ಒಲವು

ProfileImg
26 Jun '24
1 min read


image

ಅತಿಯಾದ ಒಲವು ಒಳಿತಲ್ಲ.

ಪ್ರೀತಿ ಎನ್ನುವ ಶಕ್ತಿಗೆ ಬಾಳನ್ನು ಬೆಳಗಿಸುವ ಶಕ್ತಿ,ಅದರ ಜೊತೆಗೆ ಬದುಕನ್ನು ನೋವಿಗೂ ದೂಡುವ ಶಕ್ತಿ ಕೂಡ ಇದೆ. ನಾವು ಕೆಲವು ವಿಷಯ ವಸ್ತುವನ್ನು ಅತಿಯಾಗಿ ಮೆಚ್ಚಿ-ನೆಚ್ಚಿಕೊಳ್ಳುತ್ತೇವೆ. ಆದರೆ ನಮಗೆ ತಿಳಿದಿರುವುದಿಲ್ಲ ಭವಿಷ್ಯದಲ್ಲಿ ನಾವು ನೆಚ್ಚಿರುವ-ಮೆಚ್ಚಿರುವ ವಸ್ತುವೇ ನಮ್ಮನ್ನು ದುಃಖಕ್ಕೆ ದೂಡುತ್ತದೆ. ಯಾವುದೇ ಸುಳಿವು ಕೊಡದೆ ಹುಟ್ಟಿಕೊಳ್ಳುವ ಬಯಕೆ, ಇದಕ್ಕೆ ಕೈಗನ್ನಡಿ ಹಿಡಿಯುವ ಸ್ನೇಹ- ಪ್ರೀತಿಯು ಆರಂಭದಲ್ಲಿ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದಾಗಿಯೇ ತಿಳಿದು ಬರುವುದಿಲ್ಲ. ಆದರೆ ಕಳೆಯುವ ದಿನಗಳಲ್ಲಿ ಇದರ ಪ್ರಭಾವ ಇದರ ಮೇಲಿನ ಅಕ್ಕರೆಯು ಹೆಚ್ಚಾಗುತ್ತಲೇ ಹೋಗುತ್ತದೆ.ಅದನ್ನು ಜೀವಕ್ಕಿಂತ ಹೆಚ್ಚೆಂದು ಕೊಂಡಾಡಿ ಕೊಳ್ಳುತ್ತೇವೆ.ಕ್ಷಣಗಳು ಕಳೆದಂತೆ ಜೀವನದ ಕಣಕಣದಲ್ಲೂ ಅದು ಬೆರೆತು ಹೋಗುತ್ತದೆ. ನನ್ನೊಳಗಿನ ಒಲವೇ ಕಣ್ಣಮುಂದೆ ತುಂಬಿರುವ ಆ ಕ್ಷಣದಲ್ಲಿ ಜಗತ್ತಿನ ಇತರೆ ಅಂಶಗಳು ಕಾಣದೆ ಹೋಗುತ್ತದೆ. ಆಸರೆ ಕೊಟ್ಟ ಸಕ್ಕರೆ ಮನಸ್ಸಿನ ಅಕ್ಕರೆಯ ಜೀವವನ್ನು ಕೂಡ ಮರೆತುಬಿಡುವ ಸ್ಥಿತಿಯಲ್ಲಿ ಇರುತ್ತೇವೆ.ನಮ್ಮ ಅಮೂಲ್ಯ ಸಮಯ ಈ ವಿಷಯಕ್ಕಾಗಿ ಮೀಸಲಾಡುತ್ತೇವೆ.
      ಆದರೆ ಅತೀ ಒಲವಿನ ಪ್ರಭಾವವೋ, ವಿಧಿಯ ಆಟವೋ ಹಣೆಬರಹದಲ್ಲಿ ಬರೆದ ರಹಸ್ಯದ ಪ್ರಭಾವದ ಕಾರಣವೂ ಯಾರನ್ನು ಅತಿಯಾಗಿ ಮೆಚ್ಚಿಕೊಂಡಿರುತ್ತೇವೆಯೋ ಅವರಿಗೆ ನಮ್ಮ ಭಾವನೆಯು ಕೇವಲ ನಾಟಕೀಯವಾಗಿ ಕಾಣುತ್ತದೆ.  ಅತಿಯಾದರೆ ಅಮೃತವು ವಿಷ ಎಂಬಂತೆ ಯಾರನ್ನು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ ಅಂತವರಿಂದ ಸ್ನೇಹ ಪ್ರೀತಿ ಸಿಗುವುದೇ ಇಲ್ಲ. ನಮ್ಮ ಮನದೊಳಗಿನ ಪ್ರೀತಿ, ಸ್ನೇಹ, ಸಮಯವನ್ನು ಖರ್ಚು ಮಾಡಿರುತ್ತೇವೆ ಆದರೆ ಗಳಿಕೆಯು ಕೇವಲ ಶೂನ್ಯವಾಗಿರುತ್ತದೆ.
    ಅದಕ್ಕಾಗಿ ನಾನು  ಹೇಳುವುದು ಇಷ್ಟೇ, ಯಾರನ್ನು ಜಾಸ್ತಿ ನಂಬಬೇಡಿ ನಂಬಿ ಕೆಡಬೇಡಿ. ನಂಬಿಕೆಯು ಕೆಲವರಿಗೆ ಆಟಿಕೆಯ ಗೊಂಬೆಯಾಗಿರುತ್ತದೆ.ಆ ಆಟಿಕೆಯ ಗೊಂಬೆ ನಾವಾಗುವುದು ಬೇಡ. ಕಳೆದ ಸಮಯ ಮರಳಿ ಬರದು ಹಳೆಯ ನೆನಪಲ್ಲೇ ಕೊರಗುತ್ತಾ ಇದ್ದರೆ ಒಳ್ಳೆಯ ದಿನ ಮುಂದೆ ಬರದು. ಜೀವನವೆನ್ನುವ ಶಾಲೆಯಲ್ಲಿ ಅನುಭವವೇ  ಪಾಠ ಇದನ್ನು ಅರಿತು ಮುಂದೆ ಎದುರಾಗುವ ಪರೀಕ್ಷೆಯ ನಾವು ಎದುರಿಸಬೇಕು. ಯಾಕೆಂದರೆ ಅನುಭವ  ಎದುರಾಗುವ ಸಮಸ್ಯೆಗಳಿಗೆ ದಾರಿದೀಪವಾಗುತ್ತದೆ.


ಗಿರೀಶ್ ಪಿಎಂ
ದ್ವಿತೀಯ ಎಂ ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿ ವಿ ಕಾಲೇಜು ಮಂಗಳೂರು

Category:Personal Experience



ProfileImg

Written by Gireesh Pm

0 Followers

0 Following