ಮಹಿಳೆಯರಿಗೆ ಸುಗಂಧ ದ್ರವ್ಯದ ಕೆಲವು ಹನಿಗಳು ಧರಿಸಬೇಕೆಂಬ ಹಂಬಲ! ರೋಮ್ಯಾಂಟಿಕ್ ಪ್ರೀತಿಗೆ ಕೆಲವು ಹನಿಗಳು ಧರಿಸಲು ಒಲವು, ಉತ್ತಮ ಕಲ್ಪನೆ. ಹೌದು ಇಂದು ಸುಗಂಧ ದ್ರವ್ಯಗಳು ಶ್ರೀಮಂತರಿಗೆ ಮತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಸೀಮಿತವಲ್ಲ ಸಾಮಾನ್ಯ ಜನರು ಕೂಡ ಸುಗಂಧ ದ್ರವ್ಯವನ್ನು ಧರಿಸಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಾರೆ. ಇದು ಫ್ಯಾಶನ್ ಎಂಬ ಹೇಳಿಕೆ ಅವರದು. ವಿಶೇಷವಾಗಿ ಫ್ರೆಂಚ್, ಯುರೋಪಿಯನ್ನರ ಫ್ಯಾಶನ್ ಆದರೂ ನಿಧಾನಗತಿಯಲ್ಲಿ ಸಾಗಿ ಬಂದದ್ದು, ಮಾತ್ರ ಭಾರತದಲ್ಲಿ ಶಾಶ್ವತವಾಗಿ ನೆಲೆ ನಿಂತಿದೆ.
ಇನ್ನೂ ಸುಗಂಧ ದ್ರವ್ಯಗಳಿಗೆ ಸಿನಿತಾರೆಯರ ಹೆಸರು ಗೇಬ್ರಿಯೆಲಾ, ಸಬ್ದತಿನಿ, ಎಲಿಜಬೆತ್ ಟೇಲರ್, ಜೀನತ್ ಅಮಾನ್, ಶಾರುಖ್ ಖಾನ್ ಮತ್ತು ಮತ್ತಿತರ ಹೆಸರುಗಳನ್ನು ಇಡಲಾಗಿದೆ. ಕುತೂಹಲಕಾರಿ ಸುಗಂಧ ದ್ರವ್ಯವು ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರು ಮತ್ತು ಯುವಕರಿಗೆ, ಹದಿಹರೆಯದ ಮಕ್ಕಳಿಗೂ ಸಹ ಆಕರ್ಷಿಸುತ್ತಿದೆ. ಇದು ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸ್ಥಾನವನ್ನು ಗಳಿಸಿದೆ. ಇನ್ನೂ ವಿಶ್ವದಲ್ಲೇ ಫ್ರೆಂಚ್ ದೇಶವು ಸುಗಂಧ ದ್ರವ್ಯಗಳ ರಫ್ತುನಲ್ಲಿ ಎಂಟರಲ್ಲಿ ನಾಲ್ಕನೇಯ ಸ್ಥಾನವನ್ನು ಪಡೆದ ಹೆಗ್ಗಳಿಕೆ.
ಕಲೋನ್ ಯೂ ಡಿ ಟಾಯ್ಲೆಟ್ ಮತ್ತು ಯೂ ಡಿ ಸುಗಂಧ ದ್ರವ್ಯಗಳು
ಯೂ ಡಿ ಕಲೋನ್ ಪರ್ಫಮ್ ರೋಸ್ಮೇರಿ ನೆರೋಲಿ ಬೆರ್ಗಮಾಟ್ ಮತ್ತು ನಿಂಬೆ ಹಣ್ಣಿನ ರಿಫ್ರೆಶ್ ಸುಗಂಧವನ್ನು ಸಹ ಹಲವಾರು ವಿಧಾನಗಳಲ್ಲಿ ಬಳಸಲಾಗುತ್ತದೆ. ಡಿಪ್ಟಿಕ್ ಸುಗಂಧ, "ಡು ಸನ್ ಯೂ ಡಿ ಟಾಯ್ಲೆಟ್‌ನಲ್ಲಿ, ಟ್ಯೂಬೆರೋಸ್, ಮಲ್ಲಿಗೆ ಮತ್ತು ಕಿತ್ತಳೆ ಹೂವುಗಳ ಯೂ ಡಿ ಪರ್ಫಮ್ನ ಮಿತಿಮೀರುವ ಸುಗಂಧ ಪರಿಮಳದ ರೂಪ ತರುತ್ತದೆ. ವಿಶೇಷವಾಗಿ ಸುಗಂಧ ದ್ರವ್ಯವನ್ನು ಸುಮಾರು 78% ರಿಂದ 95% ರಷ್ಟು ಪುನರ್ ನಿರ್ಮಾಣ ಈಥೈಲ್ ಆಲ್ಕೋಹಾಲ್ ಮತ್ತು 22% ಅಗತ್ಯ ತೈಲದಿಂದ ತಯಾರಿಸುತ್ತಾರೆ. ಸುಗಂಧ ದ್ರವ್ಯವು ಅತ್ಯಂತ ದುಬಾರಿಯಾಗಿದೆ.
ಸುಗಂಧ ದ್ರವ್ಯದ ಅವಧಿ
ಸುಗಂಧ ದ್ರವ್ಯದ ಬಣ್ಣವು ಗಾಢ ಬಣ್ಣಕ್ಕೆ ತಿರುಗಿದರೆ ಸುಗಂಧ ಪರಿಮಳ ಸ್ವಲ್ಪ ಮಸುಕಾಗಿರುತ್ತದೆ, ಅದುವೇ ಅವಧಿಯ ಸಮಯ. ಹೆಚ್ಚಿನ ಸುಗಂಧ ದ್ರವ್ಯಗಳು ಕನಿಷ್ಠಪಕ್ಷ ಮೂರರಿಂದ ಐದು ವರ್ಷಗಳ ಅವಧಿ ಹೊಂದಿರುತ್ತದೆ.
ಸುಗಂಧ ದ್ರವ್ಯದ ಇತಿಹಾಸ
ಸುಗಂಧ, ಸುವಾಸನೆ ಮತ್ತು ನೈಸರ್ಗಿಕ ಸುಗಂಧ ದ್ರವ್ಯಗಳ ನಾಗರಿಕರ ಬಳಕೆ. ಇದರ ಮೂಲ ಬಹಳ ಹಿಂದಿನ ಇತಿಹಾಸ ಹೇಳುತ್ತದೆ. ಪುರಾತತ್ತ್ವ ಶಾಸ್ತ್ರದ ಪ್ರಕಾರ ನಿಖರವಾಗಿ ಹೇಳುವುದು ಅಸಾಧ್ಯ ಎನ್ನುತ್ತಾರೆ. ದೇವರ ಆರಾಧನೆಗೆ ಅರ್ಪಿಸುವ ಪರಿಮಳಯುಕ್ತ ಹೂವುಗಳು, ಗಿಡಮೂಲಿಕೆಗಳೇ ಮೂಲ ಸುಗಂಧ. ಅರಬ್ ದೇಶದ ಜ್ಞಾನದ ರಸವಿದ್ಯೆ ಸುಗಂಧ ತೈಲ ಆಗಿದೆ. ಅರಬ್ಬಿನ ವೆನಿಸ್ ಸುಗಂಧ ದ್ರವ್ಯಗಳ ಪ್ರಮುಖ ವ್ಯಾಪಾರದ ಕೇಂದ್ರವಿದು. ಜಗತ್ತಿನ ಎಲ್ಲೆಡೆ ಮತ್ತು ಯುರೋಪಿಯನ್ನರ ದೇಶಗಳಲ್ಲಿ ಅತಿ ವೇಗದಲ್ಲಿ ಹರಡಿದೆ. 17 ನೇ ಶತಮಾನದಲ್ಲಿ ಸುಗಂಧ ದ್ರವ್ಯವು ಪ್ರೆಂಚ್ ನಲ್ಲಿ ಭಾರಿ ಯಶಸ್ಸು ಗಳಿಸಿತು.
ಲೂಯಿಸ್‌ಎಕ್ಸ್‌ವಿ ಸುಗಂಧ ದ್ರವ್ಯಗಳು ತ್ವಚೆಗೆ ಮಾತ್ರವಲ್ಲದೇ ಬಟ್ಟೆ ಮತ್ತು ಪೀಠೋಪಕರಣಗಳಿಗೂ ಪ್ರತಿನಿತ್ಯ ಪರಿಮಳವನ್ನು ಹಾಕುತ್ತಿದ್ದರು. ಈ ಕಾರಣದಿಂದ ಕೋರ್ಟ್ ಎಂದು ಹೆಸರಿಡಲಾಗಿದೆ. ಬ್ರ್ಯಾಂಡ್‌ಗಳ ನಡುವೆ ಕೆಲವು ವ್ಯತ್ಯಾಸಗಳು ಸಹಜ, ಆದರೆ ಯೂ ಡಿ ಟಾಯ್ಲೆಟ್ ಅನ್ನು ತಾಜಾತನದಿಂದ ಮತ್ತು ಸುರಕ್ಷಿತ ವೆಂದು ಎಡ್ವರ್ಡೊ ವಲಾಡೆಜ್ ಅವರ ಹೇಳಿಕೆ.
ಸುಗಂಧ ಬಾಟಲಿಗಳು
ಈಜಿಪ್ಟ್ ನಲ್ಲಿ ಕಂಡು ಬಂದ ಸುಗಂಧ ದ್ರವ್ಯಗಳು ಬಳಸಿರುವ ಮಣ್ಣಿನ ಮಡಕೆ ಮತ್ತು ಗಾಜಿನ ಬಾಟಲಿಗಳು ಇದು ಸುಮಾರು 15 ನೇ ಶತಮಾನ BC ಕ್ಕಿಂತ ಹಳೆಯದು ಎಂದು ಹೇಳಲಾಗುತ್ತದೆ. ಸುಗಂಧ ದ್ರವ್ಯಗಳನ್ನು ಬೆಲೆಬಾಳುವ ಹಾಲೊವುಡ್ ಕಲ್ಲಿನ ಬಾಟಲಿಗಳಲ್ಲಿ ಬಳಸುತ್ತಿದ್ದರು.
19 ನೇ ಶತಮಾನದಲ್ಲಿ ಸುಗಂಧ ದ್ರವ್ಯಗಳ ಹೊಸ ರೂಪದ ಬದಲಾವಣೆ. 1980 ರ ದಶಕದಲ್ಲಿ ಹೊಸ ಡಿಸೈನರ್ ಪರಿಮಳಯುಕ್ತ ಸುಗಂಧ ದ್ರವ್ಯದ ಮೊದಲ ಬಾರಿಗೆ ಮಾಧ್ಯಮದಲ್ಲಿ ಜಾಹೀರಾತು ಇದರಿಂದಾಗಿ ಹೆಚ್ಚು ಗಮನಸೆಳೆದು ಯಶಸ್ವಿಗೆ ಕಾರಣವಾಗಿದೆ.
ನಿಮ್ಮ ಬೆವರಿನ ವಾಸನೆಯನ್ನು ಯಾರೂ ಇಷ್ಟಪಡುವುದಿಲ್ಲ. ನೀವು ದಿನನಿತ್ಯ ಸುಗಂಧ ದ್ರವ್ಯಗಳನ್ನು ಬಳಸಿ, ಸುಗಂಧವನ್ನು ಹೊಂದಿರಿ..
ಅತ್ಯುತ್ತಮ ಭರವಸೆಯ ಸುಗಂಧಭರಿತ ಸುಗಂಧ ಬ್ರಾಂಡ್‌ಗಳ ಪಟ್ಟಿ ಇಲ್ಲಿದೆ.
