ಕೋವಿ ಶೀಲ್ಡ್ ನ ಹೃದಯಾಘಾತ ಅಥವಾ ಸಾವಿನ ಭಯ ನನಗಿಲ್ಲ
ಯಾಕೆಂದರೆ ನಾವೆಲ್ಲ ಬದುಕುಳಿದಿದ್ದು ಕೂಡ ಕೋವಿ ಶೀಲ್ಡ್ ನಿಂದಲೇ ಎಂಬುದನ್ನು ನಾವು ಮರೆಯಬಾರದು
2021 ರ ಆರಂಭದಲ್ಲಿ ಕೊರೋನ ಎರಡನೇ ಅಲೆ ಅಪ್ಪಳಿಸಿತ್ತು
ಮನೆ ಮನೆಗೆ ಕೊರೋನ ಸೋಂಕು ಹರಡಿತ್ತು . ಒಂದೆಡೆ ಕೊರೋನ ಒಂದು ಸಾಮಾನ್ಯ ವೈರಸ್ ಅದೇನೂ ಮಾಡುವುದಿಲ್ಲ,ಎಲ್ಲ ಮೆಡಿಕಲ್ ಮಾಫಿಯಾ ಎಂದು ಸುದ್ದಿ ಹರಡುತ್ತಾ ಇತ್ತು.ಇದನ್ನು ನಂಬಿದ ಅನೇಕರು ಕೋವಿಡ್ ಸೋಂಕು ತಗುಲಿದಾಗ ಕೂಡ ಟೆಸ್ಟ್ ಮಾಡಿಸದೆ ಮನೆಯಲ್ಲಿಯೇ ಸ್ವಯಂ ವೈದ್ಯ ಮಾಡಿಕೊಂಡರು.ಅದೃಷ್ಟವಶಾತ್ ಅನೇಕರಿಗೆ ದೊಡ್ಡ ಸಮಸ್ಯೆ ಆಗಲಿಲ್ಲ.ಆದರೆ ಅನೇಕರಿಗೆ ಇದು ಜೀವ ಹಾನಿಯನ್ನು ಕೂಡ ಉಂಟು ಮಾಡಿತ್ತು.
ಆರಂಭದಲ್ಲಿ ಚಿಕಿತ್ಸೆ ಪಡೆದವರಲ್ಲಿ ಹೆಚ್ಚು ಕಡಿಮೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಅನೇಕರು ಸಾವನ್ನಪ್ಪಿದ್ದ ಬಗ್ಗೆ ನ್ಯೂಸ್ ನಲ್ಲಿ ನೋಡಿದ್ದೆ
ನನಗೂ ಕೊರೋನ ಸೋಂಕು ತಗುಲಿತ್ತು.ನನಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದು ದೊಡ್ಡ ಸಮಸ್ಯೆ ಏನೂ ಆಗಲಿಲ್ಲ
ಆಗ ಯಾವಾಗ ವ್ಯಾಕ್ಸಿನ್ ಬರುತ್ತದೋ ಎಂದು ಕಾಯುತ್ತಾ ಇದ್ದೆ.
ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಕೊರೋನ ಸಾವುಗಳು ಕಡಿಮೆ ಆಯಿತು,ಕೊರೋನ ಸೋಂಕು ಕೂಡ ದೂರವಾಯಿತು
ನಾವೆಲ್ಲ ಕೋವಿ ಶೀಲ್ಡ್ ಪಡೆದು ಮೂರು ವರ್ಷಗಳು ಕಳೆದವು.
ಕೋವಿ ಶೀಲ್ಡ್ ಪಡೆಯುವ ಮೊದಲೇ ಕೊರೋನ ಸೋಂಕು ಹರಡುತ್ತಿರುವ ಸಮಯದಲ್ಲಿ ಅಲ್ಲಲ್ಲಿ ಹೃದಯಾಘಾತದಂತಹ ಅಸಹಜ ಅಕಾಲಿಕ ಸಾವುಗಳ ಸುದ್ದಿ ಕೇಳುತ್ತಲೇ ಇತ್ತು.
