ಸೇಹಿತರೆ ನಮಸ್ತೇ..
ನೀ ಭ್ರಷ್ಟ? ಅಥವಾ ನಾ ಭ್ರಷ್ಟ?
ಉತ್ತರ ಹುಡುಕೋದು ಕೊಂಚ ಕಷ್ಟಕರ ಅಲ್ಲವೇ? ಏಕೆಂದರೆ ಭ್ರಷ್ಟಾಚಾರ ಹಾಗೆ ನಮ್ಮೊಳಗೊಬ್ಬನ್ನಾಗಿ ನಮ್ಮನ್ನೇ ಒಳಗಿನಿಂದ ಕೊಳೆಸುತ್ತಿರುವ ಒಂದುದೊಡ್ಡ ರೋಗ, ಇಲ್ಲಿ ಭ್ರಷ್ಟಾರಾರು ಎಂಬುದೇ ದೊಡ್ಡ ಪ್ರಶ್ನರ್ಥಕ ಚಿಹ್ನೆ.
ಅಂದಹಾಗೆ ಎಲ್ಲರೂ ಹೇಗ್ಗಿದ್ದೀರಾ, ತುಂಬಾ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ತುಂಬಾ ದಿನಗಳ ನಂತರ ಮತ್ತೊಂದು ಉತ್ತಮಾಂಶಗಳಿಂದ ಕೂಡಿದ ಲೇಖನ ಮಂಡಿಸಲು ನಾ ಸಜ್ಜಗಿದ್ದೇನೆ. ನಮ್ಮೆಲ್ಲ ಲೇಖನಗಳಂತೆ ಇದು ಸಹ ಸಮಾಜದ ಏಳಿಗೆಗೆ ಯುವಜನತೆಯ ವಿದ್ಯಾರ್ಜನೆಗೆ ಈ ಲೇಖನ ಸಮರ್ಪಣೆ.
ಏನಿದು ಭ್ರಷ್ಟಾರಾರು ಎಂದು ನಮಗೆ ಪ್ರೆಶ್ನೆ ಕೇಳಿ ಉತ್ತರ ಉಡುಕುತ್ತಿದ್ದಾರೆ ಎನ್ನಿಸುತ್ತಿದೆಯೇ... ಖಂಡಿತ ಹೌದು ಇಲ್ಲಿ ಬೇಕಾಗಿರುವುದು ಭ್ರಷ್ಟಾಚಾರದ ಉದಾಹರಣೆಗಳಲ್ಲ ಬದಲಾಗಿ ಯಾರು ಭ್ರಷ್ಟಾಚಾರಿ ಎಂಬುದು.
ಅದಾಗಿಯೂ ಲೇಖನದ ವಿಷಯ ಮಂಡನೆಗೆ ಸಮರ್ಪಕವಾಗುವಂತೆ ಕೆಲವು ಅಂಶಗಳ ಸಹಾಯ ಪಡೆಯಲಿದ್ದೇನೆ.
ಸಾರ್ವಜನಿಕ ಸಂಪನ್ಮೂಲಗಳನ್ನು ಖಾಸಗಿ ಏಳಿಗೆಗಾಗಿ ಸ್ವಹಿತಾಸಕ್ತಿಗೆ ಬಳಸಿಕೊಳ್ಳುವುದೇ ಭ್ರಷ್ಟಾಚಾರ. ಇದು ಈ ಜನಾಂಗದ ನ್ಯೂನ್ಯತೆ ಅಲ್ಲ ಬದಲಾಗಿ ಮಾನವನ ಜನಾಂಗದ ಉದಯದ ಕಾಲದಿಂದಲೂ ಇದೆ. ಇದೊಂದು ಪುರಾತನ ಬೇನೆ.
ಕ್ರಿ ಪೂ 375 ರ ಸಮಯದಲ್ಲಿ ಆಚಾರ್ಯ ಚಾಣಕ್ಯ ಅಥವಾ ಕೌಟಿಲ್ಯಾ ತಮ್ಮ ಅರ್ಥಶಾಸ್ತ್ರದಲ್ಲಿ ಇದರ ಉಲ್ಲೇಖ ಮಾಡಿದ್ದಾರೆ, ಮತ್ತು ಇದರ 40ಕ್ಕೂ ಹೆಚ್ಚಿನ ಬಗೆಗಳನ್ನು ವಿವರಿಸಿದ್ದಾರೆ.
ಸ್ನೇಹಿತರೆ ಕೇವಲ ಲಂಚ ಪಡೆಯುವುದು ಅದಕ್ಕೂ ಮುಖ್ಯವಾಗಿ ಲಂಚ ಕೊಡುವುದು, ಇಷ್ಟೇ ಭ್ರಷ್ಟಾಚಾರ ಅಲ್ಲ ಅದು ಕೇವಲ ಒಂದು ಬಾಗ ಅಷ್ಟೇ.
ಅದರ ಅನೇಕ ಬಾಗಗಳು ಸಾರ್ವಜನಿಕ ಹಿತಾಸಕ್ತಿಗೆ ಹೊರತಾಗಿ ಮಾಡುವ ಖಾಸಗಿ ಸಂಪಾದನೆಗಳೆಲ್ಲವೂ ಭ್ರಷ್ಟಾಚಾರವೇ!
ಯೋಚಿಸಿ ಲಂಚಪಡೆದ ಅಧಿಕಾರಿ ಭ್ರಷ್ಟನಾದರೆ ತನ್ನ ಖಾಸಗಿ ಪೂರೈಕೆಗಾಗಿ ಲಂಚ ಕೊಡುವ ವ್ಯಕ್ತಿ ಯಾರು? ಭ್ರಷ್ಟಾಚಾರಿಯ ಗುರು ಅಲ್ಲವೇ?
ಅಂದರೆ ಯಾವುದೇ ಆಚರಣೆಗೆ ನಾಂಧಿಯಾಡುವುದು ಗುರು ಅಲ್ಲವೇ. ಲಂಚಕೊಟ್ಟು ಲಂಚಗುಳಿತನಕ್ಕೆ ಕೆಡವುವ ಪ್ರತಿ ವ್ಯಕ್ತಿಯು ಭ್ರಷ್ಟರ ಗುರು ಅಲ್ಲವೇ?
ಅದೇನೇ ಇರಲಿ ಭ್ರಷ್ಟಾಚಾರ ತುಂಬಾ ಮುಖ್ಯವಾಗಿ ಎರಡೂ ತರದ ದೇಶಗಳಲ್ಲಿ ಹಬ್ಬುತ್ತಿದೆ ಅಂದರೆ ಮುಂದುವರೆದ ದೇಶ ಮತ್ತು ಮುಂದುವರೆಯುತ್ತಿರುವ ದೇಶ, ನಮ್ಮಂತೆ ಮುಂದುವರೆಯುತ್ತಿರುವ ದೇಶಗಳಲ್ಲಿ ಇದು ತಾಂಡವವಾಡುತ್ತಿದೆ ಅದು ಯಾಕೆ?
ಈ ದೇಶಗಳಲ್ಲಿ ಜನರಿಗೆ ಪ್ರಜಾತಂತ್ರ ವ್ಯವಸ್ಥೆಯ ಸಾಮಾನ್ಯ ಅರಿವು ಇಲ್ಲದ ಕಾರಣ, ಈ ದೇಶಗಳಲ್ಲಿ ಪ್ರಜೆಗಳಲ್ಲಿ ಪ್ರಜಾತಂತ್ರ ಅತ್ಯಂತ ಆಳಾವಾಗಿ ಬೇರೂರುವವರೆಗೆ ಪ್ರಜತಂತ್ರದ ಮಾನ್ಯತೆ ತಿಳಿಯುವುದಿಲ್ಲ. ಇಲ್ಲಿ ಪ್ರಜೆಗಳು ರಾಜರಂತೆ ಅಧಿಕಾರಿಗಳು ಅವರ ಸೇವಕರಂತೆ ಆದರೆ ಇದರ ಅರಿವೇ ಇಲ್ಲದೆ ಅಧಿಕಾರಿಗಳ ಬೂಟೋರೆಸುವ ರಾಜ ದೇಶ ಹೇಗೆ ಮುಂದುವರೆಸುತ್ತಾನೆ? ಇದು ಕೊನೆಗಾಣುವುದು ಯಾವಾಗ? ನಮ್ಮ ಜನಾಂಗ ಬದಲಾಹಿಸಬಹುದೇ?
ಖಂಡಿತ…
ಭಾರತ ಬ್ರಿಟಿಷರಿಂದ ಹೊರ ಬಂದು ಸ್ವತಂತ್ರ, ಪ್ರಜಾತಂತ್ರ, ಪ್ರಜಾಸಾತಾತ್ಮಕ, ಗಣರಾಜ್ಯವಾದಾಗ ದೇಶದ ಸಾಕ್ಷಾರತಾ ಪ್ರಮಾಣ ಕೇವಲ 12 ರಿಂದ 15% ಅದು 1945-47 ರ ಅವಧಿ.
ಆದರೆ ಅದು ಈಗ 77.7% ವಾಗಿದೆ ಬದಲಾವಣೆ ಕಾಣುತ್ತಿದೆ ಎಂದು ನೀವು ಮನಗಂಡರೆ ಈ ರೀತಿಯ ಬೇನೆಗಳಿಂದ ದೇಶವನ್ನು ಪಾರಗುವಂತೆ ಮಾಡುವ ಶಕ್ತಿ ನಮ್ಮಲ್ಲೇ ಇದೆ, ಅಂದರೆ ವಿದ್ಯಾವಂತ ಯುವಜನತೆಯ ಕೈಯಲ್ಲಿದೆ ಹಿರೀಕರ ಮತ ಒತ್ತುವ ಆ ಬೆರಳಲ್ಲಿದೆ..!
ಹೀಗಿರುವಾಗ ಆಡಳಿತ ಸುಧಾರಣ ಆಯೋಗವು Administrative Reforms Commission ಈ ಭ್ರಷ್ಟಾಚಾರ ಬೇರೂರುವಲ್ಲಿ ಕೆಲವು ಕಾರಣಗಳನ್ನು ಒದಗಿಸಿದೆ.
Brutish legacy ಬ್ರಿಟಿಷ್ ರಿಕ್ಥ.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಮೊದಲು ಮಾಡಿದ ಕೆಲಸ ಅಧಿಕಾರ ಕೇಂದ್ರೀಕರಿಸುವುದು, ಮನಬಂದಂತೆ ಕಾನೂನು ಸೃಷ್ಟಿಸುವುದು. ಅಧಿಕಾರ ಮತ್ತು ಅಧಿಕಾರಿಗಳು ಮೇಲ್ವರ್ಗದವರು ಎಂಬ ಸಂಸ್ಕೃತಿ ಹುಟ್ಟುಹಕ್ಕಿದ್ದು.
ಅದು ಈ ದಿನದವರೆಗೂ ಅಧಿಕಾರಿಗಳು ಮೇಲು ಎಂಬಂತೆ ಮಾಡಿದೆ. ಅದು ಅವರನ್ನು ಸೇವಕರನ್ನು ಮಾಡದೇ ನಾಯಕರಂತೆ ಬಿಂಬಿಸುತ್ತಿದೆ.
ನೆಹರು ಕಾಲದ ಸಮಾಜಶಾಹಿ ರಿಕ್ಥ. Nehruvian socialism legacy.
1991 ರ ಪೂರ್ವ ಎಲ್ಲಾ ಕೆಲಸಕ್ಕೂ ಸರ್ಕಾರ ಒಂದೇ ದಾರಿಯಬಂತೆ ಇತ್ತು, ಪ್ರತಿ ವಿಷಯಕ್ಕೂ ಸರ್ಕಾರ ಒಂದೇ ಪರಿಹಾರವಾಗಿತ್ತು, ಯಾವುದೇ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳಯುವಿಕೆ ಸಂಪೂರ್ಣ ನಿರ್ಬಂಧವಾಗಿತ್ತು.
ಯೋಚಿಸಿ ಕೇವಲ ಒಂದು ಟೆಲಿಫೋನ್ ಪರವಾನಿಗೆ ಪಡೆಯಲು 1 ರಿಂದ 4 ವರ್ಷಗಳ ಅವಧಿಯವರೆಗೆ ಕಾಯಬೇಕಿತ್ತು. ಅದು ಸರ್ಕಾರದ ಕಚೇರಿಯಿಂದ ಕಚೇರಿಗೆ, ಅಧಿಕಾರಿಗಳ ಮೇಜಿನ್ನಿಂದ ಮೇಜಿಗೆ ಹೋಗಿ, ಅವರ ಸ್ಟ್ಯಾಂಪ್ ಸೀಲ್ಗಳಿಗಾಗಿ ಕಾದು ನಂತರ ಅನುಮೋದನೆಗೆ ಒಳಗಗುತಿತ್ತು.
ಅತಿ ಕಾನೂನುಗಳು ಭ್ರಷ್ಟಾಚಾರಕ್ಕೆ ತನ್ನ ಉಪಮಾರ್ಗಗಳನ್ನು ತೆರೆಯಲು ಸಹಕರಿಸುತ್ತದೆ. ಇಲ್ಲಿ ಒಂದು ಸಾಲು ಹೇಳಲು ಬಯಸುತ್ತೇನೆ.
