ಮನುಜನ ಬದುಕು ಮನೆಯೆಂಬ ಚೌಕಟ್ಟಿನೊಳಗೆ ಇದೆ. ಮನೆಯಲ್ಲಿ ಏನಾದರೊಂದು ಕಾರ್ಯವನ್ನು ಮಾಡಬೇಕೆಂದರೆ ಹಿರಿಯವರ ಒಪ್ಪಿಗೆ ಪಡೆಯಬೇಕು. ತನಗೆ ಬೇಕಾದಂತೆ ಬದುಕಲಾಗದು.
ಕೂಡುಕುಟುಂಬವೋ, ಪುಟ್ಟ ಸಂಸಾರವೋ ನಡೆಸುವ ನಮಗೆ ಅವುಗಳಂತೆ ಹಾರುವ ರೆಕ್ಕೆಗಳಿದ್ದರೆ ಎಷ್ಟು ಒಳ್ಳೆಯದಿತ್ತು ಅಂತ ಅನಿಸಿಬಿಡುತ್ತದೆ. ಆದರೆ ಅದು ಎಂದಿಗೂ ಸಾಧ್ಯವಾಗದ ಮಾತು. ನಾವು ಅವುಗಳನ್ನು ನೋಡಿಯೇ ಸಂತೋಷಪಟ್ಟುಕೊಳ್ಳಬೇಕಷ್ಟೇ...
ದೇವರು "ನೀನು ಬುವಿಯಲ್ಲಿರು. ಅಲ್ಲಿ ಸಾಧನೆಯ ಹಾದಿಯನು ಹಿಡಿದು ಎತ್ತರಕೆ ಏರು" ಎಂದು ಭಗವಂತ ನಮಗೆ ಪೊರೆದಿದ್ದಾನೆ. ಸಂಸಾರ ನಡೆಸುತ ಜೀವನದ ಏಳು ಬೀಳುಗಳ ಎದುರಿಸುತ ಮಾನವನಾಗಿ ಬದುಕಲು ಭಗವಂತ ನಮಗೆ ಕೈಕಾಲುಗಳನ್ನು ಕೊಟ್ಟ. ಮಾನವನ ಜನುಮ ದೊಡ್ಡದು ಎನ್ನುತ್ತಾರೆ. ಸಂಸಾರದ ಜಂಜಾಟದಲ್ಲಿ ಸಿಲುಕಿದವನಿಗೆ ಪಕ್ಷಿಯಾಗಿ ಹುಟ್ಟಬಹುದಿತ್ತು. ಗಗನದಲ್ಲಿ ನಮಗೂ ದೇಶ, ವಿದೇಶಗಳನ್ನು ಸುತ್ತಬಹುದಿತ್ತು ಅಂತ ಅನಿಸುವುದು ಸುಳ್ಳಲ್ಲ.
ಪಕ್ಷಿಗಳು ಬಾನಲ್ಲಿ ಸ್ವತಂತ್ರವಾಗಿ ಹಾರಾಡುತ್ತವೆ. ಯಾರ ಹಂಗೂ ಇಲ್ಲದೆ ರೆಕ್ಕೆಯನ್ನು ಬಡಿಯುತ್ತಾ, ಯಾವುದೇ ಖರ್ಚಿಲ್ಲದೆ ಉಚಿತವಾಗಿ ಬಾನಲ್ಲಿ ದೇಶವಿಡೀ ಸುತ್ತಿ, ವಿದೇಶಕ್ಕೂ ಹಾರಿ ಅಲ್ಲಿನ ಖುಷಿಯನ್ನು ಆಸ್ವಾದಿಸಿ ಬರುತ್ತವೆ. ನೋಡಿದರೆ ವಿಮಾನ ಹಾರಾಡಿದಂತೆ ಕಾಣುತ್ತವೆ... ಅದೆಷ್ಟು ಚೆಂದ..!!
ಮಳೆ, ಬಿಸಿಲಿಗೆ ತಲೆಯ ಕೆಡಿಸಿಕೊಳ್ಳದೆ ನಿತ್ಯ ಅದೆಷ್ಟೋ ಮೈಲಿಗಳಷ್ಟು ದೂರ ಸಂಚಾರ ನಡೆಸುತ್ತವೆ. ತಂಗಾಳಿ ಬೀಸುತಿರಲು ಕಡಲ ಮೇಲ್ಗಡೆಯಿಂದ ಹಾರುತ್ತಾ ಸಾಗುತ್ತವೆ. ರವಿ, ಶಶಿಗಳ ಭೇಟಿಮಾಡಿ ಸಂಭಾಷಣೆಯ ನಡೆಸಿ ಬರುತ್ತವೆ. ದಾಹವ ತೀರಿಸಲು ಕಡಲ ಸನಿಹಕ್ಕೆ ಬಂದು ನೀರನ್ನು ಸವಿದು ಮತ್ತೆ ಬಾನಿನತ್ತ ಸಾಗುತ್ತವೆ.
ಒಂದೆಡೆ ಕಸವನು ಹೆಕ್ಕಿ ತರಲು ಗುಡ್ಡದಲ್ಲಿ ಹುಡುಕಾಡುತ್ತದೆ. ತನ್ನ ಕೊಕ್ಕಿನಲ್ಲಿ ತಂದು ಮನೆಯ ಮೂಲೆಯಲ್ಲಿ ಗುರುತು ಮಾಡಿ ಗೂಡುಕಟ್ಟಲು ಪ್ರಾರಂಭಿಸುತ್ತವೆ. ಮೊಟ್ಟೆಯಿಟ್ಟು ಒಡೆದು ಮಗು ಹೊರಬರುತ್ತದೆ. ತನ್ನ ಕಾಲಮೇಲೆ ನಿಂಬ ಆ ಪರಿ ಎಲ್ಲರಿಗೂ ನಿದರ್ಶನ. ಅವುಗಳಿಗೆ ಮುಸ್ಸಂಜೆಯ ಸೂರ್ಯಾಸ್ತದ ಸಮಯಕ್ಕೆ ಗೂಡು ಸೇರುವ ತವಕ... ಮರಿಗಳು ತನ್ನ ಆಗಮನಕ್ಕೆ ಕಾಯುತ್ತಿರುತ್ತವೆ. ಕಾವು ಕೊಟ್ಟು ಮಗುವನ್ನು ದೊಡ್ಡದು ಮಾಡಿ ಅವುಗಳೂ ಗೂಡುಬಿಟ್ಟು ಹೊರ ಪ್ರಪಂಚದಲ್ಲಿ ಹಾರಾಡುತ್ತವೆ.
✍ ಮುರಳಿಕೃಷ್ಣ ಕಜೆಹಿತ್ತಿಲು
DTP Worker, Vittal, Mangalore
0 Followers
0 Following