ನಾನು ಆರು ತಿಂಗಳಲ್ಲಿ ಹತ್ತು ಕೆ ಜಿ ಭಾರ ಕಡಿಮೆ ಮಾಡಿಕೊಂಡು ಹಗುರಾದೆ
ಆರು ತಿಂಗಳುಗಳಲ್ಲಿ ಹತ್ತು ಕೆಜಿ ಭಾರ ಇಳಿಸಿಕೊಂಡು ಹಗುರವಾಗಿದ್ದೇನೆ
ಯಾವುದೇ ಭಾರ ಕಡಿಮೆ ಮಾಡುವ ಹರ್ಬಲ್ ಲೈಫ್ ನಂತಹ ಕೃತಕ ಆಹಾರಗಳನ್ನು ತಗೊಂಡಿಲ್ಲ.
ಎರಡು ಮೂರು ವರ್ಷಗಳ ಹಹಿಂದಿನ ತನಕ ಭಾರ ಎಂಬುದು ನನಗೇನೂ ದೊಡ್ಡ ಸಮಸ್ಯೆ ಆಗಿರಲಿಲ್ಲ . ಎರಡು ವರ್ಷಗಳ ಮೊದಲು ನನಗೆ ಕುಳಿತರೆ ಏಳಲು ಕಷ್ಟ ಎನಿಸತೊಡಗಿತು.ಇದು ನನಗೆ ಒಂದಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿತು ಕೂಡ
ನಾನು ಸರ್ಕಾರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡ್ತಿದ್ದೇನೆ.ಅನೇಕ ಶಾಲಾ ಕಾಲೇಜುಗಳಲ್ಲಿ ಶೌಚಾಲಯ ಗಳಿಲ್ಲ ಎಂದು ಕೇಳಿರುವೆ.
ಅದೃಷ್ಟವೋ ಎಂಬಂತೆ ನಮ್ಮ ಕಾಲೇಜಿನಲ್ಲಿ ಶೌಚಾಲಯ ಇದೆ ತಕ್ಕ ಮಟ್ಟಿಗೆ ಶುಚಿಯಾಗಿಯೂ ಇದೆ.ಆದರೆ ಇಲ್ಲಿ ಭಾರತೀಯ ಶೇಲಿಯ ಶೌಚಾಲಯ ಇದೆ.
ಕುಳಿತರೆ ಏಳಲು ಕಷ್ಟ ಆಗುವ ನನಗೆ ಶೌಚಾಲಯ ಒಂದು ಸಮಸ್ಯೆ ಆಯಿತು.ಪ್ರತಿ ಬಾರಿ ಹೋದಾಗಲೂ ಆತಂಕ..ಏಳಲು ಆಗದೇ ಇದ್ದರೆ ಎಂತ ಮಾಡುದು ಎಂದು
ಇದ್ದಕ್ಕಿದ್ದಂತೆ ಏಳಲು ಆಗದೇ ಇರುವ ಸಮಸ್ಯೆ ಯಾಕೆ ಬಂತು ಎಂದು ಗೊತ್ತಾಗಲಿಲ್ಲ.ನಮ್ಮ ಕಾಲೇಜಿನಲ್ಲಿ ನಾವು ಎಂಟು ಮಹಿಳಾ ಸಹೋದ್ಯೋಗಿಳಿದ್ದೇವೆ.ನಾವೆಲ್ಲ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು.ಒಳ್ಳೆಯ ಸ್ನೇಹಿತರಾಗಿಯೂ ಇದ್ದೇವೆ
ಒಂದಿನ ಫ್ರೀ ಸಮಯದಲ್ಲಿ ಮಾತನಾಡುವಾಗ ನನಗೆ ಕುಳಿತರೆ ಏಳಲು ಕಷ್ಟ ಆಗುತ್ತದೆ , ಯಾಕೆ ಎಂದು ಗೊತ್ತಾಗುತ್ತಿಲ್ಲ ಎಂದೆ
ಆಗ ಅವರೆಲ್ಲ ನಗಾಡುತ್ತಾ ನೀವೆಂಥ ದಿನ ಕಳೆದ ಹಾಗೆ ಸಣ್ಣವರಾಗುದಾ? 50 ವರ್ಷದ ನಂತರ ಇದೆಲ್ಲ ಸಾಮಾನ್ಯ.ನಮಗೂ ಕುಳಿತಲ್ಲಿಂದ ಏಳಲು ಕಷ್ಟ ಆಗುತ್ತದೆ ಎಂದಿದ್ದರು
ನನಗೆ ಮಾತ್ರ ಇದು ದೊಡ್ಡ ಸಮಸ್ಯೆ ಆಯಿತು.ಜೊತೆಗೆ ಕಾಲು ನೋವು ಕೂಡ ಶುರುವಾಯಿತು.