1.ಕ್ಯಾಲ್ವಿನ್ ಕ್ಲೈನ್ ಸಿಕೆ ಒನ್ (ಯೂ ಡಿ ಟಾಯ್ಲೆಟ್)-
ಇದು ವಿಶ್ವದ ಅತ್ಯುತ್ತಮ ಪರಿಮಳವನ್ನು ಹೊಂದಿರುವ ಐಷಾರಾಮಿ ಸುಗಂಧ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈ ಸುಗಂಧ ದ್ರವ್ಯಗಳಲ್ಲಿ ಹಣ್ಣಿನ ಅಂಶ ಹೊಂದಿದೆ. ಪಪ್ಪಾಯಿ, ಅನಾನಸ್ ಮತ್ತು ಮಲ್ಲಿಗೆಯ ಮಿಶ್ರಣದ ಹಲವಾರು ವಿಧದ ಕ್ಯಾಲ್ವಿನ್ ಕ್ಲೈನ್ ಸುಗಂಧ ದ್ರವ್ಯಗಳಲ್ಲಿ ಪರಿಮಳವನ್ನು ನೀಡುತ್ತದೆ.
2. ಕ್ರಿಶ್ಚಿಯನ್ ಡಿಯರ್ ಮಿಸ್ ಡಿಯರ್ (ಯೂ ಡಿ ಪರ್ಫಮ್)- ಇದು ಮಹಿಳೆಯರ ಸುಗಂಧ ದ್ರವ್ಯವಾಗಿದೆ. ಹೂವು, ಹಣ್ಣಿನ ಮತ್ತು ಗುಲಾಬಿ ಹೂವುಗಳ ಮಿಶ್ರಣದ ಪರಿಪೂರ್ಣತೆಯ ವಿಶಿಷ್ಟತೆಯನ್ನು ಹೊಂದಿರುವ ಹೊಸ ಪರಿಮಳಯುಕ್ತ ಸುಗಂಧ ದ್ರವ್ಯವಿದು.
3 ಕ್ರೀಡ್ ರಾಯಲ್ ವಾಟರ್ (ಯೂ ಡಿ ಪರ್ಫಮ್)- ಇದು ಪುದೀನ, ತುಳಸಿ, ಜೀರಿಗೆ, ಜುನಿಪರ್ ಬೆರ್ರಿ, ಕಸ್ತೂರಿ, ಉತ್ತಮ ಗುಣಮಟ್ಟದ ಮಸಾಲೆಯುಕ್ತ ಸುಗಂಧ ದ್ರವ್ಯವಾಗಿದ್ದು, ಇದನ್ನು ರೊಮ್ಯಾಂಟಿಕ್ ಕ್ಷಣಗಳಲ್ಲಿ ಧರಿಸಲು ಸೂಕ್ತ ಎನ್ನಲಾಗಿದೆ.
4 ವರ್ಸೇಸ್ ಯೂ ಫ್ರೈಚೆ ಎಡಿಟ್- ಇದು ವಿಶೇಷ ಸುಗಂಧ ದ್ರವ್ಯಗಳ ಬ್ರಾಂಡ್. ಒಬ್ಬ ವ್ಯಕ್ತಿಯ ದಿನನಿತ್ಯ ಜೀವನದಲ್ಲಿ ಅಗತ್ಯ ತಕ್ಕಂತೆ ಆಶ್ಚರ್ಯಕರ ತಾಜಾ ಪರಿಮಳವು ನೀಡುತ್ತದೆ.
5 ಹರ್ಮ್ಸ್ ಟೆರ್ರೆ ಡಿ'ಹರ್ಮ್ಸ್ (ಯೂ ಡಿ ಟಾಯ್ಲೆಟ್) -
ಇದು ಫ್ರೆಂಚ್‌ನ ಸುಗಂಧ ದ್ರವ್ಯಗಳಲ್ಲಿ ಒಂದಾಗಿದೆ. ಇತರ ಮಾರುಕಟ್ಟೆಯಲ್ಲಿನ ಖರೀದಿಗೆ ಲಭ್ಯವಿರುವ ಸುಗಂಧ ದ್ರವ್ಯಗಳಿಗಿಂತ ಉತ್ತಮ ಎನ್ನಲಾಗುತ್ತಿದೆ.
