ಕಾಡುವ ಅಗೋಚರ ಭಾಗ - 1

ಅಗೋಚರ

ProfileImg
02 Jan '24
4 min read


image

 

ಅಗೋಚರ

ಮನೇಲಿ ಜಗಳ ಅದ ಕಾರಣ ಒಂದು ಪುಟ್ಟ ಸಂಸಾರ ಒಂದೇ ಒಂದು ಹೆಣ್ಣು ಮಗು, ಅದು ಮದ್ವೆ ಆಗಿ 10ವರ್ಷದ ಮೇಲೆ ನಾಗ ದೇವರ ಕೃಪೆ ಇಂದ ಜನಿಸಿದ ಮಗು, ಆ ಪುಟ್ಟ ಕಂದಮ ಎರೆಡು ವರ್ಷ ಆಗಿತ್ತು, ಅದನ್ನ ಎತ್ತಿಕೊಂಡು ಎಲ್ಲಾ ಕಡೆ ಕೆಲಸಕ್ಕೆ ಅಲೆದರು. ಕೊನೆಗೆ ಮಂಗಳೂರು ಅಲ್ಲಿ ಒಂದು ಕೆಲಸ ಸಿಕ್ಕಿತ್ತು ಎಂದು ಗಂಡ, ಮಗಳು, ಹೆಂಡತಿ ಕರೆದುಕೊಂಡು ಹೋದ...
     ಕೆಲಸ ಸಿಕ್ತು, ಆದ್ರೆ ಇರಲು ವ್ಯವಸ್ಥೆ ಬೇಕು, ಅಂದು ಅಲ್ಲಿ ಇಲ್ಲಿ ಹುಡುಕಿ ಒಂದು ಮನೆ ಸಿಕ್ಕಿತ್ತು.

  ಬರುವಾಗ ಸಮಯವದಾ ಕಾರಣ   ಹೋಟೆಲ್ ಇಂದ ಊಟದ ವ್ಯವಸ್ಥೆ ಮಾಡಿಕೊಂಡು ಬಂದ ಗಂಡ,ಅವ್ರು ಬಂದ ಕ್ಷಣದಲ್ಲೇ ಅವರ ಜೊತೆಗೆ ಒಂದು ಕಪ್ಪು ನಾಯಿ ಅವ್ರ ಜೊತೆಗೆ ಸೇರಿಕೊಂಡ್ಡಿತ್ತು.ಆ ದಿನ ಒಂದು ನೆಲೆ ಸಿಕ್ಕಿತ್ತು ಅನ್ನೋ ಒಂದ್ ಭರವಸೆ ಇಬ್ಬರಲ್ಲೂ ಮನೆ ಮಾಡಿತ್ತು..

ಬೆಳ್ಗೆ 4ಗಂಟೆಗೆ ಎದ್ದು ಗಂಡ duety ಜಾಯಿನ್ ಆಗಬೇಕಿತ್ತು, ಬೇಗನೆ ಎದ್ದು ಗಂಡ ಹೋರಾಟನು, ಹಿಂದಿನ ದಿನ ದೂರದಿಂದ ಬಂದ ಸುಸ್ತಿಗೇನೋ ಹೆಂಡತಿ ಮಗು ಗಡಾ ನಿದ್ರೆ ಅಲ್ಲೇ ಇದ್ರು, ಬೆಳ್ಗೆ ಲೇಟ್ ಆಗಿ ಎದ್ದ ಹೆಂಡತಿ ಮಗುಗೆ ಏನಾದ್ರು ತಿನ್ನಿಸಬೇಕೆಂದು ಅಡುಗೆ ಮನೆಗೆ ಹೋದಳು, ತಿಂಡಿ ಮಾಡಿ ಇನ್ನೇನು ಮಗುನ ಎಬ್ಬಿಸಬೇಕು ಅನ್ನೋವಾಗ ಮಗು ಒಮ್ಮಲ್ಲೇ ಚಿರಿ ಕೊಂಡು ಕೂಗಿದನ್ನ ಕೇಳಿ,ತಾಯಿ ಅಲ್ಲಿಂದ ಕೋಣೆಗೆ ಓಡಿದಳು, ಮಗು ಅಮ್ಮನ ನೋಡಿ ಓಡಿ ಬಂದು ಕಣ್ಣು ಮುಚ್ಚಿ ಅಪ್ಪಿಕೊಂಡು ಗೋಡೆ ಅತ್ತ ಬೆರಳು ತೋರಿಸಿತ್ತು, ಆದ್ರೆ ಅಲ್ಲಿ ಯಾರು ಇರಲಿಲ್ಲ, ಮಗುನ್ನ ಎತ್ತಿಕೊಂಡು ತಿಂಡಿ ತಿನಿಸಿದಳು. ಸರಿಯಾಗಿ ಮಾತಾಡಲು ಬಾರದ ಕಾರಣ ಅವಳಿಗೆ ಅರ್ಥ ಆಗಲಿಲ್ಲ.

