Do you have a passion for writing?Join Ayra as a Writertoday and start earning.

ಪವಿತ್ರ ಬಂಧನ ಮದುವೆ ಆಧುನಿಕ ಕುಟುಂಬದ ಭವಿಷ್ಯ

ProfileImg
29 Feb '24
4 min read


image

“ಮದುವೆಯ ಬಂಧ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ” ಎಂದು ಹಿರಿಯರ ನಂಬಿಕೆ. ಸುಖಕರ ಜೀವನಕ್ಕೆ ನೆಮ್ಮದಿ ಬದುಕಿಗೆ ಸೂಕ್ತ ಬಾಳ ಸಂಗಾತಿಯ  ಆಯ್ಕೆ ಉತ್ತಮ. ಅರೇಂಜ್ ಮತ್ತು ಲವ್‌ ಮ್ಯಾರೇಜ್ ಸಲ್ಪ ಭಿನ್ನವಾದರೂ ಇದರ ಸಲುಗೆ ಮತ್ತು ಪ್ರೀತಿಯು ವಿಭಿನ್ನ. ಕೆಲವೊಮ್ಮೆ ಸ್ನೇಹ ಪ್ರೀತಿಗೆ ತಿರುಗಿ ಸಲುಗೆ ಅರೇಂಜ್ ಕಮ್ ಲವ್‌ ಆಗಿದ್ದು ಉಂಟು ಅದುವೇ ತೀರ ಹತ್ತಿರದ ಸಂಬಂಧಗಳಲ್ಲಿ ನೋಡಬಹುದು. ಇನ್ನೂ ಸಂಬಂಧಿಕರಲ್ಲಿ ಹಿರಿಯರು ನಡೆಸುವ ಮದುವೆಯ ಪ್ರಸ್ತಾಪ ಅದು ಮಕ್ಕಳ ಭವಿಷ್ಯದ ಹಿತ ದೃಷ್ಟಿಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ಮದುವೆಯ ನಿಲುವು ಅಂತಿಮ ನಿರ್ಧಾರ. ಈ  ಸಂಬಂಧವು ಮಾತಷ್ಟು ಗಟ್ಟಿ. ಇದು ಹಿರಿಯರ ಮನಸ್ಸಿನ ಅಂತರಾಳದಲ್ಲಿ ನೆಮ್ಮದಿಯ ಭಾವ. ಭಾರತೀಯರ ಹಳೆಯ ಸಾಂಪ್ರದಾಯಿಕ ಪದ್ಧತಿ ಅರೇಂಜ್ ಮ್ಯಾರೇಜ್  ಇಂದಿಗೂ ನಿರಂತರ ಗಾಢವಾಗಿ ಬಂದಿರುವ ನಂಬಿಕೆಯ ಆಚರಣೆ. ಅರೇಂಜ್ ಮ್ಯಾರೇಜ್ ನಲ್ಲಿ ಪರಸ್ಪರ ಪರಿಚಿತರಾಗಿಲ್ಲದವರು ಕೂಡ ಬಂಧನಕ್ಕೆ ಒಳಪಡುತ್ತಾರೆ. ಈ  ವೇಳೆ ಹೊಂದಣೆಕೆ, ಪ್ರೇಮ ಮುಖ್ಯ ಇದರಲ್ಲಿ ತೀರ ಅಪರೂಪ ಮನ ಮೆಚ್ಚುಗೆ ಪಡೆದ ವಿವಾಹ. ಕೆಲವೊಮ್ಮೆ ಮನೆಯವರ ಒತ್ತಡಗಳ ಪ್ರಯತ್ನದ ಪಯಣ ಮದುವೆ ಆಗಬೇಕು ಇಲ್ಲವಾದಲ್ಲಿ ಬಳಸಂಗಾತಿಯ ಅತಿಯಾದ ಹುಡುಕಾಟದಲ್ಲಿ ವಯಸ್ಸಿನ ಮಿತಿಮೀರಿ ಒಟ್ಟಿ ಬದುಕು ಶಾಶ್ವತ 
 

ವಿದೇಶಿಯರ ಮನದಲ್ಲಿ ಭಾರತೀಯರ ಅರೇಂಜ್ ಮ್ಯಾರೇಜ್ ಕಲ್ಪನೆ ಸಂಸ್ಕೃತಿ ಬಗೆಗಿನ ಅಚ್ಚರಿ!

ಅ ದಿನ ನನ್ನ ವಿಧ್ಯಾಭ್ಯಾಸದ ಸಮಯ ನಮ್ಮ ಕಾಲೇಜಿನಲ್ಲಿ ಭಾರತೀಯರ ಸಂಖ್ಯೆ ತೀರ ಕಡಿಮೆ ಎಲ್ಲ ಹೊರದೇಶದವರೇ ಆದರೂ ನನ್ನ ಕ್ಲಾಸ್ನಲ್ಲಿ ಮಾತ್ರ ನಾನು ಸೇರಿ ಮೂವರು ಭಾರತೀಯರು ಅದರಲ್ಲೂ ಬೇರೆ ರಾಜ್ಯದವರೇ ನಾವೆಲ್ಲಾ. ನನ್ನ ತರಗತಿಯಲ್ಲಿ ದಕ್ಷಿಣ ಆಫ್ರಿಕಾದ ಉಗಾಂಡಾದಿಂದ ಬಂದ ಎಡ್ಲಿನ್ ಎಂಬ ಹೆಸರಿನ ಈಕೆ ದಿನ ಕಳೆದಂತೆ ಸಹಜವಾಗಿ ನನ್ನ ಜತೆ ಸ್ನೇಹ ಗಾಢವಾಗಿ ಬೆಳೆಯಿತು. ಮನ ಬಿಚ್ಚಿ ಮಾತನಾಡಲು ಪ್ರಾರಂಭಿಸಿದಳು. ಆಕೆಗೆ  ದೇಶದ ಬಗೆಗಿನ ಕುತೂಹಲ ಮೂಡಿದ್ದು ಸಹಜ. ನನ್ನ ಬಳಿ ಒಂದು ದಿನ ಈಕೆ  ನೇರವಾಗಿ ಹೀಗೆ ತಕ್ಷಣ ಪ್ರಶ್ನಿಸಿದಳು. ಯಾವುದೇ ಮುಲಾಜಿಲ್ಲದೆ “ ನಿನ್ನದ್ದು ಲವ್‌ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಅಂತ ಕೇಳಿದಳು” ಸುಮ್ಮನೆ ಇದ್ದೇ, ನೀವು ಭಾರತೀಯರು  ಅರೇಂಜ್ ಮ್ಯಾರೇಜ್ ಹೇಗೆ ಒಪ್ಪುತ್ತೀರ ಇನ್ನೂ  ಅರೇಂಜ್ ಮ್ಯಾರೇಜ್ ನಲ್ಲಿ ಶಾಸ್ತ್ರ , ಸಂಪ್ರದಾಯ ಅಂತ ರೀತಿ, ರೀವಾಜುಗಳು ಬೇರೆ ಅಲ್ಲವ ಈ ಅವಧಿಯಲ್ಲಿ  ಪರಸ್ಪರ ನೋಟ ಮತ್ತು ಎಂಬಿತ್ಯಾದಿ ನಿಯಮಗಳು ಇದು ಕೆಲ ನಿಮಿಷಗಳಿಗೆ ಅಷ್ಟೇ ಸೀಮಿತ ಮತ್ತು ಹಿರಿಯರ ಸಮ್ಮುಖದಲ್ಲಿ ಒಪ್ಪಿಗೆ ಪಡೆದ ಬಳಿಕವಷ್ಟೇ ನಿಮ್ಮ  ಮದುವೆಯ ನಿಶ್ಚಯ. ಇದೇ ಅರೇಂಜ್ ಮ್ಯಾರೇಜ್ ಅಲ್ಲವ ಎಂದು ಈಕೆಯೇ ಹೇಳಿ ತುಸು ನಕ್ಕು ಬಿಟ್ಟಳು. ಮಾತು ಮುಂದುವರಿಸಿ ನಮ್ಮದು “ಲಿವ್ ಇನ್ ರಿಲೇಶನ್ ಶಿಪ್ ” ಮದುವೆ, ನಾವು ಅರ್ಥೈಸಿಕೊಂಡ ಬಳಿಕವಷ್ಟೇ ನಮ್ಮ ವಿವಾಹ ಆದರೂ ಆತ ನಮ್ಮ ಬಳಿ ಜೀವನ ಪರ್ಯಂತ ಜೊತೆಯಲ್ಲಿರುವುದು, ಶಾಶ್ವತ ಬದುಕು ಕಷ್ಟ ಸಾಧ್ಯ. ಆದರೆ ನಿಮ್ಮ ಅರೇಂಜ್ ಮ್ಯಾರೇಜ್  ಸಿಸ್ಟಮ್ ಹೇಗೆ ಎಂದು ಮರು ಪ್ರಶ್ನಿಸಿದಳು. ಇತ್ತೀಚಿಗೆ ಭಾರತದಲ್ಲೂ ಇಂದು ಲಿವ್ ಇನ್ ರಿಲೇಶನ್ ಶಿಪ್ ಸಾಮಾನ್ಯ ಸಂಗತಿ.  

