ನೀನು ನನ್ನ ಬದುಕಿನಲ್ಲಿ ಬಂದ ತಾವರೆ,
ನಿನ್ನ ನೋಡದೆ ಬದುಕಲು ಕಷ್ಟ ಆದರೆ,
ಏನು ಹೇಳಲಿ ಹೀಗಾದರೆ ತೊಂದರೆ,
ತೊಂದರೆ ಅಲ್ಲ ಅದೊಂದು ಸಿಹಿಯಾದ ಮಂಪರೆ...
ನಿನ್ನ ಕಣ್ಣ ನಕ್ಷತ್ರ ಕಂಡು ಮೂಕನಾಗಲೇ..
ಇಲ್ಲವೇ ಆ ಹೊಳಪಲಿ ಮಿಂದು ಕಳೆದುಹೋಗದೆ?..
ಅಥವಾ ಆ ನಿನ್ನ ಕೆಂಪಾದ ತುಟಿಯ ಮಧುವ ಹೀರಿ ತೃಪ್ತನಾಗಲೆ?..
ಹೇಳು ಗೆಳತಿ ಯಾಕಿಷ್ಟು ಚಂದ ನೀನು...
ಹೇ ನನ್ನ ಮುದ್ದಿನ ರಾಣಿ..
ನೀ ನನ್ನ ಚಿನ್ನದ ಗಿಣಿ...
ನಿನ್ನ ಪ್ರೀತಿ ಎಷ್ಟೇ ಅಗೆದರೂ ಮುಗಿಯದ ಗಣಿ..
ಆ ನಿನ್ನ ಸ್ನೇಹ ಪ್ರೀತಿಗೆ ನಾ ಎಂದೆಂದೂ ಚಿರಋಣಿ...
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....
0 Followers
0 Following