Do you have a passion for writing?Join Ayra as a Writertoday and start earning.
ಗಾಳಿ ಎಂದಿಗಿಂತ ಹಿತವಾಗಿ ಬೀಸಿದಂತಿದೆ,ಕಾರಣವು ಇದಕ್ಕಿದೆ,ಈಗ ಬೆಂಗಳೂರಲ್ಲಿ ಮಳೆ ನಿರಂತರತೆ ಕಾಯ್ದುಕೊಂಡಿದೆ.ಸಂಜೆ ಆದರೆ ಮೋಡ ಕವಿದು ಕಟ್ಟಡಗಳ ತಂಪೆರೆವ ಮಳೆರಾಯ.ನಾನೂ ಇರುವೆ ಭಯವಿರಲಿ ಎಂದು ಬೊಬ್ಬಿಡುವ ಗುಡುಗು-ಮಿಂಚುಗಳು.
ಹೀಗೆ ಸಾಯಂಕಾಲ ಕಾಫಿ ಸವಿಯುತ್ತಾ ಜಾಲತಾಣಗಳ ಕಣ್ಣಾಡಿಸಿದರೆ ಅಪರೂಪಕ್ಕೆಂಬಂತೆ ಖುಷಿ ಕೊಡಬಹುದಾದ ವಿಚಾರ.
ನೋಡಲಿನ್ನು ಬಾಲಕ,ಸರಿಸುಮಾರು ಮೈಕಟ್ಟು,ಅಂದಚೆಂದ ಮೀರಿದ ಸಾಧನೆ. ಅವನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಸಾಧಕ,ಅವನೇ ಗ್ರ್ಯಾ ಡ್ ಮಾಸ್ಟರ್ ಚೆಸ್ ಚಾಂಪಿಯನ್ ಆರ್.ಪ್ರಗ್ನಾನಂದ
ಚೆಸ್ ಆಟಕ್ಕೂ ಚೆನೈಗೂ ಅವಿನಾಭಾವ ಸಂಬಂಧ ಇರುವಂತಿದೆ.ಇತಿಹಾಸ ಸೃಷ್ಟಿಸಿದ ಭಾರತದ ಹೆಮ್ಮೆಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ 2000 ಹಾಗೂ2002ನೇ ಇಸವಿಯಲ್ಲಿ ಚೆಸ್ ವಿಶ್ವಕಪ್ ಗೆದ್ದು ಭಾರತೀಯರು ಚದುರಂಗ ಪಂಟರೆಂದು ಸಾಧನೆ ಮೆರೆದ ವಿಶ್ವನಾಥನ್ ಆನಂದ್ ರವರು ಮೂಲತಃ ಚೆನೈ ನವರು. ಇವರು ವಿಶ್ವಕಪ್ ಗೆದ್ದು ಸಾಧನೆ ಮಾಡಿದ ನಂತರ ಹುಟ್ಟಿದ ಮಗು ಅಂದರೆ ಆಗಸ್ಟ್ 10,2005ರಲ್ಲಿ ಚೆನೈ ಅಲ್ಲಿ ಹುಟ್ಟಿ ಬೆಳೆದ ಮಗು ವಿಶ್ವನಾಥನ್ ಆನಂದ್ ರವರ ಸಾಧನೆಯಿಂದ ಸ್ಫೂರ್ತಿ ಗೊಂಡು,ತಾನೂ ಹಾಗೆ ಆಗಬೇಕೆಂದು ಆಯ್ದುಕೊಂಡ ಪರಿ ವಿಸ್ಮಯ. ಪೋಷಕರ ಪಾತ್ರವಂತು ಬಹಳ ಅದ್ಭುತ.
ತನ್ನ ಹತ್ತನೆಯ ವಯಸ್ಸಿನಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಈತ ನೋಡಲು ಬಹಳ ಸರಳ ಜೀವಿ. ಸದಾ ತಾಯಿಯೊಂದಿಗೆ ಕಾಣಿಸಿಕೊಳ್ಳುವ ಈತ ಹಸನ್ಮುಖಿ, ಸಹೋದರಿ ವೈಶಾಲಿ ಸಹ ಚೆಸ್ ಆಟಗಾರ್ತಿ. ಸಾಮಾಜಿಕ ಜಾಲತಾಣ, ಮಾಧ್ಯಮ ಗಳಿಂದ ಬಹಳ ದೂರ ಈ ಕುಟುಂಬ,.ಅವರ ಕನಸೇನಿದ್ದರು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಚದುರಂಗ ಶ್ರೇಷ್ಠ ರನ್ನು ಸೋಲಿಸಿ ದೇಶದ ಹೆಸರುಳಿಸುವುದು. ಅಪಾರ ಕೌಶಲ್ಯ ಇದ್ದರೆ ಮಾತ್ರ ಚದುರಂಗ ಆಡಲು ಸಾಧ್ಯ ಅದು ಎಲ್ಲರಿಗೂ ತಿಳಿದ ವಿಚಾರ.ಭಾರತೀಯ ಇತಿಹಾಸದಲ್ಲೂ ಇದರ ಪಾಲಿದೆ.
