ಶುಭೋದಯ…



image

ಪರಮಾತ್ಮನ ಸೃಷ್ಟಿಯ ಸೊಬಗು, 

ಕಣ್ತುಂಬಿಕೊಳ್ಳಲಾರದಷ್ಟು ಬೆರಗು., 

ವರ್ಣಿಸಲು ಪದಗಳೇ ಸಾಲದು ಬೆಳಗಿನ ಸೊಬಗು.. 

     ಮಳ್ಳಿ -ಮಳ್ಳಿ ಮಿಂಚುಳ್ಳಿ ಜಾಣ-ಜಾಣ ಕಾಜಾಣ,

ಪೂರ್ವ ಪೂರ ಕೆಂಪಾಯ್ತು, ಗಾಳಿ-ಗಂಧ ಇಂಪಾಯ್ತು, 

ದಿನವಿಡೀ ಇದೇಥರ ಇದ್ದರೆಷ್ಟು ಚಂದ, ಚಂದ, 

ಏಳಿ-ಏಳಿ ಎಲ್ಲಾ - ಈ ಭೂಮಿಗಾಯ್ತು ಮೆಲ್ಲ, 

ಆ ದಿವಾಕರನ ಉದಯ, 

ಬಾನಮ್ಮನೊಡಲಾ ಕಂದಮ್ಮಗಳು ಈ ಕೆಂಪಾದ ಮುಗಿಲುಗಳು,

ಆ ಕಂದಗಳನು ತೂಗೋಕೇ ಬರುವ 

ತಂಗಾಳಿ ಲಹರಿಗಳು, 

ಮನ ದೇವತೆಯ ಶಾಲೆ, 

ಮಣಿ ಮಾಲಿಕದ ಮಾಲೆ, 

ಈ ಎಲೆ-ಎಲೆ ಹಿಮಗಳ ತಂಗುದಾಣ, 

ಮುಂದೆಲ್ಲಿಗೇ ಪಯಣ, 

ಆಹಾ!  ಮುಂಜಾನೇ ಗಗನ ಎಲ್ಲೆಲ್ಲೂ ಕವನ 

ಸಾಲೆಲ್ಲ ಪಕ್ಷಿಗಳು, 

ಒಂದೊಂದು ಥರದ -ನೂರೊಂದು ಥರದ  ಸ್ವಚ್ಛಂದ ಗಮಕಗಳು,

ನವಿರಾದ ನುಡಿ ವಚನ- ಈ ಪುಟಾಣಿಗಳ ಪಠಣ, 

ಈ ಬದುಕಿಗೆ ಪ್ರತಿದಿನ ಸೂರ್ಯನುದಯ 

ಆದಾಗ ಹರುಷಮಯ, 

   ಆಹಾ! ಈ ಬೆಳಗಿನ ಸುಂದರ ಸೊಬಗನ್ನು ವರ್ಣಿಸುವ ಸಾಹಿತ್ಯದ ವಿವರ, ಅದಕ್ಕೂ ಮಿಗಿಲಾಗಿ ಮುಂಜಾವಿನಲ್ಲಿ ಎದ್ದು, 

ಚುಮು-ಚುಮು ಚಳಿಯಲ್ಲಿ ಮಿಂದೆದ್ದು, 

ಒಂದ್ ರೌಂಡು ಗದ್ದೆ-ಬಯ್ಲಲ್ಲಿ/ಕಾಡು-ಮೇಡಲ್ಲಿ,..ಈ ಮೇಲೆ ವಿವರಿಸಿದ ಇಂಪಾದ ಹಾಡನ್ನ ಹಚ್ಕೊಂಡು, ನಡೀತಾ ಇದ್ರೇ, 

ಕವಿಯ ವಾಣಿಯಂತೆ ಆನಂದಮಯ ಈ ಜಗಹೃದಯ

ಏತಕೇ ತ್ವಯಮಾಡೋ ಸೂರ್ಯೋದಯ/(ಚಂದ್ರೋದಯ) ದೇವರ ದಯಕಾಣೋ, 

ಆಹಾ! ಆನಂದಮಯ ಈ ಜಗಹೃದಯ, 

ಅಬ್ಬಾ! ದೇವ್ರೇ ಏನಪ್ಪಾ ನಿನ್ನ ಸೃಷ್ಟಿ ಎಂದು ಕೈ ಮುಗಿದು ಬೇಡಿಕೊಳ್ಳುವುದೇ ಲೇಸು, 

ಈ ಸೊಬಗನ್ನು ಸವಿಯುತ್ತಿರುವ ನಾನು ಈಗಷ್ಟೇ ಕಣ್ಣು ತೆರೆದ ಕೂಸು, 

ಈ ಬೆಳಗಿನ ಸಮಯದ /ಮುಂಜಾವಿನ ಸೊಬಗನ್ನು ವರ್ಣಿಸಲು ನನ್ನ ಬರಹಗಳು ಲೆಕ್ಕಕ್ಕೆ ಬಾರದವು ಎಂಬುದನ್ನು ತುಸು ಗಮನಿಸು, 

ಇದನ್ನು ಅನುಭವಿಸುತ್ತಿರುವ  ನಿನ್ನ ಮೊಗದಲ್ಲಿ ಸದಾಕಾಲ ನಗುವನ್ನು ತುಂಬಿಸು, ಆನಂದವ ಅನುಭವಿಸು, 

ನಿನ್ನ ಕನಸುಗಳನ್ನ ನನಸಾಗಿಸು…

ಶಾಂತಾರಾಮ ಹೊಸ್ಕೆರೆ, ಶಿರಸಿ

ಉತ್ತರ ಕನ್ನಡ, 7676106237

 

Category:Poetry



ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...