Power corrupt people absolute power corrupt absolutely.
ಅಂದರೆ ಅಧಿಕಾರ ಜನರನ್ನು ಭ್ರಷ್ಟಾಚಾರಿಗಳನ್ನಾಗಿ ಮಾಡುತದ್ದೇ ಎಂದು, ಇಲ್ಲಿ ನನ್ನ ಅನುಭವದಂತೆ ಹೇಳುವುದಾದರೆ..
People corrupt power, absolute corruption corrupts power absolutely.
ಈ ಯುಗವನ್ನು ಸಾಮಾನ್ಯವಾಗಿ license raj divas ಎನ್ನುವರು ಅಂದರೆ ಪರವಾನಿಗೆಯ ದಿನಗಳು ಎಂದು.
C ರಾಜಗೋಪಾಲಚಾರಿ ಇದನ್ನು license quota permit raj ಎಂದು ಕುಟುಕು ವಿಮರ್ಶೆ ನೀಡಿದ್ದರು.
socio economic asymmetry ಸಾಮಾಜಿಕ ಆರ್ಥಿಕವಾಗಿ ವ್ಯತ್ಯಾಸಗಳು.
ಶೇ 80 ಕ್ಕೂ ಹೆಚ್ಚಿನ ಜನರು ಅಸಂಘಟಿತ ಕ್ಷೇತ್ರಗಳ್ಳಲ್ಲಿ ಕೆಲಸ ಮಾಡುತಿದ್ದಾರೆ, ಮತ್ತು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಉದ್ಯೋಗಿಗಳು ಸಂಘಟಿತ ಕ್ಷೇತ್ರಗಳಲ್ಲಿ ಇದ್ದಾರೆ. ಇದು ಈ ಎರಡು ಕ್ಷೇತ್ರದ ಜನರನ್ನು ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ನಿರ್ಧಾರಿಸುತ್ತದೆ.
ಇಲ್ಲಿ ಅತಿಮುಖ್ಯವಾಗಿ ಆ 80 ಶೇ ಜನರು ಒಂದಲ್ಲ ಒಂದು ಕಾರ್ಯಗಳಿಗೆ ಸರ್ಕಾರವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ, ಈ ಅಂಶ ಅಧಿಕಾರಿಗಳ ಮಂತ್ರಿಗಳ ರಾಜಕಾರಣಿಗಳ ಭ್ರಷ್ಟಾಚಾರದ ಬಯಕೆಯನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ನೋಡುವುದಾದರೆ ಭ್ರಷ್ಟಾಚಾರ ಹೆಚ್ಚುತ್ತಿರುವುದು ಈ ಕಾರಣಗಳಿಂದ…
1) Bad apple theory ಕೆಟ್ಟ ಹಣ್ಣು ಸಿದ್ಧಾಂತ.
ಈ ಸಿದ್ದಾಂಥದಂತೆ ಯಾರಲ್ಲಿ ನೈತಿಕ ಪ್ರಜ್ಞೆ ಕಡಿಮೆ ಇರುತ್ತದೆಯೋ ಅವರು ಈ ಭ್ರಷ್ಟಾಚಾರಕ್ಕೆ ಮುಂದಾಗುತ್ತಾರೆ,
ಆದರೆ ಈ ಸಿದ್ದಾಂಥವನ್ನು ಹೆಚ್ಚಿನ ಜನ ಒಪ್ಪಲಿಲ್ಲ ನೀವು?
ಅದೇನೇ ಇರಲಿ ಕೆಟ್ಟಹಣ್ಣನ್ನು ಹಣ್ಣಿನ ಪುಟ್ಟಿಹಿಂದ ಹೊರಗಿಡದೇ
ಹೋದಲ್ಲಿ ನಮಗೆ ಪುಟ್ಟಿಯೆಲ್ಲೆಲ್ಲ ಕೊಳೆತ ಹಣ್ಣುಗಳೇ ದೊರೆಯುವುದು ಎಚ್ಚರ.
2) greed plus risk theory ಆಸೆ ಮತ್ತು ಅಪಾಯ ಸಿದ್ಧಾಂತ.
ಈ ಸಿದ್ಧಾಂತದಂತೆ ಆಸೆ ಅಥವಾ ದುರಾಸೆಯೇ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುತ್ತದೆ, ಮತ್ತು ಇದರಿಂದ ಸಿಗುವ ಶಿಕ್ಷೆಗಿಂತ ಪ್ರತಿಫಲವೇ ಹೆಚ್ಚು.
ಭ್ರಷ್ಟಾಚಾರಕ್ಕೆ ಹೆಚ್ಚಿನ ಕಾನೂನಾತ್ಮಕ ಶಿಕ್ಷೆ ಕಡಿಮೆ, ಅದು ಹೇಗೆ ಅಂದರೆ ಭ್ರಷ್ಟಾಚಾರದಿಂದ ಶಿಕ್ಷೆಗೆ ಒಳಗಾದ ವ್ಯಕ್ತಿ ಭ್ರಷ್ಟಾಚಾರದ ಮೂಲಕವೇ ಹೊರ ಬರುತೇನೆ ಎಂಬ ಧೈರ್ಯ, ಇದರ ಒಳನೋಟ ನಿಮಗೆ ಬಿಟ್ಟದ್ದು..
3) sanskritisation ಸಂಸ್ಕೃತಿಕರಣ
ಅದಾಗಿಯೂ ಒಂದು ಪ್ರಚಲಿತ ವಿದ್ಯಾಮಾನ ನಮ್ಮ ಅರಿವೇ ಇಲ್ಲದಂತೆ ನಮ್ಮ ಆಚರಣೆಯಾಗಿದೆ ಅದುವೇ sanskritisation ಅಂದರೆ ಎಲ್ಲವೂ ಸಂಸ್ಕೃತಿಕರಣಗೊಳ್ಳುತ್ತಿದೆ.
ಇಲ್ಲ ಎಂಬುವವರು ಹಾಗೆ ಯೋಚಿಸಿ ನಿಮ್ಮ ಮಕ್ಕಳ ಹೆಸರು, ನಮ್ಮ ದಿನ ನಿತ್ಯಕರ್ಮಗಳು, ನಮ್ಮ ಆಚರಣೆಗಳು, ಎಲ್ಲವೂ ಸಂಸ್ಕೃತಿಕರಣಗೊಳ್ಳುತ್ತಿದೆ, ನೀವು ಒಪ್ಪಿ ಅಥವಾ ಬಿಡಿ ಈ ವಿದ್ಯಾಮಾನ ನಮ್ಮ ಒಂದು ಜೀವನಶೈಲಿಯಾಗಿ ತುಂಬಾ ದಿನಗಳಗಿದೆ.
