ಲೋಕವ ಬೆಳಗುವ ಕಣ್ಣು
ಲೋಕದ ಜನರಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ಕೃಷ್ಣನ ಕಣ್ಣಿಗೆ ಅವಳೇ ಲೋಕವ ಬೆಳಗುವ ಕಣ್ಣು
ಶಕ್ತಿ ಸ್ವರೂಪಿಣಿ ಸೌಂದರ್ಯವೇ ಧರೆಗಿಳಿದಹೆಣ್ಣು
ಭುವಿಗೆ ಬಂದ ನೈಜ ಸ್ವರೂಪಿಣಿ ಪ್ರೇಮದ ಕಣ್ಣು
ಕಷ್ಟ ಕೋಟಲೆಗಳ ದಾಟಿ ಬಂದವಳು
ಕ್ಷುಲ್ಲಕ ನುಡಿಗಳ ಮೇಟಿ ನಿಂದವಳು
ಕೃಷ್ಣನಿಗಾಗಿ ಜನಿಸಿ ಬಂದವಳು
ಪ್ರೇಮಕು ಮೀರಿದ ಸ್ನೇಹವ ತಂದವಳು
ಮುರಳಿಯು ನುಡಿಸಲು ಮೋಹನ ರಾಗ
ರಾಧೇಯು ಬಂದಳು ನಾಚುತ ಆಗ
ಸರಸ ಸಲ್ಲಾಪಕೆ ಇರಲಿಲ್ಲ ಜಾಗ
ಇಣುಕತಲಿದ್ದ ಬಾನಲಿ ಮೇಘ
ಕೃಷ್ಣನು ನುಡಿಯಲು ರಾಧೇ ರಾಧೇ
ಮುರಳಿಯು ಹರಿಸಿತು ಪ್ರೇಮಸುಧೆ
ಹಾರೈಸಿದರು ನಂದ ಯೋಶೋಧೆ
ಹೂವ್ಮಳೆಗರೆಯಿತು ಚಂದದಿ ವಸುದೆ
ಲೋಕದಿ ಅಮರ ರಾಧ ಶ್ಯಾಮರು
ಸ್ನೇಹವು ಸಾವಿಲ್ಲ ಎಂದು ಸಾರಿದರು
ಶೃಂಗಾರ ಕಾವ್ಯವ ಜಗಕೆ ಕೊಟ್ಟವರು
ರಾಧೇ ರಾಧೇಯ ಸ್ನೇಹಕೆ ಒಡೆಯರು
✍️ ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು