ಹಣ ಬರೀ ಕಾಗದದ ಚೂರು
ಬೆಳ್ಳಿ, ಬಂಗಾರ ಬರೀ ಲೋಹದ ಆಗರ
ನೂರೆಂಟು ಭಾವನೆಗಳ ಮಿಲನ
ಈ ಸ್ನೇಹವೆಂಬ ಸಮ್ಮಿಲನ
ಮುಗ್ಧ ಮನಸಿನ ಸಂಚಲನ
ಮನೆಯ ಬಂಧುಗಳಿಗಿಂತ ವಿಶ್ವಾಸದ
ಈ ಸ್ನೇಹಬಂಧ
ಸ್ನೇಹದಲಿ ಇರಬಾರದು ಮನಸ್ತಾಪ
ಸಿರಿವಂತಿಕೆ, ತಾರತಮ್ಯತೆ
ಸಾಗರದಂತೆ ಸದಾ ಹರಿಯುತಿರಲಿ ಈ ಸ್ನೇಹ
ವಿಶ್ವಾಸದ ಈ ಸ್ನೇಹ.
ಆಕಾಶದಸ್ಟು ವಿಶಾಲವಿರಲಿ ಈ ಸ್ನೇಹ
ಅಸ್ಟೇ ಹೃದಯವಿರಲಿ ವಿಶಾಲ
ಜೀವನದುದ್ದಕ್ಕೂ ಸಾಗುತಿರಲಿ ಈ ಸ್ನೇಹ
ಎಲ್ಲರ ಬಾಂಧವ್ಯವೇ ವಜ್ರಕವಚ ಹೃದಯದಲಿ ಅಮರವಾಗಿರಲಿ ಸದಾ ಈ ಸ್ನೇಹ
ವಿಶ್ವಾಸದ ಈ ಸ್ನೇಹ.
ಸದಾ ಸ್ನೇಹದಲ್ಲಿರಲಿ ನಕ್ಷತ್ರದ ಮಿನುಗು
ಸದಾ ಮಿನಿ ಮಿನಿ ಮಿಂಚುತಿರಲಿ
ಸ್ನೇಹದ ನುಡಿಗಳು ಸದಾ
ಸಮ್ಮಿಳನದ ಪ್ರೀತಿಗೆ ಹಾದಿಯಾಗಿರಲಿ
ವಿಶ್ವಾಸದ ಈ ಸ್ನೇಹ.
0 Followers
0 Following