ನಾನು ಊರಿಗೆ ಹೋಗಿದ್ದಾಗ ನನ್ನ ಅಜ್ಜನ ಮನೆ ಸಮೀಪದ ನಾವು ತುಂಬಾ ನಂಬುವ ಪೊಳ್ಳಕಜೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ನನ್ನ ಸ್ನೇಹಿತೆ ಜೊತೆಗೆ ಹೋದೆ
ಇಲ್ಲಿ ನನಗೆ ದೇವರಿಗೆ ನಮಸ್ಕಾರ ಮಾಡಿ ಏಳಲು ಬಹಳ ಕಷ್ಟ ಆಯಿತು.ಆಗ ಸ್ನೇಹಿತೆ ಸಹಾಯ ಮಾಡಿದರು
ಆ ದಿನ ಪೊಳ್ಳಕಜೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ನಮ್ಮ ಊರಿನ ವೈದ್ಯರಾದ ಡಾ ಎಸ್ ಎನ್ ಭಟ್ ಅವರು ಬಂದಿದ್ದರು.
ಏಳಲು ಆಗದೆ ಒದ್ದಾಡಿದ ನನ್ನನ್ನು ಗಮನಿಸಿದ ಅವರು ಭಾರ ಕಡಿಮೆ ಮಾಡಿಕೊಳ್ಳಿ.ಕಾಲು ನೋವು ಮತ್ತು ಏಳಲು ಆಗದ ಸಮಸ್ಯೆ ಪರಿಹಾರ ಆಗುತ್ತದೆ ಎಂದರು .
ನಾನು ಚಿಕ್ಕವಳಿದ್ದಾಗ ಸಣ್ಣಕೆ ಇದ್ದೆ. ಸೊಣಕಲು ಕಡ್ಡಿಯಂತೆ ಇದ್ಮಾದೆ . ಸುಮಾರು ಹೈಸ್ಕೂಲಿಗೆ ಬರುವಷ್ಟರಲ್ಲಿ ಸೊಣಕಲು ಕಡ್ಡಿಯಂತೆ ಇದ್ದವಳು ಮೈ ಕೈ ತುಂಬಿಕೊಂಡಿದ್ದೆ.ಆದರೂ ದಪ್ಪ ಎನ್ನುವಷ್ಟು ಇರಲಿಲ್ಲ..
ಮದುವೆ ಆಗಿ ನಾಲ್ಕು ವರ್ಷ ಕೂಡ ಹಾಗೆಯೇ ಇದ್ದೆ ಭಾರ ಹೆಚ್ಚಾಗಿರಲಿಲ್ಲ
ಮಗನ ಬಸುರಿ ಆಗಿದ್ದಾಗ ನನಗೆ 35ನೇ ದಿವಸದಿಂದ ಎಂಟು ತಿಂಗಳು ಪೂರ್ತಿ ಆಗುವ ತನಕ ೈ ದ್ಯಕೀಯ ಕಾರಣಗಳಿಂದ ಬೆಡ್ ರೆಸ್ಟ್ ಮಾಡಬೇಕಾಗಿ ಬಂತು.ಜೊತೆಗೆ ಬಸುರಿಯಾಗಿದ್ದಾಗ ವಿಪರೀತ ತಿನ್ನುವ ಚಪಲ ಉಂಟಾಗಿತ್ತು.ಬಟ್ಟಲು ತುಂಬಾ ಅನ್ನ ಹಾಕಿಕೊಂಡರೂ ಸಾಲದು ಇನ್ನೂ ಬೇಕು ಅನ್ನಿಸುತ್ತಾ ಇತ್ತು.ಹಾಗಾಗಿ ಮಿತಿ ಮೀರಿ ತಿಂದಿದ್ದೆ ಕೂಡ.ಇದರ ಪರಿಣಾಮವಾಗಿ ಭಾರ ಬಿದ್ದು ದಪ್ಪ ಆದೆ.ನಂತರ ಸಿಸೇರಿಯನ್ ಕೂಡ ಆಯಿತು.ಹಾಗಾಗಿ ಬಾಣಂತನದ ಮಾವ ಪಥ್ಯವನ್ನು ಕೂಡ ಪಾಲಿಸಲಿಲ್ಲ