ಹೌದು! ನನಗೂ ಆಶ್ಚರ್ಯ ಮತ್ತು ಅ ಕ್ಷಣವರೆಗೂ ಇದು ನನ್ನ ಅರಿವಿಗೆ ಬರಲಿಲ್ಲ ಕಾರಣ ನನ್ನ ಮದುವೆಯ ಯೋಚನೆ ನನಗೆ ತುಸು ದೂರವಿತ್ತು  ನಮ್ಮ ಮನೆಯಲ್ಲಿ ನನ್ನ ಮದುವೆಗೂ ಮುನ್ನ ಹಿರಿಯರಿಬ್ಬರಿಗೆ ಮದುವೆಯಾದ  ಅ ಬಳಿಕವಷ್ಷೇ ನನ್ನ ಮದುವೆಯ ಬಗೆಗಿನ ಯೋಚನೆ ಆದರಿಂದ ನಾನು ಕೂಡ ಈ ಮೊದಲು ಇದರ ಬಗ್ಗೆ ಯೋಚಿಸಲಿಲ್ಲ ಆದರೆ ಈಕೆಯ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂಬ ಚಿಂತೆ ನನ್ನದು ಅಕ್ಷಣ ಉತ್ತರ ನೀಡಿದರು ಮತ್ತು ಅರ್ಥೈಸಿದರು ಹಾಸ್ಯಾಸ್ಪದವಾಗಿ  ತೆಗೆದುಕೊಳ್ಳುತ್ತಾಳೆ ಎಂದು ನನ್ನ ಅರಿವಿಗೆ ಬಂದಿತ್ತು. ಅದಕ್ಕೆ ನಾನು ಮರು ಕ್ಷಣವೇ ಅರೇಂಜ್ ಮ್ಯಾರೇಜ್ ಅದು ಭಾರತದ ಕಲ್ಚರ್ (ಸಂಸ್ಕೃತಿ) ಎಂದು ಉತ್ತರಿಸಿ ಸುಮ್ಮನಾದೆ ಆದರೆ ಆಕೆಯ  ಕೂತುಹಲ ಇನೂಷ್ಟು ಹೆಚ್ಚಾಗಿದ್ದು ಸುಳಲ್ಲ, ಹೇಳು ಎಂದು ಪ್ರಶ್ನಿಸಿದಳು ಮತ್ತು ಅದರಲ್ಲೂ ಅವರ ದೇಶದ ಇನ್ನಿಬ್ಬರೊಂದಿಗೆ ಸೇರಿ ಪದೇ ಪದೇ ಮರು ಪ್ರಶ್ನೆ ಪುನಃ ಚರ್ಚೆ ಮುಂದುವರಿಸಿ ಹೀಗೆ ಅಲ್ಲವ ನಿಮ್ಮಲ್ಲಿ ವಧು - ವರರ ಹುಡುಕಾಟ ಹಿರಿಯರು ತೋರಿಸಿದ ತಕ್ಷಣ ಒಪ್ಪಿಕೊಳ್ಳಿತ್ತೀರ ಅಲ್ಲವ ಅದಳ್ಲು ನಾನು ಈ ಮಾತು ಮುಂದುವರಿಸಲ್ಲಿಲ್ಲ ಕಾರಣ ನನಗೂ ಆಕೆಯ ಮಾತಲ್ಲಿ ಸತ್ಯಾಂಶ ಕಂಡಿತು.  

