ಟೈಂ ಎಷ್ಟು ಎಂದು ಕೇಳಿದಾಗ ಕೂಡಲೇ ನಮ್ಮ ಕೈಯನ್ನು ಮೇಲಕ್ಕೆತ್ತಿ ಸಮಯವನ್ನು ಹೇಳುತ್ತೇವೆ. ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚುತ್ತಲೇ ಗಡಿಯಾರವನ್ನು ಕಟ್ಟಿಕೊಳ್ಳುವುದು ಕಡಿಮೆಯಾಗಿತ್ತು. ಸ್ಮಾರ್ಟ್ ಫೋನ್ ಗೆ ಸಡ್ಡು ಹೊಡೆದು ಸ್ಮಾರ್ಟ್ ವಾಚ್ ಉಗಮ ಆಯಿತು.
ಎಚ್ ಎಂ ಟಿ, ಸೋನಾಟಾ ಇಂದ ಐ ವಾಚ್ ನ ವರಗೆ ಕೈ ಗಡಿಯಾರ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪುಟ್ಟ ಮಗುವಿನಿಂದ ಹಿಡಿದು ದೊಡ್ಡವರ ಕೈಯಲ್ಲಿ ಈಗ ವಾಚು ಸಾಮಾನ್ಯ. ಆದರೆ ಗಡಿಯಾರದ ಇತಿಹಾಸ ತುಂಬಾ ದೊಡ್ಡದು…
ಜೀವನದಲ್ಲಿ ಸಮಯ ಎನ್ನುವುದು ತುಂಬಾನೇ ಮುಖ್ಯ ಸಮಯ ಮೀರಿ ಹೋದ್ರೆ ಎಲ್ಲವೂ ಮೀರಿ ಹೋದಂತೆ.. ನಮ್ಮ ಅಪ್ಪ ಅಮ್ಮ ಅಥವಾ ಗುರುಗಳು ಅಥವಾ ಯಾರಾದ್ರೂ ಮಾತಿಗಾದ್ರೂ ಟೈಮ್ ಆ ಫಾಲೋ ಮಾಡ್ಬೇಕು ಎಂದು ಹೇಳುತ್ತಾರೆ.. ಯಾಕೆ? ಟೈಮ್ ಇಲ್ಲದಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು? ಹಿಂದೆಲ್ಲಾ ಸೂರ್ಯನನ್ನ ನೋಡಿ ಸಮಯವನ್ನು ಹೇಳುತ್ತಿದ್ದರು ಆದರೆ ಕಾಲ ಬದಲಾದಂತೆ ಗಡಿಯಾರಗಳ ಆವಿಷ್ಕಾರ ಆಯ್ತು.
ಹಾಗಾದ್ರೆ ಗಡಿಯಾರವನ್ನ ಮೊದಲ ಬಾರಿ ಕಂಡುಹಿಡಿದಿದ್ದು , ಗಡಿಯಾರಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಇರೋದು ಎಂದು ಹೇಳಲಾಗುತ್ತದೆ. ಕ್ರಿಸ್ತಪೂರ್ವ 3500 ರಲ್ಲಿ ಪುರಾತನ ಈಜಿಪ್ಟಿಯನ್ನರು ಸೂರ್ಯನ ಬಿಸಿಲಿಗೆ ಉದ್ದದ ಕಲ್ಲುಗಳನ್ನ ನೆಟ್ಟು ಅದರ ನೆರಳಿನ ಆಧಾರದ ಮೇಲೆ ಸಮಯವನ್ನು ಹೇಳುತ್ತಿದ್ದರು.
ಈ ನೆರಳು ಗಡಿಯಾರದ ಕಲೆಯನ್ನ ಚೈನೀಸ್ ಹಾಗೂ ಈಜಿಪ್ಟಿಯನ್ನರು ಕರಗತ ಮಾಡಿಕೊಂಡಿದ್ದರು. ಬೆಳಕು ಇರುವಾಗ ಬಿಸಿಲಿನ ನೆರಳಿನ ಮೂಲಕ ಅಳೆಯುತ್ತಿದ್ದರು ಆದರೆ ರಾತ್ರಿ ವೇಳೆ ಸಮಯ ಅಳೆಯುವುದು ತುಂಬಾ ಕಷ್ಟವಾಗಿತ್ತು.
