ಅನುಭವ ಎನ್ನುವುದು ಕೆಲವೊಂದು ಸಾರಿ ಕೆಲವರಿಗೆ ಅಭಿಪ್ರಾಯ ಏನಿಸಬಹುದು. ಏಕೆಂದರೆ ಅನುಭವ ನಾನಾ ರೀತಿಯಲ್ಲಿ ನಾನಾ ಜನರಿಗೆ ಬೇರೆ ತರಹದ ಅನುಭವ ಆಗಬಹುದು. ಆದರೆ ಕೆಲವು ಅನುಭವಗಳು ಒಂದೇ ರೀತಿಯ ರುಚಿಯನ್ನು ಮತ್ತು ಕಹಿಯನ್ನು ಕೊಡುತ್ತದೆ. ಅದೇ ಸಿಹಿ ಮತ್ತು ಕಹಿ.
ದೇವರು ಎಂಬುವ ನಿರ್ವಿಕಾರ ಎಂದೆಲ್ಲ ಹೇಳುತ್ತೇವೆ ಅದು ಹೇಳಿದವರ ಅನುಭವ.
ಒಮ್ಮೆ ನೀನು ಪ್ರಶ್ನೆ ಕೇಳಿದೆ ನನ್ನನು.. ದೇವರು ಎಲ್ಲಿದ್ದಾನೆ ತೋರಿಸು ಎಂದು.
ಉತ್ತರ : ದೇವರು ಇಲ್ಲ ಎಂಬುವ ಆಲೋಚನೆಯನ್ನು ನನಗೆ ತೋರಿಸು. ನಿನ್ನ ಪ್ರತಿ ದಿನದ ಉಪಾಯಗಳನ್ನ ತೋರಿಸು. ನಿನ್ನ ತಾಯಿಗೆ ನೀ ತೋರಿಸುವ ಪ್ರೀತಿ ಎ ಷ್ಟಕೆ ಬೆಲೆ ಬಾಳುವುದು ಹೇಳು.. ಎಂದ ತಕ್ಷಣ..
ನೀನು ಹೇಳಿದೆ.. ಇಲ್ಲ … ನನ ತಾಯಿಯ ಮೇಲಿನ ಪ್ರೀತಿ ಏನು ಕೊಟ್ಟರು ಕೊಡಲಾಗುವುದಿಲ್ಲ ಎಂದೆ.
ಹಾಗಾದರೆ ಆ ತಾಯಿಯ ಪ್ರೀತಿಯನ್ನ ಎಷ್ಟಿದೆ ತೋರಿಸು ಎಂದೆ.
ಅದು ಸಾಧ್ಯವಿಲ್ಲ ಎಂದೆ.
ಹಾಗಾದರೆ ದೇವರನ್ನು ತೋರಿಸಲು ಸಾಧ್ಯವಿಲ್ಲ.
ನೀನು ಮತ್ತೆ ಪ್ರಶ್ನೆ ಹಾಕಿದೆ.. ಎಂಟ ವರ್ಷದ ಬಾಲಕಿಗೆ ಅತ್ಯಾಚಾರ ಮಾಡಲಾಗಿದೆ ದೇವರು ಎಲ್ಲಿದ್ದಾನೆ?
ಉತ್ತರ : ಮನುಜ ತನ್ನ ದೇಹವನ್ನ ಮುಚ್ಚಿಕೊಂಡ ತನ್ನ ಬುದ್ದಿಯಿಂದ ಕಾನೂನು, ಸರ್ಕಾರ, ಆಸೆಗಳು, ಹೋಲಿಕೆಗಳು, ಆಡಂಬರ, ಮಾನ, ಮರ್ಯಾದೆ, ಸನ್ಮಾನ, ಎಲ್ಲವನ್ನು ಮಾಡಿಕೊಂಡಿದ್ದು ಮಾನವ ತನ್ನ ಬುದ್ದಿಯಿಂದ.
ದೇವರ ಕರ್ತವ್ಯ ಸೃಷ್ಟಿಸುವುದು. ನೀ ಮಾಡಿಕೊಂಡದ್ದು ನೀನೆ ಅನುಭವಿಸು ಎಂಬುದು.
ನೀನು ಮತ್ತೆ ಪ್ರಶ್ನೆ ಹಾಕಿದೆ..