ಈ ಸಮೀಕರಣದ ಅಸಲಿ ನೋಟ ಸಾಮಾನ್ಯ ವರ್ಗದವರು ಮೇಲ್ವರ್ಗದವರ ಜೀವನಶೈಲಿಯನ್ನು ಅನುಸರಿಸುತ್ತಿದಾರೆ, ಅವರಂತೆ ಚಿಂತಿಸುತ್ತಿರುವುದು, ನಮ್ಮ ಹೆಸರುಗಳೆಲ್ಲ ಸಂಸ್ಕೃತದಿಂದ ಆಯ್ದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ.
ಇಲ್ಲಿ ಯಾವುದೊ ಜಾತಿ ಇನ್ನ್ಯಾವುದೋ ಜಾತಿಯನ್ನು ಅನುಸರಿಸುತ್ತಿದ್ದಾರೆ ಎಂಬುದು ಮುಖ್ಯವಲ್ಲ, ಬದಲಾಗಿ ಜನರು ಇತರರ ಜೀವನಶೈಲಿಗೆ ಮೊರೆಹೋಗುತ್ತಿದ್ದಾರೆ ಎಂದು.
ಇದೆ ಸಿದ್ಧಾಂತವನ್ನು ಏತವತ್ತಾಗಿ ಅಧಿಕಾರಿಶಾಹಿಗಳಿಗೆ ಹೊಂದಿಸಿ ನೋಡಿದಾಗ ಸಿಗುವ ಅಂಶ,,
ಕೆಲವರ್ಗದ ಅಧಿಕಾರಿಗಳು ಮೇಲ್ವರ್ಗದ ಅಧಿಕಾರಿಗಳಂತೆ ವರ್ತಿಸಲು ಪ್ರಯತ್ನಿಸುವುದು.
ಮೇಲ್ವಿರ್ಗದ ಅಧಿಕಾರಿ ಭ್ರಷ್ಟನಾದಲ್ಲಿ ಕೆಲವರ್ಗದ ಅಧಿಕಾರಿಗಳು ಅತಿ ಭ್ರಷ್ಟಾರಾಗುವರು ಅಲ್ಲವೇ?
ಈ ಸಿದ್ದಂತವನ್ನು ಕೌಶಿಕ್ ಬಸು ಮಂಡಿಸುತ್ತ ಬಂದಿದ್ದಾರೆ.
ಈಗೆ ಈ ಎರಡು ಸಿದ್ದಾಂತದ ಪ್ರಕಾರ ಜಪನ್ ದೇಶದಲ್ಲಿ ಭ್ರಷ್ಟಾಚಾರಿಗಳ ಸಾಮಾಜಿಕ ಬಹಿಷ್ಕರ ಪದ್ದತಿಯು ಜಾರಿಯಲ್ಲಿದೆ. ಅಂದರೆ ಅಧಿಕಾರಿಯನ್ನು ಸಾಮಾಜಿಕವಾಗಿ ಹೀನವಾಗಿ ಕಾಣುವುದು. ಈ ಪದ್ದತಿ ಭಾರತದಲ್ಲಿ ಏತವತ್ ತಲೆಕೆಳಗಾಗಿದೆ ಅಲ್ಲವೇ?
ಅತಿ ಭ್ರಷ್ಟ ಹಣದಾಹಿಗೆ ಹೆಚ್ಚಿನ ಪ್ರಮುಖ್ಯತೆ. ಅದು ಅವರ ಜೀವನಶೈಲಿ... ಬದಲಾಗ ಬೇಕಿರುವುದು ಇಲ್ಲೇ, ಭಾರತದ ಜನ ಜಪಾನ್ ಜನರಂತೆ ಬದಲಾಗಬೇಕು.
ಹಾಗೆ ಉತ್ತರಿಸಿ ಕೇವಲ 50 ರಿಂದ 70 ಸಾವಿರ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿ 50 ಲಕ್ಷದ ಕಾರುಗಳು, ಕೋಟಿ ಮೌಲ್ಯದ ಮನೆ ಆಭರಣ ಗಳಿಸಲು ಸಾಧ್ಯವೇ.?
ಯಾರಾದರೂ ಒಮ್ಮೆ ಅವರಿಗೆ ಈ ಕುರಿತು ಪ್ರಶ್ನೆ ಮಾಡಿದ್ದೇವೆಯೇ? ಅಥವಾ ಅವರ ಸಂಪಾದನೆಯ ಸಂಭ್ರಮದ ಸಿಹಿ ತಿಂದು ಸುಮ್ಮನಿದ್ದೆವೆಯೇ..!
4) folklore of corruption. ಜನಶ್ರುತ ಭ್ರಷ್ಟಾಚಾರ
ಗುನ್ನರ ಮೈರ್ದಲ್ ಎಂಬ ಪ್ರಖ್ಯಾತ ಲೇಖಕರ ಅವರ ಪುಸ್ತಕ ಏಶಿಯನ್ ಡ್ರಾಮ ದ ಅವರ ಅವಲೋಕನದಂತೆ ಭ್ರಷ್ಟಾಚಾರ ಭಾರತ ಮತ್ತು ಇತರ ಏಷ್ಯಾ ದೇಶಗಳಲ್ಲಿ ಜಾನಪದದಂತೆ ಹಾಗಿದೆ.…
its just folklore of corruption.
ಜಾನಪದ ಯಾವುದು? ಜನರ ಆಡುಮಾತುಗಳು, ಪದ ಕಟ್ಟಿದ್ದು ದಿನ ಕಳೆಯಲು, ಬದುಕು ಸಾಗಿಸಲು, ವೃತ್ತಿಯಲ್ಲಿ ಬದಲಾವಣೆ ಮತ್ತು ದಣಿವಾಗದಂತೆ ಮಾಡಲು. ಅಂತಿಮವಾಗಿ ಇದು ನಮ್ಮ ಸಹಾಯಕ್ಕಾಗಿ.. ಆದರೆ ಮೈರ್ದಲ್ ಪ್ರಕಾರ ಭ್ರಷ್ಟಾಚಾರ ಜಾನಪದದಂತೆ ಆಗಿದೆ ಅಂದರೆ ಜನರಿಂದಲೇ ಆಚರಣೆಗೆ ಬಂದ್ದದ್ದಾಗಿರಬೇಕು, ಮತ್ತು ಅದರ ಅಂತ್ಯ ಜನರಿಂದಲೇ ಆಗಬೇಕಲ್ಲವೇ? ಭ್ರಷ್ಟಾಚಾರ ಮುಕ್ತ ಆಡಳಿತ ಜಾನಪದನಂತೆ ಜನರ ಆಚರಣೆಯಾಗಬೇಕಲ್ಲವೇ? ಉತ್ತರಿಸಿ
its just folklore of corruption.