ಹೀಗೆ ಮದ್ಯಾನ ಇಬ್ಬರು ಮಲಗಿದರು ಆಗ ಯಾರೋ ನರಲಾಟದಾ ಶಬ್ದ ಕೇಳಿದ ತಾಯಿ ಹೊರಗೆ ಬಂದು ಎಲ್ಲಾ ಕಡೆ ನೋಡಿದಳು. ಆದ್ರೆ ಯಾರು ಇರಲಿಲ್ಲ, ನನ್ನ ಭ್ರಮೆ ಅಂದು ಮತ್ತೆ ಮಲಗಿದಳು. ಆದ್ರೆ ಆ ಶಬ್ದ ಕೊನೆ ಆಗಲೇ ಇಲ್ಲ, ಗಂಡ ಬರುದು ಮದ್ಯ ರಾತ್ರಿ 11ಅತ್ವ 12ಆಗ್ತಿತ್ತು, ಒಮ್ಮೊಮ್ಮೆ ತುಂಬಾ ಕೆಲಸ ಇದ್ರೆ ಅಲ್ಲೇ ಮಲಗಿ ಬರ್ತಾನೆ ಇರ್ಲಿಲ್ಲ. ಇದು ಮಾಮೂಲಿ ಆಗಿತ್ತು.

ಅಕ್ಕ ಪಕ್ಕದ, ಮನೆಯವರು ಸ್ವಲ್ಪ ಸ್ವಲ್ಪ ಪರಿಚಯ ಆದ್ರೂ, ಆದ್ರೆ ಯಾರು ಕೂಡ ಇವರ ಮನೆ ಕಾಂಪೌಂಡ್ ಕಡೆ ಬರ್ತಾನೆ ಇರ್ಲಿಲ್ಲ, ಬನ್ನಿ ಅಂದ್ರು ಬರ್ತಾ ಇರ್ಲಿಲ್ಲ, ಆಗ ಮನೇಲಿ ಯಾರೋ ನರಳೋ ಶಬ್ದ ಕೇಳುತ್ತೆ ನಿಮಗೆ ಕೇಳ್ತದ ಅಂದಾಗ ಆ ಹೆಂಗಸು ಹೌದು ಅದು ಇಲ್ಲೇ ಸ್ವಲ್ಪ ದೂರ ಒಂದು ಹುಚ್ಚ ಕಿರುಚುವ ಶಬ್ದ ಅಂತ ಹೇಳಿದರು.

ಆದ್ರೆ ಆ ಪುಟ್ಟ ಮಗು ಕೈ ತೋರಿಸಿ ತಾಯಿಗೆ ಏನೋ ತೋರಿಸುವ ಜೊತೆಗೆ ಅಮ್ಮನ ಜೊತೆಗೆ ಅಡಗಿ, ಭಯದಲ್ಲಿ ಕಣ್ಣು ಮುಚ್ಚುತಿತ್ತು.ಆ ಮಗು ಬೆಳಿಗ್ಗೆ ಸರಿ ಇದ್ದರೆ ರಾತ್ರಿ ತುಂಬಾ ಜ್ವರ, ಇಡೀ ರಾತ್ರಿ ಜ್ವರದಲ್ಲಿ ಇರುತಿತ್ತು, ಬೆಳ್ಗೆ ಎಂದಿನಂತೆ ಇರೀತಿತ್ತು, ಅಮ್ಮನ್ನ ಬಿತ್ತು ಎಲ್ಲಿಗೂ ಹೋಗುತಿರಲಿಲ್ಲ. ಹೀಗೆ 6 ತಿಂಗಳು ಕೆಳೆತು, ಮಗು ದಿನಕೊಂದು ರೀತಿಲಿ ಹುಷಾರು ತಪುತಾನೇ ಇತ್ತು, ರಾತ್ರಿ ಇಡೀ ನರಳಾಟಾದ ಶಬ್ದ ಒಮ್ಮೆ ಗಂಡ ಬಂದರೆ ಇನ್ನೊಮ್ನೆ ಬರಲ್ಲ,..