ಈ ಮಧ್ಯೆ ಜಲಗಡಿಯ ರಾ ಕೂಡಾ ಹುಟ್ಟಿಕೊಂಡಿತ್ತು ನೀರಿನ ಹರಿವಿನಿಂದ ಸಮಯ ಅಳೆಯುವ ಸಾಧನ ಆಗಿತ್ತು. ಇದನ್ನು ಹೆಚ್ಚಾಗಿ ರಾತ್ರಿ ಬಳಸಲಾಗುತ್ತಿತ್ತು.
ಕಾಲ ಕಳೆದು ಹೋದಂತೆ ಗ್ರೀಕ್ ಹಾಗು ರೂಮ್ ಕಾಲ ಮಾಪನ ತಜ್ಞರು, ಖಗೋಳ ವಿಜ್ಞಾನಿಗಳು ಜಲಗಡಿಯಾರಗಳನ್ನು ನೂತನ ರೂಪದಲ್ಲಿ ನಿರ್ಮಿಸಿದ್ದರು.1088ರಲ್ಲಿ ಚೀನಾದ ಸು ಸಂಗ್ ಮತ್ತು ತಂಡ ನಿರ್ಮಿಸಿದ 30 ಅಡಿ ಎತ್ತರದ ಜಲಗಡಿಯಾರ ಕಂಡುಹಿಡಿದಿದ್ರು ಆಗಿನ ಕಾಲದಲ್ಲಿ ಗಂಟೆ ಮುಳುಗುವ ವ್ಯವಸ್ಥೆ ಕೂಡ ಇತ್ತು ಎಂದು ಹೇಳಲಾಗುತ್ತದೆ.
ಕಾಲಕ್ರಮೇಣ ಬಳಕೆಯಲ್ಲಿದ್ದ ಜಲಗಡಿಯಾರ ಅಥವಾ ನೆರಳು ಗಡಿಯಾರ ಸಮಯವನ್ನ ನಿಖರವಾಗಿ ಹೇಳಲು ತುಂಬಾ ಕಷ್ಟವಾಗಿದ್ದ ಕಾರಣ ಬೇರೆ ಏನನ್ನಾದರೂ ಕಂಡುಹಿಡಿಯಬೇಕು ಎಂದು ಇಂಗ್ಲೆಂಡ್ನಲ್ಲಿ 1250ರಲ್ಲಿ ಮೊದಲ ಯಾಂತ್ರಿಕ ಗಡಿಯಾರವನ್ನ ಸ್ಥಾಪಿಸಲಾಯಿತು ಎಂಬ ವಾದ ಕೂಡ ಇದೆ
ಇನ್ನೂ ಸ್ಯಾಲಿಸ್ ಬರಿ ಕ್ಯಾಥೆಡ್ರಲ್ ಗಡಿಯಾರ ಕ್ರಿಸ್ತ ಶಕ 1386ರಲ್ಲಿ ನಡೆಸಲಾಗಿತ್ತು ಇದು ಈಗಲೂ ಕಾರ್ಯನಿರ್ವಹಿಸುತ್ತಿರುವ ಏಕೈಕ ಪುರಾತನ ಯಾಂತ್ರಿಕ ಗಡಿಯಾರ ಎಂದು ಹೇಳಬಹುದು.
16ನೇ ಶತಮಾನದಲ್ಲಿ ಕಿ ಚಾಲಿತ ಗಡಿಯಾರಗಳು ರೂಪಗೊಂಡಿತು. ಮೊದಲು ಸಾರ್ವಜನಿಕ ಬಳಕೆಗೆ ಮೀಸಲಿದ್ದ ಗಡಿಯಾರಗಳು ನಂತರ ವೈಯಕ್ತಿಕ ಬಳಕೆಗೆ ಲಭ್ಯವಾದವು ಹೊಸ ತಂತ್ರಜ್ಞಾನ ಬರುತ್ತಿದ್ದಂತೆ ಗಾತ್ರಗಳು ಕೂಡ ಬದಲಾದವು.
1650ರಲ್ಲಿ ಲೋಕ ಗಡಿಯಾರ ಆವಿಷ್ಕಾರ ಆಯ್ತು 1656 ರಲ್ಲಿ ಕ್ರಿಸ್ಟಿಯನ್ ಹೆಜೀನ್ಸ್ ಎಂಬವರು 1656ರಲ್ಲಿ ಈ ಗಡಿಯಾರದ ಪೇಟೆಂಟ್ ಪಡೆದರು.
ಆಗಿನ ಕಾಲದ ಗಡಿಯಾರಗಳಲ್ಲಿ ನಿಮಿಷ ಅಥವಾ ಸೆಕೆಂಡ್ ಗಳ ಮುಳ್ಳುಗಳು ಕೂಡ ಇರಲಿಲ್ಲ. 1700ರ ವೇಳೆಗೆ ನಿಖರವಾಗಿ ಸಮಯವನ್ನು ಅಳೆಯುವ ಗಡಿಯಾರ ಜಗತ್ತಿನಲ್ಲೇ ಜನಪ್ರಿಯವಾಯಿತು ಭಾಗಿಯಾಗಿದ್ದರಿಂದ ಇದನ್ನು ಬರೀ ಶ್ರೀಮಂತರು ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಪುರುಷರು ಈ ಗಡಿಯಾರವನ್ನು ಹೊಂದಿದರೆ ಅದೊಂತರ ಪ್ರತಿಷ್ಠೆಯ ಸಂಕೇತವಾಗಿತ್ತು.
ಪ್ರಾಚೀನ ಗಡಿಯಾರವೆಂದರೆ ಸುಮಾರು 1430ರಲ್ಲಿ ಬರ್ಗುಂಡಿಯ ಡ್ಯೂಕ್ ಆದ ಪೀಟರ್ ದಿ ಗುಡ್ ಗೆ ನೀಡಿದ ಸ್ಪ್ರಿಂಗ್ ಚಾಲಿತ ಚೇಂಬರ್ ಗಡಿಯಾರ. ಇದು ಈಗ ಜೆರ್ಮಾನಿಶೆಸ್ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿದೆ..
17ನೇ ಶತಮಾನದ ಆರಂಭದಲ್ಲೇ ತೂಗಾಡುವ ಗುಂಡೊಂದನ್ನು ಬಳಸಿ ಕಾಲಸೂಚಕ ಸಾಧನವೊಂದರ ಚಲನೆಯನ್ನು ನಿಯಂತ್ರಿಸುವ ಕಲ್ಪನೆ ಗೆಲಿಲಿಯೋಗೆ ತಿಳಿದಿತ್ತು.
ತನ್ನ ಜೀವನವನ್ನೇ ಗಡಿಯಾರಗಳ ನಿಷ್ಕೃಷ್ಟತೆಯ ಅಭಿವೃದ್ಧಿಗಾಗಿ ಮುಡಿಪಾಗಿಟ್ಟ ಜಾನ್ ಹ್ಯಾರಿಸನ್ರಿಗೆ ಕಾಲಾಂತರದಲ್ಲಿ 1761 ರಲ್ಲಿ ಈ ಬಹುಮಾನವನ್ನು ಕೊಡಲಾಯಿತು
ಗಡಿಯಾರದ ಫಲಕಗಳಲ್ಲಿ ಎನಾಮಲ್ ಹಾಗೂ ಕೈಯಿಂದ ಬಣ್ಣ ಹಚ್ಚಿದ ಪಿಂಗಾಣಿಗಳನ್ನು ಉಪಯೋಗಿಸಲಾಗುತ್ತಿತ್ತು.
ನವಂಬರ್ 17, 1797ರಲ್ಲಿ, ಏಲಿ ಟೆರ್ರಿ ಒಂದು ಗಡಿಯಾರಕ್ಕಾಗಿ ಪ್ರಪ್ರಥಮ ಬಾರಿಗೆ ಹಕ್ಕುಪತ್ರ ಪಡೆದನು. ಟೆರ್ರಿಯನ್ನು ಅಮೇರಿಕಾದ ಗಡಿಯಾರ ಕೈಗಾರಿಕೆಯ ಸಂಸ್ಥಾಪಕ ಎಂದು ಕರೆಯಲಾಗಿದೆ.