ಆರ್.ಪ್ರಗ್ನಾನಂದರ ಪ್ರಯತ್ನ ಇಂದು ನಿನ್ನೆಯದಲ್ಲ, ಹಲವು ವರುಷಗಳ ಪ್ರೀತಿಯ ಶ್ರಮ. ಈಗ ಇವನಿಗೆ 18ವರುಷ .ಆನಂದ್ ರವರ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚದುರಂಗ ಆಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿಶ್ವ ಚಾಂಪಿಯನ್ ಪಟ್ಟಿಯಲ್ಲಿರುವ ಅನೇಕ ದೇಶಗಳ ಆಟಗಾರರನ್ನು ಸೋಲಿಸಿ, ಅಂತಿಮ ಹಂತದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ರವರೊಂದಿಗೆ ಬಹುನಿರೀಕ್ಷಿತ ಗೆಲುವಿನಲ್ಲಿದ್ದಾರೆ.ಮತ್ತೊಮ್ಮೆ ಭಾರತದ ಯುವ ಪ್ರತಿಭೆ ಪ್ರಜ್ವಲಿಸಲಿದೆ. ಕಳೆದ ಬಾರಿ ವಿಶ್ವ ಚೆಸ್ ಚಾಂಪಿಯನ್ ಕಪ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಇವರು, ಈ ಬಾರಿ ಪ್ರಥಮರಾಗಿರುವುದು ನಮ್ಮ ಹೆಮ್ಮೆ.ಇಂತಹ ಆಟ ವ್ಯಕ್ತಿ ,ವಿಚಾರಗಳು ಗೆಲ್ಲುವ ವರೆಗೂ ಮಾಧ್ಯಮಗಳು ಬಿತ್ತರಿಸುವ ಕೆಲಸ ಮಾಡುವುದೇ ಇಲ್ಲ,ಆದರೂ ನಾಮಕಾವಸ್ಥೆ,ಅದೇ ಕಾಮಾಂಧರ ವಿಚಾರಗಳು, ಅಪ್ರಯೋಜಕ ವಿಚಾರಗಳು, ತುಂಡುಡುಗೆಯ ಸಾಧಕಿಯರು ಸುದ್ದಿಯಲ್ಲಿರುವಂತೆ ಪ್ರಚಾರ ಮಾಡುತ್ತಾರೆ.ಬಿಟ್ಟರೆ ವರುಷದ 365ದಿನ ಕ್ರಿಕೆಟ್ ನಡೆದರು ಬೇಸರವಿಲ್ಲದೆ ಪ್ರಚಾರ ಕೊಡುವವರು ಇದ್ದಾರೆ. ದೇಶದ ಹೆಸರುಳಿಸಲು ಶ್ರಮ ಪಡುವ ರಾಷ್ಟ್ರೀಯ ಕ್ರೀಡೆ ಹಾಕಿ, ಒಲಿಂಪಿಕ್ ಸಾಧಕರ ಆಟಗಳನ್ನು ಬಿತ್ತರಿಸುವ ಕೆಲಸ ಮಾಡುವುದೇ ಇಲ್ಲ. ಮಕ್ಕಳು ಏನು ನೋಡುತ್ತಿದ್ದಾರೋ ಹಾಗೇ ಆಗುತ್ತಿದ್ದಾರೆ,ಇದೇ ಆಧುನಿಕ ಸಂಸ್ಕೃತಿ.
ಅಂತಾರಾಷ್ಟ್ರೀಯ ಚೆಸ್ ವಿಶ್ವಕಪ್2024
ವಿಶ್ವ ಸಾಧಕನಾಗಿ ಬರುವ ಆರ್.ಪ್ರಗ್ನಾನಂದ ರಿಗೆ ಎಲ್ಲಾ ಭಾರತೀಯರ ಹಾರೈಕೆ ಸಿಗುವಂತಾಗಲಿ. ಈ ಪ್ರಥಮ ಎನ್ನುವ ಯಶಸ್ಸು ನಿರಂತರವಾಗಿ ನಿಮಗೆ ಸಿಗಲಿ.
ಧನ್ಯವಾದಗಳು
ಮಮತಾ.ಶೆಟ್ಟಿ.ಮಲ್ನಾಡ್
ಶಿಕ್ಷಕಿ.ಬೆಂಗಳೂರು
ಅಪರಿಚಿತರ ನಡುವೆ ಪರಿಚಿತರ ಇರುವಿಕೆಯ ಹುಡುಕಾಟ
Followers
Following