ಕಾಲುಚೆಂಡು ಮಾಂತ್ರಿಕ ಸುನಿಲ್ ಛೆಟ್ರಿ

ಭಾರತೀಯ ಫುಟ್ಬಾಲಿಗನ ದಂತಕತೆ

ProfileImg
01 Jun '24
2 min read


image

ನಾ ನು ನನ್ನನ್ನು ಸುಧಾರಿಸಿಕೊಳ್ಳುತ್ತಲೇ ಇರಬೇಕು ಮತ್ತು ನನ್ನನ್ನೇ ಸವಾಲು ಮಾಡಿಕೊಳ್ಳಬೇಕು ಎಂದು ಹೇಳಿ ಹಾಗೆಯೇ ಬದುಕಿದ ಆದರ್ಶ ವ್ಯಕ್ತಿ ಸುನಿಲ್ ಛಟ್ರಿ. ಕ್ರಿಕೆಟ್ ಹೊರತಾಗಿ ಉಳಿದ ಆಟಗಳು ಗೌಣವಾದ ಸ್ಥಿತಿಯಲ್ಲಿದ್ದ ಕಾಲದಲ್ಲಿ ಭಾರತೀ ಯರನ್ನು ಪುಟ್ಬಾಲ್ ಬಗ್ಗೆ ಅಭಿಮಾನ ಮೂಡಿಸುವಂತೆ ಮಾಡಿ, ಭಾರತೀಯ ಪುಟ್ಬಾಲ್ ರಂಗದಲ್ಲಿ ಚರಿತ್ರೆಯನ್ನೇ ಬರೆದ ವ್ಯಕ್ತಿ. ಚಿಕ್ಕದಾದ ದೇಹ ಮತ್ತು ಅಷ್ಟೇ ಕರಾರುವಕ್ಕಾದ ಮತ್ತು ನಿರ್ದಿಷ್ಟವಾದ ಗೋಲು ಗಳಿಸುವ ಗೋಲ್ ಮಿಷನ್. ಬದುಕಿದರೆ ಆತನಂತೆ ಬದುಕಬೇಕೆಂಬ ಮಾದರಿ ಜೀವನ ನಡೆಸಿದ ಭಾರತದ ಶ್ರೇಷ್ಠ ಕ್ರೀಡಾಪಟು. ಇಲ್ಲಿಯವರೆಗೂ ತನ್ನ ವೃತ್ತಿ ಜೀವನದಲ್ಲಿ ನಕರಾತ್ಮಕ ಸಂಗತಿಗಳಿಲ್ಲದೇ ಬದುಕಿದ ಉತ್ಕುಷ್ಟ ವ್ಯಕ್ತಿತ್ವ ಸುನಿಲ್ ಛಟ್ರಿಯವರದು. ನಿಜಕ್ಕೂ ಭಾರತೀಯರಿಗೆ ಪುಟ್ಬಾಲ್ ಎಂದ ತಕ್ಷಣ ನೆನಪಾಗುವ ಮೊದಲ ಹೆಸರು ಛಟ್ರಿಯವರದ್ದು. ಅದಕ್ಕಾಗಿಯೇ ಇವರನ್ನು ಭಾರತೀಯ ಪುಟ್ಬಾಲ್‌ನ ದಂತಕಥೆಯೆಂದರೆ ಅತಿಶಯೋಕ್ತಿ ಯನಲ್ಲ. ಅಂತಹ ಸಾಧಕನನ್ನು ಸಂಭ್ರಮಿಸುವುದು ಈ ಹೊತ್ತಿನ ವಿಶೇಷ.

ಪುಟ್ಬಾಲ್ ಆಟಗಾರರ ಕುಟಂಬ

ನೇಪಾಳಿ ಹಿನ್ನೆಲೆಯ ಕುಟುಂಬದಲ್ಲಿ ಆಗಷ್ಟೇ 03,1984ರಲ್ಲಿ ಈಗಿನ ಸಿಕಂದರಾ ಬಾದ್ ಛಟ್ರಿಯವರ ಜನಿಸಿದರು. ತಂದೆ ಕೆ.ಬಿ.ಛಿಟ್ರಿ ಭಾರತೀಯ ಸೇನಾ ಅಧಿಕಾರಿ ಯಾಗಿದ್ದುಕೊಂಡು ಸೇನಾ ಪುಟ್ಬಾಲ್ ತಂಡದಲ್ಲಿ ಆಟಗಾರರಾಗಿದ್ದರು. ಇವರ ತಾಯಿ ಸುಶೀಲಾ ಛಟ್ರಿ ನೇಪಾಳದ ರಾಷ್ಟ್ರೀಯ ಮಹಿಳಾ ಪುಟ್ಬಾಲ್ ತಂಡದ ಆಟಗಾರ್ತಿಯಾಗಿದ್ದರು. ಇವರ ಸಹೋದರಿಯರಾದ ಸಶಾ ಮತ್ತು ಸುನಂದಾರ ವರು ಪುಟ್ಬಾಲ್ ಆಟಗಾರರು. ಹೀಗೆ ಪುಟ್ಬಾಲ್ ಮನೆಯಿಂದ ಬಂದ ಪುಟ್ಬಾಲ್ ಕುಡಿ, ಇಂದು ಇಡೀ ವಿಶ್ವವೇ ಬೆರಗುಗೊಳಿಸುವಂತಹ ಪುಟ್ಬಾಲ ಆಟಗಾರನಾಗಿ ಬೆಳೆದಿದ್ದು ಸಾಧನೆಯೇ ಸರಿ.