ಇದರಿಂದಾಗಿ ಪ್ಸವದ ನಂತರ ಕೂಡ ಭಾರ ಕಡಿಮೆ ಆಗಿರಲಿಲ್ಲ
ಆದರೆ ಭಾರದಿಂದ ನನಗೆ ಅಂತಹ ದೊಡ್ಡ ಸಮಸ್ಯೆ ಏನೂ ಆಗಿರಲಿಲ್ಲ.ನಾನೆಂಥ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಇದೆಯ ಸಣ್ಣಗಾಗಿ ಎಂದು ಭಾರವನ್ನು ಉಪೇಕ್ಷೆ ಮಾಡಿದ್ದೆ
ಈಗ ಕುಳಿತರೆ ಏಳಲುಆಗುವುದಿಲ್ಲ ಎಂಬ ಸಮಸ್ಯೆ ಜೊತೆಗೆ ತೀವ್ರ ಕಾಲು ನೋವು ಕಾಡಿದ ಕಾರಣ ಡಾ.ಎಸ್ ಎನ್ ಭಟ್ ಅವರ ಸಲಹೆಯಂತೆ ಭಾರ ಕಳೆದುಕೊಂಡು ಸಣ್ಣಗಾಗುವುದು ಅನಿವಾರ್ಯ ಆಯಿತು
ಹೇಗೆ ಸಣ್ಣಗಾಗುವುದು ?
ದಿಢೀರನೆ ಸಣ್ಣಗಾಗಲು ಏನು ಮಾಡುದು ?
ಸುಲಭದ ದಾರಿಗಳಿಗಾಗಿ ಹುಡುಕ ಟ ನಡೆಸಿದೆ.ಜಾಹೀರಾತುಗಳನ್ಯಾನು ನೋಡಿದೆ
ಯಾರೋ ಹೇಳಿದ ಪೌಡರ್ ಅನ್ನು ಸುಮಾರು ಮೂರು ತಿಂಗಳ ಕಾಲ ಸೇವಿಸಿದೆ.ಏನೂ ಪ್ರಯೋಜನ ಆಗಲಿಲ್ಲ
ಊಟದ ಬದಲು ಕಾರ್ನ್ ಫ್ಲೇಕ್ಸ್ ತಿಂದು ನೋಡಿದೆ ಏನೂ ಪ್ರಯೋಜನವಾಗಲಿಲ್ಲ.ಓಟ್ಸ್ ಕುಡಿದು ನೋಡಿದೆ ಅದೂ ಪ್ರಯೋಜನಕ್ಕೆ ಬರಲಿಲ್ಲ
ನಂತರ ಬಹಳ ಖ್ಯಾತ ಹರ್ಬಲ್ ಲೈಫ್ ಯತ್ನ ಮಾಡಿದೆ.ಈ ರೀತಿಯಾಗಿ ಕೃತಕ ಆಹಾರ ಸೇವಿಸಿ ಸಣ್ಣಗಾಗುವುದು ಒಳ್ಳೆಯದಲ್ಲ ಎಂದು ಅನೇಕರು ಹೇಳಿದರು ನನಗೆ
ಆದರೂ ನೋಡೋಣ ಎಂದು ಒಂದು ತಿಂಗಳು ಹರ್ಬಲ್ ಲೈಫ್ ನ ಶೇಕ್ ಮತ್ತು ಪ್ರೋಟೀನ್ ಪೌಡರ್ ಬಳಸಿದೆ
ಇದನ್ನು ತಗೊಂಡ್ರೆ ನನಗೆ ಸದಾ ತೂಕಡಿಕೆಯ ಸಮಸ್ಯೆ ಕಾಡಿತು.ಜೊತೆಗೆ ಗ್ಯಾಸ್ ಉಪದ್ರ ಕಾಣಿಸಿತು.ಒಂದು ತಿಂಗಳಲ್ಲಿ ಸ್ವಲ್ಪ ಭಾರ ಕಡಿಮೆ ಆಗಿ ಸಣ್ಣಗಾಗಿದ್ದೆ
ಆದರೆ ತೂಕಡಿಕೆ ಹಾಗೂ ಗ್ಯಾಸ್ ಸಮಸ್ಯೆ ಯಿಂದಾಗಿ ಅದನ್ನು ನಿಲ್ಲಿಸಿದೆ.
ಹರ್ಬಲ್ ಲೈಫ್ ಸೇವಿಸಿ ಕಳೆದುಕೊಂಡಿದ್ದ ಎರಡು ಕೆಜಿ ಭಾರ ಇದನ್ನು ನಿಲ್ಲಿಸಿದ ಎರಡು ತಿಂಗಳಲ್ಲಿ ರಿಕರ್ ಆಗಿ ಮತ್ತೆ ಎಪ್ಪತ್ತ ಮೂರು ಕೆ ಜಿ ಭಾರಕ್ಕೆ ತಲುಪಿದೆ
ಏನು ಮಾಡುದು ಗೊತ್ತಾಗಲಿಲ್ಲ.ತೂಕ ಇಳಿಕೆಯ ಕುರಿತಾದ ಅನೇಕರ ಬರಹಗಳನ್ನು ಓದಿದೆ.
ಹೀಗೆ ದಿನ ಮುಂದೆ ಹೋಗುತ್ತಿದ್ದಂತೆ ರಕ್ತ ದಲ್ಲಿ ಸಕ್ಕರೆ ಮಟ್ಟವೂ ಹೆಚ್ಚಾಗ ತೊಡಗಿತು.ಸಕ್ಕರೆ ಖಾಯಿಲೆ ಕಾಣಿ ಿತು ತು
ಆಗ ಫಾರ್ಟಿಸ್ ಹಾಸ್ಪಿಟಲ್ ನ ಖ್ಯಾತ ವೈದ್ಯರಾದ ಡಾ ಅನಂತ ಪದ್ಮನಾಭ ಅವರನ್ನು ಸಂಪರ್ಕಿಸಿದೆ.ಸಕ್ಕರೆ ಮಟ್ಟ ಹೆಚ್ಚಾದರೆ ಕಿಡ್ನಿ ಜೊತೆಗೆ ನರ ಮಂಡಲಕ್ಕೆ ಕೂಡ ಹಾನಿಯಾಗುತ್ತದೆ.ಹಾಗಾಗಿ ಸಕ್ಕರೆ ಮಟ್ಟ ನಿಯಂತ್ರಣಕ್ಕಾಗಿ ಒಂದು ಟ್ಯಾಬ್ಲೆಟ್ ತೆಗೆದುಕೊಳ್ಳಲು ಸಲಹೆ ನೀಡಿದರು . ಮತ್ತು ನಿಯಮಿತವಾಗಿ ಚೆಕ್ ಅಪ್ ಮಾಡ್ತಾ ಇರಬೇಕು ಯಾಕೆಂದರೆ ಇದು ಪ್ರೋಗ್ರೆಸಿವ್ ಆಗುತ್ತದೆ ಎಂದಿದ್ದರು ಜೊತೆಗೆ ಭಾರ ಕಡಿಮೆ ಮಾಡಲು ಸಲಹೆ ನೀಡಿದರು
ನಿಯಮಿತವಾಗಿ ವಾಕ್ ಮಾಡಿ ದಿನಕ್ಕೆ ಮುಕ್ಕಾಲು ಗಂಟೆ ಅಥವಾ ಒಂದು ಗಂಟೆ ವಾಕ್ ಮಾಡಿ ಸಿಹಿ ತಿಂಡಿ ಎಣ್ಣೆ ತಿಂಡಿ ಕಡಿಮೆ ಮಾಡಿ ಎಂದು ಸಲಹೆ ನೀಡಿದರು
ಹಾಗ ಗಿ ಭಾರ ಕಡಿಮೆ ಮಾಡಲು ನಾನೇ ಒಂದು ಸೂತ್ರವನ್ನು ಕಂಡುಕೊಂಡೆ
ಆಹಾರ ಸ್ವೀಕಾರದಲ್ಲಿ ಒಂದಷ್ಟು ಶಿಸ್ತನ್ನು ಆಹಾರದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡದ್ದರ ಜೊತೆಗೆ ಪ್ರತಿ ದಿನ ರಾತ್ರಿ ಊಟದ ನಂತರ ಒಂದೂವರೆ ಗಂಟೆ ನಡಿಗೆ .ಇಷ್ಟರಿಂದ ಹತ ತು ಕೆಜಿ ಭಾರ ಇಳಿಕೆಯಾಕಿದೆ.ಇನ್ನೂ ಐದು ಕೆಜಿ ಇಳಿಸಿಕೊಳ್ಳಬೇಕೆಂದಿರುವೆ.ಈಗ 63 ಕೆಜಿ ಭಾರ ಇದ್ದೇನೆ
ನನ್ನ ಭಾರ ಇಳಿಕೆಯ ಕ್ರಮ:
ನಾನು ಸಾಮಾನ್ಯವಾಗಿ ಬೆಳಗ್ಗೆ ಎಂಟೂವರೆ ಹೊತ್ತಿಗೆ ಸ್ವಲ್ಪ ಚಟ್ನಿಯೋ ಸಾಂಬಾರೋ ಹಾಕಿಕೊಂಡು ಮೂರು ದೋಸೆ/ ಚಪಾತಿ/ ಇಡ್ಲಿ ತಿನ್ತಿದ್ದೆ.ನಂತರ ಮಧ್ಯಾಹ್ನ ಬುತ್ತಿಗೂ ಎರಡು ಅಥವಾ ಮೂರು ದೋಸೆ/ ಇಡ್ಲಿ ಚಪಾತಿ ತಗೊಂಡು ಹೋಗಿ ತಿಂತಿದ್ದೆ.ಸಂಜೆ ಕಾಲೇಜಿಂದ ಬಂದು ಅವಲಕ್ಕಿ ಉಸುಲಿ,ಉಪ್ಪಿಟ್ಟು ,ಪುಳಿಯೋಗರೆ ಪಲಾವ್ ಇತ್ಯಾದಿ ಏನಾದರೂ ಬೇರೆ ತಿಂಡಿ ಮಾಡಿ ತಿಂತಿದ್ದೆ.ರಾತ್ರಿ ಮತ್ತೆ ಊಟ ಮಾಡ್ತಿದ್ದೆ.ತಿಂಡಿ ತಿನ್ನುವಾಗ ದೊಡ್ಡ ಲೋಟದಲ್ಲಿ ಗಟ್ಟಿ ಕಾಫಿ ಕುಡಿಯುತ್ತಿದ್ದೆ
ಈಗಲೂ ಆಹಾರದ ಸಮಯ ಹೀಗೆಯೇ ಇದೆ .ಆದರೆ ಮೂರು ದೋಸೆ ಬದಲಿಗೆ ಒಂದು ದೋಸೆ ನಂತರ ಬೇಕಾದಷ್ಟು ಬೇಯಿಸಿದ ತರಕಾರಿ ಅವರೆ ಬೀನ್ಸ್ ಅಲಸಂಡೆ ಕಾಳುಗಳನ್ನು ಹಾಕಿ ತಿನ್ತೇನೆ.ಹಸಿ ಸೇರುವವರು ಹಸಿಯಾಗಿ ತಿನ್ನಬಹುದು.ನನಗೆ ಯಾಕೋ ಹಸಿ ತರಕಾರಿ ರುಚಿಸುವುದಿಲ್ಲ.ಅದಕ್ಕಾಗಿ ಪಲ್ಯ ,ಸಾಂಬಾರ್ ಮಾಡುವಾಗ ಜಾಸ್ತಿ ತರಕಾರಿ ,ಕಾಳುಗಳನ್ನು ಹಾಕಿ ಮಾಡ್ತೇನೆ,ಪ್ರತ್ಯೇಕವಾಗಿ ಬೇಯಿಸುವ ಕೆಲಸ ಉಳಿಸುವ ಸಲುವಾಗಿ.ನಂತರ ಅದನ್ನೆ ಹಾಕ್ಕೊಂಡು ತನ್ನುತ್ತೇನೆ.ಮಧ್ಯಾಹ್ನ ಬುತ್ತಿಗೂ ಅದೇ ರೀತಿ.
ಸಂಜೆ ಬಂದು ತಿನ್ನುವ ತಿಂಡಿಯಲ್ಲೂ ತರಕಾರಿ ಕಾಳುಗಳ ಪ್ರಮಾಣ ಹೆಚ್ಚು ಮಾಡಿದ್ದೇನೆ.ಸ್ವೀಕರಿಸುವ ಆಹಾರದ ಪ್ರಮಾಣ ಕಡಿಮೆ ಮಾಡಿಲ್ಲ.
ರಾತ್ರಿಯ ಊಟದ ಪ್ರಮಾಣ ಕಡಿಮೆ ಮಾಡಿದ್ದೇನೆ ಮತ್ತದನ್ನು ಏಳು ಎಂಟು ಗಂಟೆಯ ಒಳಗೆ ಮಾಡಿದ್ದೇನೆ.
