ರಾತ್ರಿ ಒಂಬತ್ತರ ಸಮಯ ಪೂರ್ಣಿಮೆ ಆಗಸದಲ್ಲಿ ಮೋಡದ ಮಧ್ಯೆ ಇರುವ ಆ ಚಂದಚೋರ ಮುದ್ದು ಮುದ್ದಾಗಿ ಬೆಳಗುತ್ತಿದ್ದಾನೆ ಆದರೆ ನನ್ನ ಬಾಳಿನಲ್ಲಿ ಬೆಳಕು ಎಂಬುದು ನನ್ನ ಭ್ರಮೆಯೇ ಸರಿ..
ಅಪ್ಪ- ಅಮ್ಮ ಇದ್ದು ಏನು ಉಪಯೋಗ ನನ್ನ ಇರುವಿಕೆಯ ಬಗ್ಗೆ ಯೋಚನೆಯೇ ಇಲ್ಲ ಅವರಿಗೆ ಯಾವಾಗಲೂ ಒಂದೇ ಚಿಂತೆ ದುಡ್ಡು... ಜಗತ್ತಿನಲ್ಲಿ ದುಡ್ಡಿಗಿರುವ ಬೆಲೆ ಮನುಷ್ಯರಿಗೆ ಇದ್ದರೆ ಎಷ್ಟು ಚೆಂದವೆನ್ನಿಸುತ್ತಾದೆ... ಆದರೆ ಅದು ಸಾಧ್ಯವೇ..? ನನಗೆ ಅಂತ ಇದ್ದಿದ್ದು ನನ್ನ ಅಜ್ಜಿ ಅಪ್ಪನ ಅಮ್ಮ ಅವರು ಸಹ ನನ್ನನ್ನು ಬಿಟ್ಟು ಹೋಗಿ ವರ್ಷಗಳೆ ಉರುಳಿತು.
ಮದುವೆ ಎಂಬ ಪದದ ಬಗ್ಗೆ ಎಷ್ಟು ಕನಸನ್ನು ಹೆಣೆದಿದ್ದೆ ನಾನು ಅಜ್ಜಿ ಹೇಳುವ ಕನಸಿನಲ್ಲಿ ನಾನೇ ರಾಜಕುಮಾರಿ ಎಂದು ಹಿಗ್ಗುತ್ತಿದೆ ನನ್ನ ರಾಜಕುಮಾರನ ಬಗ್ಗೆ ಕನಸು ಕಂಡಿದ್ದೆ ನನ್ನ ತಪ್ಪ..! ನಾನದರೂ ದುರಾಸೆ ಪಟ್ಟವಲಲ್ಲ ಎಂದಿಗೂ ಅತಿಯಾಗಿ ಶ್ರೀಮಂತಿಕೆ ಬಯಸಿದವಳು ಅಲ್ಲ ನಾನು ಶುದ್ಧ ಮನಸ್ಸಿನಿಂದ ಪ್ರೀತಿಸುವ ಒಂದು ಪುಟ್ಟ ಹೃದಯ ಅಷ್ಟನ್ನು ಪಡೆಯುವ ಯೋಗ್ಯತೆ ಇಲ್ಲವಾಯಿತೆ ನನಗೆ ನಾ ಕಣೇ..
ನಾಳೆ ಮುಂಜಾನೆ ನನ್ನ ಮದುವೆ ಅದು ಸಹ ನನಗೆ ಪರಿಚಯವೇ ಇಲ್ಲದವನೊಂದಿಗೆ...!
ಗಟ್ಟಿಮೇಲ ಶಬ್ದ ಕೇಳಿದೊಡನೆ ನನ್ನ ಕುತ್ತಿಗೆಗೆ ಬಿತ್ತು ಅವರ ಹೆಸರಿನ ಮಾಂಗಲ್ಯ ಮಿಸ್ ನಿಂದ ಮಿಸ್ಸೆಸ್ ಆದೆ...
ಇಷ್ಟವಿಲ್ಲದ ಮದುವೆ ಅವನ ಮೊಗ ನೋಡಿ ನನಗೇನೂ...
ಎಂದು ವಲ್ಲದ ಮನಸ್ಸಿನಿಂದಲೇ ಅವನೊಡನೆ ಸಪ್ತಪದಿ ತುಳಿದೆ.
ಮುಂದೆ ಹೆಣ್ಣು ಒಪ್ಪಿಸುವ ಶಾಸ್ತ್ರವೂ ಕೂಡ ಮುಗಿಯಿತು, ನನ್ನ ಕಣ್ಣಲ್ಲಿ ಒಂದು ಹನಿಯೂ ನೀರು ಬರಲಿಲ್ಲ
ಸುಮ್ಮನೆ ಕಾರಿನಲ್ಲಿ ಕುಳಿತು ಸೀಟಿಗೆ ಒರಗಿದೆ ಮತ್ತೆ ಎದ್ದು ನೋಡಿದರೆ ಅವರ ಭುಜದ ಮೇಲೆ ತಲೆ ಇಟ್ಟು ಮಲಗಿದ್ದು ಸ್ವಲ್ಪ ಮುಜುಗರವೆನಿಸಿ ಅವರತ್ತ ನೋಡದೇ ಕಿಟಕಿ ಕಡೆ ಮುಖ ಮಾಡಿದೆ.
ಒಂದೆರಡು ಗಂಟೆಗಳ ಪ್ರಯಾಣದ ನಂತರ ಕಾರ್ ಬಂದು ನಿಂತಿದ್ದು ಒಂದು ಸುಂದರವಾದ ಬಂಗಲೆಯ ಮುಂದೆ ಒಂದಂತು ತಿಳಿಯಿತು ಇವರು ಶ್ರೀಮಂತರು ಅದಕ್ಕಾಗಿಯೇ ಆ ನನ್ನ ಅಮ್ಮ ಏನ್ನಿಸಿಕೊಂಡ ಚಿಕ್ಕಮ್ಮ ನನ್ನನ್ನು ಮಾರಿದಳೆ..
ಹೌದು ನಿಜ ಅವಳು ನನ್ನ ತಂದೆಯ ಎರಡನೇ ಹೆಂಡತಿ ಆಸ್ತಿಯ ಆಸೆಗೆ ನನ್ನನ್ನು ಅವನ ತಮ್ಮ ನಿಗೆ ಮದುವೆ ಮಾಡಬೇಕು ಎಂದು ಸಂಚು ರೂಪಿಸಿದ್ದಳು.
ಆದರೆ ಬ್ರೊಕರ್ ಯಾವಗ ಹುಡುಗನ ಮನೆಯವರು ಸ್ವಲ್ಪ ಸೀರಿವಂತರು ಮತ್ತು ವಧುದಕ್ಷಿಣೆ ಕೊಡುತ್ತಾರೆ ಎಂದು ಹೇಳಿದರೊ ಅಂದೆ ತನ್ನ ನಿರ್ಧಾರವನ್ನು ಬದಲಿಸಿ ಒಂದು ವಾರದೊಳಗೆ ನನ್ನನ್ನು ಇಲ್ಲಿಗೆ ಮದುವೆ ಮಾಡಿಬಿಟ್ಟಳು.
ನನ್ನ ಎಲ್ಲ ಆಲೋಚನೆಗಳನ್ನು ನಿಲ್ಲಿಸಿ ಬಲಗಾಲಿಟ್ಟು ಮನೆಯೊಳಗೆ ಪ್ರವೇಶಿಸಿದೆ.
ದೇವರಿಗೆ ಆರತಿ ಮಾಡಮ್ಮ ಎಂಬ ಧ್ವನಿ ಬಂದ ಕಡೆ ತಿರುಗಿ ನೋಡಿದೆ ಐವತ್ತು ಆಸು ಪಾಸು ವಯಸ್ಸಿನ ಹೆಂಗಸು ನಿಂತಿದ್ದರು, ನನ್ನ ಗೊಂದಲವನ್ನು ಅರಿತವರು ತಾವೇ ತಮ್ಮ ಪರಿಚಯ ಮಾಡಿಕೊಟ್ಟರು ಅಡುಗೆ ಕೆಲಸದವರು ಎಂದು ಅದನ್ನು ಕೇಳಿದ ನನ್ನ ವರು
ಬೈದರೂ ಎಷ್ಟು ಸಲ ಹೇಳುವುದು ರಂಗಮ್ಮ ನೀವು ಈ ಮನೆಯವರೆ ಸರಿನಾ ಎಂದು.. ಅವರ ಧ್ವನಿಯನ್ನು ಮೊದಲ ಬಾರಿಗೆ ಕೇಳಿದ್ದು ಅವರನ್ನು ಗಮನಿಸಿದೆ ಒಂದು ಕ್ಷಣ ಸ್ತಭ್ದಳಾದೆ ಅವರ ಗುಳಿಕೆನ್ನೆಗೆ
ತಪ್ಪ್ ಆಯ್ತು ಸಾತ್ವಿಕ್ ಎಂದರು.. ಕಮಲಮ್ಮ
ಸಾತ್ವಿಕ್ ಮನಸ್ಸಲ್ಲೆ ಒಂದು ಬಾರಿ ಹೇಳಿಕೊಂಡೆ ಮನಸ್ಸಿಗೆ ಹಿತ ಯಾಕೋ ಗೊತ್ತಿಲ್ಲ...