ಬೋಕರ್ ಗಳ ಕಿರಿಕಿರಿ, ವೆಬ್ ಸೆಟ್‌ಗಳಲ್ಲಿ ಹೊಸ ಬದುಕಿನ ಹಾದಿ 
 ಹಿಂದೆ ಬೋಕರ್ ಗಳ ಕೈಯಲ್ಲಿ ಮದುವೆ ಭವಿಷ್ಯವಿತ್ತು ಈ ಬೋಕರ್ ಗಳು ಇಚ್ಛಿಸಿದ್ದು ಮದುವೆ ಆಗಬೇಕು ನೂರು ಸುಳ್ಳು ಹೇಳಿ ಮದುವೆ ಮಾಡುವುದು ಇವರ ಲೋಗ್ ಈಗಂತೂ ಬದಲಾವಣೆ ಹಾದಿಯಲ್ಲಿ ಅನೇಕ ವೆಬ್ ಸೈಟ್ ಗಳ ಹಾವಳಿ ಗಮನಾರ್ಹ ಆದರೆ ಸ್ವಲ್ಪ ಎರವಟ್ಟು ಆದರೂ ಜೀವನ ಅಲ್ಲೋಲ್ಲ ಕಲ್ಲೋಲ್ಲ. ಹಾಗಂತ ಎಲ್ಲವನ್ನೂ ಒಂದು ದೃಷ್ಟಿಯಿಂದ ನೋಡುವುದು ತಪ್ಪು ಕಲ್ಪನೆ. 

ಇಂದು ಲವ್ ಮ್ಯಾರೇಜ್ ಕಮಾನ್ 

ಅಪರೂಪವಾಗಿ ಇಂದ ಲವ್ ಕಹನಿ ಇಂದು ಕಮಾನ್ ಜಾತಿ, ಭೇದ ಲೇಕಿಸದೇ ಯುವಜನರು ತಲೆಬಾಗಿದ್ದು ಮದುವೆಗೆ ಹಿರಿಯರ ಸಮ್ಮುಖದಲ್ಲಿ ಅನುಮತಿ  ಪಡೆದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗುತ್ತಿರುವುದು ಗಮನಾರ್ಹ ಬೆಳವಣಿಗೆ 

ಜೀವನದ ನೈಸರ್ಗಿಕ ಪ್ರೀತಿ ಜಾರಿ ಹೋಗುವ ಸಂಭವ ಹೆಚ್ಚು Love at First Sight "ಲವ್ ಅಟ್ ಫಸ್ಟ್ ಸೈಟ್" ಎಂಬ ಮೊದಲ ನೋಟದಲ್ಲೇ ಪ್ರೀತಿಯ ಹುಟ್ಟು, ಪರಿಕಲ್ಪನೆಯು ಅದ್ಭುತವಾದ ದೀರ್ಘ ಮತ್ತು ಸಂತೋಷದ ದಾಂಪತ್ಯಕ್ಕೆ ಕುತೂಹಲ ಕೆರಳಿಸುತ್ತದೆ. ನಮಗೆ ತಿಳಿದು ತಿಳಿಯದ ಆ ಮೊದಲ ಭೇಟಿಯ ಬಳಿಕ ಒಬ್ಬರನ್ನೊಬ್ಬರು ನಿಜವಾಗಿಯೂ ತಿಳಿದುಕೊಳ್ಳಲು ಕೆಲವು ಸಮಯವು ತೆಗೆದುಕೊಳ್ಳಬಹುದು.  ಅದು ಅತ್ಯಾಕರ್ಷಕ ಅನುಭವವಾದು ಶಾಶ್ವತ ದಾಂಪತ್ಯ, ಆನಂದದಾಯಕ ಪ್ರೀತಿ, ಅನ್ಯೋನ್ಯತೆ, ಪ್ರಾಮಾಣಿಕತೆ, ನಂಬಿಕೆ, ಜೀವನದಲ್ಲಿನ ಉತ್ಸಾಹ ಆಸೆಗಳು, ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ನಾವು ಆಸೆ ಪಟ್ಟತ್ತೇ ಬಳಸಂಗಾತಿ ಸಿಕ್ಕರೆ ವೈವಾಹಿಕ ಜೀವನ ಸ್ವರ್ಗಕ್ಕೆ ಮೂರೇ ಗೇಣು ಇದು ತೀರ ಅಪರೂಪ ಮನಪೂರಕ ಮದುವೆ. ಪ್ರತಿಯೊಬ್ಬರ ಇಚ್ಚೆ  ಕೂಡ ಇದೇ ಆದರೆ ನಾವು ಎಷ್ಟೇ ಪ್ರಯತ್ನಿಸಿದರೂ ಅದೃಷ್ಟ ಮತ್ತು ಹಣೆ ಬರಹದ ಅಂತಿಮ ತೀರ್ಮಾನದಲ್ಲಿ ನಮ್ಮ ಮದುವೆ.. 

ಧರ್ಮಗ್ರಂಥಗಳಲ್ಲಿ ಭಗವಾನ್ ಶ್ರೀ ಕೃಷ್ಣನ ನುಡಿ ಸುಂದರ ಬದುಕಿಗೆ ಪ್ರೀತಿಯ ಸಂದೇಶ

ಹಿಂದೂ ಧರ್ಮದ ಶ್ರೀಮದ್ ಭಗವದ್ಗೀತೆ 700 ಶ್ಲೋಕಗಳ ಪವಿತ್ರ ಗ್ರಂಥ ಭಗವಾನ್ ಶ್ರೀಕೃಷ್ಣನು ಪ್ರೀತಿ ಮತ್ತು ಮದುವೆಯ ಸಂಬಂಧ ಕುರಿತು ಉಲ್ಲೇಖವಿದೆ. ಇದು ಜೀವನದ ಕಷ್ಟದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ಫೂರ್ತಿದಾಯಕ ಎನ್ನಿಸಿದೆ. 

ಇನ್ನೂ ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕಾದ ಶ್ಲೋಕಗಳ ಸಂಗತಿ ಇಲ್ಲಿದೆ. 

"ಪುರುಷನು ಮಹಿಳೆಯನ್ನು ಪ್ರೀತಿಸಿದರೆ ಮತ್ತು ಮಹಿಳೆ ಪುರುಷನನ್ನು ಪ್ರೀತಿಸಿದರೆ, ಕುಟುಂಬಗಳು ಅವರ ಪ್ರೀತಿ ಮತ್ತು ಮದುವೆಗೆ ವಿರುದ್ಧವಾಗಿದ್ದರೆ, ಅದನ್ನು ಧರ್ಮ ಎಂದು ಕರೆಯಲಾಗುತ್ತದೆ" - ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ 

"ನೀವು ಪ್ರೀತಿಯಲ್ಲಿ ಬಿದ್ದಾಗ ನಿಮ್ಮ ಹೃದಯವು ಸಂತೋಷದಿಂದ ತುಂಬಿರಬೇಕು, ನೀವು ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸದ ಹೊರತು ಅದು ಬರುವುದಿಲ್ಲ" - ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ 

"ನಿಮ್ಮ ಸಂಗಾತಿಗೆ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ತಿಳಿದಿಲ್ಲ, ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ಮಾತ್ರ ಅವರಿಗೆ ತಿಳಿದಿದೆ"
- ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ 

"ನಿಮ್ಮ ಪ್ರೀತಿಗೆ ಶಕ್ತಿಯಾಗಿ ಅವರನ್ನು ಎಂದಿಗೂ ಒಂಟಿಯಾಗಿ ಬಿಡಬೇಡಿ" 
- ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ 

"ನಿಮ್ಮ ಸಂಗಾತಿಯಿಂದ ಎಂದಿಗೂ ಏನನ್ನು ಮರೆಮಾಡಬೇಡಿ, ನಿಮ್ಮ ಸ್ವಂತ ಭಾವನೆಗಳಿಗಾಗಿ ನಿಮ್ಮ ಸಂಗಾತಿಯನ್ನು ಎಂದಿಗೂ ನೋಯಿಸಬೇಡಿ" 
- ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ 

"ನೀವು ಪ್ರೀತಿಸುತ್ತಿದ್ದರೆ ಪ್ರೀತಿ ಶಾಶ್ವತವಾಗಿ ಇರಬೇಕು" - ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆ 
 

ಇದು ನೈಜ ಜ್ಞಾನ ಸಾಗರ ನಮ್ಮ ಜೀವನದಲ್ಲಿ ಸಂತೋಷವು ತೆಗೆದುಕೊಳ್ಳುವ ನಿರ್ಧಾರ ಮೇಲೆ ಪರಿಣಾಮ ಬೀರುತ್ತದೆ.

Category : Personal Experience


ProfileImg

Written by Sushma C Raykar