1840ರಲ್ಲಿ ಸ್ಕಾಟಿಷ್ ಗಡಿಯಾರ ತಯಾರಕನಾದ ಅಲೆಕ್ಸಾಂಡರ್ ಬೈನ್, ತನ್ನ ವಿದ್ಯುತ್ ಗಡಿಯಾರಕ್ಕೆ ಹಕ್ಕುಪತ್ರವನ್ನು ಪಡೆದನು
ನಂತರ ಬಂದ ಯಾಂತ್ರಿಕ ಗಡಿಯಾರಗಳಲ್ಲೂ ಸಹ ದೊಡ್ಡ ಬ್ಯಾಟರಿಗಳನ್ನು ಅಳವಡಿಸಲು ಪ್ರಾರಂಭಿಸಿ ಕೀಲಿ ಕೊಡುವ ಪದ್ದತಿಯನ್ನು ಕೈಬಿಡಲಾಯಿತು
ಹೇಗೆ ಕಾಲಚಕ್ರ ಉರಿಳಿದಂತೆ ಗಡಿಯಾರದ ರೂಪುರೇಷೆಗಳು ಬದಲಾಯಿತು.. ಅದೆಷ್ಟು ಕಂಪನಿಗಳು ಹೆಸರುವಾಸಿಯಾದವು ಹೆಚ್ ಎಂ ಟಿ, ಟೈಟಾನ್ ಅಂದಿನ ಕಾಲದ ಫೇಮಸ್ ವಾಚ್ ಕಂಪನಿಗಳು.
ಕಾಲಕ್ರಮೇಣ ಎಚ್ ಎಂ ಟಿ ವಾಚ್ ಕೂಡ ಸ್ಥಗಿತಗೊಂಡಿತು. ನಂತರ ಸ್ವಿಸ್, ಫಾಸ್ಟ್ ಟ್ರ್ಯಾಕ್, ಕ್ಯೂ ನೆಟ್ ವಾಚ್ ಹೀಗೆ ಹಲವಾರು ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಮುಳ್ಳುಗಳಿರುವ ಗಡಿಯಾರಗಳು ಒಂದಾದರೆ ಡಿಜಿಟಲ್ ಮೂಲಕ ಸಮಯ ತೋರುವ ಗಡಿಯಾರಗಳ ಕೂಡಾ ಸಂಖ್ಯೆ ಹೆಚ್ಚಾಗಿದೆ. ಈಗಂತೂ ನವೀನ ಮಾದರಿಯ ಸ್ಮಾರ್ಟ್ ವಾಚ್ ಭಾರಿ ಸದ್ದು ಮಾಡುತ್ತಿದೆ.
ತಮ್ಮ ಸ್ಮಾರ್ಟ್ ಫೋನ್ ಗೆ ಕನೆಕ್ಟ್ ಆಗಿರುವ ಡಿಜಿಟಲ್ ಸ್ಮಾರ್ಟ್ ವಾಚ್ ದೇಹದ ತಾಪಮಾನ ಹೃದಯದ ಬಡಿತ ಹಾಗೂ ಇನ್ನಿತರ ಹಲವಾರು ಅನುಕೂಲಗಳು ಹೊಂದಿದೆ. ಯಾವುದೇ ವಾಚ್ ಆಗಿರಲಿ ಯಾವುದೇ ವಿನ್ಯಾಸದ ಕೈಗಡಿಯಾರ ಆಗಿದ್ರು ಸಮಯ ಒಂದೇ ಅಲ್ವಾ..ಒಟ್ಟಿನಲ್ಲಿ ಯಾವುದೇ ಗಡಿಯಾರವನ್ನ ತೆಗೆದುಕೊಂಡು ಟೈಂ ಫಾಲೋ ಮಾಡುವುದನ್ನು ಮಾತ್ರ ಮರೆಯಬೇಡಿ.
Photographer, Graphic Designer, Content Writer
0 Followers
0 Following