ದೇವರಿಗೆ ದೀಪವಾಚ್ಚಿ ಇಬ್ಬರಿಗೂ ಆರತಿ ಕೊಟ್ಟೆ... ರಂಗಮ್ಮ ವಿಶ್ರಾಂತಿ ಪಡೆಯಲು ಕೊಣೆ ತೋರಿಸಿದರು..
ಸ್ವಲ್ಪ ಕಾಲ ಮಲಗಿದೆ.. ಬಾಗಿಲ ಸದ್ದಾಯಿತ್ತು ಏನು ಎಂದು ನೋಡಿದರೆ ಸಾತ್ವಿಕ್ ಮುಜುಗರದಿಂದ ಎದ್ದು ಕೂತೆ..
ಪರವಾಗಿಲ್ಲ ಅನಿಕಾ..
ನನ್ನ ಹೆಸರನ್ನು ಅವರ ಬಾಯಿಂದ ಕೇಳಿ ನಾನೇಕೆ ಖುಷಿ ಪಡಬೇಕು ಇಲ್ಲ ನಾನು ಏನನ್ನೂ ಬಯಸುವುದಿಲ್ಲ ಎಂದು ಮನಸ್ಸಿಗೆ ಬಲವಂತವಾಗಿ ಕಡಿವಾಣ ಹಾಕಿ…
ಅವರ ಮಾತಿಗೆ ಸುಮ್ಮನೆ ತಲೆಹಾಡಿಸಿದೆ.
ಅವರೇ ಮಾತನ್ನು ಶುರು ಮಾಡಿದರು ಅನಿಕಾ ನಾನು ಮಿಲಿಟರಿ ಯಲ್ಲಿ ಮೇಜರ್ ಎಂದು ನಿಲ್ಲಿಸಿದರು, ಮತ್ತೆ ಮುಂದುವರೆಸಿ ನನ್ನ ಜೀವದ ಮೇಲೆ ನನಗೆ ನಂಬಿಕೆ ಇಲ್ಲ ಯಾವಗಾದರೂ ಸಹ ನನ್ನ ದೇಹ ಶತ್ರು ದೇಶಗಳ ಗುಂಡಿಗೆ ಬಲಿಯಾಗಬಹುದು ಆದರೆ ನೀನು ಏನು ಯೋಚಿಸಬೇಡ ನನ್ನ ಆಸ್ತಿ ಎಲ್ಲವನ್ನೂ ನಿನ್ನ ಹೆಸರಿಗೆ ವರ್ಗಾವಣೆ ಮಾಡುವೆ ನೀನು ನಿಶ್ಚಿಂತೆ ಇಂದ ಮತ್ತೊಂದು ಮದುವೆ ಆಗಬಹುದು ಬೇಕಾದರೆ ಎಂದು ಹೇಳಿ ರೂಮಿನಿಂದ ಹೊರಟು ಬಿಟ್ಟರು..
ಮನಸ್ಸಿನಲ್ಲಿ ಅವರು ದೇಶ ಕಾಯುವ ಯೋಧ ಎಂದು ಹೆಮ್ಮೆ ಪಡಬೇಕೊ ಇಲ್ಲ ಅವರ ಒಂದೊಂದು ಮಾತನ್ನು ನೆನೆದು ಅಳಬೇಕೋ ತಿಳಿಯುತ್ತಿಲ್ಲ ಇದೆಂತಹ ಸ್ಥಿತಿ ನನ್ನದು ಇವರು ನನ್ನನ್ನು ದುಡ್ಡಿಗೆ ಆಸೆ ಪಡುವವಳು ಎಂದು ಕೊಂಡರ ಮದುವೆ ಆದ ದಿನವೇ ಗಂಡ ಹೆಂಡತಿಗೆ ಹೇಳುವ ಮಾತ ಇದು ಕೋಪದ ಜೋತೆ ಅವರ ಮೇಲೆ ಬೇಸರವೂ ಆಯಿತು..
