ಪುಟ್ಟ ಮಕ್ಕಳಿಗೆ ಆಹಾರ ವ್ಯತ್ಯಾಸ ಆದರೆ ಹೊಟ್ಟೆ ಕೆಟ್ಟು
ಮೈ ಕೈ ನೋವಿನಿಂದ ಇರುಸು ಮುರುಸಾಗಿ
ಅಳುತ್ತವೆ ಒದ್ದಾಡುತ್ತವೆ.
ಏನು ಮಾಡಬೇಕು ತೋಚದೇ ತಾಯಂದಿರು ಒದ್ದಾಡುವುದು ಸಹಜ
ಅದರಲ್ಲಿಯು ಈ ಕಾಲದಲ್ಲಿ ಹಿರಿಯರು ಇಲ್ಲದ ಮನೆಯೇ ಹೆಚ್ಚು.
ಮಕ್ಕಳಿಗೆ ಇರುಸು ಮುರುಸು ಆದರೆ ಏನು ಮಾಡುವುದು..
ಮಕ್ಕಳಿರುವ ಮನೆಯಲ್ಲಿ ಬಜೆ, ಜಾಯಿಕಾಯಿ ,ಲವಂಗ ಮೆಣಸು ಏಲಕ್ಕಿ ,ಚಕ್ಕೆ ,ವಿಳ್ಳೆ ದೆಲೆ ,ದೊಡ್ಡಪತ್ರೆ ,ಓಂ ಕಾಳುಯಂತಹ ಪದಾರ್ಥಗಳನ್ನು ಇಟ್ಟುಕೊಂಡು ಇರುವುದು ಮುಖ್ಯ.
ಹೊಟ್ಟೆ ನೋವು ಬಂದರೆ ಮಲ ಮೂತ್ರ ವಿಸರ್ಜನೆ ಮಾಡದೆ ಇದ್ದರೆ ತಕ್ಷಣ ವಿಳ್ಳೆ ದೆಲೆ ಗೆ ಎಣ್ಣೆ ಹಚ್ಚಿ ಬಿಸಿ ಮಾಡಿ ಹೊಟ್ಟೆ ಮೇಲೆ ಶಾಖ ಕೊಡಬೇಕು.ಉಷ್ಣತೆ ಕಡಿಮೆ ಇರಲಿ.
ಇನ್ನೊಂದು ಬಜೆ ಬೆರನ್ನು ತೊಳೆದು ತೇಯ್ದು ನಾಲಿಗೆ ಮೇಲೆ ನೆಕ್ಕಿಸುವುದು.
ಓಂ ಕಾಳನ್ನು ಬಿಸಿ ಮಾಡಿ ನೀರಲ್ಲಿ ಕುದಿಸಿ ತಣ್ಣಗೆ ಮಾಡಿ ಒಂದು ಚಮಚ ದಷ್ಟು ಕುಡಿಸುವುದು .
1.ಕಫ.: ತುಳಸಿರಸ ಮತ್ತ ಜೇನುತುಪ್ಪ ಸೇರಿಸಿ ಮಕ್ ನಾಲಗೆ ಮೇಲೆ ನೆಕ್ಕಿಸಿದರೆ
ಕಫ ಕಡಿಮೆ ಮಾಡುತ್ತದೆ.
2.ಹಸಿ ಶುಂಠಿ ರಸ ಮತ್ತು ಜೇನು ತುಪ್ಪವನ್ನು ಸೇರಿಸಿ ನೆಕ್ಕಿಸಿದರೆ ಕಫ ಕಡಿಮೆ ಆಗುತ್ತೆ.
3.ಲವಂಗ 1 ಕಾಳು ಮೆಣಸು 1ಎರಡು ಸೇರಿಸಿ ಗಂಧದ ಕಲ್ಲಿನ ಮೇಲೆ ತೇಯ್ದು ಸ್ವಲ್ಪ
ಜೇನುತುಪ್ಪ ಸೇರಿಸಿ ತಿನ್ನಿಸಿದರೆ ಕಫ ಕರಗುತ್ತದೆ.
4..ಮೂಗು ಕಟ್ಟಿದರೆ ಶುದ್ಧ ಹಸುವಿನ ತುಪ್ಪವನ್ನು ಒಂದೊಂದು ಹನಿ ಮೂಗಿನಲ್ಲಿ
ಹಾಕಿದರೆ ಉಸಿರಾಟ ಸುಲಭ ಆಗುತ್ತೆ.
5..ವಾಂತಿ ಆಗ್ತಾ ಇದ್ದರೆ ಒಣ ದ್ರಾಕ್ಷಿ ನೀರಿನಲ್ಲಿ ಕಿವುಚಿ ಕುಡಿಸಿದರೆ ಸ್ವಲ್ಪ ವಾಂತಿ ನಿಲ್ಲುತ್ತೆ.