ಒಮ್ಮೆ ಅಡುಗೆ ಮಾಡುವಾಗ ಎದುರಿಗೆ ಯಾರೋ ಬಂದು ನಿಂತಂತೆ ಬಸಾವಾಯ್ತು, ಹೆದರಿ ನಿಂತಾಗ ನಾಯಿ ಜೋರಾಗಿ ಕೂಗಿತು, ಯಾಕೆ ನಾಯಿ ಕುಗ್ತಿದೆ ಅಂತ ಅಲ್ಲೇ ನಿಂತು ನೋಡುವಾಗ ಮಗು ಅಮ್ನನ್ನ ಬಟ್ಟೆ ಹಿಡಿದು ಎಳೆದು ಬಾ ಅನ್ನುವಂತೆ ಹೇಳಿದಾಗ ತಾಯಿ ಹೊರಗೆ ನೆಡೆದಳು ಆಗ ಮೆಲ್ಲಿಂದ ಬಾಗಿಲ ಜಂತಿ ಕೆಳಗೆ ಬಿತ್ತು, ಒಂದು ವೇಳೆ ಅವಳು ಅಲ್ಲೇ ಇದಿದ್ರೆ ಸಾಯ್ತ ಇದ್ಲು.

ಕೊನೆ ಕೊನೆಗೆ ಯಾರೋ ಆಚೆ ಈಚೆ ಹೋದ ಹಾಗೆ, ಕುತ್ತಿಗೆ ಹಿಸಿಕಿದಾಗೆ ಆಗ್ತಾ ಇತ್ತು, ಮಗು ಕೂಡ ಏನೋ ನೋಡಿ ಭಯದಲ್ಲಿ ಇರುತಿತ್ತು,ಯಾರು ಕೂಡ ನಮ್ಮ ಮನೆಗೆ ಯಾಕೆ ಬರಲ್ಲ, ಏನೇನೊ ಯೋಚನೆ ಅಲ್ಲೇ ತಾಯಿ ಇದ್ದಳು. ಮಗುನ್ನ ಒಂದು ಜೋಕಾಲಿ ಅಲ್ಲಿ ಕೂರಿಸಿ ಪಕ್ಕದಲ್ಲಿ ಇದ್ದ ಒಂದು ಗಿಡ ನಡಲು ಹೋದಾಗ, ಮಗು ಜೋರಾಗಿ ಅಳುತಿತ್ತು, ಏನಾಯಿತು ಅಂತ ನೋಡಿದಾಗ ಕಾಲಲ್ಲಿ ರಕ್ತ ನಿರಂತೆ ಹರಿತಿತ್ತು, ಅದನ್ನ ನೋಡಿದ ತಾಯಿ ಬೊಬ್ಬೆ ಹೊಡೆದಾಗ ನೆರೆ ಮನೆಯವರು ಅಲ್ಲೇ ನಿಂತು ವಿಚಾರಿಸಿ, ಹಾಸ್ಪಿಟಲ್ ಹೋಗೋಣ ಅಂತ ಹೇಳಿ ಅಲ್ಲಿಂದ ಕರೆದುಕೊಂಡು ಹೋದರು. ಡಾಕ್ಟರ್ ಮೆಡಿಸಿನ್ ಕೊಟ್ಟು ಮನೆಗೆ ಕಳಿಸಿದರು, ಮನೆಗೆ ಕಾಲಿಟ್ಟ ಕೂಡಲೇ ಪುನಃ ಜೋರಾಗಿ ರಕ್ತ ಹರಿತ್ತು, ಆದ್ರೆ ಅಲ್ಲಿ ಏನು ಇರಲಿಲ್ಲ ಅದು ಹೇಗೆ ಸಾಧ್ಯ ಅಂತ ಮತ್ತೆ ಹತ್ತಿ ಹಾಕಿ ಕಟ್ಟಿ  ಮತ್ತೆ ಮಗುನ್ನ ಎತ್ತಿಕೊಂಡು ಪಕ್ಕದ ಮನೆಗೆ ಬಂದಳು, ಅವರು ನೋಡು ಇವತ್ತು ಇಲ್ಲೇ ಮಲಗು ಅಂತ ಅಲ್ಲೇ ಮಲಗಿದಳು. ಏನು ಶಬ್ದ ಇಲ್ಲದೆ, ಮಗು ಆರಾಮಾಗಿ ಮಲಗಿದಳು.