6 ಮಾಂಟ್ ಬ್ಲಾಂಕ್ ಲೇಡಿ ಲಾಂಛನ (ಯೂ ಡಿ ಟಾಯ್ಲೆಟ್) - ಮಾಂಟ್ ಬ್ಲಾಂಕ್ ಸುಗಂಧ ಬ್ರಾಂಡ್ ನಿಮಗೆ ದೀರ್ಘಾವಧಿಯವರೆಗೆ ಮೃದುವಾದ ಆಕರ್ಷಣೆಯ ಪರಿಮಳವನ್ನು ಬೀರುತ್ತದೆ. ಇದು ವಿಶೇಷವಾಗಿ ಬಿಳಿ ಪೀಚ್ ಮತ್ತು ಲಿಚಿ ಹಣ್ಣಿನ ಮಿಶ್ರಣದ ಸುವಾಸನೆ ಬೀರುವ ಮಹಿಳೆಯರ ಮೆಚ್ಚಿನ ಸುಗಂಧ ದ್ರವ್ಯವಾಗಿದೆ.
7 ಡೋಲ್ಸ್ ಮತ್ತು ಗಬ್ಬಾನಾ (ಯೂ ಡಿ ಟಾಯ್ಲೆಟ್ಸ್) - ಈ ಸುಗಂಧ ಬ್ರಾಂಡ್ ತಾಜಾತನ ಪರಿಮಳಯುಕ್ತ, ಸಿಹಿ ಮತ್ತು ಇಂದ್ರಿಯಗಳು ಹೊಂದಿರುವ ಸುಗಂಧ ದ್ರವ್ಯವಿದು.
8 ವೆರಾ ವಾಂಗ್ (ಇಯು ಡಿ ಪರ್ಫಮ್)- ಇದು ಮತ್ತೊಂದು ಮಹಿಳೆಯರ ದುಬಾರಿ ಸುಗಂಧ ದ್ರವ್ಯಗಳ ಬ್ರಾಂಡ್. ಬಲ್ಗೇರಿಯನ್ ಗುಲಾಬಿ, ಕ್ಯಾಲ್ಲಾ ಲಿಲಿ, ಮ್ಯಾಂಡರಿನ್ ಹೂವು, ಗಾರ್ಡೇನಿಯಾ, ಕಮಲ, ಐರಿಸ್ ಮತ್ತು ಬಿಳಿ ಸ್ಟೆಫನೋಟಿಸ್‌ಗಳ ಸಮೃದ್ಧ ಸಂಯೋಜನೆಯ ಸುಗಂಧ ಶ್ರೀಮಂತಿಕೆಯ ಬ್ರಾಂಡ್ ಆಗಿದ್ದು. ಹೆಚ್ಚು ಮಹಿಳೆಯರನ್ನು ಆಕರ್ಷಿಸುತ್ತಿದೆ.
9 ಪ್ರಾಡಾ ಅಂಬರ್ ಹೋಮ್ ಇಂಟೆನ್ಸ್ (ಯೂ ಡಿ ಪರ್ಫಮ್ ) – ಇದು ಅತ್ಯಾಧುನಿಕದ ಹೆಚ್ಚು ಪರಿಮಳಯುಕ್ತ ಉತ್ತಮ ಪುರುಷರ ಸುಗಂಧ ದ್ರವ್ಯದ ಬ್ರ್ಯಾಂಡ್. ಅತ್ಯುತ್ತಮವಾದ ಪರಿಮಳವನ್ನು ನೀಡುತ್ತದೆ.
10 ಹ್ಯೂಗೋ ಬಾಸ್ ಬಾಸ್ ಬಾಟಲ್ಡ್ ಅನ್ಲಿಮಿಟೆಡ್ - ಇದು ಆಧುನಿಕ ಮತ್ತು ಶ್ರೀಮಂತ ಸುಗಂಧ ದ್ರವ್ಯ. ಇದರ ಸಂಯೋಜನೆ ಪುದೀನ ಮತ್ತು ಅನಾನಸ್ ಪರಿಮಳಯುಕ್ತ ತೆಹ್ ಸುಗಂಧ ದ್ರವ್ಯಗಳು ತಾಜಾತನ ನೀಡುತ್ತದೆ. ಇದನ್ನು ಹೆಚ್ಚಾಗಿ ಪುರುಷರು ಮತ್ತು ಮಹಿಳೆಯರು ಧರಿಸುತ್ತಿದ್ದು, ಅಪಾರ ಮೆಚ್ಚುಗೆ ಪಡೆದಿದೆ. ದೀರ್ಘಕಾಲ ರಿಫ್ರೆಶ್ ಪರಿಮಳ ನೀಡುತ್ತದೆ.
