ನನ್ನದೇ ಕವಿತೆಯ
ಪದಪುಂಜದಲಿ
ಬಂಧಿಯಾದ ನನ್ನೊಲವೇ
ನಂಜಾಯಿತೇ ನಿನಗೆ?
ನಾನೇ'ನಲ್ಲ ನಿನಗೆ?
ಕಳಿಚಿ ಬಿಡಲೇ
ಮೌನ ಕಟಕಟೆಯ ಒಡೆದು
ಸರಳುಗಳ ಉರುಳ ಸರಿಸಿ
ಆವೇಶದಲ್ಲಿ ಕೂಡಿದ್ದು ಬಿಡಲೇ
ಗರಳನ್ನೊಮ್ಮೆ
ಅತಿಸರಳ ಅನಿಸಿದರೆ
ನಾನೇ'ನಲ್ಲ ನಿನಗೆ?
ರತಿ ನಿನ್ಹೊತ್ತು ಮೆರೆಸಲು
ಸಾರಥಿ ಕಾಲಸಂಧಾನವಿಲ್ಲದ
ವಿರಥಿ ನಾನು
ಮತಿ ವಿರಳ ಅನಿಸಿದರೆ
ಕ್ಷಮೆಯಿರಲಿ
ವಿರತಿ ಬಯಸದಿರು
ನಾನೇ'ನಲ್ಲ ನಿನಗೆ……