ಈ ಎಲ್ಲವು ಬಹುತೇಕ ನಮಗೆಲ್ಲಾ ತಿಳಿದಿರುವ ಪ್ರಯೋಜನಗಳೇ. ಆದರೆ, ಈಗ ತಜ್ಞರ ವರದಿಯೊಂದರ ಪ್ರಕಾರ, ಹೆಂಗಸರು, ಪ್ರತಿದಿನ ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಋತುಬಂಧದ ನಂತರ ಹೃದಯದ ಆರೋಗ್ಯ ಸುಧಾರಣೆಯಾಗುತ್ತದಂತೆ.
ಋತುಬಂಧ ಸಮಯದ ಬೂಸ್ಟರ್!
ಹೌದು, ಋತುಬಂಧದ ಸಮಯದಲ್ಲಿ ಮಹಿಳೆಯರಿಗೆ ಎಂದಿಗಿಂತ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ವಯಸ್ಸಾದಂತೆ, ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿದಾಗ, ಒಟ್ಟಾರೆ ದೇಹದೊಂದಿಗೆ ಹೃದಯದ ಕಾಳಜಿಯನ್ನೂ ವಹಿಸುವುದು ಕೂಡ ಮುಖ್ಯ.
ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿದಿನ ಒಂದು ಲೋಟ ಬೀಟ್ರೂಟ್ ರಸವನ್ನು ಸೇವಿಸುವುದು ಉತ್ತಮ ಮಾರ್ಗ. ಬೀಟ್ರೂಟ್ನಲ್ಲಿರುವ ಖನಿಜಗಳು ಮೂಳೆಯ ಆರೋಗ್ಯವನ್ನು ಸುಧಾರಿಸುವುದರೊಂದಿಗೆ ಋತುಬಂಧದ ಸಮಯದಲ್ಲಿ ಹೆಚ್ಚಾಗಿ ಪರಿಣಾಮಕಾರಿಯಾಗಿರುತ್ತದಂತೆ.
ಹೃದಯಕ್ಕೆ ಒಳ್ಳೆಯದು
“ಬೀಟ್ರೂಟ್ ನೈಸರ್ಗಿಕವಾಗಿ ನೈಟ್ರೇಟ್‌ಗಳಲ್ಲಿ ಸಮೃದ್ಧವಾಗಿದ್ದು,, ಇದು ರಕ್ತನಾಳಗಳನ್ನು ಹಿಗ್ಗಿಸಲು, ಆಮ್ಲಜನಕವನ್ನು ದೇಹಕ್ಕೆ ಸಾಗಿಸಲು ಮತ್ತು ಅದು ದೇಹದಲ್ಲಿ ಅದರ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ಉತ್ಪತ್ತಿಯಾಗುವ ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡುವ ಬೆಟಾಲೈನ್‌ಗಳು ಎಂಬ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ”ಎಂದು ಆಹಾರ ತಜ್ಞರಾದ ವೃತಿ ಶ್ರೀವಾಸ್ತವ್ ಹೇಳುತ್ತಾರೆ.
“ಇದಲ್ಲದೆ, ಬೀಟ್ರೂಟ್, ಈಸ್ಟ್ರೋಜನ್ ಅನ್ನು ಹೆಚ್ಚಿಸುವ ಫೈಟೊಸ್ಟ್ರೋಜೆನ್ಗಳ ಮೂಲ. ಋತುಬಂಧದ ಸಮಯದಲ್ಲಿ, ಈಸ್ಟ್ರೋಜನ್ ಮಟ್ಟವು ಕಡಿಮೆಯಾಗುತ್ತದೆ, ಇದು ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಉರಿಯೂತಕ್ಕೆ ಕಾರಣವಾಗುತ್ತದೆ.
ಬೀಟ್ರೂಟ್ ನಲ್ಲಿರುವ ಫೋಲೇಟ್ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುವ ನ್ಯೂರೋಟ್ರಾನ್ಸ್‌ಮಿಟರ್‌ಗಳನ್ನು ಉತ್ಪಾದಿಸುತ್ತದೆ, ” ಎಂದು ಅವರು ಹೇಳುತ್ತಾರೆ.