ಬೆಳ್ಗೆ ಎದ್ದ ಕೂಡಲೇ, ನಿಮ್ಮ ಮನೇಲಿ ಏನು ಶಬ್ದ ಕೇಳಲ್ಲ ಅಲ್ವಾ, ನಮ್ಮ ಮನೇಲಿ ಯಂತ ನರಳಾಟಾ ಗುತ್ತಾ, ಮಗು ಆರಾಮಾಗಿ ಮಲಗಿ ಬಿಟ್ಲು, ಆಗ ಆ ಹೆಂಗಸು ಒಂದು ವಿಷ್ಯ ಹೇಳಲು ಮುಂದಾದಳು......

ನೀವು ಆದಷ್ಟು ಬೇಗ ಆ ಮನೆ ಬಿಟ್ಟು ಹೋದರೆ ಒಳ್ಳೇದು, ಯಾಕಂದ್ರೆ ಅಂದಾಗ ಒಳಗಿಂದ ಒಂದು ಸಣ್ಣ ಧ್ವನಿ ಅಲ್ಲಿ ಪಾರು ಅಂತ ಕರೆದರೂ, ಅದಕ್ಕೆ ಒಗ್ಗೋಟು ಆ ಹೆಂಗಸು ಒಳಗೆ ಹೋದರು. ಎಷ್ಟು ಹೊತ್ತಾದರೂ ಹೊರಗಡೇ ಬಾರದೆ ಇದ್ದಾಗ, ಅವರನ್ನು ಹುಡುಕಿಕೊಂಡು ಆ ಧ್ವನಿ ಬಂದ ಕಡೆಗೆ ನೆಡೆದಳು.

ಅಲ್ಲಿ ಒಂದು ವಯಸ್ಸಾದ ಅಜ್ಜಿ ಮಲಗಿತ್ತು, ಇವಳನ್ನ ನೋಡಿ, ಮಗ ಬಾ ಇಲ್ಲಿ ಅಂತ ಕರೆದಾಗ ಅವಳು ಮೆಲ್ಲಗೆ ಅಜ್ಜಿ ಕಡೆಗೆ ಹೋದಳು ಅವಳ ಕೈ ಹಿಡಿದುಕೊಂಡು, ಯಾರಮ್ಮ, ನೀನು, ನಿನ್ನ ಹೆಸರೇನು ಅಂತ ಕೇಳಿದಾಗ,...
   ಅಜ್ಜಿ, ನನ್ನ ಹೆಸರು ಗೌರಿ ಅಂತ ನಮ್ಮೂರು ದಾವಣಗೆರೆ, ನನ್ನ ತಾಯಿಗೆ ನಾನು ಒಬ್ಳೆ ಮಗಳು.ನಂಗೆ 12ವರ್ಷ ಇರುವಾಗ,ತಾಯಿನ ಕಳೆದುಕೊಂಡೆ, ತಂದೆ ಎರೆಡನೆ ಮದ್ವೆ ಆದ್ರೂ ಚಿಕ್ಕಮ್ಮ, ಚಿಕ್ಕ ವಯಸ್ಸಿನಿಂದ ಕಷ್ಟದ ಮೇಲೆ ಕಷ್ಟ ಕೊಡ್ತಾ ಇದ್ರು, ಇದನ್ನ ನೋಡಿದ್ರು ನೋಡದ ಹಾಗೆ ತಂದೆ ಮೌನವಾಗೇ ಇದ್ರು, ಚಿಕ್ಕಮ್ಮನಿಗೆ ಮಕಳು ಆಗಲೇ ಇಲ್ಲ, ಆದ್ರೂ ನನ್ನ ಮೇಲೆ ಯಾವ ಪ್ರೀತಿನೂ ಇರಲಿಲ್ಲ. ಹೊಡೆದು ಬಡಿದು ಮಾಡ್ತಾನೆ ಇದ್ರು, ಓದೋ ವಿಷಯದಲ್ಲಿ ಖಡಖಂಡಿತವಾಗಿ ಅಡ್ಡ ಹಾಕಿದರೂ, ಆದ್ರೆ ನನ್ನ ತಂದೆ ಅದೊಂದು ವಿಷಯಕ್ಕೆ ಚಿಕ್ಕಮ್ಮನಾ ಜೊತೆಗೆ ಜಗಳ ಮಾಡಿ ಓದಿಸಲು ಮುಂದಾದರು, ಹೇಗೋ ಏನೋ puc ತನಕ ಓದಿದೆ, ಆದ್ರೆ ಮುಂದೆ ಓದಲು ಸಾಧ್ಯವಾಗಲಿಲ್ಲ ನನ್ನ ತಂದೆ ಅರೋಗ್ಯ ಹದಗೆಟ್ಟಿತ್ತು, ಚಿಕ್ಕಮ್ಮ ಅವರನ್ನ ಮುಟ್ಟಲು ಸಹ ಬರುತ್ತಿರಲಿಲ್ಲ, ತಂದೆ ಮೇಲಿನ ವ್ಯಾಮೋಹ ನನ್ನ ವಿದ್ಯಾಭ್ಯಾಸ ನಿಲ್ಲುವಂತೆ ಮಾಡಿತ್ತು, ತಂದೆಗೆ 2ವರ್ಷ ಹಾಸಿಗೆ ಅಲ್ಲೇ ಇದ್ದರು, ಆಗ ನನ್ನ ಮದ್ವೆ ನೋಡೋ ಅಸೆ ಅಂತ ಆಗಾಗ ಹೇಳುತ್ತಾನೆ ಇದ್ದರು. ಇದನ್ನ ಗಮನಿಸಿದ ನನ್ನ ಚಿಕ್ಕಮ್ಮ, ನಮ್ಮ ಮನೆಗೆ ಕೆಲಸಕ್ಕೆ ಬರುವವನನ್ನ ಮದ್ವೆ ಮಾಡಿಸಿದ್ರೆ, ಇಲ್ಲೇ ಜೀತಾ ಮಾಡ್ಕೊಂಡು ಇರಲಿ ಅಂತ ಬೇಡ ಅಂದ್ರು ಮದ್ವೆ ಮಾಡಿಸಿ ಕೊಟ್ಟರು.

