ಕಲ್ಪವೃಕ್ಷ

ಕಲ್ಪನೆಗೂ ಮೀರಿದ ಕಲ್ಪವೃಕ್ಷ..!!

ProfileImg
28 Jun '24
1 min read


image

     ಕೇರಳಿಗರ ಪ್ರಸಿದ್ಧ ಕೃಷಿ ತೆಂಗು. ಎಲ್ಲಿ ನೋಡಿದರೂ ಕಡಲ ತೀರದಲಿ, ರಸ್ತೆಯ ಇಕ್ಕೆಲಗಳಲ್ಲಿ ಕಂಗೊಳಿಸುವ ಮರಗಳು...!!  ಉತ್ತಮ ಇಳುವರಿಯನ್ನೂ ಕೊಡುತ್ತದೆ. ಇಲ್ಲಿ ತೆಂಗಿಗೆ ಹೆಚ್ಚಿನ ಮಹತ್ತ್ವವನ್ನು ನೀಡಲಾಗಿದೆ. ಅನೇಕರು ಕೇವಲ ತೆಂಗಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. 

     ಇದರಿಂದ ನಮ್ಮ ಕಲ್ಪನೆಗೂ ಮೀರಿದ ಪ್ರಯೋಜನ ಇದೆ. ಹೊಸತಾಗಿ ಮನೆಯನ್ನು ಕಟ್ಟಿ ಕೂತವರು ಅಡಿಗೆಗೆ ನಿತ್ಯ ಬಳಸುವ ಯೋಚನೆಯನ್ನು ಮುಂದಿಟ್ಟುಕೊಂಡು ಗಿಡವನ್ನು ನೆಟ್ಟು ಬೆಳೆಸುತ್ತಾರೆ. ೬ ವರ್ಷದಲ್ಲಿ ಫಸಲು ಬರುತ್ತದೆ. 

     ಗರಿಯಿಂದ ಪೊರಕೆಯನ್ನು ಮಾಡಿ ಮನೆಯ ಕಸ ಗುಡಿಸಲು ಬಳಸುತ್ತಾರೆ,  ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಹೀಗೆ ಕಸದಿಂದ ರಸವನ್ನೂ ಪಡೆಯುತ್ತಾರೆ. ಉಳಿದ ಕಸ ತೆಂಗಿನಮರದ ಬುಡಕ್ಕೆ ಉತ್ತಮ ಗೊಬ್ಬರ (ಈಟು) ಆಗುತ್ತದೆ. 

      ೧೦೦ರಿಂದ ೨೫೦ ವರ್ಷಗಳ ದೀರ್ಘಕಾಲದ ಬದುಕು ಇದರದ್ದು. ಕಾಯಿಯಲ್ಲಿ ಕ್ಯಾಲ್ಸಿಯಂ ಅಂಶವಿದ್ದು, ನಮಗೆ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಒಣಗಿಸಿ ಕೊಬ್ಬರಿ ಮಾಡಿ ಶುದ್ಧ ಎಣ್ಣೆಯನ್ನು ತಯಾರಿಸುತ್ತಾರೆ. ನಮಗೆ ನಮ್ಮದೇ ಎಣ್ಣೆಯೂ ದೊರಕುತ್ತದೆ. ಯಾವುದೇ ಕೊರತೆ ಇಲ್ಲದಂತೆ ಮನೆಯಲ್ಲೇ ತಿಂಡಿಯನ್ನೂ ಮಾಡಬಹುದು. ಇದು ನಮ್ಮ ಶರೀರಕ್ಕೆ ಬೇಕಾದ ಶುದ್ಧ ಕೊಲೆಸ್ಟ್ರಾಲನ್ನು ಪೂರೈಸುತ್ತದೆ. ನಮ್ಮ ಆರೋಗ್ಯವನ್ನೂ ವರ್ಧಿಸುತ್ತದೆ. 

      ಈಗ ಪೇಟೆಯಲ್ಲಿ ಸಿಗುವ ಎಣ್ಣೆ ತಿಂಡಿಗಳೆಲ್ಲ ಪಾಮ್ ಎಣ್ಣೆಯಿಂದ ತಯಾರಿಸಿದ್ದು. ಇದು ವಿಷಪೂರಿತವಾಗಿದ್ದು, ಕೆಟ್ಟ ಕೊಲೆಸ್ಟ್ರಾಲನ್ನು ಹೆಚ್ಚಿಸಿ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ.  

      ಗೆರಟೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಅಥವಾ  ಕುಶಲ ಕರ್ಮಿಗಳು ಇದಕ್ಕೊಂದು ಹೊಸ ರೂಪವನ್ನು ಕೊಡಬಲ್ಲರು. ಅವರ ಹೊಸ ಬಾಳಿಗೆ ಬೆಳಕಾಗಬಲ್ಲದು.  

     ಹೊರಗಿನ ಸಿಪ್ಪೆಯನ್ನು ಬುಡಕ್ಕೆ ಹಾಕಿದರೆ ಉತ್ತಮ ಫಲವನ್ನೂ ನೀಡುತ್ತದೆ. ಇಂದು ಮರವು ಅನೇಕರಿಗೆ  ನೆರಳಾಗಿದೆ.  ಬಿಸಿಲಬೇಗೆಯನ್ನು ತಣಿಸಲು ದಾರಿಹೋಕರಿಗೂ ತಂಪನ್ನು ಸುರಿಯಬಲ್ಲುದು. 

      ತೆಂಗು ದೇವರ ನೈವೇದ್ಯಕ್ಕೆ, ಮಾತ್ರವಲ್ಲ; ಸಂತರಿಗೆ ಫಲ ಸಮರ್ಪಣೆಯಲ್ಲೂ ಮಹತ್ತ್ವದ ಸ್ಥಾನವನ್ನು ಪಡೆದಿದೆ. 

✍ ಮುರಳಿಕೃಷ್ಣ ಕಜೆಹಿತ್ತಿಲು

Category:Nature



ProfileImg

Written by Murali Krishna

DTP Worker, Vittal, Mangalore