ಸಿದ್ದಾರ್ಥ ನಾಮಕರಣದಿ ತೊಟ್ಟಿಲೋಳಗಾಡಿ
ಬದಲಾಗುತ್ತ ಬೆಳೆದನು ಪ್ರಜಾಪತಿ ಗೌತಮನಾಗಿ
ಕೋಪ, ಲೋಭ, ಮೌಢ್ಯಗಳ ಜಯಿಸಿ ಗೌತಮ ಬುದ್ದನಾದನು ಯೋಗಿ ।।
ರಾಮ, ಧಜ, ಲಕ್ಷ್ಮಣ, ಮಂತಿಯಣ್ಣ, ಸಯಾಮ, ಸುಲಭ, ಸುಮಿತ್ತ, ಸುದತ್ತ
ಮತ್ತಿತರಿಂದ ಜ್ಞಾನವ ಪಡೆದನು ಸರ್ವಜ್ಞ
ಸಕಲ ವಿದ್ಯಾಪಾರಂಗತನಾಗಿ ನಿಂತನಾ ತಥಾಗತ
ನೆಲವನ್ನ ಉತ್ತುವಾಗ ಹೊರಬಂದ ಕೀಟಗಳ ಹಕ್ಕಿಗಳು ಕುಕ್ಕುವಾಗ
ತಾನೆ ಬಿಟ್ಟ ಬಾಣದಿ ಬಿದ್ದು ಒದ್ದಾಡುವ ಹಂಸವ ಕಂಡಾಗ
ಮನದಲ್ಲಿ ವೇದನೆಯಲಿ ಸಹಕಾರ ಮೂರ್ತಿಯಾದ ತಾನಾಗ
ಮದ್ಯ ರಾತ್ರಿ ಉತ್ಸುಕದಿ ಮಡದಿ,ಮಗುವಿನ ಮೊಗವ ನೋಡಿ
ಛಂಕನ ಸೇರಿ ಕಂದಕವನ್ನೆರಿ ರಾಜ್ಯತ್ಯಾಗವ ಮಾಡಿ
ಸಾಧನೆಯ ಸಿದ್ದಿಗಾಗಿ ನಡೆದನು ವೈರಾಗಿ
ಭೋದಿವೃಕ್ಷದ ಕೆಳಗೆ ಪೂರ್ವಾಭಿಮುಖವಾಗಿ ಪದ್ಮಾಸದಿ
ಉರುವೇಲದಲ್ಲಿ ಎಳುವಾರಗಳ ಕಠಿಣ ತಪಗೈದು
ನಾಲ್ಕು ಜಾವದ ಅನುಭವ ಪಡೆದು ಜ್ಞಾನಿಯಾದನು
ಥಿಲೋಗುರು ಗೌತಮ ಬುದ್ದ
ನವಲಕ್ಕಿ
ನವಲಕ್ಕಿ