ರಂಗಮ್ಮ ಬಂದವರೆ ನನಗೆ ತೆಳು ರೇಷ್ಮೆ ಸೀರೆಯನ್ನು ಉಡಿಸಿ ಸಾತ್ವಿಕ್ ಇರುವ ರೂಮಿಗೆ ಬಿಟ್ಟು ಹೋದರು..
ನನಗೋ ಮನಸ್ಸನಲ್ಲೆ ಭಯಕ್ಕೆ ಮೈಯೆಲ್ಲ ಬೆವರುತ್ತಿತು ನನಗೆ ಗೊತ್ತಿಲ್ಲದೆ ಕೈಯಲ್ಲ ನಡಗುತಿತ್ತು..
ಬಂದವರೇ
ನೀನು ಮಂಚದ ಮೇಲೆ ಮಲಗು ನಾನು ಸೋಫಾದ ಮೇಲೆ ಮಲಗುತ್ತಿನಿ ಎಂದು ಮಲಗಿದರು.
ಅವರ ಗುಣವನ್ನು ಮನದಲ್ಲಿ ಮೆಚ್ಚಿ ನಿದ್ದೆಗೆ ಜಾರಿದೆ..
ಹೀಗೆ ದಿನಗಳು ಉರುಳಿತು..
ಸಾತ್ವಿಕ್ ಗೆ ಮಿಲಿಟರಿ ಇಂದ ಕಾಲ್ ಬಂತು ಎಂದು ಹೊರಡಲು ಸಿದ್ಧ ವಾಗಿ ನನಗೆ ಹೇಳಿ ಹೊರಟರು.
ಅವರು ಹೋದ ಎರಡು ದಿನಕ್ಕೆ ನನಗೆ ಕಾಲ್ ಬಂತು ರಿಸೀವ್ ಮಾಡಿದ ನನಗೆ ಆಕಾಶವೇ ಕಳಚಿ ಬಿದ್ದಂತೆ ಆಯಿತು..
ಸಾತ್ವಿಕ್ ಬರುವ ಫ್ಲೈಟ್ ಕ್ರಶ್ ಆಗಿದೆ ಎಂಬ ವಿಷಯವನ್ನು ತಿಳಿದು ಇನ್ನೂ ಯಾಕೆ ನನ್ನ ಜೀವಂತವಾಗಿ ಇಟ್ಟಿದ್ದಿಯ ದೇವರೇ ಎಂದು ಕೇಳುತಿರಲೂ... ಇನ್ನೆಕೆ ಈ ಜೀವ ಎಂದು ಕೈ ಕತ್ತರಿಸಿಕೊಳ್ಳಲು ಮುಂದಾದವಳು
ಯಾರೋ ಬಂದಂತೆ ಹಾಗಿ ತಲೆ ಎತ್ತಿ ನೋಡಿದರೆ ಸಾತ್ವಿಕ್ ನಿಂತಿದ್ದ ತನ್ನ ಕಣ್ಣನ್ನು ಉಜ್ಜಿ ಮತ್ತೆ ಮತ್ತೆ ನೋಡಿದಳು..
ಅವನೇ ಸಾತ್ವಿಕ್ ಎಂದು ಬಂದು ಅವನನ್ನು ಅಪ್ಪಿದಳು, ಅವನು ಸಹ ಲಘುವಾಗಿ ಅಪ್ಪಿದವನು ಎನ್ ಸಿ. ಬಿ. ಐ ಮೇಡಂ ಇಷ್ಟೊಂದು ಎಮೋಷನಲ್ ಆದರೆ ನನ್ನಂತಹ ಪೋಲಿಸ್ ಕಥೆ ಎಲ್ಲ ಏನ್ ಹೇಳಿ.
.