11 ಬರ್ಬೆರ್ರಿ ವೀಕೆಂಡ್ (ಯೂ ಡಿ ಪರ್ಫಮ್) ಇದು ಕೂಡ ಅತ್ಯುತ್ತಮ ಸುಗಂಧ ಬ್ರಾಂಡ್‌ಗಳಲ್ಲಿ ಒಂದಾಗಿದ್ದು. ಇದರ ಸುಗಂಧ ದ್ರವ್ಯಗಳು ಹೂವಿನ ತಾಜಾ ಪರಿಮಳವನ್ನು ನೀಡುತ್ತದೆ.
ಫ್ಯಾಷನ್ ಪ್ರಿಯರಿಗೆ ಸುಗಂಧ ದ್ರವ್ಯವನ್ನು ಧರಿಸುವ ಟಿಕ್ಸ್.
ಸುಗಂಧ ದ್ರವ್ಯಗಳನ್ನು ದೇಹದ ಮಣಿಕಟ್ಟು ಮತ್ತು ಕತ್ತಿನ ಭಾಗ, ಮೊಣಕಾಲುಗಳ ಹಿಂಭಾಗಕ್ಕೆ, ತೆಳುವಾದ ಚರ್ಮದ ಭಾಗದಲ್ಲಿ ಸ್ವಲ್ಪ ಸ್ಪ್ರೇ ಮಾಡಿ ದೇಹವು ಸುಗಂಧವನ್ನು ಹೀರಿಕೊಳ್ಳುತ್ತದೆ ಮತ್ತು ನಿಮಗೆ ತಿಳಿಯದಂತೆ ಅದ್ಭುತವಾದ ಸುವಾಸನೆಯನ್ನು ಪಡೆಯುತ್ತೀರಿ.
ನೀವು ಚಿನ್ನದ ಆಭರಣಗಳು ಧರಿಸಿರುವ ದೇಹದ ಭಾಗಗಳಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಬೇಡಿ - ಉದಾ. ನೀವು ಗೋಲ್ಡನ್ ಚೈನ್ ಅನ್ನು ಧರಿಸಿದ್ದರೆ, ಕುತ್ತಿಗೆಯ ಭಾಗದಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸುವುದು ಬಿಟ್ಟು ಬಿಡಿ. ಚಿನ್ನದ ಒಡವೆಗಳ ಹೊಳಪು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಪ್ರಪಂಚದಾದ್ಯಂತ ಸಾವಿರಾರು ಜನರು ಸುಗಂಧವು ಪರಿಪೂರ್ಣತೆಯ ಫ್ಯಾಷನ್ ಎಂಬ ಹೇಳಿಕೆಯನ್ನು ನೀಡುತ್ತಾರೆ.
ನೈಸರ್ಗಿಕ ಶ್ರೀಗಂಧ ಅಪರೂಪ ಮತ್ತು ದುಬಾರಿ ವೆಚ್ಚದ ತೈಲ..
ಶ್ರೀಗಂಧದ ಮರ ಪರಿಮಳದಿಂದ ಆಕರ್ಷಿತವಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲು ಅತ್ಯಗತ್ಯ, 4000 ವರ್ಷಗಳ ಹಿಂದಿನಿಂದಲೇ ಬಳಕೆಯಲ್ಲಿದೆ. ಅತ್ಯಂತ ಹಳೆಯ ಸುಗಂಧ ಪರಿಮಳಯುಕ್ತ ಎಣ್ಣಿ ಎನಿಸಿದೆ. ಇದನ್ನು ಕಳೆದ ಇನ್ನೂರು ವರ್ಷಗಳಿಂದ ಯುರೋಪಿಯನ್ನರ ಮತ್ತು ಅಮೇರಿಕನ್ ಸುಗಂಧ ದ್ರವ್ಯಗಳಲ್ಲಿ ಮಾತ್ರ ಬಳಸಲಾಗುತ್ತಿದ್ದು. ಇಂದಿಗೂ ನೈಸರ್ಗಿಕವಾದ ನಿರಂತರ ಪರಿಮಳಯುಕ್ತ ಎಣ್ಣೆಯನ್ನು ಔಷಧೀಯವಾಗಿ ಮತ್ತು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ.
