ಹತ್ತಿರವಿದ್ದರೂ ಕಣ್ಣು ಕುರುಡಾಯಿತು
ಎದುರಾದರೂ ನಗೆಯಿಲ್ಲ, ಮಾತಿಲ್ಲ
ನಮ್ಮೊಳಗಿನ ಪ್ರೀತಿ, ವಾತ್ಸಲ್ಯದ ಗರ್ಭವನ್ನು
ನಾವೇ ಕೊಂದುಬಿಟ್ಟೆವು...
ಅಪ್ಪ-ಅಮ್ಮನ ಪ್ರೀತಿ ಅರಿಯದಾದೆವು
ಅವಳ ಪ್ರೇಮಾಂಕುರಕ್ಕೆ ಬಲಿಯಾದೆವು
ಭಾಷಣವೆಲ್ಲ ಬರೀ ಭೋದನೆಯಾಯಿತು
ಬದುಕೆಲ್ಲಾ ಬರೀ ಶೂನ್ಯ ಶೂನ್ಯ
ಹತ್ತಿರವಿದ್ದರೂ ಪರಿಚಿತನೂ ಅಪರಿಚಿತ
ಎಲ್ಲಿದೆ ಪ್ರೀತಿ.? ಎಲ್ಲಿದೆ ಗೌರವ.. ?
ಅಹಂಕಾರದ ಕೋಟೆ ಕಟ್ಟುವ ಅಬ್ಬರದಿ
ಬದುಕೆಂಬುದೇ ಬರೀ ನಾಟಕವಾಯ್ತು
ಬರುವುದು... ಹೋಗುವುದು ಬೆತ್ತಲೆ
ಇಂದು ಶಾಶ್ವತ, ನಾಳೆ ಎಂಬುದೇ ನಶ್ವರ
ನೈಜ ಪ್ರೀತಿ ನೋಡಲು ಕಷ್ಟವಾಯಿತು
ಈ ಯಾಂತ್ರಿಕ ಬದುಕಿನಲಿ...
- ಶಂಶೀರ್ ಬುಡೋಳಿ
Author, Journalist, Poet, Anchor, PhD Scholar
0 Followers
0 Following