Do you have a passion for writing?Join Ayra as a Writertoday and start earning.

ಇನ್ನೆಷ್ಟು ಪ್ರೀತಿಸಲಿ ನಿನ್ನ...?

ಹೇಳು ಹೃದಯವೇ, ಇನ್ನೆಷ್ಟು ಪ್ರೀತಿಸಲಿ ನಿನ್ನ...

ProfileImg
05 May '24
1 min read


ನನ್ನಲ್ಲಿ ನಾನಿಲ್ಲ ಕಳೆದೇ ಹೋಗಿರುವೆ ಅಂದೆ

ಇನ್ನೂ ಹುಡುಕಾಟದಲ್ಲಿರುವೆ ನಾನು ನನ್ನ

ಅದೇನೋ ನಾ ಕಾಣೆ, ನಿನ್ನ ಪ್ರೀತಿ ನನ್ನ ಬದುಕಿನ ಗಮ್ಯ

ನನ್ನ ಉಸಿರಿಗೆ ನಿನ್ನ ನಗುವೇ ಚೇತನ

ಇದು ಪ್ರೀತಿಯೋ? ಅದಕ್ಕೂ ಮಿಗಿಲಾದ ಭಾಂದವ್ಯವೋ? ನಾ ಕಾಣೆನು

ಏನೆಂದು ಹೆಸರಿಡಲಿ ಇದಕೆ...

ನೀ ನನ್ನ ಗೆಳೆಯನೇ? ಇನಿಯನೋ? ಅರಸನೋ? ರಾಜಕುಮಾರನೋ? 

ಹೇ ಹೃದಯವೇ ಹೇಳು ಯಾಕಿಷ್ಟು ಹತ್ತಿರವಾದೆ ನನ್ನುಸಿರಿಗೆ....?

ಕ್ಷಣ ಕ್ಷಣಕೂ ಎತ್ತರಕೆ ಸಾಗುತಿದೆ ಈ ಪ್ರೀತಿಯ ಪಯಣ

ದೇಹಗಳ ಮಿಲನಕೂ ಮಿಗಿಲಾದ ಅಂತಃಕರಣ

ಒಮ್ಮೆ ಮರೆಯಬೇಕಿದೆ ಜಗವನೆ

ಒಮ್ಮೆ ಸೇರಬೇಕಿದೆ ನಾ ನಿನ್ನನೇ

ಇಬ್ಬರೊಬ್ಬರಾಗುವ ಎಲ್ಲ ಎಲ್ಲೆ ಮೀರಿ ಹೋಗುವ ದೂರಕೆ

ಯಾರು ಇಲ್ಲದ ಪ್ರಶಾಂತ ನಿಸರ್ಗದ ಮಡಿಲಲಿ ಪುಟ್ಟ ಗುಡಿಸಲಲಿ ದಾಂಪತ್ಯದ ಸೊಗಸಾದ ಹಾಡುವ ಆಸೆ

ಹೇಳು ಹೃದಯವೇ, ಇನ್ನೆಷ್ಟು ಪ್ರೀತಿಸಲಿ ನಿನ್ನ....

Category : Poem


ProfileImg

Written by Suvarna Kambi

Assistant Professor, Department of journalism, JSS College of Arts Commerce and Science, Ooty Road, Mysuru, Karnataka 570025