5) socio-economic conditions of civil servants.
ನಾಗರೀಕ ಸೇವಕರ ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ಥಿತಿ
ಇದು ತುಂಬಾ ಮುಖ್ಯವಾದದ್ದು, ಒಂದು ವೇಳೆ ನೌಕರರ ಸಂಬಳ ಭತ್ಯೆ ಕಡಿಮೆಯಾದಲ್ಲಿ ಅಥವಾ ತಡವಾದಲ್ಲಿ ಭ್ರಷ್ಟಾಚಾರ ಒಂದು ಆಯ್ಕೆಯಾಗಲಿದೆ.
ಈ ಬಗ್ಗೆ ಕೌಟಿಲ್ಯಾ 3 ನೇ ಶತಮಾನದಲ್ಲಿ ತಮ್ಮ ಅರ್ಥಶಾಸ್ತ್ರದಲ್ಲಿ ಹೇಳಿದ್ದಾರೆ ಅದು ನೌಕರರಿಗೆ ಸಂಬಳ ಕೊಡದಿದ್ದರೆ ಅವರು ಸರ್ಕಾರಿ ಹಣದ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು.
“If you dont pay civil servants better then chances of misuse is very high”
ಭ್ರಷ್ಟಾಚಾರ ಅದು ದೊಡ್ಡ ಸಂಜ್ಞೆ, ಅದು ಲಂಚ, ಸ್ವಹಿತಾಸಕ್ತಿ, ಪ್ರಚೋದನೆ, ಕೊಡುಗೆಗಳು, ಸಾರ್ವಜನಿಕ ಸಂಪನ್ಮೂಲದ ದುರುಪಯೋಗ ಹೀಗೆ ನೂರಾರು ರೀತಿಯ ಅಂಶಗಳನ್ನು ಒಳಗೊಂಡಿದೆ ಅವುಗಳಲ್ಲಿ ಮುಖ್ಯವಾಗಿ ಹೇಳುವುದಾದರೆ…
1) coercive corruption ಒತ್ತಾಯ / ದಬ್ಬಾಳಿಕೆಯ ಭ್ರಷ್ಟಾಚಾರ.
ಇದು ಸಾಮಾನ್ಯವಾಗಿ ಕೆಳ ವರ್ಗದ ಅಧಿಕಾರಿಗಳಲ್ಲಿ ನೆಡೆಯುತ್ತದೆ. ಇಲ್ಲಿ ಜನರಿಂದ ಲಂಚವನ್ನು ದಬ್ಬಾಳಿಕೆಯಿಂದ ಅಥವಾ ಈ ಕೆಲಸಕ್ಕೆ ಇಷ್ಟು ಎಂದು ಬೇಡಿಕೆ ಇಟ್ಟು ಲಂಚ ಪಡೆಯುತ್ತಾರೆ.
Traffic policeman, peon, FDA SDA etc
2) Collusive corruption ಕುತಂತ್ರ ಭ್ರಷ್ಟಾಚಾರ.
ಇದು ಸಾಮಾನ್ಯವಾಗಿ ಮೇಲ್ವರ್ಗದ ಅಧಿಕಾರಿಗಳಲ್ಲಿ ನೆಡೆಯುತ್ತದೆ. ಇದು ಅಧಿಕಾರಿ ಮತ್ತು ಅವರಿಂದ ಲಾಭ ಪಡೆಯುವ ನಾಗರೀಕ ಇಬ್ಬರ ಒಪ್ಪಂದದಂತೆ ಸ್ವ ಹಿತಾಸಕ್ತಿಗಾಗಿ ನೆಡೆಯುತ್ತದೆ. ಇಲ್ಲಿ ಪರಸ್ಪರ ಹಿತಾಸಕ್ತಿ ಅತಿಮುಖ್ಯವಾಗಿದೆ.
District collector level, Ministers, contractors, etc
3) institutional corruption ಸಾಂಸ್ಥಾನಿಕ ಭ್ರಷ್ಟಾಚಾರ.
ಇಲ್ಲಿ ಭ್ರಷ್ಟಾಚಾರ ಒಂದು ಸಂಸ್ಥೆಯಂತೆ ಕೆಲಸ ಮಾಡುತ್ತದೆ. ಸರ್ಕಾರಿ ಕೆಲಸಕ್ಕೆ ಶುಲ್ಕಕಟ್ಟಿದಂತೆ ಅಧಿಕಾರಿಗಳ ಶುಲ್ಕ ಕಟ್ಟಬೇಕಾಗುತ್ತದೆ.
ಈ ಹೀನ ಸ್ಥಿತಿ ಭಾರತದಲ್ಲಿ ಬರಲು ಸಾಧ್ಯವಿಲ್ಲ, ಇದು ಬಲಿಷ್ಠ ಪ್ರಜಾತಂತ್ರ, ಕೇವಲ ಕೆಲ ಪ್ರಧಾನಮಂತ್ರಿಗಳು, ಅಧಿಕಾರಿಶಾಹಿಗಳ ಕಾರ್ಯದಿಂದ ಈ ಸ್ಥಿತಿ ಭಾರದಾಂತೆ ತಡೆಯಲು ಸಾಧ್ಯವಿಲ್ಲ ಪ್ರತಿ ಪ್ರಜೆಯ ಭಾಗವಹಿಸುವಿಕೆಯಿಂದ ಮಾತ್ರ ಈ ಸ್ಥಿತಿ ಭಾರದಂತೆ ತಡೆಯಬಹುದು.
ಇಷ್ಟೆಲ್ಲ ಸಾಮಾಜಿಕ ಆರ್ಥಿಕ ಏರುಪೇರುಗಳಿದ್ದರು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ನನ್ನದು ಖಾಸಗಿ ಬದುಕು, ನಮ್ಮದು ಖಾಸಗಿ ಉದ್ಯೋಗ ಎಂದು ಮುಖ ತಿರುಗಿಸುವ ಸಪ್ರಜೆಗಳೇ ಇದು ಕೇವಲ ಅಸಹಾಯಕರ, ದೀನರ, ಅಶಕ್ತರಿಗೆ ಆಗುವ ಶೋಷಣೆಯಲ್ಲ ಬದಲಾಗಿ ಬಲಿಷ್ಠರಂತೆ ಮೆರೆಯುತ್ತಿರುವ ಎಲ್ಲರನ್ನು ಅಶಕ್ತರಂತೆ ಕಾಲುಮುರಿಯುವ ಪಿಡುಗು ಇದು. ಇದು ನಮ್ಮೆಲರಿಗೂ ಸಂಬಂದಿಸಿದ್ದು ನಮ್ಮ ದೇಶದ್ದು...!