ಒಂದು ಇರುವೆ ನನ್ನ ಬಳಿ ಬಂತು.. ಅದನ್ನು ನಾನು ಸಾಯಿಸಿದೆ.. ಆದರೆ ನನಗೆ ಯಾವ ದುಃಖವು ಆಗಲೇ ಇಲ್ಲ. ಅದೇ ದಾರಿಯಲ್ಲಿ ಹೋಗುವಾಗ ಯಾರು ಒಬ್ಬ ಹುಡುಗ ನಾಯಿಯನ್ನ ಕಲ್ಲಿಂದ ಹೊಡೆಯುವುದ ನೋಡಿದೆ ನನಗೆ ದುಃಖ್ಖ ವಾಯಿತು. ಹಾಗೆ ದೇವರು ಕೂಡ ನಮ್ಮನ್ನು ಇರುವೆ ತರಹ ಎಂದುಕೊಂಡು ಹೀಗೆ ಮಾಡುತ್ತಿದ್ದಾನೆ. ಎಂದು ನೀ ಕೇಳಿದೆ.
ಉತ್ತರ : ಕರ್ಮ-ನೀ ಸಾಯಿಸಿದ್ದ ಇರುವೆ ನಿನ್ನನ್ನೇ ಪೂರ್ವ ಜನ್ಮದಲ್ಲಿ ಮಾನವನಾಗಿ ಸಾಯಿಸಿತ್ತು. ಅದು ದೇವರನ್ನು ಹೋಗಿ ಪ್ರಶ್ನೆ ಮಾಡಿತು ನನ್ನ ಅವನು ಕಾರಣವಿಲ್ಲದೆ ಸಾಯಿಸಿದ ಎಂದು..
ಅದಕ್ಕೆ ದೇವರು ಹೇಳಿದ ಎಲ್ಲರ ಅನುಭವ, ದೇಹ ಹಾಗೂ ಆಲೋಚನೆಗಳು ಆದಲು ಬದಲು ಮಾಡತಕ್ಕದ್ದು ಎಂದ.ಈಗ ನೀನು ಮನುಷ್ಯ ಅವನು ಪೂರ್ವದಲ್ಲಿ ಮನುಷ್ಯ.
ಬ್ರಹ್ಮಾಂಡದ ಧೂಳಿಗೆ ಸಮವಿಲ್ಲದ ನಾವು ಹೇಗೆ ದೇವರಿಗೆ ಉಪಯೋಗ ಎಂದು ನೀ ಪ್ರಶ್ನೆ ಹಾಕಿದೆ.
ಸೃಷ್ಟಿಯ ಎಲ್ಲ ಅಣು ಅಣುವು ಅತ್ಯಂತ ಮುಖ್ಯವಾದದ್ದು. ಇಲ್ಲಿ ಸೃಷ್ಠಿ ಯಾಗಿದ್ದು ವ್ಯರ್ಥವಲ್ಲ ನಶಿಸಿ ಹೋಗುವುದು ವ್ಯರ್ಥವಾಗುವಿದಿಲ್ಲ.
ಸೃಷ್ಠಿ ಸುಷ್ಟಿಯಾಗಿದ್ದು ಯಾಕೆ ಎಂಬುದ ತಿಳಿಯಲು ನಮ್ಮ ದೈಹಿಕ ಸೃಷ್ಟಿಯ
ನಿರ್ನಾ ಮ ಆದಗಲೇ ಅದಕ್ಕೆ ಉತ್ತರ ಸಿಗುವುದು.
ದೇವರು ಇಲ್ಲ ಎನ್ನುವುದು ಸತ್ಯ…
ದೇವರು ಇದ್ದಾನೆ ಎಂಬುದು ಸತ್ಯ..
ದೈಹಿಕ ವಾಗಿ ನೋಡುವ ಅಭ್ಯಾಸ ಇರುವ ಮಾನವರಿಗೆ ಧೈಹಿಕವಾಗಿ ಕಂಡರೆ ಇದ್ದಾನೆ ಎಂಬುದು ಖಚಿತವಾಗುತ್ತದೆ.
ನಶ್ವರ ದೇಹ ಎಂಬುವ ಮನುಜರಿಗೆ ಮನಸ್ಸಿನಲ್ಲಿ ದೇವರ ದರ್ಶನ, ಅನುಭವ ಆಗುವುದು.
Shambhu
0 Followers
0 Following