ನನ್ನ ಮುಖವನ್ನು ಬದಲಾಯಿಸುದು ಹೇಗೆ?
ನಾನು ನೆಲಮಂಗಲ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ಬ ್ ನಲ್ಲಿ ಓರ್ವ ಸಾಮಾಜಿಕ ಕಾರ್ಯಕರ್ತೆ ಶೋಭಾ ಎನ್ನುವ ಹಿರಿಯ ಮಹಿಳೆಯ ಪರಿಚಯ ಆಯಿತು .ಮಾತಿನ ನಡುವೆ ಎಲ್ಲಿ ಕೆಲಸ ಮಾಡುತಿದ್ದೀರಿ ಎಂದು ಕೇಳಿದರು .ನೆಲಮಂಗಲ ಪಿಯು ಕಾಲೇಜ್ ನಲ್ಲಿ ಎಂದು ಹೇಳಿದೆ .ಅಟೆಂಡರಾ ಎಂದು ಕೇಳಿದರು ,ಅಲ್ಲ ಉಪನ್ ಾಸಕಿ ಎಂದೆ
ಮತ್ತೆ ಅವರು ಏನು ಓದಿದ್ದೀರಿ ಎಂದು ಕೇಳಿದರು ,ನಾನು ಡಾಕ್ಟರೇಟ್ ಎಂದು ಹೇಳಿದೆ .ಆಗ ಅವರು ಸ್ವಲ್ಪ ಗೊಂದಲಕ್ಕೆ ಒಳಗಾಗಿ ಪುನಃ ಏನು ಓದಿದ್ದೀರಿ ಎಂದು ಕೇಳಿದರು ಆಗ ನಾನು ಮತ್ತೆ ಎಂ ಎ ಪಿ ಎಚ್ ಡಿ ಎಂದು ಹೇಳಿದೆ .ಆಗ ಅವರಿಗೆ ಅದನ್ನು ನಂಬಲು ಸ್ವಲ್ಪ ಕಷ್ಟ ಆದಂತೆ ಅನಿಸಿತು .ಮತ್ತೆ ಪುನಃ ನೀವು ಎಲ್ಲಿ ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದರು .ಮತ್ತೆ ಪುನಃ ನಾನು ನೆಲಮಂಗಲ ಪಿ ಯು ಕಾಲೇಜ್ ಕನ್ನಡ ಉಪನ್ಯಾಸಕಿ ಎಂದು ಹೇಳಿದೆ .
ಆಗ ಅವರು ಅಚ್ಚರಿಯಿಂದ ನೀವು ಲೆಕ್ಚರರ್ ಆ ?ಎಂದು ಕೇಳಿ ನಿಮ್ಮನ್ನು ನೋಡುವಾಗ ಹಾಗೆ ಅನಿಸುದಿಲ್ಲ ನೀವು ಅಷ್ಟು ಓದಿದ್ದೀರಿ ಎಂದು ಗೊತ್ತಾಗುದಿಲ್ಲ ಎಂದು ಹೇಳಿದರು ಅನಂತರ ನಾನೇನು ಭಾವಿಸುತ್ತೇನೋ ಎಂದು ಅವರಿಗೆ ಅನ್ನಿಸಿರಬೇಕು ಮತ್ತೆ ಪುನಃ ನೀವು ತುಂಬಾ ಸಿಂಪಲ್ ಆಗಿದ್ಡೀರಲ್ಲ ಅದಕ್ಕೆ ನೀವು ಲೆಕ್ಚರರ್ ಎಂದು ಗೊತ್ತಾಗಲಿಲ್ಲ ತಪ್ಪು ತಿಳಿಯಬೇಡಿ ಎಂದು ಹೇಳಿದರು
ಇಂಥ ಅನುಭವ ನನಗೆ ಈ ಹಿಂದೆ ಕೂಡ ಬೇರೆ ಬೇರೆ ರೀತಿಯಲ್ಲಿ ಆಗಿದೆ .ಕಳೆದ ವರ್ಷ ಸರ್ಕಾರದ ಆದೇಶದ ಮೇರೆಗೆ ನಾವು ಸುಮಾರು ಸಾವಿರದ ಮುನ್ನೂರು ಪಿ ಯು ಕಾಲೇಜ್ ಉಪನ್ಯಾಸಕರು ಬಿಎಡ್ ಓದಬೇಕಾಗಿ ಬಂತು .ಹಾಗಾಗಿ ನಾನು ಕೆಂಗೇರಿ ಯ ಎಸ್ ಜೆ ಬಿ ಬಿಎಡ್ ಕಾಲೇಜ್ ಗೆ ಸೇರಿದೆ .