ಹಾಗಾದರೆ ಇದರಿಂದ ನಮಗಾಗುವ ತೊಂದರೆ ಏನು ಎನ್ನುವಿರ? ಆ ಶೋಷಣೆಗಳನ್ನು ಗಮನದಿಂದ ಓದಿ..
1. Financial misappropriation. ಆರ್ಥಿಕ ದುರ್ಬಳಕೆ.
ನಮ್ಮ ತೆರಿಗೆ ಹಣ ನಮ್ಮ ಬಾಗಿಲಿಗೆ ಬಾರದೆ ಯಾವುದೋ ಅಧಿಕಾರಿಗಳ ಮತ್ತು ಮಂತ್ರಿಗಳ ಖಜಾನೆ ಸೇರಲಿದೆ.
2. Implementation of welfare program will be affected. ಕಲ್ಯಾಣರಾಜ್ಯ ಕಟ್ಟುವ ಕಾರ್ಯಕ್ಕೆ ಮುಳುವಾಗಲಿದೆ.
ಕಲ್ಯಾಣ ರಾಜ್ಯ ಕಟ್ಟುವ ಕಾಣುವ ನಮ್ಮ ಕನಸು ಬಂಗವಾಗಲಿದೆ. ರಸ್ತೆ, ಆಸ್ಪತ್ರೆ, ಶಾಲೆ, ಮೂಲಸೌಕರ್ಯಕ್ಕೆ ಬಳಸಲು ಹಣ ಇಲ್ಲದಂತೆ ಆಗುವುದು.
3. Leads to creation of parallel economy, black economy.
ದೇಶ ಆರ್ಥಿಕವಾಗಿ ಕುಗ್ಗುತ್ತದೆ, ಅದರ ಮೇಲೆ ನೇರ ಪರಿಣಾಮ ಬೀರುತ್ತದೆ, ಇದು ಪರ್ಯಾಯ ಆರ್ಥಿಕತೆಗೆ ದಾರಿ ಮಾಡಲಿದೆ ಅದುವೇ ಕಪ್ಪುಹಣ. ಅಂದರೆ ಲೆಕ್ಕವೇ ತೋರಿಸಲು ಸಾಧ್ಯವಾಗದಷ್ಟು ಮಾಡಿದ ಹಣ. ನಂತರ ಈ ಹಣ ಹವಾಲಾ ಹಣವಾಗಿ ಭಯೋತ್ಪಾದಕ ಮತ್ತು ಭೂಗತ ಪಾತಕಿಗಳ ಕೈ ಸೇರಲಿದೆ ದೇಶದ ರಕ್ಷಣೆ ಮತ್ತು ಸಮಗ್ರತೆಗೆ ಪೆಟ್ಟು ಕೊಡಲಿದೆ.
4 increases inequality in society.
ಆರ್ಥಿಕವಾಗಿ ಸಮಾಜದಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ನಮ್ಮ ಹಿoದಿನ ಲೇಖನಗಳಲ್ಲಿ ಹೇಳಿದಂತೆ rich will become more richer while poor become even more poorer ಅಷ್ಟೇ..!
ಪೂರ್ವ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹೇಳಿದoತೆ.. ದೇಶದ ಪ್ರಗತಿಗಾಗಿ ಹಂಚಿಕೆ ಮಾಡಿದ ಪ್ರತಿ 1 ರೂಪಾಯಿ ಅಂದರೇ 100 ಪೈಸೆಗಳಲ್ಲಿ ಕಟ್ಟಕಡೆಯ ಪಲಾನುಭವಿಯ ಕೈ ಸೇರುತ್ತಿರುವುದು ಕೇವಲ 15 ಪೈಸೆ.
ಮಿಕ್ಕ 85 ಪೈಸೆ ಸೇರಿದ್ದು ಯಾರ ಮನೆಯ ಖಜಾನೆಯನ್ನ? ಯೋಚಿಸಿ ಇದೆಲ್ಲ ಕೇವಲ ಒಂದು ಮತದಿಂದ ಬದಲಾಯಿಸಲು ಸಾಧ್ಯವಿದೆ ನಂಬಿ ಭಾರತದ ಪ್ರಜಾಪ್ರಭುತ್ವ ಆಚರಿಸಿ ಉಳಿಸಿ ದೇಶ ಬೆಳಸಿ.
ಇಷ್ಟೆಲ್ಲ ದುಷ್ಟ ಪರಿಣಾಮ ಬೀರುತ್ತಿರುವ ಈ ಭ್ರಷ್ಟಾಚಾರದ ನೆಡೆಗೆ ಸರ್ಕಾರದ ನಿಲುವುಗಳೇನು?
ಸ್ನೇಹಿತರೆ ಈ ಅಂಶಗಳನ್ನು ಬರೆಯುತ್ತಿರುವ ಮೂಲ ಉದ್ದೇಶವೇ, ಜನ ತಮ್ಮ ಕೈಯಿಂದ ದೇಶದ ಕಟ್ಟಲು ಸಾಧ್ಯವಿದೆ ಎಂದು ಸಾಕ್ಷಿ ಸಮೇತವಾಗಿ ನಂಬಿಸಲು.
ದೇಶದಲ್ಲಿ ಪ್ರಜಾಪ್ರಭುತ್ವ ಇನ್ನು ಗಟ್ಟಿಯಾಗಿದೆ, ದೇಶದ ಕಾನೂನು ಸರ್ವರಿಗೂ ಸಮ ಎಂದು ನೆನಪಿಸಲು…
ಈ ವಿಷಯದ ಅರಿವು ಅತಿ ಮುಖ್ಯ, ಅತಿ ಅನಿವಾರ್ಯವಾಗಿದೆ, ಇದು ಸರ್ವರಿಗೂ ಸೇರಿದ್ದು, ಎಲ್ಲಾ ನಾಗರೀಕರು ಇದರ ಉಪಯೋಗ ಪಡೆಯಬೇಕು, ಇದು ದುಷ್ಟರ ವಿರುದ್ಧ ಇರುವ ಕಾನೂತ್ಮಕ ಭ್ರಹ್ಮಸ್ತ್ರ, ಇವುಗಳನ್ನು ಉಪಯೋಗಿಸುವುದು ಪ್ರತಿ ಪರಮ ಪ್ರಜೆಯ ಆಧ್ಯ ಕರ್ತವ್ಯ.!
1) legal measures ಕಾನೂನಾತ್ಮಕ ಕ್ರಮಗಳು
A) prevention of corruption act.
ಭ್ರಷ್ಟಾಚಾರ ಮಾಡುವುದು ಶಿಕ್ಷರ್ಹ ಅಪರಾಧ.
B) lokapal and lakayukta act 2013
ಲಂಚದಾಹಿ ಗಳನ್ನು ಸೆಡೆಬಡಿಯುವ ಸಂಸ್ಥೆ.