ಪ್ರಸ್ತುತ ಉತ್ತಮ – ಗುಣಮಟ್ಟದಲ್ಲಿರುವ ಶ್ರೀ ಗಂಧದ ಸುಗಂಧ ದ್ರವ್ಯಗಳ ಪಟ್ಟಿ ಇಲ್ಲಿದೆ:
ಇಂದು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸುಗಂಧ ದ್ರವ್ಯಗಳು ಅತ್ಯುತ್ತಮ ಬ್ರಾಂಡ್ ಗಳಲ್ಲಿ ಲಭ್ಯ, ಆಕರ್ಷಕವಾಗಿದೆ. ಆದರೆ ಖರೀದಿಸುವ ಮೊದಲು ಒಮ್ಮೆ ಪರೀಕ್ಷಿಸಿ ಉತ್ತಮ.!
ನಿಮ್ಮ ಚರ್ಮದ ಪ್ರಕಾರ ಅವಲಂಬಿಸಿ ಸುಗಂಧ ದ್ರವ್ಯಗಳು
ಇದು ವ್ಯಕ್ತಿಯ ಚರ್ಮದ ಆಧಾರಿತ ಧರಿಸಲು ಕಾಳಜಿ ವಹಿಸಬೇಕಾಗುತ್ತದೆ. ಎಣ್ಣಿ ಚರ್ಮದವರಿಗೆ ಸುಗಂಧ ದ್ರವ್ಯಗಳು ಹೆಚ್ಚು ಕಾಲ ಅವಧಿ ತನಕ ಉಳಿಯುತ್ತದೆ.
ಸ್ಪ್ರೇಯರ್ ಅಂತರವನ್ನು ಕಾಯ್ದುಕೊಳ್ಳಿ
ಸುಗಂಧ ದ್ರವ್ಯವನ್ನು ಸುಮಾರು 10-15 ಸೆಂ.ಮೀ ದೂರದಿಂದ ಸ್ಪ್ರೇಯರ್ ಸಿಂಪಡಿಸಿದರೆ. ನಿಮಗೆ ಸುಗಂಧ ದ್ರವ್ಯದ ನಿಜವಾದ ಸುವಾಸನೆಯನ್ನು ಸಿಗಲಿದೆ.
ವಿಶ್ವದ ಉನ್ನತ ಸುಗಂಧ ಬ್ರಾಂಡ್‌ಗಳ ವ್ಯಾಪಾರ ಬೆಳವಣಿಗೆ
ಐಷಾರಾಮಿ ಸೌಂದರ್ಯ ಸುಗಂಧ ಉದ್ಯಮ ಶತಕೋಟಿಗೆ ಬೆಳೆಯುವ ನಿರೀಕ್ಷೆ! ತಜ್ಞರ ಮುನ್ಸೂಚನೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಗ್ರ್ಯಾಂಡ್ ವ್ಯೂ ರಿಸರ್ಚ್‌ನ ತಜ್ಞರ ಅಂದಾಜಿನ ಪ್ರಕಾರ 2025 ರ ವೇಳೆಗೆ USD 69 ಶತಕೋಟಿ ಲಾಭದಾಯಕ ಮತ್ತು 2030 ರಲ್ಲಿ USD 80.16 ಶತಕೋಟಿಯಷ್ಟು ಮಾರಾಟದ ಆದಾಯವನ್ನು ತರುತ್ತದೆ ಎಂಬ ಬೆಳೆಯುವ ನಿರೀಕ್ಷೆ.