ಅವನಿಂದ ದೂರ ಸರಿದ ಅನಿತಾ ಹೋ ಗೊತ್ತ ನಿಮಗೆ ಆನ್ನಲೂ
ಹೂ ಕಣೇ ಸುಂದರಿ ನನ್ ಫಸ್ಟ್ ಸಿ. ಬಿ. ಐ ನೇ ಅವಾಗಲೇ ನಿನ್ನ ನೋಡಿ ಇಷ್ಟ ಪಟ್ಟಿದೆ ಆದರೆ ಮತ್ತೆ ನಿನ್ನ ದೇವಸ್ಥಾನ ದಲ್ಲಿ ನೋಡಿ ಶಾಕ್ ಆಯ್ತು ಎಲ್ಲಿ ಆ ಡೇರ್ ಡೇವಿಲ್ ಎಲ್ಲಿ ಈ ಗೌರಮ್ಮ ಎಂದು ಕಿಚಯಿಸಲು..
ಅವಳು ಹುಸಿಮುನಿಸಿನಿಂದ ಅವನಿಗೆ ಹೊಡೆದು ಹೌದು ನಾನೇ ಅನಿಕಾ ಜೋಷಿ ಸಾರಿ ಸಾರಿ ಮಿಸ್ಸೆಸ್ ಅನಿಕಾ ಸಾತ್ವಿಕ್ ಡಿ. ಸಿ. ಪಿ ವೈಫ್ ಎಂದು ಕಣ್ಣು ಹೊಡೆದು ಹೇಳಿದಾಗ
ಪೆಚ್ಚಾದನು ಸಾತ್ವಿಕ್
ಆವನ ಸಮೀಪ ಬಂದವಳು ಏನ್ರಿ ನನಗೆ ಮೋಸ ಮಾಡೋಕೆ ನೊಡ್ತೀರಾ...
ಇಲ್ಲ ಮೇಡಂ ನಿಮ್ಮನ್ನು ಯಾಮಾರಿಸಲು ಸಾಧ್ಯವೇ ಇಲ್ಲ ಅದು ಒನ್ ಕೇಸ್ ಮೇಲೆ ಡೆಲ್ಲಿಗೆ ಹೋಗಿದ್ದಾಗ ತಿಳಿಯಿತು ನೀವು ಯಾವ್ ಕೇಸ್ ಕೂಡ ಹ್ಯಾಂಡಲ್ ಮಾಡ್ತಾ ಇಲ್ಲ ಅಂತ ಅದಕ್ಕೆ ಈ ನಾಟಕ ಇವಾಗದರೂ ಮೊದಲಿನ ಹಾಗೆ ನಿಮ್ಮ ಡೇರ್ ಡೇವಿಲ್ ಅವತಾರವನ್ನು ತೋರಿಸಿ ಎಂದನು..
ಅದನ್ನು ಕೇಳಿದವಳು ಚೆಂದದ ನಗು ಬೀರಿ ನಿಮ್ಮಂತಹ ಗಂಡ ಸಿಕ್ಕಿರ ಬೇಕಾದರೆ ನನ್ ಯಾಕೆ ಹಿಂಜರಿಯಲ್ಲಿ ನನ್ನ ಅಜ್ಜಿಯ ಸಾವಿನಿಂದ ಸ್ವಲ್ಪ ಮನ ಸರಿ ಇರಲಿಲ್ಲ ಅದಕ್ಕೆ ವಿರಾಮ ಮುಂದಿನ ತಿಂಗಳಿನಿಂದ ಮತ್ತೆ ಜ್ಯಾನ್ ಆಗುವೆ ಎಂದಳು..
ಆದ್ ಬೀಡಿ ನೀವ್ ಯಾಕೆ ನನ್ನ ಬಳಿ ಮೇಜರ್ ಅಂತ ಸುಳ್ಳು ಹೇಳಿದ್ದು..
ಅದು ದೊಡ್ಡ ಕಥೆ ನನ್ ಒಂದು ಸಿಕ್ರೆಟ್ ಮಿಷನ್ ಮೇಲೆ ವರ್ಕ್ ಮಾಡ್ತಿದೆ ಕಣೋ ನನಗೆ ಗೊತ್ತಿರಲಿಲ್ಲ ನನ್ ಜೀವಂತವಾಗಿ ಇರ್ತಿನೋ ಇ
ಅಷ್ಟರಲ್ಲಿ ಆವನ ಬಾಯಿಗೆ ಕೈ ಅಡ್ಡ ವಿಡಿದಳು ಏನೆಂದು ಕೇಳಿದವನಿಗೆ ಕಣ್ಣಿನಲ್ಲಿ ಯೇ ವಿನಂತಿಸಿದಳು ಬೇಡವೆಂದು...
ಮತ್ತು ಮುಂದುವರಿಸಿದವ ನೆನ್ನೆ ಮಿಷನ್ ಕಮ್ಪ್ಲಿಟ್ ಆಯ್ತು ಅದಕ್ಕೆ ಇವತ್ತು ನಿಜ ಹೇಳೋಣ ಆಂತ ಬಂದರೆ ಮೇಡಂ ಗೆ ವಿಷಯ ತಿಳಿದಿದೆ ಹೇಗೆ ಎಂದನು...?
ಅದು ನಾನು ಮದುವೆಗೆ ಒಪ್ಪಿದೆ ಬಲವಂತದಿಂದ ತಪ್ಪಿಸಿಕೊಳ್ಳಲು ಬೇರೆ ಉಪಾಯ ವಿಲ್ಲದೆ ಯಾಕೆಂದರೆ ನನಗೆ ಒಬ್ಬರ ಮೇಲೆ ಪ್ರೀತಿ ಇತ್ತು..
ವಿಧಿ ಇಲ್ಲದೆ ನಿಮ್ಮನ್ನು ಮದುವೆ ಆದೆ ಆದರೆ ಮದುವೆಯಾದ ದಿನ ನಿಮ್ಮನ್ನು ನೋಡಿದೊಡನೆಯ ಎಲ್ಲೋ ನೋಡಿರುವ ಅಸ್ಪಷ್ಟ ನೆನಪು ಆದರೆ ಸರಿಯಾಗಿ ನೆನಪಾಗಲಿಲ್ಲ ಅಂದು ನಿಮ್ಮ ಕಬೋರ್ಡ್ ನಲ್ಲಿ ನಿಮ್ಮ ಯೂನಿಫರ್ಂ ಕಂಡಾಗ ನನ್ನ ಊಹೆ ನಿಜವೆಂದು ತಿಳಿಯಿತು...
ಏನು ಎಂದು ಕೇಳಿದನು ಸಾತ್ವಿಕ್
ಅವತ್ತು ನಾನೂ ಒಂದು ಕೇಸ್ ನ ವಿಚಾರವಾಗಿ ತುಂಬಾ ತಲೆ ಕೆಡಿಸಿಕೊಂಡು ಕಾರ್ ನ್ನು ವೇಗವಾಗಿ ಓಡಿಸಿ ಮರಕ್ಕೆ ಡಿಕ್ಕಿ ಹೋಡೆದೆ ಅಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದವರ ಮುಖವನ್ನು ನಾನು ಸ್ಪಷ್ಟವಾಗಿ ನೋಡಿರಲಿಲ್ಲ ಆದರೆ ಅವರ ಬಟ್ಟೆಯನ್ನು ಗಮನಿಸಿದ ಕಾರಣ ಪೋಲಿಸ್ ಎಂದು ತಿಳಿದಿತ್ತು ...
ಆದರೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಅವರು ಅಲ್ಲಿಂದ ಹೋಗಿಯಾಯಿತು...
ಸಾತ್ವಿಕ್ ನೆನಪಿಸಿಕೊಂಡನು ಹೌದು ಅಂದು ಡ್ಯೂಟಿ ಮುಗಿಸಿ ಹೋಗುವಾಗ ಒಂದು ಹುಡುಗಿ ಕಾರ್ ನನ್ನು ಮರಕ್ಕೆ ಗುದ್ದಿ ಆಕ್ಸಿಡೆಂಟ್ ಆಗಿ ಅರೆ ಪ್ರಜ್ಞೆವಸ್ಥೆಯಲ್ಲಿ ಇದ್ದಳು...
ಮುಖವೆಲ್ಲ ರಕ್ತವಾಗಿತ್ತು ಹಾಗಾಗಿ ಅವನಿಗೆ ಯಾರೆಂದು ತಿಳಿಯಲಿಲ್ಲ...
