ನಿರೀಕ್ಷೆ

ProfileImg
29 Apr '24
4 min read


image

ಸ್ನೇಹಿತರೆ ನಮಸ್ತೆ.

Expectations always hurts ಅಂತಾರೆ ನಿಜಾನಾ?

ನನಗೆ ಇದರ ಅನುಭವ ಇಲ್ಲ, ಏನೋ ಗೊತ್ತಿಲ್ಲ ಹೀಗೆ ಯೋಚಿಸುತ್ತಿರುವಾಗ ಥಟ್ ಅಂತ ಒಂದು ಕಿಡಿ ಈ ಲೇಖನ ಬರೆಯಲು ಪ್ರೇರೆಪಣೆ ನೀಡಿತು.

ಹೌದು ಈ expectation ಅಂದ್ರೆ ಏನು? ಅದು ನೋವು ಕೊಡೋದು ಯಾಕೆ?

ಸರಿ ಹೀಗ ಒಬ್ಬ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂದು ನಾವೇಗೆ ಅಳೆಯುವುದು? ಅಲ್ಲ ಅಳೆಯುವುದಕ್ಕೂ ಮೊದಲು ಒಳ್ಳೆಯವನು ಅಥವಾ ಕೆಟ್ಟವನು ಎಂದು ತೂಗುವ ಅಳತೆ ಮಾಪನ ಯಾವುದು, ಅಲ್ಲ ಅದರ ಮಾನದಂಡ ಯಾವುದು?

ಈ ರೀತಿ ಅಳತೆ ಮಾಡುವವನು ಯಾವ ಮಾನದಂಡಗಳ ಮೂಲಕ ಆಯ್ಕೆಆಗಿದ್ದಾರೆ, ಅಥವಾ ಯಾವ ಕಡ್ಡಾಯ ಪರೀಕ್ಷೆ ಬರೆದು ಆ ಸ್ಥಾನ ಅಲಂಕರಿಸಿದ್ದಾರೆ?

ಅದಿರಲಿ ಏನೋ ಗೊತ್ತಿಲ್ಲ ಇತ್ತೀಚಿಗೆ ಎಲ್ಲರ ಬಾಯಲ್ಲಿ ಕೇಳುವ ಒಂದು ವಾಕ್ಯ dont judge a book by its cover. ಇದೆ ಒಂತರ ಇಕ್ಕಟಿಗೆ ಸಿಲುಕಿಸಿ ನಗುತ್ತಿದೆ, ಈ ವಾಕ್ಯ ಹೇಳುವವರು ನಾವೇ ಇತರರನ್ನು ಅಳೆಯುವವರು ನಾವೇ.

ಸರಿ ವ್ಯಕ್ತಿ ಒಳ್ಳೆಯವನ ಕೆಟ್ಟವನ ನೋಡಿ ಸ್ನೇಹ ಮಾಡಿ ಎಂದು ಹಿರಿಯರು, ತಂದೆ ತಾಯಿ ಹೇಳ್ತಾರಲ್ಲ ಹಾಗಿದ್ದರೆ ಅವರೇ ತಪ್ಪು ಹೇಳುತ್ತಿದ್ದಾರಾ ಅಥವಾ ಈ ರೀತಿಯಲ್ಲಿ ಅಳೆದು ತೂಗಿ ಒಳ್ಳೆಯ ವ್ಯಕ್ತಿತ್ವದ ಸ್ನೇಹ ಮಾಡುವುದು ಉತ್ತಮನೋ? ಮಾಡಿದರು ಅದನ್ನು ಅಳೆಯುವ ಸಾದನ ಯಾವುದು?

Don't judge book by its cover ಖಂಡಿತ ಸತ್ಯವಾದ ಮಾತು ಯಾವ ವ್ಯಕ್ತಿಯನ್ನು ಒಂದೇ ನೋಟದಿಂದ ಅಳೆಯುವುದು ಸೂಕ್ತವಲ್ಲ. ಆದರೆ ದುರದೃಷ್ಟವಶತ್ ಹೀಗ ಅಪ್ರಾಮಾಣಿಕರೇ ಅಮಾಯಕರಂತೆ ಕಾಣುವುದು ಅದೇ ನಿಜವೆಂದು ನಂಬಿ ಕೊನೆಗೆ ಮೋಸಹೋಗುವುದು. ಸರಿ ಹೀಗಿರುವಾಗ ಮುಂದಿನ ನೆಡೆಯೇನು, ಇದಕ್ಕೆ ಪರಿಹಾರ ಏನು?