ಅಲ್ಲದೆ ಕೊರೋನ ಸೋಂಕು ತಗುಲಿದವರಲ್ಲಿ ಅನೇಕರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿತ್ತು.ನನಗೂ ಈ ಸಮಸ್ಯೆ ಕಾಡಿತ್ತು.
ವ್ಯಾಕ್ಸಿನ್ ಎಂದರೆ ಅದೇ ರೋಗಾಣು ವನ್ನು ದುರ್ಬಲ ಗೊಳಿಸಿ ನೀಡುದು..
ಕೊರೋನ ವ್ಯಾಕ್ಸಿನ್ ಕೂಡ ಅಷ್ಟೇ
ಕೊರೋನ ಸೋಂಕು ತಗುಲಿದವರಲ್ಲಿ ನನ್ನಂತೆ ಕೆಲವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಬಂದಂತೆ ವ್ಯಾಕ್ಸಿನ್ ತೆಗೆದುಕೊಂಡವರಿಗೂ ಬಂದಿರಬಹುದು
ಕೋವಿ ಶೀಲ್ಡ್ ತಯಾರಿಕಾ ಸಂಸ್ಥೆ ಒಂದು ಲಕ್ಷ ಜನರಲ್ಲಿ ಇಬ್ಬರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ.ಇದನ್ನು ಆರಂಭಿಕ ಹಂತದಲ್ಲಿ ಗುರುತಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದು.
ಕೋವಿ ಶೀಲ್ಡ್ ತೆಗೆದುಕೊಂಡ ಒಂದೆರಡು ತಿಂಗಳಲ್ಲಿ ಈ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು ಈಗ ಮೂರು ವರ್ಷಗಳ ನಂತರ ಅದು ಕಾಡಬಹುದು ಎಂದು ನನಗನಿಸುತ್ತಿಲ್ಲ.ಒಂದೊಮ್ಮೆ ಕಾಡಿದರೂ ಲಕ್ಷದಲ್ಲಿ ಇಬ್ಬರಿಗೆ ಪ್ರಾಣಾಪಾಯ ಬರಬಹುದು.ಉಳಿದ ತೊಂಬತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೆಂಟು ಜನರನ್ನು ಕೋವಿ ಶೀಲ್ಡ್ ಕೊರೋನ ಮಹಾ ಮಾರಿಯಿಂದ ಕಾಪಾಡಿದೆ
ಹಾಗಾಗಿ ಕೋವಿ ಶೀಲ್ಡ್ ತಗೊಂಡದ್ದರ ಭಯ ನನಗಿಲ್ಲ
ಹೃದಯಾಘಾತಕ್ಕೆ ಕೋವಿ ಶೀಲ್ಡ್ ತಗೊಂಡಿರಬೇಕೆಂದಿಲ್ಲ..
ಯಮ ರಾಜನಿಗೆ ಕೊಂಡೊಯ್ಯಲು ಕಾರಣ ಬೇಕಿಲ್ಲ.ಯಾವುದೇ ಕಾರಣ ಇಲ್ಲದೆಯೂ ಕ್ಯಾನ್ಸರ್ ನಂತಹ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸಾವು ಕೂಡ ಅಷ್ಟೇ
ಕೋವಿ ಶೀಲ್ಡ್ ಬರುವ ಮೊಧಲೂ ಹೃದಯಾಘಾತ ಸಂಭವಿಸುತ್ತಾ ಇತ್ತು,ನನ್ನ ತಾಯಿಯವರಿಗೆ ,ಚಿಕ್ಕಪ್ಪನಿಗೆ ಅತ್ತೆಯವರಿಗೆ ಕೋವಿ ಶೀಲ್ಡ್ ಬರುವ ಎರಡು ಮೂರು ವರ್ಷಗಳ ಮೊದಲೇ ಹೃದಯಾಘಾತ ಆಗಿತ್ತು.