ಮದ್ವೆ ಅದಾ ಮೇಲು ಕೂಡ, ನನ್ನ ಮತ್ತು ನನ್ನ ಗಂಡ ಸಂಜು, ಒಂದು ದಿನಾನೂ ಒಟ್ಟಿಗೆ ಇರಲು ಬಿಡುತಿರಲಿಲ್ಲ, ಇದನೆಲ್ಲ ನೋಡಿದ ನನ್ನ ತಂದೆ ನನ್ನ ಗಂಡನನ್ನು ಕರೆದು, ಸಂಜು, ನನ್ನ ಮಗಳನ್ನ ಚನ್ನಾಗಿ ನೋಡಿಕೋ, ತಾಯಿ ಕಳೆದುಕೊಂಡ ಮಗು ಅದು, ಚಿಕ್ಕಮ್ಮನಾ ಕಷ್ಟದಲ್ಲಿ ಬೆಳೆದಳು. ಓದೋ ಸಮಯದಲ್ಲಿ ಈ ತಂದೆ ಸೇವೆ ಮಾಡೋ ಹಾಗೆ ಆಯಿತು. ಮದ್ವೆ ಕೂಡ ಬಲಾತ್ಕಾರದಲ್ಲೇ ಆಯಿತು. ಈ ನರಕದಿಂದ ನನ್ನ ಮಗಳನ್ನ ಕರೆದುಕೊಂಡು ಹೋಗು, ಆ ರಾಕ್ಷಸಿ ನಿಮ್ಮನ್ನ ಚನ್ನಾಗಿ ಇರಲು ಬಿಡುವುದಿಲ್ಲ. ಅಂತ ಅತ್ತಿದ್ದರು, ಇದಾದ ಸ್ವಲ್ಪ ದಿನಕ್ಕೆ ನಮ್ಮನ್ನು ಬಿಟ್ಟು ಹೊರಟೆ ಹೋದರು.

    ಮುಂದುವರಿಯಲಿದೆ.....
 


 

Category:Stories



ProfileImg

Written by Sahana gadagkar