ರಾತ್ರಿ ಊಟದ ನಂತರ ಕಡ್ಡಾಯವಾಗಿ ಮನೆಯಂಗಳದಲ್ಲಿ ಒಂದು ಗಂಟೆ ಸಾಮಾನ್ಯ ನಡಿಗೆ ಮಾಡ್ತೇನೆ.ತೀರ ವೇಗವಾಗಿ ಅಲ್ಲ.ಫೋನಲ್ಲಿಮಾತಾಡಿಕೊಂಡು fb ವಾಟ್ಸಪ್ ನೋಡಿಕೊಂಡು ವಾಕ್ ಮಾಡ್ತೇನೆ.
ಇನ್ನು ಸಾಂಬಾರಿಗೆ ತೆಂಗಿನ ಕಾಯಿ ಹಾಕಿ ಮಾಡುದು ನಮ್ಮ ಸಂಪ್ರದಾಯ.ಹಾಕುವ ತೆಂಗಿನ ಕಾಯಿಯ ಪ್ರಮಾಣವನ್ನು ಅರ್ಧಕ್ಕಿಳಿಸಿ ,ಇನ್ನರ್ಧದ ಬದಲಿಗೆ ಕೋಕೋನಟ್ ಫ್ಲೋರನ್ನು ಬಳಸುತ್ತೇನೆ.ರುಚಿಗೆ ಯಾವುದೇ ಕೊರತೆ ಆಗುವುದಿಲ್ಲ.ಬದಲಿಗೆ ಬೇಕಾದಷ್ಟು ಫೈಬರ್ ದೇಹಕ್ಕೆ ಸಿಗುತ್ತದೆ
ಕಾಫಿ ದೊಡ್ಡ ಲೋಟದ ಬದಲಿಗೆ ಸಣ್ಣ ಲೋಟದಲ್ಲಿ ಕುಡಿಯುತ್ತೇನೆ.ಕಾಫಿ ಮೊಸರಿಗೂ ಸ್ಲಿಮ್ ಮಿಲ್ಕ್ ಬಳಸಿದ್ದೇನೆ ಈ ನಡುವೆ ಯಾವಾಗಾಲಾದರೊಮ್ಮೆ ಬರ್ಗರ್ ,ಫ್ರೈಡ್ ರೈಸ್,ಪನೀರ್ ಬಟರ್ ಮಸಾಲಾ ರೋಟಿ ಕೇಕ್ ,ಸ್ವೀಟ್ ತಿನ್ನುನೆ.ತೀರ ಎಲ್ಲವನ್ನು ಬಿಟ್ಟರೆ ತಿನ್ನಬೇಕೆಂಬ ಅದಮ್ಯ ಆಸೆ ಆಗಬಹುದು.ಹಾಗಾಗಿ ಯಾವಾಗಲಾದರೊಮ್ಮೆ ಇವನ್ನು ತರಿಸಿ ತಿಂದಿದ್ದೇನೆ.
ಹೀಗೆ ಆಹಾರ ಸ್ವೀಕಾರದಲ್ಲಿ ಬದಲಾವಣೆ ಮಾಡಿಕೊಂಡು ಆರು ತಿಂಗಳುಗಳಲ್ಲಿ ಎಪ್ಪತ್ತ ಮೂರರಿಂದ ರಿಂದ ಅರುವತ್ತ ಮೂರು ಕೆಜಿಗೆ ಇಳಿಸಿದ್ದೇನೆ.ಗುಡಾಣ ಹೊಟ್ಟೆ ಸಣ್ಣದಾಗಿದೆ .ಇನ್ನೂ ಐದು ಕೆಜಿ ಇಳಿಸಬೇಕೆಂದಿರುವೆ.ನಂತರ ಅದನ್ನು ಅದೇ ರೀತಿ ಇರುವಂತೆ ಕಾಪಾಡಿಕೊಳ್ಳಬೇಕಿದೆ
ಭಾರ ಕಡಿಮೆ ಆದಾಗ ನನಗೆ ಕುಳಿತಲ್ಲಿಂದ ಏಳಲಾಗದೆ ಇರುವ ಸಮಸ್ಯೆ ಪರಿಹಾರ ಆಗಿದೆ
ಆದರೆ ನೋವಿನ ಸಮಸ್ಯೆ ಮತ್ತೆ ಕೂಡ ಮುಂದುವರಿದಿದ್ದು ಇಡೀ ದೇಹ ಹರಡಿತು
ಇತ್ತೀಚೆಗೆ ಇದು rheumatoid arthritis ಎಂದು ಗೊತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಮಸ್ಯೆ ಕೂಡ ಸುಮಾರಾಗಿ ತಹಬದಿಗೆ ಬಂದಿದೆ
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಂಗಳೂರು