ಮನೆ

ಕವನ

ProfileImg
21 May '24
1 min read


image

ಮನೆ ಎಂದರೆ ಅರಮನೆ ಅಲ್ಲ

ಮನೆ ಎಂದರೆ ಸೆರೆಮನೆ ಅಲ್ಲ

ಮನೆ ಎಂದರೆ ಗುಡಿಸಲು ಅಲ್ಲ

ಮನೆ ಎಂದರೆ ಸ್ವಂತದ್ದು ಅಲ್ಲ

ಮನೆ ಎಂದರೆ ಬಾಡಿಗೆಯದು ಅಲ್ಲ

ಮನೆ ಎಂದರೆ ಲೀಸ್ ಅವಧಿಯದು ಅಲ್ಲ

ನಮ್ಮ ಮನೆ ಎಂದರೆ ಮನೆಮಂದಿಯೆಲ್ಲ

ಕೂಡಿ ಬಾಳಿದರೆ ಸ್ವರ್ಗ ಸುಖ

ಒಗ್ಗಟ್ಟು ಇದರ ಗುಟ್ಟು 

ಮನೆ ಎಂದರೆ ಸೆರೆಮನೆಯಲ್ಲ

ಮನೆ ಎಂದರೆ ಅರಮನೆ

ಆನಂದದ ತವರೂರು

ಊರೂರು ಅಲೆದರೂ ನಮ್ಮ ಮನೆ

ಎಲ್ಲಿ ನೋಡಿದರಲ್ಲಿ ಕಾಣುವುದಿಲ್ಲ

ಮನೆಯೇ ಮಂತ್ರಾಲಯ

ಮನೆಯೇ ಮಂದಿರ  

ಕಾರಣ ಮನೆಯ ಮೇಲೆ ಒಂದು ಚೆಂದದ ಚೆಂದಿರ 

ಕಾಣಲು ನನ್ನ ಮನದಲಿ ತುಂಬಿದೆ ಚೆಂದದ ಚೆಲುವಿನ ಆನಂದ ಮಂದಿರ

ಮನೆಯ ಸುತ್ತ ಮುತ್ತಲಿನ ಉದ್ಯಾನ

ಮನೆಯಲ್ಲಿ ಸದಾ ದೇವರ ಧ್ಯಾನ

ಬಣ್ಣ ಬಣ್ಣದ ಚಿತ್ತಾರ ತಾರೆ

ಮೇಲೆ ಕಾಣುವ ಒಂದು ಒಳ್ಳೆಯ ಕಾಣುವ ಸುಂದರ ದೃಶ್ಯ

ಸುತ್ತ ಮುತ್ತ ಇರುವ ಒಂದು ಒಳ್ಳೆಯ ಜನ

ಮನೆಯೇ ಮುಂದಿನ ಸ್ನೇಹಿತರು

ಒಳ್ಳೆಯ ಮಾತು ಬೆಳ್ಳಗಿನ ಹಾಲು

ಎರಡು ನಾಣ್ಯದ ಎರಡು ಮುಖಗಳು

ಶಾಂತಿ ಹಾಗೂ ಅಂತರಂಗದ ಮನೆ

ಇರಲಿ ಎಲ್ಲೆಲ್ಲಿ ಸ್ನೇಹಿತರು

ಅಸೂಯೆ ಮೂಡಿತ್ತು ಎಂದು ಹೇಳಲಾಗುವುದಿಲ್ಲ

ಆಸೆ ಇಂದ ಬಂದಿದೆ ನನ್ನ ಜೀವ

ಪ್ರತಿ ಮಮಕಾರ ತಾಳ್ಮೆ ಮತ್ತು ಸಹನೆ ಬೇಕು

ಮನದಲಿ ಮನೆಯಲ್ಲಿ

ಅರಮನೆ ಎಂತಾ ಸುಂದರ ಮನೆ

ಬೇಕಿಲ್ಲ

ಮನೆ ಎಂದರೆ ಶಾಂತಿ ಹಾಗೂ ಅಂತರಂಗದ ಶಾಂತಿ ಇದ್ದರೆ ಮಾತ್ರ ಒಂದು……

ಸುಂದರ ಕಣ್ಣಾ……

ಹಸಿರೇ ಉಸಿರು

ಶಾಂತಿ ನೆಮ್ಮದಿಯ ನಿಟ್ಟುಸಿರು

ನಮ್ಮ ಮನೆ ಎಂದರೆ ಅದುವೇ ಅರಮನೆ

ಕಾಣ 

 

 

 

 

 

 

 

 

 

 

Category:Home Décor and DIY



ProfileImg

Written by Rajani G