ಒಲ್ಲದ ಬದುಕಿನ ಸಂದಕ
ತೆರೆಯುವ ತವಕ ನನಗಿಲ್ಲ
ದಕ್ಕದ ದಟ್ಟಡವಿಯ ಖುಷಿಗೆ
ದುಃಖಿಸಿ ಮರಗುತಿಹೆ ಒಳಗೊಳಗೆ
ಅಂಗೈಯಾಗಿನ ಅಂಗಳದಷ್ಟಿನ
ಮುಷ್ಟಿಗೂಡಲ್ಲಿ
ನೀ ಬಿಕ್ಕದಂಗ ಬೆಚ್ಚಗೆ
ಜೋಪಾನ ಮಾಡ್ತೀನಿ ಮುದ್ದು
ನೀ ನುಡಿಸಿದಂತೆ
ನೀ ನಡೆಸಿದಂತೆ
ಉಳಿದೆ ನಿನಗಾಗಿ
ಇನ್ನು ತಿಳಿಯಲಿಲ್ಲ ನಿನಗೆ
ಕವಿಯದ ಮುನ್ನ ಕತ್ತಲು
ಸವಿಯದ ಮುನ್ನ ಸ್ನೇಹವು
ಆರದ ಮುನ್ನ ದೀಪವು
ಜೀವದ ಜೊತೆಯಾಗು ಜೀವನದಿ
ಮನದಿ ತೂಗುಯ್ಯಾಲೆ ನಿನಗಾಗಿ ಕಾದಿದೆ
ಒಮ್ಮೆ ಬಾ ಜೊತೆಗೂಡಿ ಜೀಕುವಾ
ಈ ಜೀವನ ಜೋಕಾಲಿಯಲಿ
ಕಾಯುತಲಿರುವೆ ನೀ ಬರುವ ನಿರೀಕ್ಷೆಯಲಿ
ಹೆಜ್ಜೆ ಹೆಜ್ಜೆಗೂ ಜೀವನದಿ ಜೊತೆಯಾಗಿ ಬರುವೆ
ನಿನ್ನ ಬಾಳ ಸಂಗಾತಿಯಾಗುವೆ
ಹೃದಯದಲ್ಲಿ ನನಗಿಷ್ಟು ಜಾಗ ಕೊಡು
ಆ ಹೃದಯ ಸಾಗರದಲಿ ನಾನೊಬ್ಬಳೇ ನದಿಯಾಗಿರಲಿ…
Assistant Professor, Department of journalism, JSS College of Arts Commerce and Science, Ooty Road, Mysuru, Karnataka 570025