As above so below, as within so without 

-The Emerald tablet 3000BC

ಹೇಗೆ ಮೇಲೆ ಹಾಗೆ ಕೆಳಗೆ ಹೇಗೆ ಒಳಗೆ ಹಾಗೆ ಹೊರಗೆ.

ಇಷ್ಟೇ......!

ಒಳ್ಳೆಯತನ ಒಳಗೆ ಇದ್ದದ್ದೆ ಆದಲ್ಲಿ ಅದು ಹೊರಗೆ ಕಾಣಲೇ ಬೇಕು, ಕರಿಮೋಡ ಮೇಲೆ ಕೂಡಿದರೆ ಅದು ಮಳೆಯಾಗಿ ಕೆಳಗೆ ಬರಲೇ ಬೇಕು.

If it is really a diamond then it has to shine.

ಅಯ್ಯೋ ಶೀರ್ಷಿಕೆಗೂ ಈ ವಿಚಾರಗಳಿಗೂ ಸಂಬಂಧ ಏನು?

ಖಂಡಿತ ಇದೆ... Expectations always hurts ಹೀಗೆ expect ಮಾಡೋದು ತಪ್ಪೋ? ಅಥವಾ ನಿಮ್ಮ ನಿರೀಕ್ಷೆಗೆ ಎದುರು ವ್ಯಕ್ತಿ ಸರಿದೂಗದೆ ಇದ್ದದ್ದು ತಪ್ಪೋ? ಕೊನೆಯಲ್ಲಿ ಉಳಿಯುವ ಅಂಶ ನಾವು ಮೋಸಹೋದೆವು ಅವರದ್ದು ತಪ್ಪು ಅವರು ಅಪ್ರಾಮಾಣಿಕರು ಇಷ್ಟೇ ಅಲ್ವಾ ಪ್ರಪಂಚ.?

ನಮಗೊಂದು ಅಭ್ಯಾಸವಿದೆ ನಾವು ಯಾರಿಗೂ ಶುಭಾಶಯಗಳನ್ನು ಹೇಳುವುದಿಲ್ಲ, ಊಟ ಆಯ್ತಾ, ಕಾಫಿ ಆಯ್ತಾ, ಏನ್ ಮಾಡ್ತಾ ಇದ್ದೀರಾ, ಈ ರೀತಿ ಕೇಳುವ ಅಭ್ಯಾಸವೇ ಇಲ್ಲ ಬಹುಷಃ ಇದು ನಮ್ಮ ಮಾನಸಿಕ ವಿಕಾಸನದ ಭಾಗವಾಗಿ ಬದಲಾಗಿರಬಹುದು ಆದರೆ ಇದರಿಂದ ನಾವು ಅಹಂಕಾರಿಗಳಾಗಿ ಪ್ರಭಾಲ್ಯನಾಗಿ ಕಾಣುತೇವೆ.

ಸ್ನೇಹಿತರೆ ನಾವು ಹೆಚ್ಚಾಗಿ ಏಕಾಂತಕ್ಕೆ ಪ್ರದಾನ್ಯತೆ ಕೊಡಲಿದ್ದೇವೆ, ಪ್ರತಿ ವ್ಯಕ್ತಿಯ ಸ್ವಾತಂತ್ರಕ್ಕೂ, ವೈಯಕ್ತಿಕ ಜಾಗಕ್ಕೂ personal space, ವೈಯಕ್ತಿಕ ನಿರ್ಧಾರಗಳಿಗೆ ಹೆಚ್ಚಿನ ಗೌರವ ಕೊಡುತೇವೆ, ಈಗಿರುವಾಗ ವೈಯಕ್ತಿಕತೆಯನ್ನು ಹೆಚ್ಚಾಗಿ ಗಮನಿಸುವ ನಾವು ವ್ಯಕ್ತಿಯ ದಿನನಿತ್ಯದ ಕರ್ಮಗಳ ಅರಿವನ್ನು ಗಮನಿಸಿರುತೇವೆ ಅಲ್ಲವೇ..!

ಇದೆಲ್ಲ ಬಿಡಿ ನಾವ್ಯಾಕೆ ಈ ದಿನನಿತ್ಯ ಕರ್ಮಗಳಿಗೆ ಪ್ರಾಮುಖ್ಯತೆ ಕೊಡಬೇಕು, ಅದಾಗಿಯೂ ಈ ವಿಚಾರ ಯಾಕೆಂದರೆ ಎಷ್ಟೋ ಸ್ನೇಹ ಸಂಬಂಧಗಳಲ್ಲಿ ಬಿರುಕು ಮೂಡುತ್ತಿರುವುದೇ ಈ ವಿಷಯಕ್ಕೆ, ನನ್ನ ಬಗ್ಗೆ ಗಮನ ಹರಿಸುತಿಲ್ಲ ಎಂದು, ನೋಡಿ ಇಲ್ಲಿ ಮತ್ತೆ ಎದುರು ವ್ಯಕ್ತಿಯ ಮೇಲೆ ನಿರೀಕ್ಷೆ ಇಟ್ಟು ಅವರು ಸರಿದೂಗುತ್ತಿಲ್ಲವೆಂದು ದೂರುವುದು, ಸ್ನೇಹಿತರೆ ನಾನು ವ್ಯಕ್ತಪಡಿಸಿದ ಅಂಶ ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ, ಅಲ್ಲದೆ ಈ ಎಲ್ಲಾ ಅಂಶಗಳು ವೈಯಕ್ತಿಕ ಜವಾಬ್ದಾರಿಗಳು ಯಾರು ಕೇಳಲಿ ಬಿಡಲಿ ಮಾಡಬೇಕಿರುವ ಕಾರ್ಯಕಾಯಕ ಮಾಡುವುದು ನಮ್ಮ ಜವಾಬ್ದಾರಿ, ನಮ್ಮ ಜವಾಬ್ದಾರಿ ನಿಭಾಹಿಸುವುದು ನಮ್ಮ ವ್ಯಕ್ತಿತ್ವದ ಪ್ರತಿಫಲ.

ಸರಿ ದಿನನಿತ್ಯ ಈ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲೇಬೇಕೆ?

ಹಾಗಿದ್ದರೆ ನಾವು ಕೇಳುವವರೆಗೂ ಎದುರು ವ್ಯಕ್ತಿ ಅವರ ನಿತ್ಯಕರ್ಮಗಳನ್ನು ನೆಡೆಸುವುದಿಲ್ಲವೇ? ಖಂಡಿತ ಇದು ಸತ್ಯವಾದರೆ ಈ ರೀತಿಯ ಪ್ರಶ್ನೆ ಕೇಳುವುದು ಅಥವಾ ಅದಕ್ಕೆ ಉತ್ತರಿಸುವುದು ಸಮಂಜಸ.

ಮೇಲಾಗಿ ಇದು ಒಂದು ಸ್ನೇಹ ಭಾಂದವ್ಯದ ರೂಪ ಎಂದು ಬಿಂಬಿತವಾಗುತ್ತಿದೆ, ಈ ರೀತಿ ಕೇಳುವುದು ನಮ್ಮ ಭಾಂದವ್ಯದ ಮಟ್ಟವನ್ನು ಪ್ರತಿನಿಧಿಸುತ್ತದೆ ಎನ್ನುವುದು ಹಾಸ್ಯಸ್ಪದ, ನಿಜವಾದ ಭಾಂದವ್ಯ ಸ್ನೇಹದಲ್ಲಿ ಇದೆಲ್ಲ ಒಂದು ವಿಷಯವೇ ಅಲ್ಲ, ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಸ್ವತಂತ್ರ ಇರುತ್ತದೆ.

ನಮ್ಮ ಜೀವನಾಂಷಗಳಲ್ಲಿ ಕಂಡಂತೆ ಮತ್ತು ನಮ್ಮ ಸಮೀಕರಣ ಏನೆಂದರೆ ಪ್ರೀತಿ ಅಥವಾ ಬಾಂದವ್ಯ ಮಾತುಗಳಲ್ಲಿ ಇಲ್ಲ ಅದು ಮನಸಿನ ಸೂಕ್ಷ್ಮಸಂವೇದನೆಗಳಲ್ಲಿ ಇದೆ. ಎಷ್ಟೋ ವಿಷಯಗಳು ಹೀಗೆ ಸಂವಹನ ಹೊಂದುತ್ತವೆ.

Priority always prevails.... ಎನ್ನುವಂತೆ ಪ್ರದಾನ್ಯತೆಯೇ ಮೊದಲು ಸ್ನೇಹಿತರೆ ಮೊದಲು ನಾವು ನಮ್ಮ ಯೋಚನೆ ಬದಲಾಗಬೇಕು ನಾವು ಬೆಳೆಯುವುದರ ಪ್ರತಿಬಿಂಬ ನಮ್ಮ ವ್ಯಕ್ತಿತ್ವ, ನಮ್ಮ ವ್ಯಕ್ತಿತ್ವವೇ ನಮ್ಮ ಆಸ್ಮಿತೆ.

