ಇಡ್ಲಿ ವಡೆ ಸಾಂಬಾರ್
ಇಡ್ಲಿ ವಡೆ ಸಾಂಬಾರ್ ಇದನ್ನು ಕೇಳಿದ ತಕ್ಷಣ ಬಾಯಲ್ಲಿ ನೀರುರುವುದು ಸಹಜ, ಬೆಳಗ್ಗಿನ ತಿಂಡಿಗೆ ಹೇಳಿ ಮಾಡಿಸದಂತಹ ತಿಂಡಿ,ಇಡ್ಲಿ ಸಾಂಭಾರ್ ಸೇವಿಸದವರೇ ವಿರಳವೆನ್ನಬಹುದು. ಇಂತಹ ಇಡ್ಲಿ ಯ ಬಗೆಗೆ ತಿಳಿದು ಕೊಳ್ಳಬೇಕು.
ಇಡ್ಲಿ ದಕ್ಷಿಣ ಭಾರತ ದ ಸಾಂಪ್ರದಾಯಕ ತಿನಿಸುಗಳಲ್ಲಿ ಪ್ರಮುಖವಾದ ಒಂದು ತಿಂಡಿ . ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ಬಳಸಲ್ಪಡುತ್ತದೆ.
ಕರ್ನಾಟಕದಲ್ಲಿ ಬೆಳಗಿನ ತಿಂಡಿಗೆ ಅತಿಹೆಚ್ಚು ತಿನ್ನೋದೇ ಇಡ್ಲಿ. ಅದರಲ್ಲೂ ಹೋಟೆಲ್‌ಗಳಲ್ಲಿ ಕಾಮನ್ ತಿಂಡಿ ಇದೆ… ಇನ್ನು ಅನಾರೋಗ್ಯಕ್ಕೀಡಾದವರಿಗೆ ಇಡ್ಲಿಯನ್ನೇ ಕೊಡೋದು.. ಅದೊಂದು ಔಷಧಿ ರೀತಿ ಅಂದುಕೊಂಡಿದ್ದಾರೆ ಕೆಲವರು.. ಇಡ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಈ ಕಾರಣದಿಂದ ಎಲ್ಲರೂ ಇಡ್ಲಿಯನ್ನು ಇಷ್ಟಪಡುತ್ತಾರೆ
ಇತ್ತೀಚಿನ ದಿನಗಳಲ್ಲಿ ಇಡ್ಲಿಯು ಅನೇಕ ರೂಪಾಂತರಗಳಲ್ಲಿ ಕಾಣಿಸಿ ಕೊಂಡಿವೆ:
ಆರೋಗ್ಯದ ದೃಷ್ಟಿಯಲ್ಲಿಯೂ ಇಡ್ಲಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ
30 ಗ್ರಾಂ ಇಡ್ಲಿಯಲ್ಲಿರುವ ಪೌಷ್ಟಿಕಾಂಶಗಳು
ಮಿನರಲ್ಸ್
ಮೊದಲು ಇಡ್ಲಿಯನ್ನು ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ರುಬ್ಬುವ ಕಲ್ಲಿನಿಂದ ರುಬ್ಬಿ ಮಿಶ್ರಣವನ್ನು ಒಂದು ಪಾತ್ರಯಲ್ಲಿ ಮುಚ್ಚಿಟ್ಟು ಒಂದು ಹದಕ್ಕೆ ಬಂದ ನಂತರ ಅದಕ್ಕೆಂದೇ ವಿಶೇಷವಾಗಿ ಮಾಡಿರುವ ಗುಳಿ ಇರುವ ಪ್ಲೇಟ್ ಗಳಲ್ಲಿ ತುಂಬಿಸಿ ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪವೇ ನೀರು ಹಾಕಿ ಕಟ್ಟಿಗೆ ಒಲೆಯ ಮೇಲೆ ಇಟ್ಟು ಬೇಯಿಸುತ್ತಿದ್ದರು, ನೀರಿನ ಹಬೆಯಲ್ಲಿ ಬೆಂದ ಇಡ್ಲಿ ಮೃಧುವಾಗಿ ಬೆಂದ ನಂತರ ಚಟ್ನಿ ಅಥವಾ ಸಾಂಬಾರ್ ಜೊತೆ ತಿಂದರೆ ಒಂದು ಅದ್ಬುತ ರುಚಿ ಹಾಗೂ ಆಹ್ಲಾದ.