ಹಾಗೂ ಕೋವಿ ಶೀಲ್ಡ್ ಪಡೆದದ್ದರಿಂದಾಗಿ ಹೃದಯಾಘಾತ ಆಗುವುದಾದರೆ ಏನೂ ಮಾಡಲು ಸಾಧ್ಯವಿಲ್ಲ.ಇರುವಷ್ಟು ದಿನ ನಮ್ಮದೆಂದು ಖುಷಿ ಯಾಗಿರುವೆ ಅಷ್ಟೇ
ಇನ್ನು ವೈಯಕ್ತಿಕವಾಗಿ ನನ್ನ ಬಗ್ಗೆ ಹೇಳುವುದಾದರೆ ನನಗೆ ಸಾವಿನ ಭಯವಿಲ್ಲ.ಜವಾಬ್ದಾರಿಯೂ ಮುಗಿದಿದೆ.ಮಗ ತನ್ನ ಕಾಲ ಮೇಲೆ ನಿಲ್ಲುವಷ್ಟು ಶಕ್ತನಾಗಿದ್ದಾನೆ
ಮನೆ , ಉದ್ಯೋಗ, ಪುಸ್ತಕ ಪ್ರಶಸ್ತಿ ಪುರಸ್ಕಾರಗಳು ಸೇರಿದಂತೆ ಬದುಕಿನಲ್ಲಿ ಅನುಭವಿಸಬೇಕೆದುಕೊಂಡ ಎಲ್ಲ ಸಂಭ್ರಮಗಳನ್ನೂ ಅನುಭವಿಸಿದ್ದೇನೆ
ಹಾಗಾಗಿ ಒಂದೊಮ್ಮೆ ಯಮರಾಜ ಈಗಲೇ ಬಂದರೂ ಅವನನ್ನು ನಾನು ಸ್ವಾಗತಿಸುವೆ.ಇಷ್ಟು ಸಮಯ ಭೂಮಿಯಲ್ಲಿ ನನ್ನನ್ನು ಇರಲು ಬಿಟ್ಟದ್ದಕ್ಕಾಗಿ ಅವನಿಗೊಂದು ಥ್ಯಾಂಕ್ಸ್ ಹೇಳಿ ತಿರುಗಿ ನೋಡದೆ ಅವನೊಡನೆ ನಡೆವೆ..
ನನ್ನ ಇಪ್ಪತ್ತು ವರ್ಷಗಳ ಅಧ್ಯಯನ ಆಧಾರಿತ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಪ್ರಕಟಣೆ ಆಗುವಷ್ಟು ಸಮಯಾವಕಾಶ
ನೀಡಿದ್ದಕ್ಕೆ ,ಮನೆ ಕಟ್ಟಿ ಒಕ್ಕಲಾಗುವ ಸಂಭ್ರಮ ವನ್ನು ಅನುಭವಿಸಲು ಬಿಟ್ಟದ್ದಕ್ಕೆ,ಮಗ ಕಾಲ ಮೇಲೆ ನಿಲ್ಲುವಷ್ಟು ಸಮಯಾವಕಾಶ ನೀಡಿದ್ದಕ್ಕೆ ಅರ್ಧ ಶತಕ ದಾಟಿದ ನ ತರವೂ ಈ ಭೂಮಿಯಲ್ಲಿ ಇರಗೊಟ್ಟಿದ್ದಕ್ಕೆ ಅವನಿಗೆ ಂದು ಥ್ಯಾಂಕ್ಸ್
ಯಾರೂ ಕೂಡ ಈ ಭೂಮಿಯಲ್ಲಿ ಶಾಶ್ವತ ಅಲ್ಲ.ಒಂದಲ್ಲ ಒಂದು ದಿನ ಸಾಯುತ್ತೇವೆ..ಹೇಗೆ ಯಾವ ಗ ಎಂದು ಯಾರಿಗೂ ಗೊತ್ತಿಲ್ಲ..
ಹಾಗಿರುವಾಗ ಅದಕ್ಕೆ ಭಯ ಪಡುದು ಯಾಕೆ? ಎಲ್ಲರಂತೆ ನಾವು ಎಂದುಕೊಂಡು ಇರುವಷ್ಟು ಸಮಯ ಸಂತಸದಿಂದ ಬದುಕೋಣ
ಡಾ.ಲಕ್ಷ್ಮೀ ಜಿ ಪ್ರಸಾದ
0 Followers
0 Following