C) prevention of money laundering act.
ಅಕ್ರಮವಾಗಿ ಹಣವನ್ನು ಬೇರೆ ದೇಶಕ್ಕೆ ಅಥವಾ ಅಕ್ರಮ ಕಾರ್ಯಕ್ಕೆ ಬಳಸುವುದು ಶಿಕ್ಷರ್ಹ ಅಪರಾಧ.
ಎಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿದಿಯೋ ಅಲ್ಲಿ ಕಪ್ಪು ಹಣದ ಪ್ರಭಾವ ಹೆಚ್ಚು, ಎಲ್ಲಿ ಕಪ್ಪು ಹಣ ಹೆಚ್ಚೋ ಅಲ್ಲಿ ಪರ್ಯಾಯ ಆರ್ಥಿಕತೆ ಸೃಷ್ಟಿಯಾಗಲಿದೆ, ಅಲ್ಲಿ ಈ ರೀತಿಯ ಕೃತ್ಯಗಳು ನೆಡೆಯಲಿವೆ,
ಈ ಎಲ್ಲಾ ಅಂಶಗಳು ಒಂದೇ ಮರದ ರೆಂಬೆ ಕೊಂಬೆಗಳು ಇದರ ಬೇರು ಭ್ರಷ್ಟಾಚಾರ.
D) benami transaction act.
ಬೇನಾಮಿ ಅಸ್ತಿ ಮಾಡುವುದು, ವರ್ಗಾವಣೆ ಮಾಡುವುದು ಅಪರಾದವಾಗಿದೆ.
E) Right to information act.
ಸರ್ಕಾರಿ ಇಲಾಖೆ ಯ ಯಾವುದೇ ಮಾಹಿತಿಯನ್ನು ಪಡೆಯಬಹುದು. ಇದು ಭ್ರಷ್ಟಾಚಾರ ಮಾಡಿದ ಅಧಿಕಾರಿಯನ್ನು ಪ್ರಶ್ನಿಸುತ್ತದೆ.
2) technological measures. ತಾಂತ್ರಿಕ ಕ್ರಮಗಳು.
ಇ-ಆಡಳಿತ ಕ್ರಮಗಳಾದ e-governance
A) ನೇರ ಲಾಭಂಶ ವರ್ಗಾವಣೆ. Direct benefit transfer.
B) ಆಧಾರ್ ಪೇಮೆಂಟ್. Aadhar enabled payment system.
ಇದರಿಂದ ಅಧಿಕಾರಿಗಳು ಮತ್ತು ನಾಗರೀಕರ ಸಂಪರ್ಕ ಕಡಿಮೆಯಾಗಲಿದೆ, ಗಣಕಯಂತ್ರ ಲಂಚ ಸ್ವೀಕರಿಸಲು ಅದಕ್ಕೆ ಹಣಧಾಹ ಇಲ್ಲ, ಹೆಚ್ಚೆಚ್ಚು ಅಂತರ್ಜಾಲ ಸೇವೆ ಉಪಯೋಗಿಸುವುದು ಲಂಚ ನಿರ್ಮೂಲಗೆ ಮಾರ್ಗವಾಗಿದೆ.
3) Institutional measures.
A) Central bureau of investigation. (CBI)
B) Central vigilance commission.(CVC)
C) State vigilance commission.(SVC)
D) Anti corruption bureau. (ACB)
E) Enforcement directorate. (ED)
F) Lokapal. ( Central )
G) Lokayukta. ( State )
4) transparency and accountability measures.
A) Right to information.
B) citizens character.
ಇದರ ಮೂಲಕ ಎಲ್ಲಾ ಇಲಾಖೆಯ ಕಾರ್ಯ ಮತ್ತು ಶುಲ್ಕ ಮತ್ತು ಯಾವ ಕೆಲಸಕ್ಕೆ ಯಾವ ಅಧಿಕಾರಿಯನ್ನು ಭೇಟಿ ಮಾಡಬೇಕು. ಆ ಕಾರ್ಯ ಎಷ್ಟು ದಿನದಲ್ಲಿ ಆಗಲಿದೆ ಎಂಬ ಎಲ್ಲಾ ವಿಷಯವನ್ನು ಸ್ಥಳೀಯ ಭಾಷೆಯಲ್ಲಿ ಇಲಾಖೆಯ ಮುಖ್ಯ ದ್ವಾರ ಅಥವಾ ಗೋಡೆಗಳ ಮೇಲೆ ಕಡ್ಡಾಯವಾಗಿ ಹಾಕಲೇಬೇಕು. ಇಲ್ಲವಾದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರುವುದು ಹಾಕುವ ವರೆಗೆ ಅಲ್ಲೇ ಮೊಕ್ಕಾಂಊಡಿ.
C) social audit.
ಪ್ರತಿ ಗ್ರಾಮಪಂಚಾಯಿತಿ ಮತ್ತು ಗ್ರಾಮ ಸಭಾ ಹಂತದಲ್ಲಿ ಯಾವ ಯೋಜನೆಗೆ ಎಷ್ಟು ಹಣ ಬೇಕು ಮತ್ತು ಖರ್ಚಿನ ವಿವರ. ಯೋಜನೆ ಚಾಲನೆ ಮತ್ತು ಮುಕ್ತಾಯದ ಅವಧಿ ಹಾಕಲೇ ಬೇಕು.
ಗ್ರಾಮಸಭ ಸದಸ್ಯರು ಅಂದರೆ ಚುನಾವಣೆಯಲ್ಲಿ ಗೆದ್ದವರಲ್ಲ. ಬದಲಾಗಿ ಆ ಸ್ಥಳೀಯ ಗ್ರಾಮ ಪಂಚಾಯತ್ ನ ಎಲ್ಲಾ ನೋಂದಣಿ ಮತದಾರರು. ನೀವೆಲ್ಲ ಈ ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳಬಹುದು.
A registered member of each grama panchayat is a member of gram sabha. Member does not mean that one must be elected by contesting election, you just need an electoral Identity to be a member of respected gramsabha.
However....…
ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕೇಳುತ್ತಿರುವ ಒಂದು ದೇಶದ ಹೆಸರು ಅದು ಸಿಂಗಪೋರ್. ನಮ್ಮದು ಸಿಂಗಪೋರ್ ನಂತಹ ಅಭಿವೃದ್ಧಿ ಎಂದು ಹೇಳುವ ಸರ್ಕಾರಗಳು.
ಹೀಗಿರುವಾಗ ಮಾಜಿ ಪ್ರಧಾನಿ lee kuan yew ಅವರೇ ಹೇಳಿದಂತೆ ಅವರು ಅಭಿವೃದ್ದಿಯಾಗಲು ಕಾರಣವಾದ ಮುಖ್ಯ ಅಂಶಗಳು..