ನಿರೀಕ್ಷೆ ಮತ್ತು ನೋವು ಇವೆರಡು ಬೇರೆ ಬೇರೆ, ನಾವೇ ನಮ್ಮ ಸಮಾಧಾನಕ್ಕೆ ಅಂದರೆ Self-fulfilling prophecy ಗಾಗಿ ಈ ರೀತಿ ಒಂದು ಮಾಡುತ್ತಿದ್ದೇವೆ, ನಿರೀಕ್ಷೆ ಯಾವುದಕ್ಕೆ ಇಡಬೇಕು, ಯಾವುದರ ಮೇಲೆ ಇಡಬೇಕು, ನಿರೀಕ್ಷೆಯ ಮಟ್ಟ ಮುಟ್ಟದಿದ್ದಾಗ ನೋವು ಪಡುವ ಬದಲು ಗೆಲುವಿನ ಹೊಸ ಅಂಕಣ ಶುರುಮಾಡುವ ಹೊಸ ಅವಕಾಶ ಎಂದು ಏಕೆ ತೆಗೆದುಕೊಳ್ಳಬಾರದು? ಎಲ್ಲವೂ ನಮ್ಮ ಕೈಯಲ್ಲೇ ಇದೆ, ಆಯ್ಕೆ ನಮ್ಮದು.

ಇದೆಲ್ಲ ಒಬ್ಬ ಪ್ರಬುದ್ಧ ವ್ಯಕ್ತಿಗೆ ತೀರಾ ಸಾಮಾನ್ಯವಾದ ವಿಷಯ ಮತ್ತು ಈ ವಿಷಯಗಳ ಗಮನ ಹರಿಸುವ ಗೋಜಿಗೂ ಅವರುಗಳು ಹೋಗುವುದಿಲ್ಲ ಅಷ್ಟು ಸಮಯವೂ ಇಲ್ಲ ಮತ್ತು ಅದು ಅಷ್ಟು ಪ್ರಮುಖ ವಿಷಯವು ಅಲ್ಲ .

ಹಾಗಿದ್ದರೆ ಒಳ್ಳೆಯವ ಕೆಟ್ಟವ ಇದರ ಅಂತ್ಯ ಹೇಗೆ? ಇದರ ಮಟ್ಟ ಯಾವುದು ಅಂದರೆ standards ಏನು?

ನಾವು ನಮ್ಮ ವೈಯಕ್ತಿಕ ಜೀವನ ಅಂದರೆ ನಮ್ಮ ವ್ಯಕ್ತಿತ್ವ, ನಮ್ಮ ವರ್ತನೆಗಳು ರೂಪುಗೊಂಡ ಬಗ್ಗೆ ಗಮನಿಸಿ ಉತ್ತರಿಸುವುದಾದರೆ, ಆ ಗುಣಮಟ್ಟ standards ಖಂಡಿತ ಇದೆ.

ಅದು ಉತ್ತಮ ಪುಸ್ತಕಗಳ ಗೆಳೆತನ, ನಮ್ಮ ಜೀವನದ ತಪ್ಪುಒಪ್ಪುಗಳನ್ನು ಗಮನಿಸಿ trial and error ಮೂಲಕ ಉತ್ತಮಾಂಷಗಳನ್ನು ಹೆಚ್ಚಾಗಿ ಅಭಿವೃದ್ಧಿಗೊಳಿಸುವುದು.

ಮೇಲಾಗಿ ನಾವು ಹಿಂಬಾಲಿಸುವ ವ್ಯಕ್ತಿಯ ಭಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ಬಗ್ಗೆ ಅರಿವು ಹೊಂದುವುದು ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಅನುಸರಿಸುವುದು. ನಾವು ನಮ್ಮ ಮಾನಸಿಕ ಸ್ಥಿತಿಗತಿಗಳ ಅದರದ ಮೇಲೆ ವ್ಯಕ್ತಿಗಳನ್ನು ಹಿಂಬಾಲಿಸುತ್ತೇವೆ ಹಾಗಾಗಿ ನಾವು ಯಾರನ್ನು ಹಿಂಬಾಲಿಸ ಬೇಕು ಎಂಬ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.

ಸ್ನೇಹಿತರೆ ಇನ್ನು ಮುಂದೆ ನಮ್ಮ ನಿರೀಕ್ಷೆ ಮಟ್ಟ ತಲುಪದೇ ಇದ್ದಾಗ, ಎದುರು ವ್ಯಕ್ತಿಯನ್ನು ದೂರುವ ಬದಲು, ಬದಲಾಗ ಬೇಕಾದ ದಾರಿ ಹುಡುಕುವುದು ಈ ಅಂಕಣದ ಉದ್ದೇಶ ಲೇಖನ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ.

ಧನ್ಯವಾದಗಳು

ಮಂಜುನಾಥ್ ಕೆ ಆರ್ 

 

 

 

Category:Personal Development



ProfileImg

Written by Manjunath KR