6 ಮಂಡಿ ನೋವು ಇದ್ದರೆ ದಾಲ್ಚಿನ್ನಿ ಚಕ್ಕೆ ತೆಯೂದು ಹಚ್ಚಿದರೆ ನೋವು ಕಡಿಮೆ ಮಾಡುತ್ತದೆ.
7ಅಜೀರ್ಣ ಹೊಟ್ಟೆ ನೋವು ಇದ್ದರೆ ಕೊತ್ತಂಬರಿ ಬೀಜ ಮತ್ತು ಜೀರಿಗೆ ಹಾಕಿ ಕುದಿಸಿ ಸೋಸಿ ಕುಡಿದರೆ ಸಮಸ್ಯೆ ಕಡಿಮೇ ಆಗುತ್ತೆ.
8 ಅತಿಯಾದ ತಲೆ ನೋವು ಇದ್ದರೆ ಪಚ್ಚ್ ಕರ್ಪೂರ ಕೊಬ್ಬರಿ ಎಣ್ಣೆ ಗೆ ಸೇರಿಸಿ ಹದ ಬಿಸಿ ಮಾಡಿ ತಲೆ ಗೆ ಮೂಗಿನ ಮೇಲೆ ಹಚ್ಚಿದರೆ ಶೀತ ಬಾದೆ ತಲೆ ನೋವು ಕಡಿಮೆಯಾಗುತ್ತದೆ.
9 ಬಿಸಿ ಹಾಲಿಗೆ ಅರಿಸಿನ ಪುಡಿ ಚಿಟಿಕೆ ಹಾಕಿ ಕುಡಿದ್ರೆ ಕಫ ಗಂಟಲು ನೋವು ಕಡಿಮೆ ಮಾಡುತ್ತದೆ.
10. ಮಕ್ಕಳಿಗೆ ಮಾತನಾಡಲು ನಾಲಿಗೆ ಹೊರಳದೆ ಇದ್ದರೆ ನಿತ್ಯ ಬಜೆ ಬೇರು ತೆಯುದು
ನಾಲಿಗೆ ಮೇಲೆ ಹಚ್ಚಿ.
11 ಚಿಕ್ಕ ಮಕ್ಕಳಿಗೆ ನಿತ್ಯ ಬಜೆ ಬೇರು ತೆಯುದು ಜೇನುತುಪ್ಪ ಜೊತೆಗೆ ನೆಕ್ಕಿಸಿದರೆ
ಕುಡಿದ ಎದೆಹಾಲು ಜೀರ್ಣ ವಾಗುತ್ತದೆ. ಅಜೀರ್ಣ ಸಮಸ್ಯೆ ಕಡಿಮೆ ಮಾಡುತ್ತದೆ.
12 ದೊಡ್ಡವರಿಗೆ ಕಫ ಕಟ್ಟಿದ್ದಾರೆ ಬಿಸಿ ನೀರಿಗೆ ಚಿಟಿಕೆ ಅರಿಸಿನ ಹಾಕಿ ಕುಡಿಯಬಹುದು.
13.ರಕ್ತ ಹೀನತೆ ಕಾಣಿಸಿಕೊಂಡಾಗ ಕ್ಯಾರೆಟ್ ಜ್ಯೂಸ್ ಕೊಡಿ.
14 ರಕ್ತ ಶುದ್ದಿಗೆ ಸೊಗಡೆ ಬೇರಿನ ಶರಬತ್ತು ಕುಡಿದರೆ ಒಳ್ಳೆದೆ.
15 ಪಿತ್ತ್ತ ಹೆಚ್ಚಿದ್ದರೆ ಹೇರಲೇ ಕಾಯಿ ಜ್ಯೂಸ್ ..ಮತ್ತು ಚಿತ್ರಾನ್ನ ಸೇವನೆ ಒಳ್ಳೆಯದು.
16 ಬಾಣಂತಿಯರು ಮಧ್ಯನ್ಹ ಊಟದ ನಂತರ ತಾಂಬೂಲದ ಜೊತೆ ಬಜೆ ಬೇರು ಸೇರಿಸಿಕೊಂಡರೆ ಅಜೀರ್ಣ ಕಡಿಮೆ ಮಾಡುತ್ತದೆ.
17 ಎದೆಹಾಲು ಹೆಚ್ಚಿಸಲು ಸಬ್ಬಕ್ಕಿ ಸೊಪ್ಪು ಹೆಚ್ಚು ಹೆಚ್ಚು ತಿನ್ನಬೇಕು.