1. ಶಕ್ತಿಯುತ ಭ್ರಷ್ಟ ವಿರೋಧಿ ಸಂಸ್ಥೆಗಳು ಭ್ರಷ್ಟಾಚಾರ ನಿಗ್ರಹಿಸಲು ಸಹಕರಿಸಿದ್ದು.
2. ಜನರ ಸಹನೆ ಭ್ರಷ್ಟಾಚಾರದ ವಿರುದ್ದ ತಿರುಗಿ ಬಿದ್ದದ್ದು.
3. ಸಾಮಾಜಿಕ ಆರ್ಥಿಕ ಏರುಪೇರು ಸರಿಪಡಿಸಿದ್ದು.
4. ಭ್ರಷ್ಟರನ್ನು ಸಾಮಾಜಿಕವಾಗಿ ಬಹಿಷ್ಕಾರ ಮಾಡಿದ್ದು.
(Social Ostracization ).
ಸ್ನೇಹಿತರೆ ಇದು ನಾವೆಲ್ಲಾ ನಮಗಾಗಿ ಆಗಬೇಕಾದ ಬದಲಾವಣೆ, ಭ್ರಷ್ಟಾಚಾರ ಆಚರಿಸುವ ಹಬ್ಬವಲ್ಲ, ಮತದಾನ ಆಚರಣೆಗೆ ಅರ್ಹವಾದ ಹಬ್ಬ ಆಚರಿಸಿ. ಮತದಾನ ಮಾಡಿ, ಸೇವೆಮಾಡುವ ಸೇವಕನನ್ನು ಆಯ್ದುತನ್ನಿ, ಅವನು ದಾರಿ ತಪ್ಪಿದಲ್ಲಿ ಕಿತ್ತು ಹಾಕುವ ಶಕ್ತಿ ನಮ್ಮಲಿದೆ.
ನಾವು ಪ್ರಪಂಚದ ಅತಿಹೆಚ್ಚು ಅಂತರ್ಜಾಲ ಉಪಯೋಗಿಸುತ್ತಿರುವವರು, ಅತಿ ಕಡಿಮೆ ಬೆಲೆಗೆ ಡೇಟಾ ಸಿಗುವ ಏಕೈಕ ದೇಶ, ಅದನ್ನು ಹೆಚ್ಚಾಗಿ ಉಪಯೋಗಿಸಿ,
ಸಾಮಾಜಿಕ ಜಾಲತಾಣ ಕೇವಲ ಮನೋರಂಜನೆಗೆ ಅಲ್ಲ, ಅದು ಈಗ ಪ್ರಪಂಚದ ಒಂದು ನೂತನ ಒತ್ತಡಸಂಘ pressure group ಆಗಿದೆ, ಯಾರು ದೇಶದ ಅವ್ಯವಹಾರಗಳನ್ನು ಬಹಿರಂಗ ಮಾಡುತ್ತಾರೋ ಅವರನ್ನು whistle blowers ಎನ್ನುವರು, ಅವರ ರಕ್ಷಣೆಗೆ whistle blowers protection act ಕೂಡ ಇದೆ. ಕೇವಲ ಒಂದು ಮತದಾನ ಹೇಗೋ ಅದೇ ರೀತಿ ಒಂದು ಹ್ಯಾಶ್ಟ್ಯಾಗ್ # ಕೂಡ ಕೆಲಸ ಮಾಡಲಿದೆ.
Go for it
#India against corruption.
#no tolerance for corruption.
#we tired of corruption.
#stop giving bribe.
ಈಗಿನಿಂದಲೇ ಭ್ರಷ್ಟರ ಮುಖವಾಡ ಕಳಚಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಅವರ ಅವ್ಯವಹಾರಗಳನ್ನು ಸಮಾಜದ ಮುಂದೆ ತನ್ನಿ ಉತ್ತಮ ಪ್ರಜೆಯಾಗಿ.
(ನಮ್ಮ ಮುಂದಿನ ಬರಹಗಳಲ್ಲಿ pressure group, whistle blowers ಬಗ್ಗೆ ಒಳ್ಳೆಯ ಲೇಖನ ಬರೆಯುವೆ.)
ಈ ಲೇಖನ ನಮ್ಮಲ್ಲಿ ಒಂದು ಬದಲಾವಣೆಯ ದೀಪಕ್ಕೆ ಕಿಡಿ ಒತ್ತಿಸಲಿದೆ ಎಂದು ಭಾವಿಸುತ್ತೇನೆ, ಈ ದೀಪ ಹತ್ತಿಸಿ ಅದರ ಬೆಳಕಲ್ಲಿ ಭಯ ಇಲ್ಲದಂತೆ ಸಾಗೋಣ. ಮತ್ತು ಎಲ್ಲಾ ರೀತಿಯ ಅಂಶಗಳನ್ನು ಸಾಮಾಜಿಕವಾಗಿ ನೇರವಾಗಿ ಹೇಳುವುದು ಸೂಕ್ತವಲ್ಲ, ಲೇಖನದಿಂದ ಗ್ರಹಿಸುವುದು ಪ್ರತಿಯೊಬ್ಬ ಓದುಗನ ಕ್ರಿಯಾಶೀಲತೆ ಮತ್ತು ಯೋಚನಾ ಲಹರಿಗೆ ಸಂಬಂಧವಾದ್ದದ್ದು, ಅದು ವ್ಯಕ್ತಿಯಿಂದ ವ್ಯಕ್ತಿಗೆ ಬಿನ್ನ, ನಾವೂ ಅದನ್ನು ಓದುಗನಿಗೆ ಬಿಟ್ಟಿದೇವೆ, ಕೊನೆಯದಾಗಿ ಇದು ನಮಗಾಗಿ, ನಮ್ಮ ಉತ್ತಮ ಸಮಾಜಕ್ಕಾಗಿ... ಇಷ್ಟೆಲ್ಲದರ ನಡುವೆ ಉಳಿದ ಒಂದೇ ಪ್ರಶ್ನೆ ನಿಜಕ್ಕೂ ಭ್ರಷ್ಟಾರಾರು........?
ಪ್ರಪಂಚದ ಅತಿ ದೊಡ್ಡ ಪ್ರಜಾತಂತ್ರ ದೇಶ ನನ್ನ ಭಾರತ, ಬದಲಾಗ ಬೇಕಿರುವುದು ಭಾರತವಲ್ಲ, ಭಾರತೀಯರು.
ನನ್ನ ದೇಶ ನನ್ನ ಹೆಮ್ಮೆ
ಧನ್ಯವಾದಗಳೊಂದಿಗೆ
ಮಂಜುನಾಥ್ ಕೆ ಆರ್