ಸಾಧನೆಯೆಂದರೆ ಇದೇ!

ಜೂನ್ 2005ರಲ್ಲಿ ತಮ್ಮ ಕ್ರೀಡಾವೃತ್ತಿ ಜೀವನವನ್ನು ಪ್ರಾರಂಭಿಸಿದ ಛಟ್ರಿ ಅಲ್ಲಿಂದ ಇಲ್ಲಿಯವರೆಗೂ ಹಿಂದುರುಗಿ ನೋಡಲೇ ಇಲ್ಲ. ಆತ ಹೊಡೆದ ಪ್ರತಿಯೊಂದು ಹೊಡೆತವು ಗೋಲ್‌ ಗಳಾಗಿ ಭಾರತ ಪುಟ್ಬಾಲ್ ತಂಡಕ್ಕೆ ಹೊಸ ಭಾಷ್ಯ ಬರೆದವು. ಅವರು ಆಡಿದ ಮೊದಲ ಅಂತರಾಷ್ಟ್ರೀಯ ಕಪ್ (ನೆಹರು ಕಪ್ 2007)ನಲ್ಲಿ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ದರು. ಜತೆಗೆ ಹಿರಿಯ ರಾದ ಬೈಚಿಂಗ್ ಭೂಟಿ ಯಾರಂತಹ ಅತಿರಥರಿಂದ ಮೆಚ್ಚುಗೆ ಪಡೆ ದರು. 2011ರಲ್ಲಿ ಅರ್ಜುನ್ ಪ್ರಶಸ್ತಿ, ನಾಲ್ಕು ಬಾರಿ ಎಎಎಫ್ ಎಫ್ ಚಾಂಪಿಯ ನ್ಶಿಪ್ ಪ್ರಶಸ್ತಿ ವಿಜೇತರಾಗಿದ್ದಾರೆ. ಏಳು ಬಾರಿ ಎಐಎಫ್ಎಫ್ (ಅಖಿಲ ಭಾರತ ಫುಟ್ಬಾಲ್ ಫೆಡರೇಶನ್))ನ ವರ್ಷದ ಆಟಗಾರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಭೆಟ್ರಿಯವರು. ಇಷ್ಟೇ ಅಲ್ಲದೇ ಭಾರತೀಯ ಪುಟ್ಬಾಲ್ ಇತಿಹಾಸ ದಲ್ಲಿ ಮೊದಲ ಬಾರಿಗೆ 2021ರಲ್ಲಿ ಧ್ಯಾನ್ ಚೆಂದ ಕೇಲ್ ರತ್ನ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು. ಸಾಧನೆಯೆಂದರೆ ಇದು ಅಲ್ವೇ?.

ವಿಶ್ವ ಕಂಡ ಶ್ರೇಷ್ಠ ಪುಟ್ಬಾಲ್ ಆಟಗಾರರಲ್ಲಿ ಕ್ರಿಶ್ಚಿಯಾನೋ ರೋನಾಲ್ಲೊ, ಲಿಯೋನಲ್ ಮೆಸ್ಸಿನಂತರದ ಸ್ಥಾನವನ್ನು ನಮ್ಮ ಭಾರತದ ಕುವರ ಸುನಿಲ್ ಭೆಟ್ರಿ ಪಡೆದಿರುವುದು ಇವರ ಸಾಧನೆಗೆ ಹಿಡಿದಿರುವ ಕೈಗನ್ನಡಿ. ಇವರು ಇಲ್ಲಿಯವರಿಗೆ 150 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 94 ಗೋಲುಗಳನ್ನು ಪಡೆದು ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ. ಮುಂಬರುವ ಜೂನ್ ತಿಂಗಳ 6ನೇ ತಾರೀಖಿನ ಪಂದ್ಯ ಇವರಿಗೆ ಕೊನೆ ಪಂದ್ಯವಾಗಲಿದೆ. ಈ ಸಂದರ್ಭದಲ್ಲಿ ಛಟ್ರಿಯವರಿಗೆ ನಾವು ಹೆಮ್ಮೆಯ ನಿವೃತ್ತಿ ವಿದಾಯವನ್ನು ಹೇಳೊಣ. ಭಾರತದಲ್ಲಿ ಪುಟ್ಬಾಲ್ ಆಡುವ ಕೊನೆಯವರೆಗೂ ನಿಮ್ಮ ಹೆಸರು ಅಜರಾಮರವಾಗಿ ಉಳಿಯುವುದು. ಛಟ್ರಿ ಸೃಷ್ಟಿಸಿದ ಚರಿತ್ರೆ ಶಾಶ್ವತವಾಗಿರಲಿ, ಯುವಪೀಳಿಗೆಗೆ ಆದರ್ಶವಾಗಿರಲಿ.

Category:Sports



ProfileImg

Written by Balu Kukke8277