ಷೇರು ಮಾರುಕಟ್ಟೆ ದೀರ್ಘ ಅವಧಿಯಲ್ಲಿ ದೊಡ್ಡ ಮಟ್ಟದ ಸಂಪತ್ತನ್ನು ಕ್ರೋಡೀಕರಣ ಮಾಡುವ ನಂ. 1 ವೇದಿಕೆ ಎನ್ನಬಹುದು. ಇಲ್ಲಿ ಸಾಕಷ್ಟು ರಿಸ್ಕ್ ಇರುತ್ತದೆ. ಆದರೆ ಇಂದಿನ ಹಣದುಬ್ಬರದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಾಗ ದೀರ್ಘ ಅವಧಿಯಲ್ಲಿ ಹಣ ಮಾಡಲು ಸ್ಟಾಕ್ ಮಾರ್ಕೆಟ್ ಅನಿವಾರ್ಯ ಆಗಿದೆ. ಸ್ಟಾಕ್ ಮಾರ್ಕೆಟ್ ನಲ್ಲಿ ಯಾವ ರೀತಿ ಸೇಫ್ ಆಗಿ ಹೂಡಿಕೆಯನ್ನು ಮಾಡಬಹುದು ಎನ್ನುವ ವಿಚಾರವನ್ನು ತಿಳಿಯುವ ಯತ್ನವನ್ನು ಮಾಡೋಣ.
1. ಮ್ಯೂಚುವಲ್ ಫಂಡ್ ಇನ್ವೆಸ್ಟ್ಮೆಂಟ್:
ಷೇರು ಮಾರುಕಟ್ಟೆ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಇರುವವರು ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಬಹುದು. ತಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಫೈನಾನ್ಸಿಯಲ್ ಅಡ್ವೈಸರ್ ಅವರ ಜೊತೆಗೆ ಚರ್ಚೆ ಮಾಡಿ ಯಾವ ವಿಧದ ಫಂಡ್ ಗಳು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಈ ರೀತಿಯ ಯಾವ ಫಂಡ್ ಗಳು ಸೂಕ್ತ ಆಗುತ್ತದೆ ಎನ್ನುವುದನ್ನು ತಿಳಿದುಕೊಂಡು ಹೂಡಿಕೆ ಮಾಡುವುದು ಒಳ್ಳೆಯದು. ಇದರಿಂದ ಹೂಡಿಕೆಯಲ್ಲಿ ನಷ್ಟ ಆಗುವುದನ್ನ ತಪ್ಪಿಸಬಹುದು.
ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆದಾರರ ಹಣವನ್ನು ಫಂಡ್ ಮ್ಯಾನೇಜರ್ ಗಳು ಕಡಿಮೆ ಹಣಕ್ಕೆ ಹೆಚ್ಚಿನ ಕಂಪನಿಗಳಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಫಂಡ್ ಮ್ಯಾನೇಜರ್ ಗಳಿಗೆ ಸಾಕಷ್ಟು ಅನುಭವ ಇರುವ ಕಾರಣ ದೀರ್ಘ ಅವಧಿಯಲ್ಲಿ ಶೇಕಡ 12 ರಿಂದ 18ರವರೆಗೂ ಲಾಭವನ್ನು ನಿರೀಕ್ಷೆ ಮಾಡಬಹುದಾಗಿದೆ.
2. ETF ಗಳಲ್ಲಿ ಹೂಡಿಕೆ
ಷೇರುಗಳನ್ನು ಖರೀದಿ ಮಾಡಲು ಸಮಯ ಇಲ್ಲ. ಕಂಪನಿಗಳ ಬಗ್ಗೆ ತಿಳಿದುಕೊಳ್ಳಲು ಸಮಯವಕಾಶ ಇಲ್ಲ ಎನ್ನುವವರಿಗೆ ETF ಗಳು ಹೂಡಿಕೆಗೆ ಹೆಚ್ಚು ಸೂಕ್ತವಾಗಿವೆ. ETF ಎನ್ನುವುದು ಮ್ಯೂಚುವಲ್ ಫಂಡ್ ಹಾಗೂ ಷೇರಿನ ಮಿಶ್ರಣ ಆಗಿದೆ. ಕಡಿಮೆ ಬೆಲೆಗೆ nifty 50, gold , ವಿವಿಧ ಸೆಕ್ಟರ್ ಈ ರೀತಿಯ ETF ಖರೀದಿ ಮಾಡಬಹುದು.
ನಿಫ್ಟಿ 50 ಕಂಪನಿಗಳ ಮೇಲೆ ನಿಫ್ಟಿ 50 ETF ನಲ್ಲಿ ಹೂಡಿಕೆ ಮಾಡಲಾಗುತ್ತದೆ. ನಿಫ್ಟಿ ಫಿಫ್ಟಿ ಮೇಲೆ ಹೋದಂತೆ ETF ಮೇಲಕ್ಕೆ ಹೋಗುತ್ತದೆ. Nifty 50 ಕೆಳಗೆ ಬಿದ್ದಾಗ ETF ಬೆಲೆ ಕಡಿಮೆಯಾಗುತ್ತದೆ. ದೀರ್ಘಾವಧಿಯಲ್ಲಿ ETF ಗಳು ಶೇ. 15 ರಷ್ಟು ರಿಟರ್ನ್ ನೀಡುವ ಸಾಧ್ಯತೆ ಇರುತ್ತದೆ. ಇಲ್ಲಿ ಮ್ಯೂಚುವಲ್ ಫಂಡ್ ಗಳ ರೀತಿಯಲ್ಲಿ ಶೇ. 2 ವರೆಗಿನ ಎಕ್ಸ್ಪೆನ್ಸಿವ್ ರೇಶಿಯೋ ಇರುವುದಿಲ್ಲ. ಬಹಳ ಕಡಿಮೆ ಎಕ್ಸ್ಪೆನ್ಸಿವ್ ಇರುತ್ತದೆ. ETF ಗಳನ್ನು ಮಾರುಕಟ್ಟೆಯಲ್ಲಿ ಯಾವುದೇ ಅವಧಿಯಲ್ಲಿ ಮಾರಬಹುದು.
3. ನಿಫ್ಟಿ 50 ಕಂಪನಿಗಳು:
ಹೆಚ್ಚಿನ ರಿಟರ್ನ್ ಬೇಕು ಎನ್ನುವವರಿಗೆ ನಿಫ್ಟಿ50 ಕಂಪನಿಗಳಲ್ಲಿ ಅಧ್ಯಯನವನ್ನು ನಡೆಸಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತವಾದದ್ದು. ಇಲ್ಲಿ ಕಡಿಮೆ ರಿಸ್ಕ್ ಇರುತ್ತದೆ. ಅದೇ ರೀತಿ ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ರಿಟರ್ನ್ ಇರುತ್ತದೆ. ಆದರೆ ದೀರ್ಘಾವಧಿಯಲ್ಲಿ ಶೇಕಡ 20 ಅಥವಾ ಅದಕ್ಕಿಂತ ಹೆಚ್ಚು ರಿಟರ್ನ್ ಸಿಗುವ ಸಾಧ್ಯತೆ ಕೂಡ ಇರುತ್ತದೆ.
ಕಂಪನಿಗಳ ಕ್ವಾಟರ್ಲಿ ರಿಸಲ್ಟ್ ಗಳ ಅವಲೋಕನ, ಕಂಪನಿಗಳ ವ್ಯಾಪಾರ ಚಟುವಟಿಕೆಯ ಮೇಲೆ ನಿಗಾ ವಹಿಸುವುದು ಬಹಳ ಮುಖ್ಯ. ಕಂಪನಿ ಚೆನ್ನಾಗಿ ಪ್ರದರ್ಶನ ತೋರಿಲ್ಲದಿದ್ದಲ್ಲಿ ಅಂಥ ಕಂಪನಿಗಳನ್ನು ಮಾರಿಕೊಳ್ಳಬೇಕಾಗುತ್ತದೆ.
ಷೇರು ಮಾರುಕಟ್ಟೆ ಹೂಡಿಕೆಯ ಬಗ್ಗೆ ತಜ್ಞರಿಂದ ತರಬೇತಿಯನ್ನು ಪಡೆಯುವುದು, ಹೂಡಿಕೆ ಮಾಡಿದ ಕಂಪನಿಗಳ ಮೇಲೆ ನಿಗಾ ವಹಿಸುವುದು ಬಹಳ ಮುಖ್ಯವಾಗುತ್ತದೆ.
4. ಲಾರ್ಜ್ ಕ್ಯಾಪ್ ಕಂಪನಿಗಳು:
ಷೇರು ಮಾರುಕಟ್ಟೆಯಲ್ಲಿ ಚೆನ್ನಾಗಿ ಅಧ್ಯಯನ ಮಾಡಿದವರು ದೀರ್ಘ ಅವಧಿಗೆ ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಆಲೋಚನೆಯನ್ನು ಮಾಡಬಹುದು. 20,000 ಕೋಟಿಗಿಂತ ಹೆಚ್ಚಿನ ಮಾರ್ಕೆಟ್ ಕ್ಯಾಪ್ ಹೊಂದಿರುವ ಕಂಪನಿಗಳು ಲಾರ್ಜ್ ಕ್ಯಾಪ್ ನಲ್ಲಿ ಬರುತ್ತವೆ. ಇನ್ನು NSE ಆಧರಿಸಿ ಹೇಳುವುದಾದರೆ ನಿಫ್ಟಿ 50 ಹಾಗೂ ನಿಫ್ಟಿ ನೆಕ್ಸ್ಟ್ ಫಿಫ್ಟಿ ಕಂಪನಿಗಳು ಲಾಡ್ಜ್ ಕ್ಯಾಪ್ ಕಂಪನಿಗಳ ವರ್ಗೀಕರಣಕ್ಕೆ ಬರುತ್ತವೆ.
5. PSU ಕಂಪನಿಗಳ ಬಗ್ಗೆ ಎಚ್ಚರದ ನಡೆ:
ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಸರ್ಕಾರದ ಅಧೀನಕ್ಕೆ ಒಳಪಟ್ಟ ಹಲವಾರು PSUಗಳಿವೆ. ಈ ಕಂಪನಿಗಳಲ್ಲಿ ಸರಕಾರ ಹೆಚ್ಚಿನ ಹಸ್ತಕ್ಷೇಪ ಮಾಡುವ ಕಾರಣ ಕಂಪನಿಗಳ ಬೆಳವಣಿಗೆಯ ಬಗ್ಗೆ ನಿರ್ದಿಷ್ಟವಾಗಿ ಆಲೋಚನೆ ಮಾಡುವುದು ಕಷ್ಟವಾಗುತ್ತದೆ. ಇಲ್ಲಿ ರಿಸ್ಕ್ ಹೆಚ್ಚು ಇರುತ್ತದೆ. PSUಕಂಪನಿಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆಯನ್ನು ವಹಿಸಬೇಕು.
ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಇರುವವರು ಮೆಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಆದರೆ ಹೂಡಿಕೆ ಇಲ್ಲಿ ಲಾರ್ಜ್ ಕ್ಯಾಪ್ ನಷ್ಟು ಸುರಕ್ಷಿತ ಆಗಿರುವುದಿಲ್ಲ. ಇಲ್ಲಿ ಸಾಕಷ್ಟು ಹೂಡಿಕೆ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಹಣ ಕಳೆದುಕೊಳ್ಳಲು ಸಿದ್ದ ಎನ್ನುವ ಮನೋಭಾವ ಇರುವವರು ಇಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಹೆಚ್ಚು ರಿಟರ್ನ್ ಸಿಗುವ ಬಗ್ಗೆ ಆಲೋಚನೆ ಮಾಡಬಹುದು.
-ಅರುಣ್ ಕಿಲ್ಲೂರು
Author,Journalist,Photographer