“ಋತುಬಂಧದ ನಂತರದ ಮಹಿಳೆಯರಲ್ಲಿ ಸಾಮಾನ್ಯವಾಗಿ ಹೃದಯರಕ್ತನಾಳದಲ್ಲಿ ಬದಲಾವಣೆಯಾಗುತ್ತಿರುತ್ತದೆ. ಜೊತೆಗೆ, ಈಸ್ಟ್ರೋಜನ್ ಮಟ್ಟಗಳು ಕಡಿಮೆಯಾದ ಕಾರಣ ಇನ್ಸುಲಿನ್ ಪ್ರತಿರೋಧವನ್ನು ಅನುಭವಿಸುತ್ತಾರೆ. ಇದು ರಕ್ತನಾಳಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ, ಪ್ರತಿ ದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಅನ್ನು ಸೇವಿಸುವುದರಿಂದ ನೈಟ್ರಿಕ್ ಆಕ್ಸೈಡ್ ಮಟ್ಟ ಹೆಚ್ಚಾಗುತ್ತದೆ, ಮತ್ತು ರಕ್ತದ ಹರಿವು ಹೆಚ್ಚಿಸುತ್ತದೆ ಎಂದು ವೈರೋಟ್ಸ್ ವೆಲ್ನೆಸ್ ಸೊಲ್ಯೂಷನ್ಸ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಬಿಜು ಹೇಳುತ್ತಾರೆ.
ಬೀಟ್ರೂಟ್ ಅನ್ನು ಯಾವ ರೂಪದಲ್ಲಿ ಸೇವಿಸುವುದು ಒಳ್ಳೆಯದು?
“ಬೀಟ್ರೂಟನ್ನು ಇತರ ತರಕಾರಿಗಳು ಅಥವಾ ಹಣ್ಣುಗಳೊಂದಿಗೆ ಸೇವಿಸುವುದು ಯಾವಾಗಲೂ ಉತ್ತಮ. ನಿಮಗೆ ಜ್ಯೂಸ್ ರೂಪದಲ್ಲಿ ಸೇವಿಸುವ ಇಚ್ಛೆಯಿದ್ದರೆ, ಅದನ್ನು ಕ್ಯಾರೆಟ್ ಮತ್ತು ಶುಂಠಿಯೊಂದಿಗೆ ಸೇರಿಸಿ 200 ಮಿಲಿಯಷ್ಟು ಮಾಡಿಕೊಂಡು ತೆಗೆದುಕೊಳ್ಳಿ.
ಅಥವಾ ಸಲಾಡ್‌ಗಳಿಗೆ ಬೀಟ್ರೂಟ್ ಸೇರಿಸಿ, ಅದನ್ನು ಮೊಸರಿನಲ್ಲಿ ಅಥವಾ ಅದಕ್ಕೆ ಮಸಾಲೆ ಹಾಕಿ ಸೇವಿಸಬಹುದು. ತುರಿದ ಬೀಟ್ರೂಟ್ ಅನ್ನು ದೋಸೆ, ಅಥವಾ ಇಡ್ಲಿ ಸಂಪಣಕ್ಕೂ ಸಹ ಸೇರಿಸಿ ಸವಿಯಬಹುದು” ಎಂದು ಬಿಜು ಹೇಳುತ್ತಾರೆ. ಮಧುಮೇಹ ಇರುವ ವ್ಯಕ್ತಿಗಳು, ಬೀಟ್ರೂಟನ್ನು ಜ್ಯೂಸ್ ರೂಪದಲ್ಲಿ ಸೇವಿಸುವ ಬದಲು ಬೀಟ್‌ರೂಟ್ ಅನ್ನು ಇತರ ತರಕಾರಿಗಳೊಂದಿಗೆ ತೆಗೆದುಕೊಳ್ಳುವುದು ಸೂಕ್ತವಂತೆ.
ಮನದ ಮಾತು
0 Followers
0 Following