ಜಗತ್ತಿನ ಸುಂದರ ಸೃಷ್ಟಿ ಈ ಹೂಗಳು….
ಪ್ರಕೃತಿಯ ಸೌಂದರ್ಯವನ್ನು ಎರಕ ಹೊಯ್ದು
ನಿಂತಿದೆ ಇವುಗಳು………
ದೇವರ ಪೂಜೆಗೆಂದು ಇಟ್ಟರೆ ಕೊಯ್ದು…….
ಮಾಸದು ಎಂದೆಂದಿಗೂ ಇವುಗಳ ನಗು
ಅರಳಿ ನಿಂತ ಈ ಬಿಳಿಯ ಹೂಗಳು
ಪರಿಶುದ್ಧತೆಯ ಸಂಕೇತದ ಮಗು…..
ನಾ ಹೂವಿನ ಲೋಕದಲ್ಲೋ, ಹೂವಿನ ಲೋಕ ನನ್ನೊಳಗೊ
ಒಂದು ತಿಳಿಯದು, ಅದರ ಸೌಂದರ್ಯವ ಕಂಡು
ಮನಮೋಹಿತಳಾದೆ, ಅದರ ಬೆರಗನ್ನು ಕಂಡು…..
ಹೂವು ಎಂದರೆ, ಹೋಲಿಕೆಯೇ ಹೆಣ್ಣು
ಹೆಣ್ಣೆಂದರೆ ಹೋಲಿಕೆಯೇ ಈ ಹೂವುಗಳು….
ಒಂದು ಹೆಣ್ಣಿನ ಸಣ್ಣ ನಗು,
ನೂರು ಹೂವುಗಳ ಚೆಲುವಿಗೆ ಸಮ ಎನ್ನುವರು…
ಹೆಣ್ಣು, ಹೆಣ್ಣಿನ ಸೌಂದರ್ಯ, ಹೆಣ್ಣಿನ ನಗು
ಇದೆಲ್ಲದರ ಸಂಕೇತವೇ ಈ ಹೂವುಗಳು…..
ಪರಿಶುದ್ಧ ಮನಸ್ಸಿನ ಹೆಣ್ಣು,
ಶುಭ್ರತೆಯ ತುಂಬಿರುವ ಈ ಬಿಳಿಯ ಹೂಗಳಿಗೆ ಸಮ…..
ಪದಗಳೇ ಸಿಗದು, ಪದಗಳೇ ಸಿಗದು
ಇದರ ಚೆಲುವನ್ನು ಬಣ್ಣಿಸಲು, ಇದರ ಸೊಬಗನ್ನು ಗುಣಗಾನ ಮಾಡಲು…
ನಮ್ಮ ಮನೆಯ ಅಂಗಳದಿ ಅರಳಿದ ಈ ಹೂವುಗಳು
ನನ್ನ ಬರವಣಿಗೆಗೆ ಸ್ಫೂರ್ತಿಯ ನೀಡಿದ ಚಿಲುಮೆ…
ಇದರಲ್ಲಿ ಸಂಪೂರ್ಣವಾಗಿ ತುಂಬಿದೆ ಹೂಗಳ ಮೇಲಿರುವ ನನ್ನ ಒಲುಮೆ…..
ಮುಂಜಾನೆ ನನ್ನ ಕಣ್ಣಿಗೆ ಬಿದ್ದ ಹೂವಿನ ಚೆಲುವು…..
0 Followers
0 Following