ಇನ್ನೂ ಇದರ ಇತಿಹಾಸ ನೋಡಿದರೆ
9ನೇ ಶತಮಾನದಲ್ಲಿ ಇಂಡೋನೇಷ್ಯಾದಿಂದ ಬಂದಿರಬಹುದು ಎನ್ನುವುದು ಹಲವರ ವಾದ .
ವಡ್ಡಾರಾಧನೆಯಲ್ಲಿ ಕೇಶಿರಾಜನು .. ಪೂರಿಗೆ ಇಡ್ಡಲಿಗೆ .ಸೋದಿಗೆ ಲಾವಣಿಗೆ ಘೃತಪೂರಂ. ಲಡ್ಡುಗೆ. ಮೊದಲಾಗೊಡೆಯಪದಿನೆಂಟು ರೂಪದ ಭಕ್ಷ ರೂಪಂಗಳ೦ ಎಂಬುದಾಗಿ ಹೇಳಿದೆ
ಕಲ್ಯಾಣದ ಚಾಲುಕ್ಯರ ಎರಡನೇ ಜಯಸಿಂಹನ ಆಸ್ಥಾನಕವಿ ಕ್ರಿ.ಶ.1130) ಸೋಮೇಶ್ವರನ ಮಾನಸೋಲ್ಲಾಸ ಎಂಬ ಕೃತಿಯಲ್ಲಿ ಹಿಂದೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನಸಿಟ್ಟು ನಂತರ ರುಬ್ಬಿ ಕೊತ್ತಂಬರಿ ಸೊಪ್ಪು, ಇಂಗುಬೆರಸಿ ಇಡ್ಲಿತಯಾರಿಸುತ್ತಿದ್ದರೆಂದೂ ಕಪ್ಪು ಉದ್ದನ್ನು ಬಳಸುತ್ತಿದ್ದರೆಂದು ತಿಳಿಸ ಲಾಗಿದೆ.
ಮಂಗರಸನ ಸೂಪಶಾಸ್ತ್ರದಲ್ಲಿ ಇಡ್ಲಿ ವಿಚಾರ ತಿಳಿಸುತ್ತಾ ಹಲವಾರು ಬಗೆಯಲ್ಲಿ ಇಡ್ಲಿ ತಯಾರಿಸುತ್ತಿದ್ದರೆಂದು ಲೇಖಕರೊಬ್ಬರ ಒಕ್ಕಣೆ ಇದೆ.
ಇಡ್ಡಿಯಲ್ಲಿ ಅನೇಕ ವಿಧಗಳಿವೆ. ರವೆ ಇಡ್ಲಿ
ಹಲಸಿನ ಇಡ್ಲಿ-ಹಲಸಿನ ತೊಳೆ ಸಣ್ಣವಾಗಿ ಕತ್ತರಿಸಿ ಉದ್ದಿನೊಂದಿಗೆ ರುಬ್ಬಿ ಮಾಡುವಿಕೆ.
ಸೋರೆಕಾಯಿ ಇಡ್ಲಿ ಇದೂ ಒಂದು ರೀತಿ,
ಕೊಟ್ಟಿ ಕಡಬು - ಇದು ಅರಿಶಿನ ಎಲೆಯನ್ನು ಕೊಟ್ಟೆಯಂತೆ ಮಾಡಿ ಅದರಲ್ಲಿ ಹಿಟ್ಟು ಹಾಕಿ ಹಬೆಯಲ್ಲಿ. ಬೇಯಿಸುವಿಕೆ.
