ನಾಳೆ ಎಂಬುದು ಖಾತ್ರಿ ಇಲ್ಲದ ಕನಸು
ಎಲ್ಲದಕು ಸಿದ್ಧಾವಾಗಿರಬೇಕು ನಮ್ಮ ಮನಸು
ಬದುಕು ದೇವರು ಕೊಟ್ಟ ಕೂಸು
ನಾವು ಹಸನಾಗಿಸಿದರೆ ಬಲು ಸೊಗಸು
ಭರವಸೆ ಎಂಬುದೇ ಬದುಕು
ಇರದಿರಲಿ ಅಲ್ಲಾವುದೇ ತಳುಕು
ಒಳಿತನ್ನೇ ಎಲ್ಲೆಡೆ ಹುಡುಕು
ಕಾಣುವುದು ಜಗದಲ್ಲಿ ಬೆಳಕು
ಹಗಲು ಇರುಳು ಇರುವುದು ದಿನದೊಳು
ಹುಟ್ಟು ಸಾವು ಬದುಕಿನೆರಡು ಮುಖಗಳು
ಸ್ವರ್ಗ ನರಕ ನಮ್ಮ ಕಲ್ಪನೆಯೊಳು
ಬಿತ್ತುವುದು ಸಾವಿರ ಕನಸುಗಳು
ಇರುವಷ್ಟು ದಿನ ಒಳಿತು ಮಾಡುತ
ಜಗದೊಳೆಲ್ಲರ ಹಿತವ ಬಯಸುತ
ನಾಳೆ ನಾಳೆ ಎಂಬುದ ಮರೆಯುತ
ಬದುಕಿಬಿಡೋಣ ಈ ದಿನ ನಗು ನಗುತ
ಬರುವುದೋ ಇಲ್ಲವೋ ನಾವಂದುಕೊಂಡ ನಾಳೆ
ತೊಳೆದುಬಿಡೋಣ ಇಂದೇ ಮನಸಿನಾ ಕೊಳೆ
ಸಿಂಗಾರಿಸೋಣ ಬದುಕ ಹಾಸನಾಗಲಿ ಇಳೆ
ಜಗದೆಲ್ಲೆಡೆ ಸುರಿಯಲಿ ಸಂತಸದ ಹೂವ್ಮಳೆ
✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು