✨✨✨✨✨✨✨✨✨
✨✨✨✨✨✨✨✨✨
ವಿಶ್ವ ಅಪ್ಪಂದಿರ ದಿನ ವಿಶೇಷ.....
*ಅಪ್ಪ ಎಂದರೆ ಸುಂದರ ಕವಿತೆ*
ಅಪ್ಪ ಅಪ್ಪ ನನ್ನಪ್ಪ
ಬಾಲ್ಯದಿ ಬಾಯ್ಪಾಠ ಹೇಳಿಕೊಟ್ಟಪ್ಪ
ಬಿದ್ದರೆ ಏಳ್ವುದ ಕಲಿಸಿದಪ್ಪ
ಎಲ್ಲರಂತಲ್ಲ ನನ್ನಪ್ಪ
ಒಂದೇ ದಿನವು ನಿಮಗೇಕಪ್ಪ
ನಿತ್ಯವೂ ನಮ್ಮೊಡನಿರಿ ಅಪ್ಪ
ಸ್ವಾಭಿಮಾನದಲಿ ಬದುಕಿದ ಅಪ್ಪ
ಅಣ್ಣನೆಂದು ಕರೆಸಿಕೊಂಡ ಅಪ್ಪ
ತೊಡೆಯೇರಿ ಕುಳಿತದ್ದು ಮರೆಯಲ್ಹ್ಯಾಂಗಪ್ಪ
ಬದುಕಿಗೆ ಉಸಿರನು ಕೊಟ್ಟಿಹ ಅಪ್ಪ
ರುಚಿ ರುಚಿ ಊಟವ ಬಡಿಸಿದ ಅಪ್ಪ
ಬಾಲ್ಯಕೆ ಸೀಮಿತ ಏಕಪ್ಪ
ನಿಮ್ಮಾದರ್ಶವ ಮರೆಯನು ಅಪ್ಪ
ಪತಿಯಲಿ ನಿಮ್ಮನು ಕಂಡಿಹೆನಪ್ಪ
ಸದಾ ಒಳಿತನು ಬಯಸಿದ ಅಪ್ಪ
ನೀವಿಂದು ಇರಬೇಕಿತ್ತಪ್ಪ
ಮಕ್ಕಳ ಚೆಂದದ ಬದುಕನು ನೋಡಲು
ಬೇಸರವೆಂದಾಗ ನಮ್ಮೊಡನಾಡಲು
ಮುಂದುವರಿದೀ ಜಗವನು ನೋಡಲು
ಸಂತಸದಲ್ಲಿ ಸಿಹಿಯೂಟ ಮಾಡಲು
ನೀ ಆಲದ ಮರದ ಬಿಳಲಿನಂತೆ
ಅದರಲಿ ಇರುವ ಹಕ್ಕಿ ನಾವಂತೆ
ನೆರಳೊಳಗಿದ್ದರೆ ಬದುಕು ನಿಶ್ಚಿಂತೆ
ಹಾರೈಕೆಯಿಂದಲೇ ಬಾಳು ಸುಂದರ ಕವಿತೆ
✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು
0 Followers
0 Following