ಇನ್ನು ಮನೆ ಮತ್ತು ಹೋಟೆಲ್ ಗಳಲ್ಲಿ ತಟ್ಟೆ ಇಡ್ಲಿ ಮಾಡುವರು.ಇದು ಇಂದಿನ ಅತ್ಯಂತ ವಿಶೇಷ ತಿಂಡಿಯಾಗಿದ್ದು ಪ್ರತೀಯೊಬ್ಬರು ಇಷ್ಟಪಡುವ ತಿಂಡಿಯಾಗಿದೆ
ಅಕ್ಕಿ ಇಡ್ಲಿಯ ಜೊತೆ ರವೆ ಇಡ್ಲಿ ಸಹ ವಿಶೇಷವಾದದ್ದು, ರವೆ ಅಥವಾ ಬಾಂಬೆ ರವೆ ಬಳಸಿ ತಯಾರಿಸಲಾಗುವ ರವೆ ಇಡ್ಲಿಯು (Rava idli) ದಕ್ಷಿಣ ಭಾರತದ ಜನಪ್ರಿಯ ಉಪಾಹಾರ ತಿನಿಸಾದ ಇಡ್ಲಿಯ ಒಂದು ಬಗೆ. ಇದು ಕರ್ನಾಟಕದ ಒಂದು ವೈಶಿಷ್ಟ್ಯ ಉಪಾಹಾರ.
ರವೆ ಇಡ್ಲಿ ಆವಿಷ್ಕರಣ
ಬೆಂಗಳೂರಿನ ಜನಪ್ರಿಯ ಉಪಾಹಾರ ಗೃಹ ಸಂಸ್ಥೆ ಎಂಟಿಆರ್ ಇದನ್ನು ಆವಿಷ್ಕರಿಸಿತೆಂದು ಹೇಳಿಕೊಳ್ಳುತ್ತದೆ. .ಎಂಟಿಆರ್ ಪ್ರಕಾರ, ಎರಡನೇ ವಿಶ್ವಯುದ್ಧದ ಅವಧಿಯಲ್ಲಿ, ಇಡ್ಲಿ ತಯಾರಿಕೆಯಲ್ಲಿ ಮುಖ್ಯ ವಸ್ತುವಾದ ಅಕ್ಕಿಯ ಸರಬರಾಜು ಕಡಿಮೆಯಿತ್ತು, ಹಾಗಾಗಿ ರವೆಯನ್ನು ಬಳಸಿ ಇಡ್ಲಿ ತಯಾರಿಕೆಯನ್ನು ಪ್ರಯೋಗ ಮಾಡಲಾಯಿತು ಮತ್ತು ರವೆ ಇಡ್ಲಿಯ ಸೃಷ್ಟಿಯಾಯಿತು.
ಏನೇ ಆಗಲಿ ಮಾನವ ಆಹಾರ ಪ್ರಿಯ, ತನ್ನ ನಾಲಿಗೆ ರುಚಿಗೆ ಹಲವು ಬಗೆ ಬಗೆಯ ತಿಂಡಿಗಳನ್ನು ಮಾಡಿ ತಿನ್ನುವುದು ಅವನು ರೂಢಿಸಿಕೊಂಡು ಬಂದಿರುವ ಸಂಪ್ರದಾಯ ಅದರಂತೆ ಈ ಇಡ್ಲಿ ಎನ್ನುವ ತಿಂಡಿಯು ಒಂದು,
ನಾನು ಪಾಕಶಾಸ್ತ್ರ ಪ್ರವೀಣನಲ್ಲ ಇಂದು ಬೆಳಗ್ಗೆ ಉಪಹಾರಕ್ಕೆ ಇಡ್ಲಿ ಸಾಂಬಾರ್ ಸವಿಯನ್ನು ಸವಿದಿದ್ದರಿಂದ ಇದರ ವಿಶೇಷತೆಯ ಬಗ್ಗೆ ಬರೆಯಬೇಕೆನಿಸಿತು, ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೀನಿ ಇಡ್ಲಿ ತಿನ್ನುತ್ತಾ ಈ ಲೇಖನದ ಸವಿಯನ್ನು ಸವಿದು ಆನಂದಿಸಿ.
ನಮಸ್ಕಾರ
ಕಾ.ವೆಂ. ಶ್ರೀನಿವಾಸ ಮೂರ್ತಿ
0 Followers
0 Following