ನನಗಂತೂ ಕೆಲವು ಪುಸ್ತಕಗಳ ಮುಖಪುಟದತ್ತವೇ ಸೆಳೆತ...

೨೦೨೪ ರಲ್ಲಿ ಓದಿದ (ಕೇಳಿದ) ಹದಿನಾರನೇ ಪುಸ್ತಕ!

ProfileImg
25 Jul '24
1 min read


image

ಹೆಸರು: Yellowface

ಲೇಖಕರು: Rebecca F Kuang

ಆಂಗ್ಲ ಭಾಷೆಯಲ್ಲಿ "Don't Judge a book by its cover" ಎನ್ನುವ ಪ್ರಸಿದ್ಧ ಗಾದೆಮಾತೇ ಇದೆ. ಆದರೆ ನನಗಂತೂ ಕೆಲವು ಪುಸ್ತಕಗಳ ಮುಖಪುಟದತ್ತವೇ ಸೆಳೆತ...

ಈ ಪುಸ್ತಕವೂ ಅಂಥದ್ದೇ. ಪುಸ್ತಕ ಬಿಡುಗಡೆಯಾಗಿ ಪ್ರಸಿದ್ಧಿ ಪಡೆದಾಗಿನಿಂದಲೂ ಬಹಳ ಆಕರ್ಷಿಸಿಬಿಟ್ಟಿತ್ತು ಈ ಮುಖಪುಟ. ಕಥೆಯೂ ವಿಭಿನ್ನವಾಗಿಯೇ ಇದೆಯೆಂದು ತಿಳಿದುಬಂದಿತ್ತು.

Storytel ಎನ್ನುವ audiobook platform ಇದೆ. ಅಲ್ಲಿ ಚಂದಾದಾರರಾದರೆ ನಾವು ಭಾರತದ ಎಲ್ಲ ಪ್ರಮುಖ ಭಾಷೆಗಳ ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಕೇಳಬಹುದು. ಹೀಗೆ ನಾನು ಈ ಪುಸ್ತಕವನ್ನು ಕೇಳಿದ್ದು.

ಅಥೀನಾ ಎನ್ನುವ ಚೈನೀಸ್ ಅಮೆರಿಕನ್ ಪ್ರಜೆಯ ಪ್ರಥಮ ಪುಸ್ತಕವೇ ಬಹಳ ಪ್ರಸಿದ್ಧಿಯನ್ನು ಪಡೆದು ಆಕೆ ಬಲು ಪ್ರಸಿದ್ಧ ಲೇಖಕಿಯರ ಸಾಲಿಗೆ ಸೇರಿರುತ್ತಾಳೆ. ಆಕೆಯ ಗೆಳತಿ: ಅಮೇರಿಕೆಯವಳೇ ಆದ, ಲೇಖಕಿಯಾಗಿ ಪ್ರಸಿದ್ಧಿ ಪಡೆಯಲು ಹಂಬಲಿಸುತ್ತಿರುವ ಜೂನ್ ಹೇವರ್ಡ್. ಅಥೀನಾ ಅನಿರೀಕ್ಷಿತವಾಗಿ ಸಾವನ್ನಪ್ಪುವಳು. ಜೂನ್ ಅದಕ್ಕೆ ಸಾಕ್ಷಿಯಾಗುವಳು.

ಆಗಲೇ ಆಕೆಗೆ ಹೊಳೆಯುವುದೊಂದು ಪರಿಕಲ್ಪನೆ. "ಪ್ರಥಮ ವಿಶ್ವಯುದ್ಧದ ಸಂದರ್ಭದಲ್ಲಿ ಚೀನಾದ ಕೆಲಸಗಾರರು" ವಿಷಯದ ಮೇಲೆ ಅಥೀನಾ ಅದಾಗ ಬರೆದು ಮುಗಿಸಿದ್ದ ಕಾದಂಬರಿಯ ಮೊದಲ ಹಸ್ತಪ್ರತಿಯನ್ನು ಕದ್ದು, ತಿದ್ದುಪಡಿ ತನ್ನ ಸ್ವಂತದ್ದಾಗಿ ಮಾಡಿಕೊಳ್ಳಲು ಹೊರಡುತ್ತಾಳೆ. ಅದರಿಂದ ಒಂದೊಮ್ಮೆ ತಾನು ಅನುಭವಿಸಲು ಹವಣಿಸುತ್ತಿದ್ದುದನ್ನೆಲ್ಲ ಪಡೆಯುತ್ತಾಳೆ. ತಾನು ಹಾಗೆ ಮಾಡುವುದಕ್ಕೆ ಹಲವು ಸಮರ್ಥನೆಗಳನ್ನೂ ಕೊಟ್ಟುಕೊಳ್ಳುತ್ತಾಳೆ! ಎಷ್ಟರ ಮಟ್ಟಿಗೆ ಎಂದರೆ ನಮಗೆ ಆಕೆ ಮಾಡಿದ್ದು ಸಂಪೂರ್ಣವಾಗಿ ಸರಿ ಎನಿಸುವಷ್ಟು!

ಪ್ರತಿ ಹೆಜ್ಜೆಯಲ್ಲಿಯೂ ಹಲವು ಸಮಸ್ಯೆಗಳು ತಲೆದೋರುತ್ತವೆ. ಆಯಿತು, ಇನ್ನು ಮುಗಿಯಿತು ಇವಳ ಕಥೆ ಎಂದು ನಮಗನಿಸುವ ಹೊತ್ತಲ್ಲಿ ಪಾರಾಗುವ ಉಪಾಯ ಗೋಚರಿಸುತ್ತದೆ ಅವಳಿಗೆ! ನಮ್ಮ ಜೀವನದಲ್ಲಿಯೂ ಹೀಗೆ ಅಲ್ಲವೇ, ಕಷ್ಟ ಬಂದಾಗ ಕುಗ್ಗಿ ಕುಳಿತುಕೊಳ್ಳುವುದಲ್ಲ, ಎಲ್ಲದಕ್ಕೂ ಒಂದು ಉಪಾಯ ಇದ್ದೇ ಇರುತ್ತದೆ. ಅದನ್ನು ಹುಡುಕಿ ದಿಟ್ಟತನದಿಂದ ಸೆಟೆದು ನಿಲ್ಲಬೇಕು ಅನಿಸಿತು.

ಇದು ಪುಸ್ತಕ ಪ್ರಪಂಚದ್ದೇ ಕಥೆ. ಲೇಖಕರು ತಮ್ಮ ಕಥೆಯ ವಸ್ತುವನ್ನು ಹುಡುಕುವ ಕಥೆ. ಲೇಖಕರು ಮತ್ತು ಪ್ರಕಾಶಕರ ಗೋಳಿನ ಕಥೆ. ಲೇಖಕರು ತಮ್ಮ ಪುಸ್ತಕಗಳನ್ನು ಹೊರತರಲು ಪಡುವ ಬವಣೆಗಳ ಕಥೆ.

ಇದು ೨೦೨೪ ರಲ್ಲಿ ನಾನು ಓದಿದ (ಕೇಳಿದ) ಹದಿನಾರನೇ ಪುಸ್ತಕ!

  • ಅಂಕಿತಾ ಎನ್

25-07-2024

Category:Books



ProfileImg

Written by Ankitha N