ಇಂದು ಅದನ್ನು ನೆನಪಿಸಿಕೊಂಡು ಅವಳಿಗೆ ನಿಜನಾ ಎಂದು ಕೇಳಿದನು ಹೌದು ಎಂದು ಉತ್ತರಿಸಿದವಳಿಗೆ ಕಣ್ಣಿನಲ್ಲೆ ಬಾ ಎಂದು ಕರೆದನು ಹೋಗಿ ಅವನ ಬಾಹುವಿನಲ್ಲಿ ಬಂಧಿಯಾದಳು..
ಒಬ್ಬರಿಗೆ ತಿಳಿಯದಂತೆ ಒಬ್ಬರು ಇಷ್ಟ ಪಟ್ಟವರು ಇಂದು ಯಾವ ಅಡೆತಡೆಯೂ ಇಲ್ಲದೆ ಒಂದಾದರೂ..
ಅಂದು ಅವಳು ಕಂಡ ಕನಸು ಕೂಡ ನನಸಾಯಿತ್ತು ಎಷ್ಟೆ ನೋವು ಕಷ್ಟಗಳು ಬಂದೊದಗಿದರು ಸಹ ಅದರ ಹಿಂದೆಯೇ ಖುಷಿಯೂ ಸಹ ಇದ್ದೆ ಇರುತ್ತದೆ ಎಂಬುದು ಅಕ್ಷರಶಃ ನಿಜವಾಯಿತ್ತು..
ಒಬ್ಬರ ಮನದಲ್ಲಿ ಮತ್ತೊಬ್ಬರ ಬಗ್ಗೆ ಜೀವದಷ್ಟು ಪ್ರೀತಿ ಇದ್ದರೂ ಸಹ ತಮ್ಮ ಸ್ವಾರ್ಥವನ್ನು ಯೋಚಿಸದೇ ದೇಶ ಸೇವೆಗೆ ನಿಂತವನೊಬ್ಬ.. ಅವನ ಉಸಿರೆ ತನ್ನ ಉಸಿರು ಎಂದು ಕಾಯುತ್ತಿದ್ದವಳು ಅವನೇ ಇಲ್ಲವೆಂದು ತಿಳಿದು ತನ್ನ ಜೀವವನ್ನೆ ಕಳೆದುಕೊಳ್ಳಲು ಹೊರಟವಳು ಅವಳು ಏನೆಂದು ಹೇಳಬೇಕೋ ಈ ಪರಿಯ ಪ್ರೀತಿಯ...
ಎಲ್ಲೊ ಹುಟ್ಟಿ ಎಂದೂ ನೋಡದೇ ಆರಾದಿಸಿದವಳು ಅವನನ್ನೆ ಸೇರಿದಳು ಗೊತ್ತಿದೋ ಗೊತ್ತಿಲ್ಲದೆಯೋ..
ಅವಳ ಮೊಗವನ್ನು ನೋಡಿಯೇ ಅವಳ ಕಷ್ಟವನ್ನು ಅರಿತು ಮಾಂಗಲ್ಯವನ್ನು ಕಟ್ಟಿ ಮಡದಿಯಾಗಿಸಿಕೊಂಡವನು ಅವನು ಅವಳ ಕನಸಿಗೆ ರೆಕ್ಕೆಯಾದ.…
ಇಬ್ಬರು ಸಹ ಒಬ್ಬರಿಗೆ ಮತ್ತೊಬ್ಬರು ಬೆನ್ನೆಲುಬಾಗಿ ನಿಂತು ಒಬ್ಬರನೊಬ್ಬರು ಇನ್ನೂ ಹೆಚ್ಚು ಪ್ರೀತಿಸುತ್ತ ಕಾಲ ಕಳೆದರು..
ಶಿವನ್ನು ಪಾರ್ವತಿಯನ್ನು ಸೇರಿದಂತೆ ಅನಿಕಾ ಸಹ ಸಾತ್ವಿಕ್ ನನ್ನು ಸೇರಿದಳು.
ಇವರ ಪ್ರೀತಿ ಹೀಗೆ ಇರಲಿ ಎಂದು ಕೇಳಿಕೊಳ್ಳೊಣ.
ಐಶು...
ಧನ್ಯವಾದಗಳು...
ಓದಿ ಪ್ರತಿಕ್ರಿಯಿಸಿ
Lost at the middle of this mythic world in searching of reality 💫 Reality is better than fake dreams... A desire to get lost in a dream world is special