆಯ ಹೆಸರೇನು ??

 ಮುಂದುವರೆಯುತ್ತದ್ದೆ ...............................

 

ಇದು ನನ್ನ ಮೊದಲ ಪ್ರಯತ್ನ ತಪ್ಪುಗಳಿದ್ದರೆ ಕ್ಷಮಿಸಿ , ಹರಸಿ ಹಾರೈಸಿ ನಮಸ್ಕಾರ 

 

 

ಇದೆ ಕಥೆ ಇಂಗ್ಲಿಷಿನಲ್ಲೂ ಓದಲು ಕೆಳಗೇ scroll ಮಾಡಿ 

 

Chapter-1

This is the story of a young generation who wanders behind an elusive love and suffers

This story is fictitious, wherever names and characters are related to anyone, it is fictitious

Sanjay is an introverted boy who grew up in a residential school from high school to pre-graduation, Avni doesn't have many friends except one or two.

Sanju, who joined engineering after completing pre-graduation, is a new experience for him, as he grew up in a residential school and it feels like an ocean.

There were only a few buses available from his place to that college, so every day Sanju used to come and sit in the canteen before the college started.

According to him, Sanju sat and talked with his two friends until the class started

Sanju was a boy from a normal middle class family, he had no rank in his studies and studied to an adequate extent without cheating.

Sanju's father, like every parent, had the idea that it doesn't matter how much money he spends if his son gets a good education, he also admitted him to Anta Attunnatta College.

That day was not like any other day for him, she had come to the canteen where there were not many people

Even though he saw her for the first time, he couldn't forget that look, his mind was blown away by her natural dress and unpretentious beauty. She was so in tune with her friends without any adornment or pride. He was very impressed by that harmony. It was a habit every day.

I don't know her name, I don't know what it is, Sanju was infatuated with her, Sanju went home after finishing college, excuse me movie was being broadcast on TV, he had seen this movie many times before, this is giving a different experience, he is also scared, thinking that I have lost that natural beauty. He was thinking that he should talk to her, become friends and then tell her everything

If we want to talk to her through Facebook, I don't even know her name, I think that God has shown the way to the person who was tweeting that what is he afraid to do to know her name directly, the day of knowing her name has come.

It was the first internals of the first semester of engineering, from the first year all the basic subjects of engineering were given in the syllabus, he had chosen civil engineering and she was a student of computer science.

As luck would have it, she was also allotted in his class in that internals, to Sanju's joy and irony, she didn't know who he was, he didn't know her name, but he knew her by heart.

The internals had put the bench number along with the name outside the classroom to know who should sit where

As soon as the internals were over, after everyone left, Sanju looked at the list there and noticed only the list of computer science and left the names of the boys there and saw the names of the girls Sahana, Rishita, Suhana, Shruti, Smriti, Praneetha, Tanisha, Tanuja and took his phone and clicked a photo of that list. , Sanju returned home happily

 

Next Sanju finds out her name as Sanju??

 

What is her name??

 To be continued ................................

 

This is my first attempt, sorry if there are any mistakes, best regards

Category : Fiction


ProfileImg

Written by Chandan R Gowda