18 ಹೊಟ್ಟೆ ನೋವು ಇದ್ದರೆ ಮೆಂತ್ಯ ಹುರಿದು ಪುಡಿ ಮಾಡಿ ನೀರು ಮಜ್ಜಿಗೆ ಗೆ ಹಾಕಿ
ಉಪ್ಪು ಸೇರಿಸಿ ಕುಡಿಯಬೇಕು.
19.ಮಕ್ಕಳಿಗೆ ಹೊಟ್ಟೆ ನೋವು ಬಂದರೆ 10 ಓಂ ಕಾಳು ಬೆಚ್ಚಗೆ ಮಾಡಿ ನೀರಿನಲ್ಲಿ
ಕುದಿಸಿ ಆರಿಸಿ ಸೋಸಿ ಒಂದೊಂದೇ ಚಮಚ ಕೊಡಬೇಕು.
20 ಬಾಯಿ ವಾಸನೆ ಬರುತ್ತಾ ಇದ್ರೆ ಏಲಕ್ಕಿ ಜಗಿದು ತಿನ್ನಿ.
21 ಕಶ್ಯಾಯ ಮಾಡುವಾಗ ಬೆಲ್ಲಕ್ಕಿಂತ ಕೆಂಪು ಕಲ್ಲು ಸಕ್ಕರೆ ಹಾಕಿ.
22 ಪದೇ ಪದೇ ಕೆಮ್ಮು ತ್ತಿದ್ದರೆ ಕೆಂಪು ಕಲ್ಲುಸಕ್ಕರೆ ಬಾಯಿಗೆ ಹಾಕಿಕೊಂಡು ರಸ ಸೇವಿಸಿ.
23 ತಲೆ ಕೂದಲು ಉದುರುವುದು ಆದರೆ ಮೆಂತ್ಯ ನೆನಸಿ ರುಬ್ಬಿ ಹಚ್ಚಿಕೊಂಡು ತಲೆಗೆ ಸ್ನಾನ ಮಾಡಿ.
24 ಮಕ್ಕಳಿಗೆ ಮೂಗು ಕಟ್ಟಿದರೆ ಮೂಗಿನ ಮೇಲೆ ಕೊಬ್ಬರಿ ಎಣ್ಣೆ ಹಚ್ಚಿ.
25 ಚರ್ಮದ ಸಮಸ್ಯೆ ಕಂಡರೆ ತಕ್ಷಣವೇ ಕೊಬ್ಬರಿ ಎಣ್ಣೆ ಅರಿಸಿನ ಸೇರಿಸಿ ಬಿಸಿ ಮಾಡಿ
ಆರಿದ ಮೇಲೆ ಹಚ್ಚಿ.
26 ಮನೆಯಲ್ಲಿ ಹಿರಿಯರಿಗೆ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಆಗ ಉಪ್ಪು ಅರಿಸಿನ ಹಾಕಿ ನೀರು ಕುದಿಸಿ ಹದವಾದ ಬಿಸಿಗೆ ಕಾಲು ಇಟ್ಟರೆ ನೋವು ಕಡಿಮೆಯಾಗುತ್ತದೆ.
27 ಗಂಟಲ ಲ್ಲಿ ಕಫ ಸಿಕ್ಕಿದ್ದರೆ ಬಿಸಿ ನೀರು ಉಪ್ಪು ಹಾಕಿ ಬಾಯಿ ತೊಳೆದರೆ ಕಫ ಕರಗಿ ಆಚೆ ಬರುತ್ತೆ.
28 ಎಳ್ಳೆಣ್ಣೆ ಗೆ ಪಚ್ಚ ಕರ್ಪೂರ ಸೇರಿಸಿ ಬಿಸಿ ಮಾಡಿ ನೋವಿನ ಜಾಗಕ್ಕೆ ಹಚ್ಚಬಹುದು.
29 ಮಕ್ಕಳಿಗೆ ಭೇದಿ ಆಗ್ತಾ ಇದೆ ಅಂದರೆ ಜಾಯಿಕಾಯಿ ತೆಯುದು ನೆಕ್ಕಿಸಿ ತಕ್ಷಣ ಭೇದಿ ನಿಲ್ಲುತ್ತೆ.
30 ದಾಳಿಂಬೆ ಕುಡಿ ಚಚ್ಚಿ ರಸ ತೆಗೆದು ಕುಡಿಸಿದರೆ ಭೇಧಿ ನಿಲುತ್ತೆ.
ಗೊತ್ತಿದ್ಫು ತಿಳಿಸಿದ್ದೇನೆ.ತಪ್ಪಿದ್ದರೆ ತಿದ್ದಿ .
ನಿಮ್ಮ ಸ್ನೇಹಿತೆ
👍
ಎಚ್ ಎಸ್ ಭವಾನಿ ಉಪಾಧ್ಯ.
ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419
0 Followers
0 Following