ಅಲ್ಲಿ ಸೇರಿದ ಕೆಲ ದಿನಗಳ ನಂತರ ನನ್ನದೊಂದು ಶಿಕ್ಷಣ ಸಂಬಂಧಿ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು .ಅದರಲ್ಲಿ ನನ್ನ ಫೋಟೋ ಮತ್ತು ಹೆಸರು ಡಾ.ಲಕ್ಷ್ಮೀ ಜಿ ಪ್ರಸಾದ ಎಂದು ಇತ್ತು ಕೂಡ .
ಆ ಲೇಖನ ಪ್ರಕಟವಾದ ದಿನ ನಾನು ಕಾಲೇಜ್ ಗೆ ಹೋದಾಗ ಅಲ್ಲಿ ಅನೇಕ ವಿದ್ಯಾರ್ಥಿಗಳು ಕನ್ನಡ ಪ್ರಭ ಪತ್ರಿಕೆ ಓದುತ್ತಾ ಇದ್ದ್ದರು .
ನನ್ನ ಪ್ರಕಟಿತ ಲೇಖನವನ್ನೇ ಓದುತ್ತಾ ಇದ್ದರು ಕೆಲವರು ಅದನ್ನು ನೋಡಿ ಖುಷಿ ಆಗಿ ಓಹ್ ನನ್ನ ಲೇಖನ ಓದುತ್ತಾ ಇದ್ದೀರಾ ?ಹೇಗಿದೆ ಎಂದು ಕೇಳಿದೆ
ಆಗ ಅಲ್ಲಿನ ವಿದ್ಯಾರ್ಥಿನಿ ಒಬ್ಬಳು ನಿಮ್ಮ ಲೇಖನವಾ ?ಯಾವುದು ?ಎಲ್ಲಿದೆ ಎಂದು ಕೇಳಿದಳು .ಆಗ ನಾನು ನೀವುಗಳು ಓದುತ್ತಾ ಇರುವ ಲೇಖನ ನನ್ನದು ಎಂದು ಹೇಳಿದೆ
ಆಗ ಅಲ್ಲಿದ್ದ ವಿದ್ಯಾರ್ಥಿಗಳು ಲೇಖನದಲ್ಲಿನ ನನ್ನ ಫೋಟೋ ಮತ್ತು ನನ್ನ ಮುಖ ವನ್ನು ಮಿಕ ಮಿಕ ನೋಡಿದರು
ಆನಂತರ ಸಂಶಯದಿಂದ ಲೇಖಕಿ ಹೆಸರು ಲಕ್ಷ್ಮೀ ಜಿ ಪ್ರಸಾದ್ ಎಂದು ಇದೆಯಲ್ಲ ಎಂದು ಕೇಳಿದರು .ಅವರ ಸಂಶಯ ಸರಿಯಾದದ್ದೇ ಯಾಕೆಂದರೆ ದಾಖಲೆಗಳಲ್ಲಿ ನನ್ನ ಹೆಸರು ಲಕ್ಷ್ಮೀ ವಿ ಎಂದೇ ಇರುವುದು ,ಆಗ ನಾನು ಲಕ್ಷ್ಮೀ ಜಿ ಪ್ರಸಾದ್ ಎಂಬುದು ನನ್ನ ಪೆನ್ ನೇಮ್ ಎಂದು ಹೇಳಿದೆ .
ಆಗ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿ ಡಾ.ಎಂದು ಇದೆಯಲ್ಲ ಎಂದು ಹೇಳಿದ .ಹೌದು ನಾನು ಪಿಎಚ್ ಡಿ ಪದವಿ ಪಡೆದಿದ್ದೇನೆ ಹಾಗಾಗಿ ಡಾ.ಎಂದು ಹಾಕಿಕೊಳ್ಳುತ್ತೇನೆ ಎಂದು ಹೇಳಿದೆ .
ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿರುವ ಫೋಟೋ ಬೇರೆ ಉಂಟಲ್ಲ ಹೇಳಿದ !ಹೌದು ನನ್ನ ಫೋಟೋ ಅದೇ ರೀತಿ ಬರುವುದು ಎಂದು ಸ್ಪಷ್ತೀಕರಿಸಿದೆ .
ಯಾಕೋ ಏನೋ ಅಲ್ಲಿದ್ದ 10 -20 ಬಿಎಡ ವಿದ್ಯಾರ್ಥಿಗಳಿಗೆ ನಾನು ಆ ಲೇಖನ ಬರೆದದ್ದು ಎಂದು ನಂಬಿಕೆ ಬರಲಿಲ್ಲ ಎಂದು ನನಗೆ ಅರ್ಥವಾಯಿತು .
ಅಷ್ಟರಲ್ಲಿ ನನ್ನ ಹಾಗೆ ಸರ್ಕಾರಿ ಪಿ ಯು ಕಾಲೇಜ್ ಉಪನ್ಯಾಸಕರಾಗಿದ್ದು ಬಿ ಎಡ್ ಓದಲು ಬಂದಿದ್ದ ನಾಗರಾಜ್ ಅಷ್ಟು ಗೊತ್ತಾಗಲ್ವ ನಿಮಗೆ ಅದು ಲಕ್ಷ್ಮೀ ಮೇಡಂ ದೇ ಲೇಖನ ಎಂದು ಅಲ್ಲಿ ಸ್ಪಷ್ಟಪಡಿಸಿದರು .
ಅನಂತರ ಆ ವಿದ್ಯಾರ್ಥಿಗಳು ಅವರ ಮುಖ ನೋಡಿದ್ರೆ ಅವರು ಬರೀತಾರೆ ಅಂತ ಅನಿಸಲ್ಲ ಅಲ್ವ ?ಎಂದು ಮಾತಾಡಿಕೊಂಡರು ಎಂದು ನನಗೆ ತಿಳಿಯಿತು
ಇದೇ ಕೊನೆ ನಾನು ಎಂದಿಗೂ ಯಾರು ನನ್ನ ಲೇಖನ ಓದುತ್ತಾ ಇದ್ದರೂ ಕೂಡ ಅದು ನನ್ನ ಲೇಖನ ಎಂದು ಹೇಳುವ ಅಧಿಕ ಪ್ರಸಂಗ ಮಾಡುದೇ ಇಲ್ಲ !
ಇಂಥ ಅನೇಕ ಅನುಭವಗಳು ನನಗೆ ಆಗಿವೆ
ಯಾಕೆ ಹೀಗೆ ?ನನ್ನ ಮುಖದಲ್ಲಿ ಹಾಳು ಕಳೆ ಸುರಿಯುತ್ತಿದೆಯೇ ?ನನ್ನ ಮುಖವನ್ನು ಬದಲಾಯಿಸುದು ಹೇಗೆ ?ನನಗಂತೂ ಗೊತ್ತಾಗುತ್ತಿಲ್ಲಪ್ಪ ನಿಮಗೇನಾದರೂ ಗೊತ್ತಾದರೆ ತಿಳಿಸಿ pls
ಕೆಲ ವರ್ಷಗಳ ಮೊದಲಿನ ಅನುಭವ ಕಥನ ಇದು
ಡಾ.ಲಕ್ಷ್ಮೀ ಜಿ ಪ್ರಸಾದ
0 Followers
0 Following